AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

November 21, 2025 | Siddesh
AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರಿಗೆ ನ್ಯೂಸ್‌ ರೂಂ ನಲ್ಲಿ ಎಐ(Artificial Intelligence) ಹಾಗೂ ಫ್ಯಾಕ್ಟ್‌ಚೆಕ್‌(Fact-Check) ಕುರಿತು ಒಂದು ದಿನದ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ತರಬೇತಿಯನ್ನು ನವೆಂಬರ್‌ 29 ರಂದು ಆಯೋಜಿಸಲಾಗಿದ್ದು, ಪ.ಜಾತಿಯ 25 ಹಾಗೂ ಪ.ಪಂಗಡದ 15 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. (One Day AI Training)ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಿದೆ. ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: PUC Scholarship-ಧಾರ್ಮಿಕ ದತ್ತಿ ಇಲಾಖೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹5,000/- ಪ್ರೋತ್ಸಾಹಧನ!

ಇಂದಿನ ಡಿಜಿಟಲ್ ಯುಗದಲ್ಲಿ ನಿಖರವಾದ ಮಾಹಿತಿ ಪಡೆಯುವುದು ಹಾಗೆಯೇ ತಪ್ಪು ಮಾಹಿತಿಗಳನ್ನು(Fake News Training) ಗುರುತಿಸುವುದು ಅತ್ಯಂತ ಅಗತ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪು ಮಾಹಿತಿಯನ್ನು ಗುರುತಿಸಲು ಎಐ (Artificial Intelligence) ಮತ್ತು ಫ್ಯಾಕ್ಟ್‌ಚೆಕ್ (Fact-Check) ಕೌಶಲ್ಯಗಳು ಆಧುನಿಕ ಯುಗದ ಪ್ರಮುಖ ಅತ್ಯಾವಶ್ಯಕವಾಗಿದೆ.

ಈ ಅಂಕಣದಲ್ಲಿ ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಯಾರ‍ೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿ ಸಲ್ಲಿಸಲು ಪಾಲಿಸಬೇಕಾದ ವಿಧಾನಗಳು? ತರಬೇತಿಯ ಅವಧಿ? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Nirani Sugars-ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ದರ ನಿಗದಿ ಕುರಿತು ಅಧಿಕೃತ ಆದೇಶ ಪ್ರಕಟ!

What Is Artificial Intelligence-ಎಐ ಎಂದರೇನು?

ಎಐ (Artificial Intelligence) ಎನ್ನುವುದು ಕೃತಕ ಬುದ್ಧಿಮತ್ತೆ ಎಂದು ಕರೆಯಲ್ಪಡುವ ತಂತ್ರಜ್ಞಾನ. ಇದು ಮಾನವರು ಮಾಡುವಂತೆ ಯೋಚಿಸುವ, ಕಲಿಯುವ, ವಿಶ್ಲೇಷಿಸುವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಂಪ್ಯೂಟರ್‌ಗಳಿಗೆ ಕಲಿಸುವ ವಿಜ್ಞಾನ.

Last Date To APply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 21 2025

Uses Of This Training-ಈ ತರಬೇತಿಯಲ್ಲಿ ಏನೆಲ್ಲಾ ಪ್ರಯೋಜನಗಳಿರುತ್ತದೆ?

ಡೀಪ್ ಫೇಕ್ ವಿಡಿಯೋಗಳನ್ನು 2 ನಿಮಿಷದಲ್ಲಿ ಗುರುತಿಸುವ ವಿಧಾನದ ಮಾಹಿತಿ.

ಎಐ ಆಧಾರಿತ ಫ್ಯಾಕ್ಟ್ ಚೆಕ್ ಉಪಕರಣಗಳ ಬಳಕೆ (Google Fact Check Tools, InVID, Hive Moderation) ಯನ್ನು ಹೇಗೆ ಮಾಡಬೇಕು.

ಚಾಟ್‌ಜಿಪಿಟಿ, ಬಿಂಗ್ ಏಐ, ಗೂಗಲ್ ಜೆಮಿನಿ ಮುಂತಾದ ಉಪಕರಣಗಳ ಬಳಕೆಯನ್ನು ಹೇಗೆ ಮಾಡಿಕೊಳ್ಳಬೇಕು.

ಫೋಟೋ-ವಿಡಿಯೋಗಳ ರಿವರ್ಸ್ ಸರ್ಚ್ ತಂತ್ರಗಳು ಅಥವಾ ಎಡಿಟ್ ಗುರುತಿಸುವುದು.

ಸುಳ್ಳು ಸುದ್ದಿಯನ್ನು ತಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಏನು ಬರೆಯಬೇಕು.

ಎಐಯಿಂದಲೇ ಸತ್ಯ ಸುದ್ದಿಯನ್ನು ತ್ವರಿತವಾಗಿ ರಚಿಸುವ ವಿಧಾನ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

Purpose Of This Training-ಈ ತರಬೇತಿಯ ಮುಖ್ಯ ಉದ್ದೇಶವೇನು?

1) ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡುವ ತಪ್ಪುಮಾಹಿತಿಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವುದು.

2) ಎಐ ಉಪಕರಣಗಳ ಮೂಲಕ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವ ಕೌಶಲ್ಯವನ್ನು ತರಬೇತಿ ಮೂಲಕ ಅಭಿವೃದ್ಧಿಪಡಿಸುವುದು.

3) ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳ ಪರಿಚಯ ನೀಡುವುದು.

4) ನಕಲಿ ಚಿತ್ರ, ವೀಡಿಯೋ ಮತ್ತು ಬರಹಗಳನ್ನು ಗುರುತಿಸುವ ಪ್ರಾಯೋಗಿಕ ವಿಧಾನಗಳನ್ನು ಕಲಿಸುವುದು.

ಇದನ್ನೂ ಓದಿ: PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

AI Training

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಆಧಾರ್ ಕಾರ್ಡ್/Aadhar Card

ಫೋಟೋ/Photo copy

ರೇಶನ್ ಕಾರ್ಡ/Ration Card

ಪತ್ರಕರ್ತ ಗುರುತಿನ ಚೀಟಿ/Identity Card

ಅರ್ಜಿ ಫಾರ್ಮ್/Application Form

ಶಿಕ್ಷಣ ಸಂಬಂಧಿತ ದಾಖಲೆಗಳು (ಅಗತ್ಯವಿದ್ದಲ್ಲಿ)/Educational Certificate

ಇದನ್ನೂ ಓದಿ: Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

Step-1: ಅರ್ಹ ಅಭ್ಯರ್ಥಿಗಳು ಮೊದಲಿಗೆ ಈ ಲಿಂಕ್ "Online Application Link" ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೆಷನ್ ಫಾರ್ಮ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ ಅಲ್ಲಿ ಕೇಳಲಾಗಿರುವ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

Step-3: ಅಪ್ಲೋಡ್ ಮಾಡಿದ ನಂತರ ನೀವು ನೀಡಲಾಗಿರುವ ಮೊಬೈಲ್ ನಂಬರ್ ಗೆ ಬಂದಿರುವ ಸಂದೇಶದಲ್ಲಿ ತರಬೇತಿಯ ದಿನಾಂಕ ಹಾಗೂ ಸ್ಥಳ ವಿವರಗಳನ್ನು ನೀಡಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: