Uchita Meenu Mari-ಮೀನುಗಾರಿಕೆ ಇಲಾಕೆಯಿಂದ ಉಚಿತ ಮೀನು ಮರಿ ಪಡೆಯಲು ಅರ್ಜಿ ಆಹ್ವಾನ!

November 24, 2025 | Siddesh
Uchita Meenu Mari-ಮೀನುಗಾರಿಕೆ ಇಲಾಕೆಯಿಂದ ಉಚಿತ ಮೀನು ಮರಿ ಪಡೆಯಲು ಅರ್ಜಿ ಆಹ್ವಾನ!
Share Now:

ಕೃಷಿ ಹೊಂಡವನ್ನು ಹೊಂದಿರುವ ರೈತರಿಗೆ ಉಪ ಆದಾಯವನ್ನು ರೂಪಿಸಿಕೊಳ್ಳಲು ರಾಜ್ಯ ಸರಕಾರದಿಂದ ಮೀನುಗಾರಿಕೆ ಇಲಾಖೆಯ(Fisheries Department)ಮೂಲಕ ಮೀನು ಕೃಷಿಯನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ಕೃಷಿಕರಿಗೆ ಉಚಿತವಾಗಿ ಮೀನು ಮರಿಗಳನ್ನು ವಿತರಣೆ(Uchita Meenu Mari Vitarane) ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ(Krishi Bhagya) ಯೋಜನೆ ಮತ್ತು ತೋಟಕಾರಿಗೆ ಇಲಾಖೆಯಿಂದ ರಾಷ್ಟೀಯ ತೋಟಗಾರಿಕೆ ಮಿಷನ್(NHM) ಯೋಜನೆಯಡಿ ಹಾಗೂ ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡವನ್ನು(Krishi Honda) ನಿರ್ಮಾಣ ಮಾಡಿಕೊಂಡಿರುವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅವಕಾಶವಿದ್ದು, ಸಣ್ಣ ಪ್ರಮಾಣ ಆದಾಯವನ್ನು ರೂಪಿಸಿಕೊಳ್ಳಲು ಈ ಅವಕಾಶವನ್ನು ರೈತರು ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Poultry Scheme-ಉಚಿತ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ!

ಕೃಷಿಕರು ಉಚಿತವಾಗಿ ಮೀನು ಮರಿಗಳನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಷ್ಟು ಮೀನು ಮರಿಗಳನ್ನು(Meenugarike) ವಿತರಣೆ ಮಾಡಲಾಗುತ್ತದೆ? ಯಾವೆಲ್ಲ ಜಿಲ್ಲೆಗಳಲ್ಲಿ ಈ ಯೋಜನೆ ಪ್ರಸ್ತುತ ಜಾರಿಯಲ್ಲಿ ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮೀನುಗಾರಿಕೆ ಇಲಾಖೆಯಿಂದ ಉಚಿತವಾಗಿ ಮೀನು ಮರಿಗಳನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಿ ಮೀನು ಮರಿಗಳನ್ನು ಪಡೆಯಬಹುದು.

ಅರ್ಜಿದಾರ ರೈತರು ಕೃಷಿ ಹೊಂಡವನ್ನು ಹೊಂದಿರಬೇಕು.
ಈಗಾಗಲೇ ಈ ಯೋಜನೆಯಡಿ ಹಿಂದಿನ ವರ್ಷ ಇಲಾಖೆಯಿಂದ ಉಚಿತವಾಗಿ ಮೀನು ಮರಿಗಳನ್ನು ಪಡೆದಿರಬಾರದು.
ಮೀನು ಸಾಕಾಣಿಕೆಯಲ್ಲಿ ಅನುಭವವನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Engineering scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

Fish Farming Subsidy-ಯಾವೆಲ್ಲ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ?

ಪ್ರಸ್ತುತ ಮಡಿಕೇರಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅನುದಾನ ಲಭ್ಯತೆ ಆಧಾರದ ಮೇಲೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅವಕಾಶವಿರುತ್ತದ್ದು, ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಿಮ್ಮ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರು ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ತಾಲ್ಲೂಕಿನ ಸಹಾಯಕ ಮೀನುಗಾರಿಕೆ ನಿರ್ದೇಶಕರ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Fisheries-ಮೀನುಗಾರಿಕೆ ಇಲಾಖೆ ಪರಿಹಾರ ನಿಧಿಯಡಿ ಪರಿಹಾರ ಮೊತ್ತ 10.00 ಲಕ್ಷರೂ.ಗಳಿಗೆ ಏರಿಕೆ- ಸಿದ್ದರಾಮಯ್ಯ

Uchita Meenu Mari Vitarane

Documents-ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು:

ಮೀನುಗಾರಿಕೆ ಇಲಾಖೆಯಿಂದ ಉಚಿತವಾಗಿ ಮೀನು ಮರಿಗಳನ್ನು ಪಡೆಯಲು ಅರ್ಜಿದಾರರು ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ದಾಖಲೆಗಳ ಪಟ್ಟಿ ಹೀಗಿದೆ:

  • ಅರ್ಜಿದಾರರ ಆಧಾರ್ ಕಾರ್ಡ
  • ಪೋಟೋ
  • ಕೃಷಿ ಹೊಂಡ ಹೊಂದಿರುವ ಕುರಿತು ದೃಡೀಕರಣ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ
  • ಮೊಬೈಲ್ ನಂಬರ್

ಇದನ್ನೂ ಓದಿ: Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

Fish Farming in Farm Pond-ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆಯನ್ನು ಮಾಡುಲು ಸೂಕ್ತ ಸಲಹೆಗಳು:

ಇಲ್ಲಿ ಕೃಷಿ ಹೊಂಡದಲ್ಲಿ ಮೀನು ಸಾಕಣಿಕೆ (Fish Farming in Farm Pond) ಮಾಡಲು ಅತ್ಯುತ್ತಮ ಹಾಗೂ ಅನುಸರಿಸಲು ಸುಲಭವಾದ ಸಲಹೆಗಳನ್ನು ನೀಡಲಾಗಿದೆ:

1) ಹೊಂಡದ ಆಯ್ಕೆ ಮತ್ತು ತಯಾರಿ ವಿಧಾನ:

ಹೊಂಡದ ಆಳ 8–12 ಅಡಿ ಇರಲಿ.

ಹೊಂಡದಲ್ಲಿ ನೀರು ಸತತ 10–12 ತಿಂಗಳು ಇರಲು ವ್ಯವಸ್ಥೆ ಮಾಡಿರಿ.

ಹೊಂಡಕ್ಕೆ ನೀರು ಹರಿದು ಬರುವ ದಾರಿ ಸ್ವಚ್ಛವಾಗಿರಲಿ, ಕಲುಷಿತ ನೀರು ಬರದಂತೆ ನೋಡಿಕೊಳ್ಳಿ.

ಹೊಂಡಕ್ಕೆ ಚೂನಾ (Lime) 100–150 kg/acre ಹಾಕುವುದರಿಂದ pH ಸಮತೋಲನವಾಗುತ್ತದೆ ಮತ್ತು ರೋಗ ಕಡಿಮೆಯಾಗುತ್ತದೆ.

ಇದನ್ನೂ ಓದಿ: Free Treatment-ನಾಯಿ, ಹಾವು ಕಡಿತಕ್ಕೆ ತಕ್ಷಣ ಉಚಿತ ಚಿಕಿತ್ಸೆ ಕಡ್ಡಾಯ ಸುಪ್ರೀಂ ಕೋರ್ಟ್ ಆದೇಶ!

2) ಮೀನು ಜಾತಿಗಳ ಸರಿಯಾದ ಆಯ್ಕೆ ಹೀಗಿರಲಿ:

ಕಾಂಪೊಸಿಟ್ ಮೀನುಗಾರಿಕೆ (Composite Fish Culture) ಅತ್ಯುತ್ತಮ:

  • ಕಟ್ಲಾ (Catla) – ಮೇಲ್ಮೈ ನೀರಿನಲ್ಲಿ ಸಂಚರಿಸುತ್ತವೆ
  • ರೋಹು (Rohu) – ಮಧ್ಯಮ ನೀರಿನಲ್ಲಿ
  • ಮೃಗಲ್ (Mrigal) – ತಳದಲ್ಲಿ
  • ತಿಲಾಪಿಯಾ (Tilapia) – ವೇಗವಾಗಿ ಬೆಳೆಯುವ ಜಾತಿ
  • ಕಾಮನ್ ಕಾರ್ಪ್ (Common Carp) – ತಳಮಟ್ಟದಲ್ಲಿ ಆಹಾರ ಹುಡುಕುತ್ತದೆ

ಈ ಜಾತಿಗಳು ಪರಸ್ಪರ ಸ್ಪರ್ಧೆ ಮಾಡದೆ ಬೇರೆ ಬೇರೆ ಲೇಯರ್‌ನಲ್ಲಿ ಬೆಳೆಯುತ್ತವೆ, ಹೊಂಡದಲ್ಲಿ ಜಾಗವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

3) ಆಹಾರ (Feeding): ರೈಸ್ ಬ್ರಾನ್ + ಕಾಳುಗರಿ (oil cake) ಮಿಶ್ರಣ – 1:1 ಅನುಪಾತ. ದಿನಕ್ಕೆ ಮೀನಿನ ಒಟ್ಟು ತೂಕದ 3–5% ಆಹಾರ ನೀಡುವುದು ಉತ್ತಮ. ತೇವ ಆಹಾರ ಅಥವಾ ತೇಲುವ ಪೆಲ್ಲೆಟ್‌ಗಳು (Floating Pellets) ನೀಡಿದರೆ ಬೆಳವಣಿಗೆ ವೇಗವಾಗುತ್ತದೆ.

ಇದನ್ನೂ ಓದಿ: AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

4) ಆಹಾರ ನೀಡುವ ಸಮಯ: ಬೆಳಗ್ಗೆ 8–9 ಗಂಟೆ, ಸಂಜೆ 4–5 ಗಂಟೆ ನಡುವೆ ನೀಡಿ.

5) ನೀರಿನ ಗುಣಮಟ್ಟ ನಿರ್ವಹಣೆ: ಮೀನು ಸಾಕಾಣಿಕೆಗೆ ನೀರಿನ ಬಣ್ಣ ಹಸಿರು ಬಣ್ಣ ಇದ್ದರೆ ಸೂಕ್ತ, ನೀರಿನಲ್ಲಿ ದೂಷಣೆ ಬಂದರೆ 50% ನೀರನ್ನು ಬದಲಾಯಿಸಿ, ಆಕ್ಸಿಜನ್ ಕಡಿಮೆಯಾಗದಂತೆ ನೋಡಿಕೊಳ್ಳಿ.

6) ನೆಲಗೊಬ್ಬರ/ಆರ್ಗಾನಿಕ್ ಗೊಬ್ಬರ ಬಳಕೆ ಮಾಡುವ ವಿಧಾನ: ಹೊಂಡದಲ್ಲಿ ಹಸು ಗೊಬ್ಬರ (500–800 kg/acre) ಹಾಕಿದರೆ ನೀರಿನಲ್ಲಿ ಪ್ಲಾಂಕ್ಟನ್‌ಗಳು ಹೆಚ್ಚಾಗಿ, ಮೀನುಗಳಿಗೆ ನೈಸರ್ಗಿಕ ಆಹಾರ ಸಿಗುತ್ತದೆ, ಗೊಬ್ಬರವನ್ನು ನೇರವಾಗಿ ಹಾಕಬೇಡಿ—ಚೀಲದಲ್ಲಿ ಹೂತು ಹಾಕಿರಿ.

7) ನಿರ್ವಹಣೆ ಕ್ರಮಗಳು: ಆಹಾರದಲ್ಲಿ ವಿಟಮಿನ್ C, ಖನಿಜ ಮಿಶ್ರಣ ಸೇರಿಸಿ, ಮೀನಿನ ವರ್ತನೆ ಗಮನಿಸಿ—ಮೇಲೆ ತೇಲಿ ಬರುತ್ತಿದ್ದರೆ ಆಕ್ಸಿಜನ್ ಕಡಿಮೆ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: