Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

October 30, 2025 | Siddesh
Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!
Share Now:

ಕರ್ನಾಟಕ ರಾಜ್ಯದ ಅನೇಕ ರೈತರು ಮತ್ತು ಭೂಮಿ ಮಾಲಿಕರು ತಮ್ಮ ಜಮೀನಿನ ದಾಖಲೆಗಳನ್ನು ಹಿಂದಿನ ಕಾಲದ ಅಂದರೆ ಮರಣ ಹೊಂದಿದವರ(Khata Transfer) ಹೆಸರಿನಲ್ಲೇ ಮುಂದುವರೆಯುತ್ತಿದ್ದು. ಪಹಣಿ ಅಥವಾ ಖಾತೆ ಪುಸ್ತಕದಲ್ಲಿ ತಂದೆ ತಾಯಿ ಅಥವಾ ತಾತನ ಹೆಸರಿನಲ್ಲಿ ಪಹಣಿ ಇರುವುದು ಸವೇ ಸಾಮಾನ್ಯ.

ಆದ್ದರಿಂದ ಇಂತಹ ದಾಖಲೆಗಳನ್ನು ನವೀಕರಣ ಮಾಡುವುದು ಅಗತ್ಯವಾಗಿದೆ. ಇಲ್ಲದಿದ್ದಲ್ಲಿ(Pouthi Khata) ಸರ್ಕಾರದಿಂದ ಒದಗುವ ಸೌಲಭ್ಯಗಳು, ಬ್ಯಾಂಕ್ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಖರೀದಿ ಹಾಗೂ ಮಾರಾಟ ಇನ್ನು ಸೇರಿದಂತೆ ಈ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Maize MSP- ಕೆಎಂಎಫ್ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಮನವಿ!

ಪೌತಿ ಖಾತೆ ಮೂಲಕ ಜಮೀನಿನ ಮಾಲೀಕತ್ವವನ್ನು ಕಾನೂನುಬದ್ಧವಾಗಿ ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು. ಈ ಪ್ರಕ್ರಿಯೆಯು ಈಗ ನಾಡ ಕಚೇರಿ ಹಾಗೂ ಜಮೀನಿನ ದಾಖಲೆ ತಪಾಸಣೆ (e-Swathu / Bhoomi) ವ್ಯವಸ್ಥೆಗಳ ಮೂಲಕ ಸುಲಭವಾಗಿ ಮಾಡಿಸಿಕೊಳ್ಳಬಹುದು.

ಪ್ರಸ್ತುತ ಇಂದಿನ ಈ ಲೇಖನದಲ್ಲಿ ಪಹಣಿ ಎಂದರೇನು? ಪೌತಿ ಖತಿ ಎಂದರೇನು? ಪಹಣಿ ಪತ್ರ ತಿದ್ದುಪಡಿ ಮಾಡುವುದು ಹೇಗೆ? ಪೌತಿ ಖಾತೆ ಮಾಡಿಸಿಕೊಳ್ಳುವುದು ಹೇಗೆ? ಪೌತಿ ಖಾತೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಪೌತಿ ಖಾತೆಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಇದಕ್ಕೆ ಸಂಭಂದಿಸಿದ ಶುಲ್ಕ ಎಷ್ಟು? ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ?

ಇದನ್ನೂ ಓದಿ: Pension Scheme-ಕಾರ್ಮಿಕ ಇಲಾಖೆಯ ವತಿಯಿಂದ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

What is Pouthi Khata-ಪೌತಿ ಖಾತೆ ಎಂದರೇನು?

ಪೌತಿ ಖಾತೆ (Mutation) ಎಂದರೆ ಜಮೀನಿನ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಒಂದು ವ್ಯಕ್ತಿಯಿಂದ ಮತ್ತೊಬ್ಬನಿಗೆ ವರ್ಗಾಯಿಸುವ ಪ್ರಕ್ರಿಯೆ ಎಂದರ್ಥ.

ಅಂದರೆ ಹಿಂದಿನ ಕಾಲದ ಅಂದರೆ ತಂದೆ, ತಾಯಿ, ತಾತ, ಅಜ್ಜ, ಚಿಕಪ್ಪ, ಸಹೋದರರು, ಇವರ ಹೆಸರಿನಲ್ಲಿ ಜಮೀನು ದಾಖಲೆ ಇದ್ದರೆ ಮರಣ ಹೊಂದಿದ ನಂತರ ಜಮೀನನ್ನು ಹಕ್ಕುದಾರರ ಹೆಸರಿಗೆ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ.

Uses Of Pouthi Khata-ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳೇನು?

ಜಮೀನಿನ ನಿಜವಾದ ಮಾಲೀಕತ್ವವನ್ನು ಗುರುತು ಪಡಿಸುವುದು ಕಷ್ಟ.

ಬ್ಯಾಂಕ್‌ನಲ್ಲಿ ಕೃಷಿ ಸಾಲ ಮತ್ತು KCC, ಬೆಳೆ ವಿಮೆ, PM-Kisan, ರೈತ ಸಹಾಯಧನ ಪಡೆಯಲು ಸುಲಭ.

ಜಮೀನು ಮಾರಾಟ / ಖರೀದಿ ಮಾಡಲು ಸಾಧ್ಯವಾಗುವುದಿಲ್ಲ

ಮುಂಬರುವ ದಿನಗಳಲ್ಲಿ ಮನೆಯವರ ಮಧ್ಯೆ ಆಸ್ತಿ ಗೊಂದಲಗಳು ಮತ್ತು ಕಾನೂನು ವ್ಯಾಜ್ಯಗಳು ಉಂಟಾಗಬಹುದು.

ಸರ್ಕಾರದ ಬೆಂಬಲ ಬೆಲೆ ಮತ್ತು ಬೆಳೆ ಪ್ರೋತ್ಸಾಹ ಯೋಜನೆಗಳಿಗೆ ಅರ್ಜಿ ಹಾಕಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Scholarship Application-ಸಮಾಜ ಕಲ್ಯಾಣ ಇಲಾಖೆಯಿಂದ 5 ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ!

ಪೌತಿ ಖಾತೆಯನ್ನು ಯಾವ ಯಾವ ಸಂದರ್ಭದಲ್ಲಿ ಮತ್ತು ಯಾರ ಹೆಸರಿಗೆ ವರ್ಗಾವಣೆ ಮಾಡಬಹುದು?

ಜಮೀನಿನ ಹಳೆಯ ಮಾಲಿಕತ್ವ ಹೊಂದಿದ ತಂದೆ ಅಥವಾ ತಾಯಿಯು ನಿಧನರಾದಲ್ಲಿ ಅವರ ಮಾಲಿಕತ್ವವನ್ನು ಅವರ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಬೇಕು.

ಇದಲ್ಲದೆ ಅಜ್ಜನು ಮರಣ ಹೊಂದಿದ್ದಲ್ಲಿ ಮೊಮ್ಮಕ್ಕಳು ಅಥವಾ ವಾರಸುದಾರನು ಪೌತಿಗೆ ಅರ್ಜಿ ಸಲ್ಲಿಸಬಹುದು.

ಕುಟುಂಬದಲ್ಲಿ ಹಕ್ಕು ಹಂಚಿಕೆ (ಹಕ್ಕು ಪತ್ರ) ಮಾಡಿದರೆ, ಜಮೀನಿನ ಹಂಚಿಕೆ ಪಡೆದ ವ್ಯಕ್ತಿಯ ಹೆಸರಿಗೆ ಹೊಸ ಖಾತೆಯನ್ನು ನೋಂದಾಯಿಸಲಾಗುತ್ತದೆ.

ಹಾಗೆಯೇ ಒಂದು ವೇಳೆ ಜಮೀನನ್ನು ಖರೀದಿ ಮಾಡಿದ್ದಲ್ಲಿ, ಆ ಜಮೀನಿನ ಮಾಲೀಕತ್ವವನ್ನು ಹೊಸ ಖರೀದಿದಾರರ ಹೆಸರಿಗೇ ಪೌತಿ ಖಾತೆಯ ಮೂಲಕ ದಾಖಲೆ ಮಾಡಲಾಗುತ್ತದೆ.

ಇದನ್ನೂ ಓದಿ: MSP Purchase-ರೈತರಿಗೆ ಸಿಹಿ ಸುದ್ದಿ! ಇಂದಿನಿಂದ ಬೆಂಬಲ ಬೆಲೆಯಲ್ಲಿ ಸೋಯಾಬಿನ್,ಸೂರ್ಯಕಾಂತಿ,ಹೆಸರು ಕಾಳು ಖರೀದಿ ಆರಂಭ!

What Are The Documnets Required-ಪೌತಿ ಖಾತೆಗೆ ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾವಾಗಿ ಲಗತ್ತಿಸತಕ್ಕದ್ದು:

  • ಆಧಾರ್ ಕಾರ್ಡ/Aadhar Card
  • ಹಿಂದಿನ ಮಾಲೀಕರ ಪಹಣಿ/ಖಾತೆ ಪುಸ್ತಕ/RTC
  • ಕುಟುಂಬದ ಸದಸ್ಯರ ಪಹಣಿ/RTC
  • ವಂಶಾವಳಿ ಪ್ರಮಾಣ ಪತ್ರ/Warisu Pramana Patra
  • ಸ್ಟಾಂಪ್ ಡ್ಯೂಟಿ ಶುಲ್ಕ ಪಾವತಿಯ ಚಲನ್/Fee Challen
  • ಸಾವಿನ ಪ್ರಮಾಣ ಪತ್ರ/Death Certificate
  • ತೆರಿಗೆ ಪಾವತಿ ರಸೀದಿ/Property Tax Receipt
  • ಫೋಟೋ/Photocopy
  • ವಾರಸುದಾರರ ಪ್ರಮಾಣ ಪತ್ರ

ಇದನ್ನೂ ಓದಿ: RTO Online Servises-ವಾಹನ ಮಾಲೀಕರಿಗೆ ಸಿಹಿ ಸುದ್ದಿ! ಇನ್ಮುಂದೆ RTO ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್!

pouthi khatha transfer

ಇದನ್ನೂ ಓದಿ: Kotak Scholarships-ಮಹೀಂದ್ರಾ ಗ್ರೂಪ್ ಕಂಪನಿ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

How To Apply Pouthi Khatha-ಪೌತಿ ಖಾತೆಯನ್ನು ಪಡೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು?

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಅರ್ಜಿಗೆ ಸಂಭದಿಸಿದ ಅವಶ್ಯಕ ದಾಖಲೆಗಳೊಂದಿಗೆ ನಿಮ್ಮ ಹೋಬಳಿಯ ನಾಡ ಕಚೇರಿಗೆ ನೇರವಾಗಿ ಭೇಟಿ ಮಾಡಿ ಪೌತಿ ಖಾತೆಯ ಅರ್ಜಿಯನ್ನು ಭರ್ತಿ ಮಾಡಿ ಅದಕ್ಕೆ ಸಂಬಂದಿಸಿದ ಶುಲ್ಕವನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Online Application Process-ಆನ್ಲೈನ್ ನಲ್ಲಿ ಪಹಣಿಯನ್ನು ಪಡೆಯುವುದು ಹೇಗೆ?

ಪಹಣಿಯನ್ನು ಪಡೆದುಕೊಳ್ಳಲು ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಜಮೀನಿನ ಮಾಲೀಕರ ವಿವರವನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Bank Loan Interest Subsidy-ಬ್ಯಾಂಕ್ ಸಾಲದ ಮೇಲೆ ಶೇ 3% ಬಡ್ಡಿ ಸಬ್ಸಿಡಿ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

Step-1: ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೊದಲಿಗೆ ಈ ಲಿಂಕ್ "Online RTC" ಮೇಲೆ ಕ್ಲಿಕ್ ಮಾಡಿ ಅಧಿಕೃತ ಭೂಮಿ ಪೊರ್ಟಲ್ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಅದೇ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿ ಮತ್ತು ಸರ್ವೆ ನಂಬರ್ ಹಾಕಿ "Go" ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

Step-3: ನಂತರ ಇಲ್ಲಿ ನಿಮ್ಮ ಸರ್ವೆ ನಂಬರಿನ ಹಿಸ್ಸಾ ಸಂಖ್ಯೆಯನ್ನು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು "Fetch Details" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಮಾಲೀಕರ ವಿವರ ಮತ್ತು ಜಮೀನಿನ ವಿಸ್ತೀರ್ಣದ ವಿವರ ತೋರಿಸುತ್ತದೆ ಇದೆ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ "View" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ಪಹಣಿ/ಊತಾರ್ ಪ್ರತಿ ಓಪನ್ ಆಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: