PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

November 19, 2025 | Siddesh
PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan 21th Installment) ಕೇಂದ್ರ ಸರಕಾರವು ದೇಶದ ಎಲ್ಲಾ ಕೃಷಿಕರಿಗೆ ಇಂದು 21ನೇ ಕಂತಿನ ರೂ 2,000/- ಆರ್ಥಿಕ ನೆರವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಈ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಅನೇಕ ರೈತರಿಗೆ ಈಗಾಗಲೇ ತಿಳಿದಿರುವ ಹಾಗೆಯೇ ಕೇಂದ್ರ ಸರಕಾರವು 2019 ರಿಂದ ಕೃಷಿಕರಿಗೆ ಉತೇಜನವನ್ನು ನೀಡಲು ಪಿಎಂ ಕಿಸಾನ್ ಯೋಜನೆಯ ಮೂಲಕ ಪ್ರತಿ ವರ್ಷ ತಲಾ ಮೂರು ಕಂತಿಗಳಲ್ಲಿ ಒಟ್ಟು ರೂ 6,000/- ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆನೆ ನೇರವಾಗಿ(DBT) ಜಮಾ ಮಾಡಲಾಗುತ್ತಿದ್ದು, ಪ್ರಸ್ತುತ ಈ ಯೋಜನೆಯಡಿ 20 ಕಂತಿನ ವರೆಗೆ ಹಣವನ್ನು ವರ್ಗಾವಣೆ ಮಾಡಲಾಗಿರುತ್ತದೆ.

ಇದನ್ನೂ ಓದಿ: Scholarship e-authentication-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಇ-ದೃಡೀಕರಣ ಮಾಡುವುದು ಕಡ್ಡಾಯ!

ಇಂದು ಅಂದರೆ ದಿನಾಂಕ 19 ನವೆಂಬರ್ 2025 ರಂದು ತಮಿಳುನಾಡಿನ ಕೊಯಮತ್ತೂರಿಗೇ ಭೇಟಿ ನೀಡಲಿರುವ ಪ್ರಧಾನಿ ಮೋದಿ(PM Modi) ಅವರು ಇಲ್ಲಿ ಆಯೋಜನೆ ಮಾಡಿರುವ "ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ" ಯಲ್ಲಿ ಪಿಎಂ ಕಿಸಾನ್(PM Kisan) ಯೋಜನೆಯ 21ನೇ ಕಂತಿನ ಆರ್ಥಿಕ ನೆರವಿನ ರೂ 2,000/- ಹಣವನ್ನು ದೇಶದ 9 ಕೋಟಿ ರೈತರ ಖಾತೆಗೆ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

PM Kisan 21th Installment-ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ಯಕ್ರಮ ಆಯೋಜನೆ:

ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜನೆ ಮಾಡಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಕಾರ್ಯಕ್ರಮಕ್ಕೆ ಮಧ್ಯಾಹ್ನ 1-00 ಘಂಟೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುವುದರ ಜೊತೆಗೆ ಇದೇ ಕಾರ್ಯಕ್ರಮದಲ್ಲಿ ದೇಶದ 9 ಕೋಟಿ ಪಿಎಂ ಕಿಸಾನ್ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ರೂ 18,000 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

PM Kisan-ಪಿಎಂ ಕಿಸಾನ್ ಯೋಜನೆಯ ಕುರಿತು ಅಗತ್ಯ ಮಾಹಿತಿ ಹೀಗಿದೆ:

ಕೇಂದ್ರ ಸರಕಾರದಿಂದ ಪ್ರಸ್ತುತ ಅನುಷ್ಥಾನ ಮಾಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತು ಕೆಲವು ಅಗತ್ಯ ಮಾಹಿತಿಗಳ ವಿವರ ಹೀಗಿದೆ:

ರೂ.6,000 ವಾರ್ಷಿಕ ಸಹಾಯಧನವನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ.

ಇಲ್ಲಿಯವರೆಗೆ ಈ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರೂ 3.90 ಲಕ್ಷ ಕೋಟಿಗಳ ವರ್ಗಾವಣೆ ಮಾಡಲಾಗಿದೆ.

ಪಿಎಂ ಕಿಸಾನ್‌ ಫಲಾನುಭವಿಗಳಲ್ಲಿ ಶೇ.25ರಷ್ಟು ಮಹಿಳಾ ರೈತರು

ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಗಳಲ್ಲಿ ಈ ಯೋಜನೆ ಒಂದಾಗಿದೆ.

ಪಿಎಂ ಕಿಸಾನ್ ಯೋಜನೆಯಡಿ ಶೇ.85ಕ್ಕೂ ಅಧಿಕ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ.

ಇದನ್ನೂ ಓದಿ: Dhanashree Yojana-ಧನಶ್ರೀ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ₹ 30,000 ಸಹಾಯಧನಕ್ಕೆ ಅರ್ಜಿ ಆಹ್ವಾನ!

PM Kisan Status

PM Kisan Amount Status Check-ನಿಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರ ತಿಳಿಯಿರಿ:

ರೈತರು ತಮ್ಮ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ರೂ 2,000/ ಹಣ ಜಮಾ ಆಗಿರುವುದನ್ನು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡದೆಯೇ ನೇರವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಜಮಾ ವಿವರವನ್ನು ಪಡೆದುಕೊಳ್ಳಬಹುದು.

Step-1: ರೈತರು ಮೊದಲ ಹಂತದಲ್ಲಿ PM Kisan Status Check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಿ.

Step-2: ನಂತರ ಈ ಪೇಜ್ ನಲ್ಲಿ "Know Your Status" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇಲ್ಲಿ Registration Number ಹಾಕಿ OTP ಸಂಖ್ಯೆಯನ್ನು ನಮೂದಿಸಿ Get Details ಬಟನ್ ಮೇಲೆ ಕ್ಲಿಕ್ ಮಾಡಿದರೆ ಪಿಎಂ ಕಿಸಾನ್ ಯೋಜನೆಯ ಜಮಾ ವಿವರ ತೋರಿಸುತ್ತದೆ.

ಗಮನಿಸಿ: ನಿಮ್ಮ ಪಿಎಂ ಕಿಸಾನ್ ಅರ್ಜಿಯ Registration Number ಅನ್ನು ಪಡೆದುಕೊಳ್ಳಲು ಇಲ್ಲಿ Know Your Status ವಿಭಾಗದಲ್ಲೇ ಮೇಲೆ ಕಾಣಿಸುವ Know Your Registration Number ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

PM Kisan

PM Kisan App-ಪಿಎಂ ಕಿಸಾನ್ ಮೋಬೈಲ್ ಅಪ್ಲಿಕೇಶನ್ ಮೂಲಕವು ಸಹ ಜಮಾ ವಿವರ ಪಡೆಯಬಹುದು:

ರೈತರು ಮೇಲಿನ ವಿಧಾನವನ್ನು ಅನುಸರಿಸುವುದರ ಜೊತೆಗೆ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಹ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ವಿವರವನ್ನು ಪಡೆಯಬಹುದು ಇದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ PM Kisan App Download Link ಮಾಡಿ ಗೂಗಲ್ ಪೈ ಸ್ಟೋರ್ ಪ್ರವೇಶ ಮಾಡಿ PM Kisan App ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಲಾಗಿನ್ ಅಗಿ.

Step-3: ಲಾಗಿನ್ ಅದ ನಂತರ ಇಲ್ಲಿ Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: