RTO Online Servises-ವಾಹನ ಮಾಲೀಕರಿಗೆ ಸಿಹಿ ಸುದ್ದಿ! ಇನ್ಮುಂದೆ RTO ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್!

October 28, 2025 | Siddesh
RTO Online Servises-ವಾಹನ ಮಾಲೀಕರಿಗೆ ಸಿಹಿ ಸುದ್ದಿ! ಇನ್ಮುಂದೆ RTO ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್!
Share Now:

ರಾಜ್ಯ ಸರಕಾರದಿಂದ ಸಾರ್ವಜನಿಕರಿಗೆ ಜನ ಸ್ನೇಹಿ ಆಡಳಿತ ಸೇವೆಯನ್ನು ಒದಗಿಸಲು ಸಾರಿಗೆ ಇಲಾಖೆಯಿಂದ(RTO) 30ಕ್ಕೂ ಹೆಚ್ಚಿನ ವಿವಿಧ ದಾಖಲೆ/ಪ್ರಮಾಣ ಪತ್ರವನ್ನು(RTO Office Karnataka) ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಪ್ರಸ್ತುತ ದಿನಗಳಲ್ಲಿ ವಾಹನ ಮಾಲೀಕರು ಸಾರಿಗೆ ಇಲಾಖೆಯಿಂದ ಯಾವುದೇ ಪ್ರಮಾಣ ಪತ್ರ/ದಾಖಲೆಯನ್ನು ಪಡೆಯಬೇಕಾದರೆ ನೇರವಾಗಿ ಸ್ವಂತ ತಾವೇ ಕಚೇರಿ ಭೇಟಿ ಮಾಡಿದರೆ ಅಧಿಕಾರಿಗಳು ಅಲೇದಾಡಿಸುತ್ತಾರೆ ಇಲ್ಲವೇ ಬ್ರೋಕರ್ ಮೂಲಕ ಲಂಚವನ್ನು ನೀಡಿ ಅಧಿಕ ಹಣವನ್ನು ಪಾವತಿ ಮಾಡಿ ಡ್ರೈವಿಂಗ್ ಲೈಸೆನ್ಸ್(DL) ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಬೇಕಾಗುತ್ತದೆ.

ಇದನ್ನೂ ಓದಿ: Kotak Scholarships-ಮಹೀಂದ್ರಾ ಗ್ರೂಪ್ ಕಂಪನಿ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಈ ವ್ಯವಸ್ಥೆಯ ಕುರಿತು ಅನೇಕ ಭಾರಿ ದೂರುಗಳು ಮತ್ತು ಸಾರ್ವಜನಿಕ ವಲಯದಲ್ಲಿ ತೀರ್ವ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿದ್ದು ಎಲ್ಲಾ ಸಮಸ್ಯೆಗಳಿಗೆ ಕೊಂಚ ಸುಧಾರಣೆಯನ್ನು ತರಲು ಸಾರಿಗೆ ಇಲಾಖೆಯಿಂದ 30 ಬಗ್ಗೆ ಸೇವೆಯನ್ನು ಪಡೆಯಲು ಸಾರ್ವಜನಿಕರು ಇನ್ಮುಂದೆ RTO ಕಚೇರಿಯನ್ನು ಭೇಟಿ ಮಾಡದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

RTO Online Application-ಆನ್ಲೈನ್ ನಲ್ಲಿ ಲಭ್ಯ ಸೇವೆಗಳು ಯಾವುವು?

ವಾಹನ ಮಾಲೀಕರು RTO ಕಚೇರಿಯಿಂದ ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅಧಿಕೃತ ದಾಖಲೆ/ಪ್ರಮಾಣ ಪತ್ರಗಳನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

  • ಕಲಿಕಾ ಚಾಲನಾ ಪರವಾನಗಿ ಪತ್ರ,
  • ಕಲಿಕಾ ಚಾಲನಾ ಪರವಾನಗಿ ಪತ್ರದಲ್ಲಿ ವಿಳಾಸ ಬದಲಾವಣೆ,
  • ಕಲಿಕಾ ಚಾಲನಾ ಪರವಾನಗಿ ಪತ್ರದಲ್ಲಿ ಹೆಸರು ಬದಲಾವಣೆ,
  • ನಕಲು ಕಲಿಕಾ ಚಾಲನಾ ಪರವಾನಗಿ ಪತ್ರ ನೀಡುವಿಕೆ
  • ನಕಲು ಚಾಲನಾ ಪರವಾನಗಿ ಪತ್ರ ನೀಡುವಿಕೆ,
  • ಚಾಲನಾ ಪರವಾನಗಿ ಪತ್ರ ನವೀಕರಣ
  • ಚಾಲನಾ ಪರವಾನಗಿ ಪತ್ರದಲ್ಲಿ ವಿಳಾಸ ಬದಲಾವಣೆ
  • ಚಾಲನಾ ಪರವಾನಗಿಪತ್ರದಲ್ಲಿ ಹೆಸರು ಬದಲಾವಣೆ
  • ಚಾಲನಾ ಪರವಾನಗಿ ಪತ್ರ ವಹಿ ಪಡೆಯುವಿಕೆ

ಇದನ್ನೂ ಓದಿ: Bank Loan Interest Subsidy-ಬ್ಯಾಂಕ್ ಸಾಲದ ಮೇಲೆ ಶೇ 3% ಬಡ್ಡಿ ಸಬ್ಸಿಡಿ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

  • ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನೀಡುವಿಕೆ
  • ನಿರ್ವಾಹಕ ಚಾಲನಾ ಪರವಾನಗಿ ಪತ್ರ ನವೀಕರಣ
  • ನಕಲು ನಿರ್ವಾಹಕ ಚಾಲನಾ ಪರವಾನಗಿ ಪತ್ರ ನೀಡುವಿಕೆ
  • ನಿರ್ವಾಹಕ ಚಾಲನಾ ಪರವಾನಗಿ ಪತ್ರದಲ್ಲಿ ವಿಳಾಸ ಬದಲಾವಣೆ
  • ನಿರ್ವಾಹಕ ಚಾಲನಾ ಪರವಾನಗಿ ಪತ್ರದಲ್ಲಿ ಹೆಸರು ಬದಲಾವಣೆ ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ
  • ವಾಹನದ (ಫುಲ್ಲಿ ಬಿಲ್ಟ್) ಹೊಸ ನೋಂದಣಿಗೆ ಅರ್ಜಿ.
  • ನಕಲು ನೋಂದಣಿ ಪ್ರಮಾಣಪತ್ರ ನೀಡುವಿಕೆ
  • ವಾಹನಕ್ಕೆ ಆಕ್ಷೇಪಣಾ ರಹಿತ ಪ್ರಮಾಣಪತ್ರ ನೀಡುವಿಕೆ (ಎನ್ ಒ ಸಿ/ ಸಿಸಿ)
  • ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ
  • ವಾಹನ ನೋಂದಣಿ ಪ್ರಮಾಣಪತ್ರ ವಹಿ ಪಡೆಯುವಿಕೆ
  • ವಾಹನ ನೋಂದಣಿಯ ಮಾಲೀಕತ್ವ ವರ್ಗಾವಣೆಯ ನೋಟೀಸು

ಇದನ್ನೂ ಓದಿ: Driving Licence Application-ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಮಾಡಿಸುವುದು ಇನ್ನು ಭಾರೀ ಸುಲಭ!

  • ವಾಹನ ನೋಂದಣಿಯ ಮಾಲೀಕತ್ವ ವರ್ಗಾವಣೆಗೆ ಅರ್ಜಿ
  • ವಾಹನದ ಮೇಲೆ ಕಂತು-ಕರಾರು ನಮೂದನೆಗೆ ಹಿಂಬರಹ
  • ವಾಹನದ ಹೊಸ ರಹದಾರಿಗೆ ಅರ್ಜಿ
  • ವಾಹನದ ನಕಲು ರಹದಾರಿ ನೀಡಿಕೆ
  • ಶಾಶ್ವತವಾಗಿ ವಾಹನದ ರಹದಾರಿ ಅಧ್ಯರ್ಪಣೆ
  • ವಾಹನದ ರಹದಾರಿ ನವೀಕರಣ
  • ವಾಹನಕ್ಕೆ ವಿಶೇಷ ರಹದಾರಿ ಕೋರಿ ಅರ್ಜಿ
  • ವಾಹನಕ್ಕೆ ತಾತ್ಕಾಲಿಕ ರಹದಾರಿ ಕೋರಿ ಅರ್ಜಿ
  • ವಾಹನ ಮಾಲೀಕರ/ ಚಾಲನಾ ಅನುಜ್ಞಾ ಪತ್ರ ಹೊಂದಿರುವವರ ಮೊಬೈಲ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ಉನ್ನತೀಕರಿಸುವುದು
  • ನಕಲು ನೋಂದಣಿ ಪ್ರಮಾಣಪತ್ರ(RC) ನೀಡುವಿಕೆ

ಇದನ್ನೂ ಓದಿ: Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ರೂ 62,500/- ಸ್ಕಾಲರ್‌ಶಿಪ್!

RTO Office Karnataka

ಇದನ್ನೂ ಓದಿ: Dairy Shed Subsidy-ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೂ 57,000/- ಸಹಾಯಧನ!

RTO Online Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ವಾಹನ ಮಾಲೀಕರು/ಸಾರ್ವಜನಿಕರು ಸಾರಿಗೆ ಇಲಾಕೆಯ ವಿವಿಧ ಸೇವೆಗಳನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ "RTO Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅಗತ್ಯ ವಿವರ ಮತ್ತು ದಾಖಲೆ ಅಪ್ಲೋಡ್ ಮಾಡಿ ಕೊನೆಯಲ್ಲಿ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ನೀವೇ ಸ್ವಂತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿವಿಧ ದಾಖಲೆ/ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.

RTO Offline Servisesಕಚೇರಿ ಭೇಟಿ ನೀಡಿ ಪಡೆಯಬಹುದಾದ ಸೇವೆಗಳು:

  • ಬದಲಿ ಚಾಲನಾ ಪರವಾನಗಿ(DL) ಪತ್ರ
  • ಚಾಲನಾ ಪರವಾನಗಿ ಪತ್ರದಲ್ಲಿ ಬಯೋಮೆಟ್ರಿಕ್ ಬದಲಾವಣೆ
  • ಚಾಲನಾ ಪರವಾನಗಿ ಪತ್ರದಲ್ಲಿನ ವಾಹನ ವರ್ಗವನ್ನು ಸರೆಂಡರ್ ಮಾಡುವುದು
  • ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಓಡಿಸಲು ಚಾಲನಾ ಪರವಾನಗಿ ಪತ್ರದಲ್ಲಿ ಹಿಂಬರಹ ನೀಡುವಿಕೆ
  • ಗುಡ್ಡಗಾಡು / ಬೆಟ್ಟದ ಪ್ರದೇಶದಲ್ಲಿ ವಾಹನಗಳನ್ನು ಓಡಿಸಲು ಚಾಲನಾ ಪರವಾನಗಿಪತ್ರದಲ್ಲಿ ಹಿಂಬರಹ ನೀಡುವಿಕೆ
  • ರಕ್ಷಣಾ ಇಲಾಖೆಯವರಿಗೆ ಚಾಲನಾ ಪರವಾನಗಿ ಪತ್ರ ನೀಡುವಿಕೆ
  • ರಕ್ಷಣಾ ಇಲಾಖೆಯವರು ಹೊಂದಿರುವ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಚ್ಚುವರಿ ವಾಹನ ವರ್ಗ ಸೇರ್ಪಡೆ
  • ಚಾಲಕರಿಗೆ ಸಾರ್ವಜನಿಕ ಸೇವಾ ವಾಹನ ಬ್ಯಾಡ್ಜ್ ವಿತರಣೆ
  • ನಿರ್ವಾಹಕ ಚಾಲನಾ ಅನುಜ್ಞಾ ಪತ್ರದಲ್ಲಿ ಬಯೋಮೆಟ್ರಿಕ್ ಬದಲಾವಣೆ
  • ವಾಹನದ ಕಂತು-ಕರಾರು ರದ್ದತಿ
  • ವಾಹನದ ರಹದಾರಿ ವರ್ಗಾವಣೆ
  • ವಾಹನದ ರಹದಾರಿ ವರ್ಗಾವಣೆ (ಮರಣ ಹೊಂದಿದ್ದಲ್ಲಿ)
  • ವಾಹನದ ರಹದಾರಿಯ ಅಥೋರೈಸೆಷನ್ ನವೀಕರಣ
  • ವಾಹನದ ನಕಲು ಅರ್ಹತಾ ಪ್ರಮಾಣಪತ್ರ ನೀಡಿಕೆ

ಈ ಸೇವೆಗಳ ತಂತ್ರಾಂಶ ಅಭಿವೃದ್ಧಿಗಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!

For More Information-ಹೆಚ್ಚಿನ ಮಾಹಿತಿಗಾಗಿ:

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವೆಬ್ಸೈಟ್- Click Here
ಕೇಂದ್ರ ಸಾರಿಗೆ ಇಲಾಖೆ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: