Electric Scooter-ಕೆಎಂಎಫ್ ನಿಂದ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟಿ ವಿತರಣೆ!

October 31, 2025 | Siddesh
Electric Scooter-ಕೆಎಂಎಫ್ ನಿಂದ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟಿ ವಿತರಣೆ!
Share Now:

ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹಾಲನ್ನು ಮಾರಾಟ ಮಾಡುವುದು, ಡೈರಿ ಹಾಗೂ ಹಳ್ಳಿಗಳಲ್ಲಿ ಮನೆ ಮನೆಗೆ ಹಾಲನ್ನು ಕೊಂಡೊಯ್ಯುತ್ತಾರೆ. ಇದರ ಸಲುವಾಗಿ ಸಾಮಾನ್ಯವಾಗಿ ಜನರು ಸೈಕಲ್ ಅಥವಾ ಪೆಟ್ರೋಲ್ ಮಾಹನಗಳನ್ನು ಬಳಸುತ್ತಾರ‍ೆ ಈ ನಿಟ್ಟಿನಲ್ಲಿ KMF ಸಂಸ್ಥೆಯ ಅಂಗ ಸಂಸ್ಥೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ(BAMUL)ವು ನಂದಿನಿ ಬ್ರಾಂಡ್ ಹಾಲು ವಿತರಕರಿಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಮುಂದಾಗಿದೆ.

ಪ್ರಸ್ತುತ ಇಂದಿನ ದಿನಗಳಲ್ಲಿ ಪೆಟ್ರೋಲ್ ದರವು ಏರಿಕೆಯಾಗುತ್ತಲೆ ಇದ್ದು, ದೈನಂದಿನ ದಿನದ ಆದಾಯದಲ್ಲಿ ವೆಚ್ಚ ಕಡಿಮೆಯಾಗುತ್ತಿದೆ. ಆದ್ದರಿಂದ ಹಾಲು ಮಾರಾಟ ಮಾಡುವವರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಉಚಿತ ಎಲೆಕ್ಟ್ರಿಕ್ ಸ್ಕೂಟಿ(Electric Scooter) ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ಹಾಲು ಮಾರಾಟಗಾರರು ಹೆಚ್ಚಿನ ಆದಾಯಗಳಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

ಇಂದಿನ ಈ ಲೇಖನದಲ್ಲಿ ಈ ಯೋಜನೆಯನ್ನು(KMF Electric Scooter Scheme)ಜಾರಿಗೆ ತರಲು ಉದ್ದೇಶವೇನು? ಈ ಯೋಜನೆಯ ಪ್ರಯೋಜನಗಳಾವುವು? ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Purpose Of This Scheme-ಯೋಜನೆಯ ಉದ್ದೇಶ:

ಹಾಲು ಉತ್ಪಾದಕರು ಹಾಗೂ ಹಾಲು ಮಾರಾಟದ ಸಮಸ್ಯೆಗಳನ್ನು ಬಗೆಹರಿಸಲು.

ಹಾಲಿನ ವಿತರಣೆಯನ್ನು ಅತೀ ವೇಗವಾಗಿ ಮತ್ತು ಸುಲಭವಾಗಿ ಮಾಡಲು ಸಹಾಯಕಾರಿಯಾಗಿದೆ.

ಹಾಲು ಮಾರಾಟಗಾರರಿಗೆ ಆರ್ಥಿಕ ಸಹಾಯ ಹಾಗೂ ಇಂಧನದ ವೆಚ್ಚವನ್ನು ಕಡಿಮೆ ಮಾಡುವುದರ ಉದ್ದೇಶ.

ಪರಿಸರ ಸ್ನೇಹಿ (Eco-friendly) ವಾಹನಗಳನ್ನು ಪ್ರೋತ್ಸಾಹಿಸುವುದು.

ಪೆಟ್ರೋಲ್/ಡೀಸಲ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ರಕ್ಷಣೆಗೆ ಉತ್ತೇಜನವನ್ನು ನೀಡಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

Electric Scooter

Who Can Apply For This Scheme-ಯಾರ‍ೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು?

ಅರ್ಜಿದಾರರ ವಯಸ್ಸು ಕನಿಷ್ಟ18 ರಿಂದ 60 ವರ್ಷ ಮೀರಿರಬಾರದು.

ಹಾಲು ವಿತರಣೆ/ಹಾಲು ಸಂಗ್ರಹಣೆ ಅಥವಾ ಡೈರಿಗೆ ಹಾಲನ್ನು ಪೂರೈಕೆ ಮಾಡುವವರು ಅರ್ಜಿಯನ್ನು ಸಲ್ಲಿಸಬಹುದು.

ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಅಥವಾ KMF / ಡೈರಿಯಲ್ಲಿ ಸದಸ್ಯರಾಗಿರಬೇಕು.

ಅರ್ಜಿದಾರರು ದಿನಕ್ಕೆ ಕನಿಷ್ಠ 30-50 ಲೀಟರ್ ಹಾಲು ಪೂರೈಕೆ ಮಾಡುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಬಿ ಪಿ ಎಲ್ ಕಾರ್ಡ ಅನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Pension Scheme-ಕಾರ್ಮಿಕ ಇಲಾಖೆಯ ವತಿಯಿಂದ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

What Are The Documents Required-ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳಾವುವು?

  • ಅಭ್ಯರ್ಥಿಯ ಆಧಾರ್ ಕಾರ್ಡ್/Aadhar Card
  • ರೇಷನ್ ಕಾರ್ಡ್/Ration Card
  • ಹಾಲು ಸಹಕಾರ ಸಂಘದ ಸದಸ್ಯ ರಸೀದಿ/ Milk Cooperative Society Member Receipt
  • ಡ್ರೈವಿಂಗ್ ಲೈಸೆನ್ಸ್/Driving licence
  • ಪಾನ್ ಕಾರ್ಡ್/Pan Card
  • ಹಾಲು ಮಾರಟ ಪ್ರಮಾಣ ಪತ್ರ/Milk sales certificate
  • ಬ್ಯಾಂಕ್ ಪಾಸ್‌ಬುಕ್/Bank Passbook
  • ಫೋಟೋ/Photocopy
  • ಮೊಬೈಲ್ ಸಂಖ್ಯೆ/Mobile Number

ಇದನ್ನೂ ಓದಿ: Scholarship Application-ಸಮಾಜ ಕಲ್ಯಾಣ ಇಲಾಖೆಯಿಂದ 5 ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಹಾಲು ಮಾರಾಟಗಾರರು ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನಿಮ್ಮ ಸ್ಥಳೀಯ ಹಾಲು ಸಹಕಾರ ಸಂಘ / ಡೈರಿ ಕಚೇರಿಗೆ ನೇರವಾಗಿ ಭೇಟಿ ಮಾಡಿ ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಅಲ್ಲೇ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಜಿಲ್ಲೆಯು ಯಾವ ಒಕ್ಕೂಟದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿದು ನೇರವಾಗಿ ಒಕ್ಕೂಟದ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ಬೆಂಗಳೂರು ಸಹಕಾರ ಹಾಲು ಒಕ್ಕೂಟ(BAMUL) ಅಧಿಕೃತ ವೆಬ್ಸೈಟ್- Click Here

Helpline-ಸಹಾಯವಾಣಿ- 7996 400 500

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: