Gruhalakshmi guidelines: ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಸಡಿಲಿಕೆ!

August 29, 2023 | Siddesh

ರಾಜ್ಯ ಸರಕಾರದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಯಲ್ಲಿ ಒಂದಾದ "ಗೃಹಲಕ್ಷ್ಮಿ"(Gruhalakshmi) ಯೋಜನೆಯ ಮೊದಲನೆ ಕಂತಿನ ಹಣ ವರ್ಗಾವಣೆಗೆ ಚಾಲನೆಯನ್ನು ಆಗಸ್ಟ್  30 ರಂದು ಮೈಸೂರಿನಲ್ಲಿ ಅಧಿಕೃತವಾಗಿ ಆರಂಭಿಸಲಾಗುತ್ತಿದ್ದು, ಚಾಲನಾ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ದತೆಗಳು ಪೂರ್ಣಗೊಳ್ಳುವ ಹಂತ ತಲುಪಿವೆ.

ಯೋಜನೆಯ ಆರಂಭದಲ್ಲಿ ಮಾರ್ಗಸೂಚಿಯಲ್ಲಿ ಆಶಾ ಕಾರ್ಯಕರ್ತೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಉಲ್ಲೇಖಿಸಲಾಗಿತ್ತು ಅದರೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಅರ್ಹ ಆಶಾ ಕಾರ್ಯಕರ್ತೆಯರು ಸಹ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ಹಂಚಿಕೊಳ್ಳಲಾಗಿದ್ದು ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಅದ್ದರಿಂದ ಇಲ್ಲಿಯವರೆಗೆ ಅರ್ಜಿ ಸಲ್ಲಿಸದ ಅರ್ಹ ಆಶಾ ಕಾರ್ಯಕರ್ತೆಯರು ಕೂಡಲೇ ನಿಮ್ಮ ಹತ್ತಿರ ಗ್ರಾಮ ಒನ್(Grama one) ಅಥವಾ ಗ್ರಾಮ ಪಂಚಾಯತ ಅನ್ನು ಅಗತ್ಯ ದಾಖಲಾತಿಗಳಾದ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ , ಮೊಬೈಲ್(ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ನಂಬರ್ ಇರುವ ಮೊಬೈಲ್ ತೆಗೆದುಕೊಂಡು ಹೊಗಬೇಕು ಏಕೆಂದರೆ ಓಟಿಪಿ ಹೇಳಲು ಸಹಕಾರಿ ಅಗುತ್ತದೆ) ಸಮೇತ ಭೇಟಿ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬವುದು.

ಯೋಜನೆ ಗೃಹಲಕ್ಷ್ಮಿ 
ಅರ್ಹತೆಪಡಿತರ ಚೀಟಿಯ ಕುಟುಂಬದ ಯಜಮಾನಿ
ಅರ್ಥಿಕ ನೆರವುಪ್ರತಿ ತಿಂಗಳು 2,000 ರೂ
ಚಾಲನೆ ದಿನಾಂಕ 30-08-2023
ಅರ್ಜಿ ಎಲ್ಲಿ ಸಲ್ಲಿಸಬೇಕುಗ್ರಾಮ್ ಒನ್, ಗ್ರಾಮ ಪಂಚಾಯತನಲ್ಲಿ
ಹೆಚ್ಚಿನ ಮಾಹಿತಿಗಾಗಿ https://sevasindhugs.karnataka.gov.in

Gruhalakshmi 1st Instalment- ಈ ದಿನದಂದು ಗೃಹಲಕ್ಷ್ಮಿ ಯೋಜನೆಯ ಮೊದಲನೆ ಕಂತಿನ ಹಣ:

ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಈ ಯೋಜನೆಗೆ 30 ಆಗಸ್ಟ್ 2023 ರಂದು ಅಧಿಕೃತ ಚಾಲನೆ ದೊರಯಲಿದ್ದು ಅದೇ ದಿನ ಮೊದಲನೆ ಕಂತಿನ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಹಂತ ಹಂತವಾಗಿ ಆ ದಿನದ ನಂತರದ ಒಂದೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗೆ ಮೊದಲನ ಕಂತಿನ ರೂ 2,000 ಜಮಾ ಅಗಲಿದೆ.

ಇದನ್ನೂ ಓದಿ: Ganga kalyana Yojane- 2023: ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ಮೊದಲ ಕಂತಿನ ಹಣ ಪಡೆಯಲು ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ:

ಪ್ರಸ್ತುತ 1.10 ಕೋಟಿ ಕುಟುಂಬದ ಯಜಮಾನಿಯರು ಅರ್ಜಿ ಸಲ್ಲಿಸಿದ್ದು, ಇನ್ನು ಈ ಯೋಜನೆಯಡಿ ಅರ್ಜಿ ಸಲ್ಲಿಸದವರು ದೊಡ್ಡ ಸಂಖ್ಯೆಯಲ್ಲಿದ್ದು ಕೂಡಲೇ 29 ಆಗಸ್ಟ್ 2023 ರ ಸಂಜೆಯ ಒಳಗಾಗಿ ಅರ್ಜಿ ಸಲ್ಲಿಸಿ 30 ಆಗಸ್ಟ್ 2023 ರಂದು ಚಾಲನೆಗೊಳ್ಳಲಿರುವ ಮೊದಲನೆ ಕಂತಿನ ಹಣ ವರ್ಗಾವಣೆಯಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಿ. ಈ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಿದವರೆಗೆ ಮೊದಲನೆ ಕಂತಿನ 2,000 ರೂ ಅರ್ಥಿಕ ನೆರವು ಸಿಗಲಿದೆ.

ಗೃಹಲಕ್ಷ್ಮಿ (gruhalakshmi Yojane pink card) ಫಲಾನುಭವಿಗಳಿಗೆ ಪಿಂಕ್ ಸ್ಮಾರ್ಟ್ ಕಾರ್ಡ ವಿತರಣೆ:

ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ಗುಲಾಬಿ ಬಣ್ಣದ ಸ್ಮಾರ್ಟ್ ಕಾರ್ಡ ಅನ್ನು ವಿತರಣೆ ಮಾಡಲು ಸರಕಾರದಿಂದ ಯೋಜನೆಯನ್ನು ಹಾಕಿಕೊಂಡಿದ್ದು, ಈ ಕಾರ್ಡನ ಒಂದು ಮುಖ ಬದಿಯಲ್ಲಿ ಫಲಾನುಭವಿಯ ಭಾವಚಿತ್ರ ಮತ್ತು ಪಕ್ಕದಲ್ಲಿ ಕ್ಯೂ ಆರ್ ಕೋಡ್ ಇರಲಿದ್ದು, ಈ ಕ್ಯೂ ಆರ್ ಕೋಡ ಸ್ಕ್ಯಾನ್ ಮಾಡಿದರೆ ಫಲಾನುಭವಿಗೆ ಎಷ್ಟು ಕಂತು ಹಣ ಜಮಾ ಅಗಿದೆ ಎಂದು ಸಂಪೂರ್ಣ ವಿವರ ತೋರಿಸಲಿದೆ ಎಂದು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಕಾರ್ಡ್ ಅನ್ನು ಯಾವಾಗ? ಹೇಗೆ ಫಲಾನುಭವಿಗಳಿಗೆ ಕೊಡಲಾಗುತ್ತದೆ ಎಂದು ಇನ್ನು ಅಧಿಕೃತ ಮಾಹಿತಿ ಬಂದಿರುವುದಿಲ್ಲ.

ಸಾರ್ವಜನಿಕರಿಗೆ ಈ ಯೋಜನೆಯ ಕುರಿತು ಯಾವುದೇ ಪ್ರಶ್ನೆಗೆ ಉತ್ತರ ತಿಳಿಯಲು ಸಹಾಯವಾಣಿ ಸ್ಥಾಪನೆ:

ಗೃಹಲಕ್ಷ್ಮಿ ಯೋಜನೆಯ ಕುರಿತು ಯಾವುದೇ ಬಗ್ಗೆಯ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು ಸಾರ್ವಜನಿಕರು ಇಲಾಖೆಯ ಸಹಾಯವಾಣಿ ಸಂಖ್ಯೆ 1902ಕ್ಕೆ ಸಂಪರ್ಕಿಸಿ ಪರಿಹಾರ ಪಡೆಯಬಹುದು.

ಹೆಚ್ಚುವರಿ ಸಹಾಯವಾಣಿಗಳು: 8147500500 ಅಥವಾ 8277000555

ಗ್ಯಾರಂಟಿ ಯೋಜನೆಯ ವೆಬ್ಸೈಟ್: https://sevasindhugs.karnataka.gov.in

ಪಡಿತರ ಚೀಟಿದಾರ ಕುಟುಂಬದ ಯಜಮಾನಿಯ ಸ್ಥಾನದಲ್ಲಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೂ ʼಗೃಹ ಲಕ್ಷ್ಮಿ ಯೋಜನೆʼಯಡಿ ನೋಂದಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಅರ್ಹರು ಯೋಜನೆಗೆ ಶೀಘ್ರವೇ ನೋಂದಾಯಿಸಿಕೊಳ್ಳಬಹುದು.#Gruhalakshmi #GruhalakshmiScheme @CMofKarnataka @siddaramaiah @DKShivakumar @laxmi_hebbalkar pic.twitter.com/35kh2ur2HC — Dept of Women and Child Development, Karnataka (@dwcd_kar) August 28, 2023

ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: