Narega Job Card-ನರೇಗಾ ಯೋಜನೆ ಜಾಬ್ ಕಾರ್ಡಗೆ ಇ-ಕೆವೈಸಿ ಕಡ್ಡಾಯ!

September 28, 2025 | Siddesh
Narega Job Card-ನರೇಗಾ ಯೋಜನೆ ಜಾಬ್ ಕಾರ್ಡಗೆ ಇ-ಕೆವೈಸಿ ಕಡ್ಡಾಯ!
Share Now:

ನರೇಗಾ ಯೋಜನೆಯ(Narega) ಪ್ರಕ್ರಿಯೆಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಜಾಬ್‌ಕಾರ್ಡ್‌ಗೆ ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಆಧಾರ್ ಕಾರ್ಡ್ ಮೂಲಕ ಇ-ಕೆವೈಸಿ ಪರಿಷ್ಕರಿಸಲಾಗುತ್ತಿದ್ದು, ಜಾಬ್ ಕಾರ್ಡ್ ಹೊಂದಿರುವವರು ಈ ಕುರಿತು ಮಾಹಿತಿಯನ್ನು ತಿಳಿಯಲು ಇಂದಿನ ಅಂಕಣದಲ್ಲಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ(RDPR) ನರೇಗಾ ಯೋಜನೆಯಡಿ ವಿವಿಧ ಬಗ್ಗೆಯ ಕಾಮಗಾರಿಗಳ ಪ್ರಯೋಜನವನ್ನು ಪಡೆಯಲು ಅರ್ಹ ನಾಗರಿಕರಿಗೆ ಜಾಬ್ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಜಾಬ್ ಕಾರ್ಡ್ ಅನ್ನು ಹೊಂದಿರುವವರು ಇ-ಕೆವೈಸಿ ದಾಖಲೆಗಳನ್ನು ಒದಗಿಸಿ ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: Caste Survey-ಮೊಬೈಲ್ ನಲ್ಲೇ ಜಾತಿಗಣತಿ ಸಮೀಕ್ಷೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಇಂದಿನ ಅಂಕಣದಲ್ಲಿ ನರೇಗಾ ಯೋಜನೆ ಜಾಬ್ ಕಾರ್ಡ್ ಗೆ ಇ-ಕೆವೈಸಿ(Job Card kyc) ಹೇಗೆ ಮಾಡಿಸಬೇಕು? ಜಾಬ್ ಕಾರ್ಡ ಏಕೆ ಪಡೆಯಬೇಕು? ಜಾಬ್ ಕಾರ್ಡ ಪಡೆಯಲು ಅವಶ್ಯಕ ದಾಖಲೆಗಳೇನು?ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Narega Yojane-ನರೇಗಾ ಯೋಜನೆ ಜಾಬ್ ಕಾರ್ಡ್ ಗೆ ಇ-ಕೆವೈಸಿ:

ಪ್ರಸ್ತುತ ರಾಜ್ಯದಲ್ಲಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 5 ಜಿಲ್ಲೆಗಳಲ್ಲಿ ಮಾತ್ರ ಜಾರಿಗೆ ತರಲಾಗಿದ್ದು ಇದಕ್ಕಾಗಿ 30 ಸೆಪ್ಟೆಂಬರ್ 2025 ಕೊನೆಯ ದಿನವಾಗಿದೆ. ಜಾಬ್ ಕಾರ್ಡ್ ಅನ್ನು ಹೊಂದಿರುವ ನಾಗರಿಕರು ಕೊಡಲೇ ನಿಮ್ಮ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಈ ಕುರಿತು ಮಾಹಿತಿಯನ್ನು ಪಡೆದು ಇ-ಕೆವೈಸಿಯನ್ನು ಮಾಡಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Karnataka Jati Ganati-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಚುರುಕುಗೊಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Narega Job Card e-KYC-ನರೇಗಾ ಜಾಬ್ ಕಾರ್ಡ್ ಗೆ ಇ-ಕೆವೈಸಿ ಕಡ್ಡಾಯ:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನರೇಗಾ ಯೋಜನೆಯಡಿ ವಿತರಣೆ ಮಾಡುವ ಜಾಬ್ ಕಾರ್ಡ್ ಗೆ ಇ-ಕೆವೈಸಿಯನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ಪ್ರಮುಖ ಮಾಹಿತಿ ಹೀಗಿದೆ:

  • ಆಧಾರ್ ಮೂಲಕ ಇ-ಕೆವೈಸಿ ಅಪ್ ಡೇಟ್
  • ಆಕ್ಟೋಬರ್ ರಿಂದ ಮುಖ ಆಧಾರಿತ NMMS ಹಾಜರಾತಿ
  • ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇ-ಕೆವೈಸಿ ಪರಿಷ್ಕರಣೆ
  • ನೋಂದಾಯಿತ ಸಕ್ರಿಯ ಜಾಬ್ ಕಾರ್ಡ್ ಗಳು ಮಾತ್ರ ಮಾನ್ಯ

Job Card Details-ಜಾಬ್ ಕಾರ್ಡ ಏಕೆ ಪಡೆಯಬೇಕು?

ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಕುಟುಂಬಗಳು ನರೇಗಾ ಯೋಜನೆಯಡಿ ವಿವಿಧ ಬಗ್ಗೆಯ ಸೌಲಭ್ಯವನ್ನು ಪಡೆದು ಜಾಬ್ ಕಾರ್ಡ/ಉದ್ಯೋಗ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಅದ್ದರಿಂದ ಗ್ರಾಮೀನ ಕುಟುಂಬದ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಈ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Infosys Scholarship-ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

Job Card Benefits-ಜಾಬ್ ಕಾರ್ಡ ಪಡೆಯುವುದರಿಂದ ಆಗುವ ಪ್ರಯೋಜನಗಳೇನು?

ಜಾಬ್ ಕಾರ್ಡ ನಿಮ್ಮ ಬಳಿಯಿಂದರೆ ನರೇಗಾ ಯೋಜನೆ ಅಡಿ ವಾರ್ಷಿಕ 100 ದಿನ ಉದ್ಯೋಗವನ್ನು ಪಡೆಯಬಹುದು ಪ್ರತಿ ದಿನಕ್ಕೆ ರೂ 370/- ಕೂಲಿಯನ್ನು ನೀಡಲಾಗುತ್ತದೆ.

Documnets For Job Card-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಕುಟುಂಬದ ರೇಷನ್ ಕಾರ್ಡ
  • ಅರ್ಜಿದಾರರ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ಮೊಬೈಲ್ ನಂಬರ್

ಇದನ್ನೂ ಓದಿ: Ration Card Cancellation-ರೇಶನ್ ಕಾರ್ಡ ರದ್ದಾಗಳು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ!

How To Apply For Job Card-ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಿ ಜಾಬ್ ಕಾರ್ಡ/ಉದ್ಯೋಗ ಚೀಟಿಯನ್ನು ಪಡೆಯಬಹುದು.

Nrega Job Card Eligibility-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರಿಗೆ 18 ವರ್ಷ ಭರ್ತಿಯಾಗಿರಬೇಕು.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

For More Information-ಹೆಚ್ಚಿನ ಮಾಹಿತಿಗಾಗಿ:

ನರೇಗಾ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆ- 8277506000
ಅಧಿಕೃತ ಜಾಲತಾಣ- CLICK HERE

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: