Anabe Krishi Subsidy-ಅಣಬೆ ಕೃಷಿಯನ್ನು ಪ್ರಾರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

January 19, 2026 | Siddesh
Anabe Krishi Subsidy-ಅಣಬೆ ಕೃಷಿಯನ್ನು ಪ್ರಾರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?
Share Now:

ಕೃಷಿಯ ಜೊತೆಗೆ ಅಣಬೆ ಕೃಷಿಯನ್ನು ಮಾಡಲು ಹಲವು ಜನರು ಆಸಕ್ತಿಯನ್ನು ತೊರುತ್ತಿದ್ದು ಈ ನಿಟ್ಟಿನಲ್ಲಿ ಅಣಬೆ ಕೃಷಿಯನ್ನು(Mushroom Cultivation) ಆರಂಭಿಸಲು ಯಾವೆಲ್ಲ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಬಹುದು ಇದಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಅಣಬೆಗೆ ಸ್ಥಳೀಯವಾಗಿಯು ಸಹ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು ನಗರ ಪ್ರದೇಶಕ್ಕೆ ಹತ್ತಿರವಿರುವವರು ಹೋಟೆಲ್ ಗಳನ್ನು ಸಂಪರ್ಕದಲ್ಲಿ ಇಟ್ಟುಗೊಂಡು ಅಣಬೆ ಕೃಷಿಯನ್ನು(Mushroom Cultivation Subsidy Scheme) ಮಾಡಿ ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.

ಇದನ್ನೂ ಓದಿ: Free Neurology Treatment-ನರಮಂಡಲ ರೋಗಿಗಳಿಗೆ ಸರ್ಕಾರದಿಂದ 2 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ!

ಇಂದಿನ ಅಂಕಣದಲ್ಲಿ ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ಅಣಬೆ ಕೃಷಿಯನ್ನು(Anabe Krishi) ಮಾಡಲು ಯಾವೆಲ್ಲ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ಪಡೆಯಲು ಇದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Mushroom Cultivation Subsidy Scheme-ಅಣಬೆ ಕೃಷಿಯನ್ನು ಪ್ರಾರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯಡಿ ಅಣಬೆ ಕೃಷಿಯನ್ನು ಪ್ರಾರಂಭಿಸಲು ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಇವುಗಳ ಪಟ್ಟಿ ಹೀಗಿದೆ:

1) ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಪಡೆಯಬಹುದು.
2) ರಾಷ್ಟ್ರೀಯ ತೋಟಗಾರಿಕೆ ಮಂಡಳಿ(NHB) ಯೋಜನೆ
3) PMFME ಯೋಜನೆ
4) PMEGP ಯೋಜನೆ

ಇದನ್ನೂ ಓದಿ: Re-Marriage Assistance-ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆಯಡಿ ₹3.0 ಲಕ್ಷ ಆರ್ಥಿಕ ನೆರವು!

Anabe Krishi Subsidy

1) ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಪಡೆಯಬಹುದು/Hoticulture Department:

ಸಣ್ಣ ಮತ್ತು ಮಧ್ಯ ಪ್ರಮಾಣ ಅಣಬೆ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ರಾಜ್ಯ ಸರಕಾರದಿಂದ ತೋಟಗಾರಿಕೆ ಇಲಾಖೆಯ ಮೂಲಕ 'ಕಡಿಮೆ ವೆಚ್ಚದ ಅಣಬೆ ಉತ್ಪಾದನಾ ಘಟಕ' ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ. 40 ರಿಂದ 50 ರಷ್ಟು ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ. ಒಟ್ಟು ಘಟಕೆ ವೆಚ್ಚ ₹1.5 ಲಕ್ಷದಿಂದ ₹3 ಲಕ್ಷದವರೆಗೆ ವೆಚ್ಚ ಭರಿಸಲು ಅವಕಾಶವಿದ್ದು ಪರಿಶಿಷ್ಟ ಜಾತಿ/ಪಂಗಡ (SC/ST): ಈ ವರ್ಗದ ರೈತರಿಗೆ ಶೇ. 70 ರಿಂದ 90 ರಷ್ಟು ವರೆಗೂ ಸಹಾಯಧನ ಲಭ್ಯವಿರುತ್ತದೆ.

ಇಲಾಖೆ ಅಧಿಕೃತ ವೆಬ್ಸೈಟ್- Click Here

2) ರಾಷ್ಟ್ರೀಯ ತೋಟಗಾರಿಕೆ ಮಂಡಳಿ(NHB) ಯೋಜನೆ:

ನೀವು ವಾಣಿಜ್ಯ ಮಟ್ಟದಲ್ಲಿ (Commercial Level) ದೊಡ್ಡ ಘಟಕ ಸ್ಥಾಪಿಸುವುದಾದರೆ ಕೇಂದ್ರ ಸರಕಾರದಂದಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತೋಟಗಾರಿಕೆ ಮಂಡಳಿ(NHB) ಅಡಿಯಲ್ಲಿ ಸಹಾಯಧನವನ್ನು ಪಡೆದು ಘಟಕವನ್ನು ಪ್ರಾರಂಭಿಸಬಹುದು.

ಸಹಾಯಧನ: ಒಟ್ಟು ಯೋಜನಾ ವೆಚ್ಚದ ಶೇ. 40 ರಷ್ಟು (ಗರಿಷ್ಠ ₹30 ಲಕ್ಷದವರೆಗೆ).
ಯಾರೆಲ್ಲ ಅರ್ಜಿ ಸಲ್ಲಿಸಬಹುದು: ವೈಯಕ್ತಿಕ ರೈತರು, ರೈತ ಉತ್ಪಾದಕ ಸಂಸ್ಥೆಗಳು (FPO), ಮತ್ತು ಸ್ವಸಹಾಯ ಸಂಘಗಳು ಅರ್ಜಿ ಸಲ್ಲಿಸಬಹುದು.

ಮಂಡಳಿ ಅಧಿಕೃತ ವೆಬ್ಸೈಟ್- Click Here

ಇದನ್ನೂ ಓದಿ: JK Tyre Scholarship-ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್‌ನ ವತಿಯಿಂದ 25,000 ವಿದ್ಯಾರ್ಥಿವೇತನಕ್ಕೆ ಅರ್ಜಿ!

3) PMFME ಯೋಜನೆ:

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅಡಿಯಲ್ಲಿ ಅಣಬೆ ಕೃಷಿಯನ್ನು ಮಾಡಿ ಉಪ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡಲು ಶೆ 50% ಸಹಾಯಧನ ಅಥವಾ ಗರಿಷ್ಟ 15 ಲಕ್ಷದವರೆಗೆ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿರುತ್ತದೆ.

ಯೋಜನೆಯ ಅಧಿಕೃತ ವೆಬ್ಸೈಟ್- Click Here

4) PMEGP ಯೋಜನೆ:

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(PMEGP) ಅಡಿಯಲ್ಲಿ ಅಣಬೆಯನ್ನು ಉತ್ಪಾದನೆ ಮಾಡಲು ನಗರ ವ್ಯಾಪ್ತಿಯಲ್ಲಿ ಘಟಕವನ್ನು ಪ್ರಾರಂಭಿಸಲು ಒಟ್ಟು ಘಟಕ ವೆಚ್ಚಕ್ಕೆ ಶೇ 25% ಹಾಗೂ ಗ್ರಾಮೀಣ ಪ್ರದೇಶದಲ್ಲಿ ಘಟಕವನ್ನು ಪ್ರಾರಂಭಿಸಲು ಶೇ 35% ಸಹಾಯಧನವನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ(DIC)ದ ಕಚೇರಿಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಯೋಜನೆಯ ಅಧಿಕೃತ ವೆಬ್ಸೈಟ್- Click Here

ಇದನ್ನೂ ಓದಿ: Vasati Yojane-ರಾಜೀವ ಗಾಂಧಿ ವಸತಿ ನಿಗಮದಿಂದ ಕೇವಲ 9.7 ಲಕ್ಷಕ್ಕೆ 1BHK ಫ್ಲಾಟ್ ಪಡೆಯಲು ಅರ್ಜಿ ಆಹ್ವಾನ!

Required Documents For Applicatioin-ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು:

ಸಬ್ಸಿಡಿ ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:

ಆಧಾರ್ ಕಾರ್ಡ್ ಪ್ರತಿ/Adhar Card
ಪಾನ್ ಕಾರ್ಡ/Pan Card
ವೋಟರ್ ಐಡಿ/Voter ID
ಘಟಕ ಸ್ಥಾಪನೆ ಮಾಡುವ ಜಾಗದ RTC/ಪಹಣಿ ಅಥವಾ ಬಾಡಿಗೆ ಕರಾರು ಪತ್ರ
ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book
ಜಾತಿ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ)Caste Certificate
ಪಾಸ್‌ಪೋರ್ಟ್ ಅಳತೆಯ ಫೋಟೋ/Photo
ಯೋಜನಾ ವರದಿ/Project Report

ಇದನ್ನೂ ಓದಿ: Vermicompost subsidy-ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ 20,000 ಸಹಾಯಧನ!

Mushroom Cultivation Training-ತರಬೇತಿ ಸೌಲಭ್ಯ:

ಆಸಕ್ತ ಅಭ್ಯರ್ಥಿಗಳು ಅಣಬೆ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಮೊದಲು ಅಣಬೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ/ಕೃಷಿ ವಿಶ್ವವಿದ್ಯಾಲಯವನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಇಲ್ಲಿ ಲಭ್ಯವಿರುವ ತರಬೇತಿಯಲ್ಲಿ ಭಾಗವಹಿಸಿ ಅಣಬೆ ಕೃಷಿಯ ಬಗ್ಗೆ ತರಬೇತಿಯನ್ನು ಪಡೆದು ನಂತರ ಘಟಕವನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸುವುದು ಉತ್ತಮ ಮಾರ್ಗವಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: