Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!

October 16, 2025 | Siddesh
Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!
Share Now:

ಕಂದಾಯ ಇಲಾಖೆಯಿಂದ(Karnataka Revenue Department) ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಳ ವಿಧಾನವನ್ನು ಅನುಸರಿಸಿ ಜಮೀನಿನ ಸರ್ವೆ ನಂಬರ್(Survey Number),ವಿಸ್ತೀರ್ಣ ಮತ್ತು ಅಧಿಕೃತ ಮಾಲೀಕರ ವಿವರವನ್ನು ಉಚಿತವವಾಗಿ ಚೆಕ್ ಮಾಡಲು ಇಲಾಕೆಯಿಂದ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗಿದೆ.

ಅನೇಕ ಜನರಿಗೆ ನಮ್ಮ ಜಮೀನಿನ ಸರ್ವೆ ನಂಬರಿನ ಪಕ್ಕ ಮಾಹಿತಿ ಇರುವುದಿಲ್ಲ ಇಂತಹ ಸಮಯದಲ್ಲಿ ಸಾರ್ವಜನಿಕರು/ರೈತರು(Farmers) ಈ ಅಂಕಣದಲ್ಲಿ ವಿವರಿಸಿರುವ ಹಂತವನ್ನು ಅನುಸರಿಸಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: B-Khata to A-Khata-ರಾಜ್ಯ ಸರಕಾರದಿಂದ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ!

ರೈತರು ಉಚಿತವಾಗಿ ಜಮೀನಿನ ಮಾಲೀಕರ(Agriculture Land Owners)ಸೇರಿದಂತೆ ಇತರೆ ಅಗತ್ಯ ವಿವರವನ್ನು ಮೊಬೈಲ್ ನಲ್ಲಿ ಹೇಗೆ ಪಡೆಯಬಹುದು? ಇದಕ್ಕಾಗಿ ಯಾವೆಲ್ಲ ಹಂತಗಳನ್ನು ಅನುಸರಿಸಬೇಕು? ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿರುವ ವೆಬ್ಸೈಟ್ ಲಿಂಕ್ ಸೇರಿದಂತೆ ಇನ್ನಿತರೆ ಎಲ್ಲಾ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free RTC Details-ಉಚಿತವಾಗಿ ಜಮೀನಿನ ಎಲ್ಲಾ ಮಾಹಿತಿ ಇಲ್ಲಿ ಲಭ್ಯ:

ಕಂದಾಯ ಇಲಾಕೆಯ "Landrecords.karnataka.in" ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ಪಟ್ಟಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದು. ಈ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಒಟ್ಟು ಮೂರು ಆಯ್ಕೆಗಳು ಕಾಣಿಸುತ್ತವೆ ಇವುಗಳ ಮೇಲೆ ಕ್ಲಿಕ್ ಮಾಡಿ ಜಮೀನಿನ ವಿವರ ಪಡೆಯಬಹುದು.

1) ಸರ್ವೆ ನಂಬರಿನ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ: ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ Landrecords.karnataka.in ವೆಬ್ಸೈಟ್ ಭೇಟಿ ಮಾಡಿದಾಗ ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ಜಮೀನಿನ ಮಾಲೀಕರ ವಿವರ,ವಿಸ್ತೀರ್ಣ ಇತ್ಯಾದಿ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!

2) ನಿಮ್ಮ ಸ್ವಾಧೀನದಾರರ ಭೂ ದಾಖಲೆಗಳನ್ನು ಹುಡುಕಿ: ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹಳ್ಳಿಯ ಎಲ್ಲಾ ಜಮೀನಿನ ಸರ್ವೆ ನಂಬರ್ ವಾರು ಮಾಲೀಕರ ಪಟ್ಟಿಯನ್ನು ಪಡೆಯಬಹುದು.

3) ನಿಮ್ಮ ನೋಂದಣಿ ಸಂಖ್ಯೆ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ: ಇಲ್ಲಿ ನಿಮ್ಮ ಜಮೀನಿನ ನೋಂದಣಿ ಸಂಖ್ಯೆಯನ್ನು ಹಾಕಿ ಜಮೀನಿನ ವಿವರ ಪಡೆಯಬಹುದು.

Karnataka Landrecords-ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಮಾಲೀಕರ ವಿವರ ಪಡೆಯಿರಿ:

ಕೃಷಿ ಜಮೀನಿನ ಮಾಲೀಕರ ವಿವರ ಮತ್ತು ಜಮೀನಿನ ಸರ್ವೆ ನಂಬರ್ ಹಿಸ್ಸಾ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ಸೇರಿದಂತೆ ಇನ್ನಿತರೆ ಎಲ್ಲಾ ಮಾಹಿತಿಯನ್ನು ಕೆಳಗಿನ ವಿಧಾನವನ್ನು ಅನುಸರಿಸಿ ಉಚಿತವಾಗಿ ಕಂದಾಯ ಇಲಾಕೆಯ ಅಧಿಕೃತ Landrecords.karnataka.in ವೆಬ್ಸೈಟ್ ಅನ್ನು ಭೇಟಿ ಮಾಡಿ ಪಡೆಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Land Owner Details ಮಾಡಿ ಕಂದಾಯ ಇಲಾಖೆಯ Landrecords.karnataka.in ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

Land Owners Details

ಇದನ್ನೂ ಓದಿ: Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!

Step-2: ಈ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ನಂತರ "Invalid User. Please verify captcha" ಎನ್ನುವ ಸಂದೇಶ ಬರುತ್ತದೆ ಇಲ್ಲಿ "Ok" ಎಣ್ದು ಕ್ಲಿಕ್ ಮಾಡಿ "Im not a robot" ಬಟನ್ ಮೇಲೆ ಒತ್ತಿ ಮುಂದಿನ ಪೇಜ್ ಭೇಟಿ ಮಾಡಬೇಕು.

Step-3: ಇದಾದ ಬಳಿಕ ಈ ಪೇಜ್ ನಲ್ಲಿ ಒಟ್ಟು ಮೂರು ಆಯ್ಕೆಗಳು ಕಾಣಿಸುತ್ತವೆ "ಸರ್ವೆ ನಂಬರಿನ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ" "ನಿಮ್ಮ ಸ್ವಾಧೀನದಾರರ ಭೂ ದಾಖಲೆಗಳನ್ನು ಹುಡುಕಿ" "ನಿಮ್ಮ ನೋಂದಣಿ ಸಂಖ್ಯೆ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ" ಈ ಆಯ್ಕೆಯಲ್ಲಿ ಒಂದನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗಹಳ್ಳಿಯ ಹೆಸರನ್ನು ಆಯ್ಕೆ ಮಾಡಿ "ನಿಮ್ಮ ವಿವರಗಳನ್ನು ನೋಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಮಾಲೀಕರ ಹೆಸರು, ವಿಸ್ತೀರ್ಣ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: