Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!

October 15, 2025 | Siddesh
Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!
Share Now:

ರಾಜ್ಯ ಸರಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Yojana 2025) ಪ್ರತಿ ತಿಂಗಳು ಪಡಿತರ ಚೀಟಿಯ ಮುಖ್ಯಸ್ಥ ಮಹಿಳೆಯರ ಖಾತೆಗೆ ಜಮಾ ಮಾಡಲು ಬಾಕಿ ಉಳಿಸಿಕೊಂಡಿರುವ ಆರ್ಥಿಕ ನೆರವನ್ನು ದೀಪಾವಳಿ ಹಬ್ಬದ ನಿಮಿತ್ತ ಹಂತ ಹಂತವಾಗಿ ಈ ತಿಂಗಳಿನಲ್ಲಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಕಳೆದ 6 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ರೂ 2,000/- ಹಣ ಪ್ರತಿ ತಿಂಗಳು ಕಾಲ ಕಾಲಕ್ಕೆ ಸರಿಯಾಗಿ ಜಮಾ ಅಗುತ್ತಿಲ್ಲ ಎಂದು ಫಲಾನುಭವಿಗಳು(Gruhalakshmi Scheme Pending Amount Release Date) ದೂರುತ್ತಿದ್ದು ಪ್ರಸ್ತುತ 2 ತಿಂಗಳ ಅರ್ಥಿಕ ನೆರವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದ್ದು ದೀಪಾವಳಿ ಹಬ್ಬ ಈ ತಿಂಗಳಿನಲ್ಲಿ ಇರುವುದರಿಂದ ಸಂಬಂಧಪಟ್ಟ ಇಲಾಖೆಯಿಂದ ನೇರ ನಗದು ವರ್ಗಾವಣೆ ಮೂಲಕ ಬಾಕಿ ಹಣ ಬಿಡುಗಡೆ ಮುಂದಾಗಿದೆ.

ಇದನ್ನೂ ಓದಿ: Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರಸ್ತುತ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Amount)ಎಷ್ಟು ಹಣ ಜಮಾ ಮಾಡಲಾಗಿದೆ? ಹಣ ಜಮಾ ವಿವರವನ್ನು ಮೊಬೈಲ್ ನಲ್ಲಿ ಹೇಗೆ ಪಡೆಯುವುದು? ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಕುರಿತು ಅಗತ್ಯ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Gruhalakshmi Yojana Pending Amount-ದೀಪಾವಳಿ ಹಬ್ಬದ ನಿಮಿತ್ತ ಬಾಕಿ ಹಣ ಪಾವತಿ:

ಈಗಾಗಲೇ ಕೆಲವು ಜಿಲ್ಲೆಯಲ್ಲಿ 04-10-2025 ಒಂದು ತಿಂಗಳ ಬಾಕಿ ಹಣವನ್ನು ಜಮಾ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಇನ್ನು ಬಾಕಿ ಉಳಿದ ಹಣವನ್ನು ಸಹ ಫಲಾನುಭವಿಗಳಿಗೆ ಶೀಘ್ರದಲ್ಲೇ ಜಮಾ ಅಗಲಿದೆ.

Gruhalakshmi Yojana-ಮಹಿಳೆಯರಿಗೆ ಆರ್ಥಿಕ ಸಬಲೀಕರಣ:

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 42,000 ಕ್ಕೂ ಹೆಚ್ಚಿನ ಹಣವನ್ನು 22 ಕಂತುಗಳಲ್ಲಿ ತಲಾ ರೂ 2,000/- ದಂತೆ ನೇರವಾಗಿ ಪಡಿತರ ಚೀಟಿಯ ಮುಖ್ಯಸ್ಥ ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಲಾಗಿದ್ದು ಈ ಹಣದಲ್ಲಿ ಅನೇಕ ಮಹಿಳೆಯರು ವಿವಿಧ ರೀತಿಯ ಚಟುವಟಿಕೆಗಳಿಗೆ ಆದಾಯದ ಮೂಲಗಳಿಗೆ ಈ ಹಣವನ್ನು ತೊಡಗಿಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.

ಇದನ್ನೂ ಓದಿ: Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!

Gruhalakshmi Amount-ಪ್ರತಿ ತಿಂಗಳು ಹಣ ಬರುತ್ತಿಲ್ಲ:

ನಮ್ಮ ಪುಟಕ್ಕೆ ಈ ಯೋಜನೆಯ ಹಣ ವರ್ಗಾವಣೆ ವಿಳಂಬದ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಫಲಾನುಭವಿ ಮಹಿಳೆಯರು ಈ ಹಿಂದೆ ಪ್ರತಿ ತಿಂಗಳು ಈ ಯೋಜನೆಯಡಿ ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗುತ್ತಿತ್ತು ಅದರೆ ಕಳೆದ 5-6 ತಿಂಗಳಿನಿಂದ ಸರಿಯಾಗಿ ಪ್ರತಿ ತಿಂಗಳು ಹಣ ಜಮಾ ಅಗುತ್ತಿಲ್ಲ ಎಂದು ಸರಕಾರದ ಆಡಳಿತ ವರ್ಗವನ್ನು ದೂರಿದ್ದಾರೆ.

ಇನ್ನೂ ಗೃಹ ಲಕ್ಷ್ಮಿ ಯೋಜನೆಯಡಿ ಸುಮಾರು 21 ಕಂತುಗಳು, ಅಂದರೆ ಬರೋಬ್ಬರಿ 42,000 ರೂಪಾಯಿ ಲಕ್ಷಾಂತರ ಮಹಿಳೆಯರ ಖಾತೆಗೆ ಜಮಾ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮಾಹಿತಿ ನೀಡಿದ್ದು, ಆದಷ್ಟು ಬೇಗ ಬಾಕಿ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮಾಹಿತಿ ನೀಡಿದ್ದಾರೆ.

ಇನ್ನೂ ದೀಪಾವಳಿ ಹಬ್ಬದ ವೇಳೆಗೆ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿ ಇರುವ ಎರಡು ಕಂತುಗಳ 4,000 ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಣವು ದೀಪಾವಳಿಯ ಒಂದು ವಾರದೊಳಗೆ, ಅಂದರೆ 7 ರಿಂದ 10 ದಿನಗಳ ಒಳಗೆ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಅಲ್ಲದೇ ಸೆಪ್ಟೆಂಬರ್ ತಿಂಗಳ 2,000 ಕಂತಿನ ಹಣವನ್ನು ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜನೆಯಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Sheep Farming Training-ಆರ್ ಸೆಟ್ ಸಂಸ್ಥೆಯಿಂದ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ!

Gruhalakshmi Scheme Latest News-ಕೆಲವು ಫಲಾನುಭವಿಗಳಿಗೆ ಜೂನ್ ತಿಂಗಳ ಕಂತಿನ ಹಣ ಇನ್ನೂ ತಲುಪಿಲ್ಲ:

ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಅಗದಿರಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದು ಇವುಗಳ ಪಟ್ಟಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

  • ಬ್ಯಾಂಕ್ ಖಾತೆ ನಿಷ್ಕ್ರ‍ಿಯವಾಗಿರುವುದು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇರುವುದು.
  • ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ವಿವರ ಬದಲಾಗಿರುವುದು.
  • ಕಳೆದ ಆರ್ಥಿಕ ವರ್ಷದಲ್ಲಿ GST ಮತ್ತು Income Tax ಪಾವತಿ ಮಾಡಿರುವುದು.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

How To Check Gruhalakshmi Status-ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರವನ್ನು ಮೊಬೈನ್ ನಲ್ಲೇ ಪಡೆಯಿರಿ:

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ ಯಾವ ಯಾವ ತಿಂಗಳು ಎಷ್ಟು ಹಣ ಜಮಾ ಅಗಿದೆ ಎನ್ನುವ ವಿವರ ಜಮಾ ದಿನಾಂಕ,UTR ಸಂಖ್ಯೆ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲೇ ತಿಳಿಯಬಹುದು.

ಹಂತ-1: ಪ್ರಥಮದಲ್ಲಿ ಫಲಾನುಭವಿಗಳು ಈ Download DBT Karnataka App ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?

Gruhalakshmi Yojane Status

ಹಂತ-2: ಬಳಿಕ DBT Karnataka App ಅನ್ನು ಒಪನ್ ಮಾಡಿ ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬಳಕೆದಾರ ಐಡಿ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ-3: "ಪಾವತಿ ಸ್ಥಿತಿ/Paymet Status" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ "ಗೃಹಲಕ್ಷ್ಮಿ" ಯೋಜನೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿಯವರೆಗೆ ಈ ಯೋಜನೆ ಅಡಿ ಪ್ರತಿ ತಿಂಗಳುವಾರು ಎಷ್ಟು ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: