Online Land Records-ರೈತರಿಗೆ ಇನ್ನುಂದೆ ಪಹಣಿ ಜೊತೆಗೆ ಸಿಗಲಿವೆ ಹೆಚ್ಚುವರಿ ಭೂ ದಾಖಲೆಗಳು!

December 1, 2025 | Siddesh
Online Land Records-ರೈತರಿಗೆ ಇನ್ನುಂದೆ ಪಹಣಿ ಜೊತೆಗೆ ಸಿಗಲಿವೆ ಹೆಚ್ಚುವರಿ ಭೂ ದಾಖಲೆಗಳು!
Share Now:

ರೈತರು ತಮ್ಮ ಕೃಷಿ ಜಮೀನಿನ ಮಾಲೀಕತ್ವ ಸಾಬೀತುಪಡಿಸಲು ಅಗತ್ಯವಾಗಿ ಅವಶ್ಯವಿರುವ ದಾಖಲೆಯಲ್ಲಿ ಪ್ರಸ್ತುತ ಪಹಣಿಯನ್ನು(RTC) ಮಾತ್ರ ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಕಂದಾಯ ಇಲಾಖೆಯಿಂದ(Revenue Department) ಇದ್ದು ಇದಕ್ಕೆ ಹೆಚ್ಚುವರಿಗೆ ಪೋಡಿ ನಕ್ಷೆ(Podi Nakshe), ಆಕಾರ್ ಬಂದ್(Akara Band), ಮ್ಯುಟೇಶನ್(Mutation) ಪ್ರತಿಯನ್ನು ಸಹ ರೈತರಿಗೆ ವಿತರಣೆ ಮಾಡಲು "ಭೂಮಿ-2/Bhoomi" ಆವೃತ್ತಿ ಬಿಡುಗಡೆ ಮಾಡುವ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಂಚಿಕೊಂಡಿರುವ ಅಧಿಕೃತ ಪತ್ರಿಕಾ ಪ್ರಕಟಣೆ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಕೃಷಿಕರು ತಮ್ಮ ಜಮೀನಿನ ಮಾಲೀಕತ್ವ(Agriculture Land Records) ಸಾಬೀತುಪಡಿಸಲು ಅಗತ್ಯವಿರುವ ಕೆಲವು ಪ್ರಮುಖ ದಾಖಲೆಗಳನ್ನು ಪಡೆಯಲು ಸರ್ವೆ ಕಚೇರಿ, ತಹಶೀಲ್ದಾರ್ ಕಚೇರಿ, ಉಪನೋಂದಣಿ ಅಧಿಕಾರಿ ಕಚೇರಿಯನ್ನು ಅಲೆದಾಡುವ ಪರಿಸ್ಥಿತಿ ಇದ್ದು, ಇದರಲ್ಲಿ ಪ್ರಮುಖ ದಾಖಲೆಗಳಾದ ಪೋಡಿ ನಕ್ಷೆ, ಆಕಾರ್ ಬಂದ್, ಮ್ಯುಟೇಶನ್, ಋಣಭಾರ ಪ್ರಮಾಣ ಪತ್ರ(EC) ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿ 20-30 ದಿನ ಕಾಯಬೇಕಾಗುತ್ತದೆ ಜೊತೆಗೆ ಅಧಿಕ ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲು "ಭೂಮಿ-2" ಆವೃತಿ ಬಿಡುಗಡೆಗೆ ಕಂದಾಯ ಇಲಾಖೆ ಅಧಿಕಾರಿಗಳು ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

ಭೂಮಿ-2 ಆವೃತ್ತಿಯಿಂದಾಗಿ(Bhoomi Website) ಕೃಷಿಕರಿಗೆ ಯಾವೆಲ್ಲ ಅನುಕೂಲಗಳಿವೆ? ರೈತರಿಗೆ ಇನ್ನುಂದೆ ಪಹಣಿ ಜೊತೆಗೆ ಹೆಚ್ಚುವರಿಯಾಗಿ ಯಾವೆಲ್ಲ ಭೂ ದಾಖಲೆಗಳು ಸಿಗಲಿವೆ? ಇವುಗಳ ಪ್ರಯೋಜನವೇನು? ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಯಾವೆಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನುವ ಮಾಹಿತಿ ಸೇರಿದಂತೆ ಸಂಪೂರ್ಣ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Karnataka Revenue Land Documents-ರೈತರಿಗೆ ಇನ್ನುಂದೆ ಪಹಣಿ ಜೊತೆಗೆ ಸಿಗಲಿವೆ ಹೆಚ್ಚುವರಿ ಭೂ ದಾಖಲೆಗಳು:

ನಮ್ಮ ರಾಜ್ಯದಲ್ಲಿ ಕೃಷಿಕ ಜಮೀನಿಗೆ ಸಂಬಂಧಪಟ್ಟ ಮಾಲೀಕತ್ವ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ನಿರ್ವಹಿಸಲಾಗುತ್ತದೆ ಈ ನಿಟ್ಟಿನಲ್ಲಿ ಪ್ರಸ್ತುತ ರೈತರು ಆನ್ಲೈನ್ ನಲ್ಲಿ ಶುಲ್ಕವನ್ನು ಪಾವತಿ ಮಾಡಿ ಕೇವಲ ಪಹಣಿ/ಉತಾರ್/RTC ದಾಖಲೆಯನ್ನು ಮಾತ್ರ ಪಡೆಯಲು ಸಾಧ್ಯವಿದ್ದು ಇನ್ನುಂದೆ ಜಮೀನಿಗೆ ಸಂಬಂಧಿಸಿದ ಪೋಡಿ ನಕ್ಷೆ, ಆಕಾರ್ ಬಂದ್, ಮ್ಯುಟೇಶನ್ ಪ್ರತಿಯನ್ನು ಸಹ ವಿತರಿಸಲು "ಭೂಮಿ-2" ಆವೃತ್ತಿಯನ್ನು ಬಿಡುಗಡೆ ಮಾಡಲು ಕಂದಾಯ ಇಲಾಕೆಯು ಯೋಜನೆಯನ್ನು ರೂಪಿಸಲಾಗುತ್ತಿದೆ.

ಇದನ್ನೂ ಓದಿ: Mekkejola Kharidi- ಕೆಎಂಎಫ್‌ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್‌ಗೆ ₹2,400 ರಂತೆ ಮೆಕ್ಕೆಜೋಳ ಖರೀದಿಗೆ ಆದೇಶ ಪ್ರಕಟ!

Online Agriculture Land Records-ರೈತರಿಗೆ ಅಗುವ ಅನುಕೂಲಗಳೇನು?

ಜಮೀನಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಪಡೆಯಲು ಸರಕಾರಿ ಕಚೇರಿಯ ಕೆಲಸಕ್ಕೆ ಮಧ್ಯವರ್ತಿಗಳ ಹಾವಳಿಗೆ ನೀಡುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು.

ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿ 20-30 ದಿನ ಕಾಯುವುದಕ್ಕೆ ಮುಕ್ತಿ ಸಿಗಲಿದೆ.

ಭೂ ದಾಖಲೆಗಳನ್ನು ಪಡೆಯಲು ಸರ್ವೆ ಕಚೇರಿ, ತಹಶೀಲ್ದಾರ್, ಉಪನೋಂದಣಿ ಅಧಿಕಾರಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಬಿಳಲಿದೆ.

ರೈತರು ಅವಶ್ಯವಿರುವ 3-4 ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಸಮಯದಲ್ಲಿ ಪ್ರತ್ಯೇಕ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

ಈ ಮೇಲಿನ ಎಲ್ಲಾ ಕಾರಣಗಳಿಂದ ಮತ್ತು ಸೌಲಭ್ಯದಿಂದಾಗಿ ರೈತರಿಗೆ ಸಮಯ ಮತ್ತು ಹಣ ಶ್ರಮ ಉಳಿತಾಯವಾಗುವುದರಿಂದ ಜನ ಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ Diploma, ITI ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Online Land Records

Online Agriculture Land Records-ಪಹಣಿ ಜೊತೆ ರೈತರಿಗೆ ಸಿಗಲಿವೆ ಹೆಚ್ಚುವರಿ ದಾಖಲೆಗಳು: ಸಚಿವ ಕೃಷ್ಣ ಬೈರೇಗೌಡ

ಪಹಣಿ ಜೊತೆಗೆ ಹೆಚ್ಚುವರಿಯಾಗಿ ನೀಡಲಿರುವ ಭೂ ದಾಖಲೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಸಚಿವ ಕೃಷ್ಣ ಬೈರೇಗೌಡ ಅವರ ಪತ್ರಿಕಾ ಪ್ರಕಟಣೆ ಮಾಹಿತಿ ಹೀಗಿದೆ "ಪಹಣಿ ಡಿಜಿಟಲೀಕರಣಕ್ಕಾಗಿ ರೂಪುಗೊಂಡ ಭೂಮಿ ತಂತ್ರಾಂಶ ಬಳಕೆ ಆರಂಭವಾಗಿ 25 ವರ್ಷಗಳಾಗಿದ್ದು, 'ಭೂಮಿ- 2' ಆವೃತ್ತಿಯಡಿ ಪಹಣಿ ಜತೆಗೆ ಆಕಾರ ಬಂದ್, ಮ್ಯುಟೇಶನ್, ಪೋಡಿ ನಕ್ಷೆಯನ್ನು ಕಂಪ್ಯೂಟರ್‌ನ ಒಂದು ಗುಂಡಿ ಒತ್ತುವ ಮೂಲಕ ಒಮ್ಮೆಗೇ ಸಿಗುವ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ. ಮುಂದೆ ಋಣಭಾರ ಪ್ರಮಾಣ ಪತ್ರ (ಇ.ಸಿ) ದಾಖಲೆಯನ್ನು ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ" ಎಂದು ತಿಳಿಸಿದ್ದಾರೆ.

Online Land Records-ಜಮೀನಿನ ದಾಖಲೆವಾರು ಸೂಚನೆ ಮಾಹಿತಿ:

ದಾಖಲೆಏನು ಸೂಚಿಸುತ್ತದೆ?
ಪಹಣಿ/RTCಮಾಲೀಕರ ಹೆಸರು, ಜಮೀನಿನ ವಿಸ್ತೀರ್ಣ, ಹಕ್ಕು, ಬೆಳೆ ಮಾಹಿತಿ, ಸಾಲದ ವಿವರ
ಪೋಡಿ ನಕ್ಷೆಭೂಮಿಯ ಗಡಿ/ವಿಭಜನೆ ನಕ್ಷೆ
ಆಕಾರ್ ಬಂದ್ ತಾಂತ್ರಿಕ ಅಳತೆಗಳು, ಮಾಪನ ವಿವರಗಳು
ಮ್ಯುಟೇಶನ್ಮಾಲೀಕರ ಹೆಸರು ಬದಲಾವಣೆ ದಾಖಲೆ/ಹಕ್ಕು ಬದಲಾವಣೆ ವಿವರ
ಋಣಭಾರ ಪ್ರಮಾಣ ಪತ್ರ(EC)ಆಸ್ತಿಗೆ ಸಂಬಂಧಿಸಿದ ಸಾಲ/ಬಾಧ್ಯತೆಗಳ ಮಾಹಿತಿ

ಇದನ್ನೂ ಓದಿ: Labour Welfare Scholarship-ಕಾರ್ಮಿಕ ಇಲಾಖೆಯ ವತಿಯಿಂದ ₹20,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

1) ಪಹಣಿ (Pahani / RTC / Record of Rights):

ಪಹಣಿ (RTC) ಎಂಬುದು ರೈತನ ಭೂಮಿಯ ಹಕ್ಕು, ಬೆಳೆ, ಭೂ ಉಪಯೋಗ, ನೀರಾವರಿ, ಸಾಲ-ಭಾರಗಳ ಮಾಹಿತಿ ಒಳಗೊಂಡಿರುವ ದಾಖಲೆ, ಭೂಮಿಯ ಮಾಲೀಕರ ಹೆಸರು, ಭೂಮಿಯ ಅಳತೆ (ಎಕರೆ/ಗುಂಟೆ), ಈ ಸರ್ವೆ ನಂಬರ್ ನಲ್ಲಿ ಯಾವ ಬೆಳೆ ಬೆಳೆಯಾಲಾಗಿದೆ? ಎನ್ನುವ ಮಾಹಿತಿ, ಭೂಮಿಗೆ ನೀರಾವರಿ ಹೇಗೆ ಇದೆ (Well/Borewell/Tank)? ಭೂಮಿಯ ಮೇಲೆ ಸಾಲ ಅಥವಾ ಬಾಧ್ಯತೆಗಳಿವೆನಾ? ಹಕ್ಕಿನ ವಿವರವನ್ನು ಈ ದಾಖಲೆಯಲ್ಲಿ ನೀಡಲಾಗಿರುತ್ತದೆ.

2) ಪೋಡಿ ನಕ್ಷೆ (Podi Naksha / Survey Map):

ಪೋಡಿ ನಕ್ಷೆ ಎಂದರೆ ಭೂಮಿಯ ಹಂಚಿಕೆ/ಪೋಡಿ ಆದ ನಂತರ ಸಿದ್ಧವಾಗುವ ನಿಖರ ನಕ್ಷೆ. ಭೂಮಿಯ ನಿಖರ ಗಡಿ ಗುರುತುಗಳು, ಭೂ ಭಾಗ ಹೇಗೆ ವಿಭಜಿಸಲಾಗಿದೆ, ಯಾವ ಯಾರಿಗೆ ಯಾವ ಭಾಗ ಬಂದಿದೆ, ಸರ್ವೇ ಸಂಖ್ಯೆ/ಹಳ್ಳಿ ನಕ್ಷೆ ವಿವರವನ್ನು ಈ ದಾಖಲೆ ನಿಖರವಾಗಿ ಹೇಳುತ್ತದೆ.

ಇದನ್ನೂ ಓದಿ: Bele Parihara-2025: ರೈತರ ಖಾತೆಗೆ ₹1,033 ಕೋಟಿ ಬೆಳೆ ಹಾನಿ ಪರಿಹಾರ ಬಿಡುಗಡೆ!

3) ಆಕಾರ್ ಬಂದ್ (Akar Band / Survey Tippani / Land Measurement Record):

ಆಕಾರ್ ಬಂದ್ ಎಂದರೆ ಭೂಮಿಯ ಆಯಾಮ, ಉದ್ದ-ಅಗಲ, ಹಂತವಾರು ಅಳತೆ, ಗಡಿ ಚುಕ್ಕಿ‌ಗಳ ಮಾಹಿತಿ ಇರುವ ಮಾಪನಾ ದಾಖಲೆ. ಭೂಮಿಯ ನಿಖರ ಅಳತೆಗಳು, ಗಡಿಗಳ ತಾಂತ್ರಿಕ ಅಳತೆ, ಭೂಮಿಯ ಆಕಾರ ಮತ್ತು ಗಡಿ ವಿವರ, ಸರ್ವೇ ಮಾಡುವಾಗ ಸರ್ವೇಯರ್ ಪಡೆದ ಮಾಪನದ ಅಂಕೆಗಳು ಈ ದಾಖಲೆಯಲ್ಲಿರುತ್ತವೆ.

4) ಮ್ಯುಟೇಶನ್ (Mutation / MR - Muttation Register Entry):

ಭೂಮಿಯ ಮಾಲೀಕತ್ವದಲ್ಲಿ ಬದಲಾವಣೆ ನಡೆದಾಗ (ಖರೀದಿ/ವಾಸಿ/ಉಪಹಾರ/ವಾರಸುದಾರಿಕೆ) RTC/ಭೂ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಮ್ಯುಟೇಶನ್ ಎನ್ನುತ್ತಾರೆ. ಭೂಮಿಯ ಹೊಸ ಮಾಲೀಕರ ಹೆಸರು, ಮಾಲೀಕತ್ವ ಬದಲಾವಣೆಗೆ ಕಾರಣ (Sale, Gift, Inheritance), ಸರ್ವೇ ದಾಖಲೆಗಳಲ್ಲಿ ಅಧಿಕೃತ ಬದಲಾವಣೆ ವಿವರವನ್ನು ಈ ದಾಖಲೆಯು ಹೊಂದಿರುತ್ತದೆ.

ಇದನ್ನೂ ಓದಿ: Toilet Construction Subsidy -ಸ್ವಚ್ಚ ಭಾರತ್ ಯೋಜನೆಯ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನಕ್ಕೆ ಅರ್ಜಿ!

5) ಋಣಭಾರ ಪ್ರಮಾಣ ಪತ್ರ (EC – Encumbrance Certificate):

EC ಎಂದರೆ ಆಸ್ತಿಯ ಮೇಲೆ ಯಾವುದೇ ಸಾಲ/ಪಣ/ಕೇಸು/ಬಾಧ್ಯತೆಗಳಿವೆ ಅಥವಾ ಇಲ್ಲ ಎಂಬುದನ್ನು ತೋರಿಸುವ ಪ್ರಮಾಣ ಪತ್ರ. ಆಸ್ತಿಯ ಮೇಲೆ ಬ್ಯಾಂಕ್ ಸಾಲ ಇದೆಯಾ? ಮೊರ್ಟ್ಗೇಜ್/ಪಣ ಇಟ್ಟಿದೆಯಾ? ಆಸ್ತಿಯ ಮೇಲೆ ಯಾವುದೇ ಕಾನೂನು ತಡೆಗಳಿವೆಯಾ? ಹಿಂದಿನ ವ್ಯವಹಾರಗಳ ದಾಖಲೆ (ಹಸ್ತಾಂತರ, ಮಾರಾಟ ವಿವರ) ಮಾಹಿತಿಯನ್ನು ಈ ದಾಖಲೆ ಹೊಂದಿರುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: