Shadi Bhagya Scheme-“ಶಾದಿ ಭಾಗ್ಯ” ಯೋಜನೆಯಡಿ ವಿವಾಹಕ್ಕೆ ರೂ. 50,000 ಸಹಾಯಧನ ಪಡೆಯಲು ಅರ್ಜಿ!

October 9, 2025 | Siddesh
Shadi Bhagya Scheme-“ಶಾದಿ ಭಾಗ್ಯ” ಯೋಜನೆಯಡಿ ವಿವಾಹಕ್ಕೆ ರೂ. 50,000 ಸಹಾಯಧನ ಪಡೆಯಲು ಅರ್ಜಿ!
Share Now:

ಕರ್ನಾಟಕ ಸರ್ಕಾರವು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ "ಶಾದಿ ಭಾಗ್ಯ" ಯೋಜನೆಯ(Shadi Bhagya Scheme)ಅಡಿಯಲ್ಲಿ ಸರಳ ವಿವಾಹಕ್ಕೆ ಆರ್ಥಿಕ ಸಹಾಯಧನವನ್ನು ಮಾಡುವ ಉದ್ದೇಶದಿಂದ ಪ್ರತಿ ಜೋಡಿಗೆ ರೂ. 50,000 ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಅಭ್ಯರ್ಥಿಗಳಿಗೆ ಆರ್ಥಿಕ ನೆರವನ್ನು(marriage scheme) ನೀಡುವುದು ಇದರ ಗುರಿಯಾಗಿದ್ದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಉದ್ದೇಶವಾಗಿದೆ. ಈ ಮಾಹಿತಿಯು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ಈ ಯೋಜನೆಯ ಅಡಿಯಲ್ಲಿ ವಿವಾಹ ಸಹಾಯಧನವನ್ನು ಪಡೆಯಲು ಯಾರ‍ೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

Who Can Apply For This Scheme-ಅರ್ಜಿಯನ್ನು ಸಲ್ಲಿಸಲು ಯಾರ‍ೆಲ್ಲ ಅರ್ಹರು?

"ಶಾದಿ ಭಾಗ್ಯ" ಯೋಜನೆಯಡಿ ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಿರುವ ನಿಯಮಗಳನ್ನು ಪಾಲನೆಮಾಡಬೇಕು:

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಾಗಿರಬೇಕು.

ಅರ್ಜಿದಾರ‍ ಅಭ್ಯರ್ಥಿಯ ವಧುವಿನ ವಯಸ್ಸು 18ರಿಂದ 42ರ ನಡುವೆ ಇರಬೇಕು ಹಾಗೂ ವರನ ವಯಸ್ಸು 21ರಿಂದ 45 ಮೀರಿರಬಾರದು.

ಅರ್ಜಿದಾರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ. 5 ಲಕ್ಷ ಮೀರಿರಬೇಕು.

ಅರ್ಜಿದಾರರ ಮತ್ತು ಅರ್ಜಿದಾರ್ತಿ ಇಬ್ಬರು ಮೊದಲ ವಿವಾಹಕ್ಕೆ ಒಳಗಾಗುತ್ತಿರಬೇಕು.

ಇದನ್ನೂ ಓದಿ: Sukanya Samriddhi Yojane- ಪೋಸ್ಟ್ ಆಫೀಸ್‌ನಲ್ಲಿ ಅತೀ ಹೆಚ್ಚು ಬಡ್ಡಿ ನೀಡುವ ಯೋಜನೆ!

What Are The Documents Required-ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು:

  • ಆಧಾರ ಕಾರ್ಡ್/Aadhar Card
  • ಆದಾಯ ಪ್ರಮಾಣ ಪತ್ರ/Income Certificate
  • ಜಾತಿ ಪ್ರಮಾಣ ಪತ್ರ/Caste Certificate
  • ಬರ್ತ್ ಸರ್ಟಿಫಿಕೇಟ್/Birth Certificate
  • 10ನೇ ತರಗತಿ ಪ್ರಮಾಣಪತ್ರ/10 Markscard
  • ರೇಷನ್ ಕಾರ್ಡ್/Ration Card
  • ಫೋಟೋ/Photocopy

ಇದನ್ನೂ ಓದಿ: Anganavadi Worker Recruitment-ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: Dasara Holidays For Schools-ಬ್ರ‍ೇಕಿಂಗ್ ನ್ಯೂಸ್ ದಸರಾ ರಜೆ ಅ.18 ರವರೆಗೆ ವಿಸ್ತರಣೆ ಮಾಡಿದ ರಾಜ್ಯ ಸರಕಾರ!

Where To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ನಿಮ್ಮ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಅರ್ಹವಿರುವ ಅಭ್ಯರ್ಥಿಗಳು ಈ ಲಿಂಕ್ "Apply Now" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಶಾದಿ ಭಾಗ್ಯ ಯೋಜನೆಯ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಪರಿಶೀಲಿಸಿ ಜಿಲ್ಲಾ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Scholarship Application-ವಿದ್ಯಾಸಿರಿ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Click Here
ಸಹಾಯವಾಣಿ ಸಂಖ್ಯೆ: 1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: