Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

February 21, 2026 | Siddesh
Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!
Share Now:

ಆಸ್ತಿ ನೋಂದಣಿಗಾಗಿ ಉಪನೋಂದಣಾಧಿಕಾರಿಗಳ ಕಚೇರಿಯ(Sub Register Office) ಮುಂದೆ ದಿನಗಟ್ಟಲೆ ಕಾಯುವ ಮತ್ತು ಕಂತೆ ಕಂತೆ ಕಾಗದದ ದಾಖಲೆಗಳನ್ನು ಹಿಡಿದು ಅಲೆಯುವ ಕಾಲಕ್ಕೆ ಇನ್ಮುಂದೆ ಮುಕ್ತಿ ನೀಡಬಹುದು. ಕರ್ನಾಟಕ ಸರ್ಕಾರವು 'ಕಾವೇರಿ 2.0' ತಂತ್ರಾಂಶದ ಮೂಲಕ ಆಸ್ತಿ ನೋಂದಣಿ(Online Property Registration) ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ತಂದಿದ್ದು, ಇನ್ಮುಂದೆ ಆನ್ಲೈನ್ ಮೂಲಕವೇ ನೋಂದಣಿಯನ್ನು ಮಾಡಿಕೊಳ್ಳಬಹುದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಕರ್ನಾಟಕ ಸರ್ಕಾರವು 'ಕಾವೇರಿ 2.0' ಎಂಬ ಸುಧಾರಿತ ತಂತ್ರಾಂಶದ ಮೂಲಕ ಆಸ್ತಿ ನೋಂದಣಿ(Online Property Registration Process) ಪ್ರಕ್ರಿಯೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇನ್ಮುಂದೆ ನಿಮ್ಮ ಆಸ್ತಿ ನೋಂದಣಿ ಸಂಪೂರ್ಣವಾಗಿ 'ಕಾಗದರಹಿತ' (Paperless) ಆಗಲಿದ್ದು, ಕೇವಲ 10 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

ಕಾವೇರಿ 2.0 ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತದೆ? ಕಾವೇರಿ 2.0 ತಂತ್ರಾಂಶದಲ್ಲಿ(Kaveri 2.0) ಸಾರ್ವಜನಿಕರು ಆನ್ಲೈನ್ ಮೂಲಕ ಆಸ್ತಿ ನೋಂದಣಿಯನ್ನು ಮಾಡುವುದು ಹೇಗೆ? ಇದರಿಂದ ನಾಗರಿಕರಿಗೆ ಆಗುವ ಪ್ರಯೋಜನಗಳು ಯಾವುವು? ಇದರ ಜೊತೆಗೆ ಕಾವೇರಿ 2.0 ತಂತ್ರಾಂಶದ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Kaveri 2.0 Website- ಕಾವೇರಿ 2.0 ತಂತ್ರಾಂಶದ ವಿಶೇಷತೆಗಳು:

ಇದು ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅತ್ಯಾಧುನಿಕ ಆನ್‌ಲೈನ್ ವ್ಯವಸ್ಥೆ. ಭೂಮಿ, ಇ-ಸ್ವತ್ತು, ಮತ್ತು ಸಕಾಲದಂತಹ ಪ್ರಮುಖ ಇಲಾಖೆಗಳೊಂದಿಗೆ ಈ ತಂತ್ರಾಂಶ ನೇರ ಸಂಪರ್ಕ ಹೊಂದಿದೆ. ಇದರಿಂದಾಗಿ ನಕಲಿ ದಾಖಲೆಗಳ ಹಾವಳಿ ತಪ್ಪಲಿದ್ದು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಸಾರ್ವಜನಿಕರೇ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Agri Pumpset-ಕೃಷಿ ಪಂಪ್ ಸೆಟ್ ಗೆ 10HP ವರೆಗೆ ವಿದ್ಯುತ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

Kaveri 2.0 Website Highlights-ಹೊಸ ವ್ಯವಸ್ಥೆಯ ಹೈಲೈಟ್ಸ್:

ಕಾಗದಕ್ಕೆ ಗುಡ್‌ಬೈ: ಇನ್ನು ಮುಂದೆ ಕಚೇರಿಗೆ ಕಂತೆ ಕಂತೆ ಕಾಗದದ ದಾಖಲೆಗಳನ್ನು ಒಯ್ಯುವ ಅಗತ್ಯವಿಲ್ಲ. ಎಲ್ಲವೂ ಡಿಜಿಟಲ್ ಮಯ.

ಡಿಜಿಟಲ್ ದಾಖಲೆಗಳು: ನೋಂದಣಿಯ ನಂತರ ಭೌತಿಕ ಪತ್ರಗಳ ಬದಲು, ನಿಮ್ಮ ಲಾಗಿನ್ ಐಡಿಗೆ ಡಿಜಿಟಲ್ ಸಹಿ ಇರುವ ಅಧಿಕೃತ ಪತ್ರಗಳು ಲಭ್ಯವಾಗುತ್ತವೆ.

ಸಮಯದ ಉಳಿತಾಯ: ಕಚೇರಿಯಲ್ಲಿ ನೀವು ಕಳೆಯುವ ಸಮಯ ಕೇವಲ 10 ರಿಂದ 15 ನಿಮಿಷ ಮಾತ್ರ.

ಇದನ್ನೂ ಓದಿ: Mobile Canteen Subsidy-ವಿವಿಧ ನಿಗಮಗಳಿಂದ ಮೊಬೈಲ್ ಕ್ಯಾಂಟಿನ್ ಖರೀದಿಗೆ 3.0 ಲಕ್ಷ ಸಬ್ಸಿಡಿಗೆ ಅರ್ಜಿ!

Kaveri 2.0 Portal Karnataka-ಕಾವೇರಿ 2.0 ಪೋರ್ಟಲ್‌ನಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು:

ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಜಾರಿಗೆ ತಂದಿರುವ 'ಕಾವೇರಿ 2.0' ತಂತ್ರಾಂಶದಲ್ಲಿ ಪ್ರಸ್ತುತ ಲಭ್ಯವಿರುವ ನೂತನ ಸೇವೆಗಳ ಪಟ್ಟಿ ಹೀಗಿದೆ:

ಸೇವೆವಿವರಣೆ
ಆಸ್ತಿ ನೋಂದಣಿಆನ್‌ಲೈನ್ ಅಪಾಯಿಂಟ್‌ಮೆಂಟ್ ಮತ್ತು ಪಾರದರ್ಶಕ ನೋಂದಣಿ.
ಋಣಭಾರ ಪ್ರಮಾಣಪತ್ರ (EC)ಆಸ್ತಿಯ ಮೇಲಿರುವ ಸಾಲ ಅಥವಾ ಕಾನೂನು ಬಾಧ್ಯತೆಗಳ ಪರೀಕ್ಷೆ ಮತ್ತು ಡೌನ್‌ಲೋಡ್.
ದಾಖಲೆ ಪರಿಶೀಲನೆಖರೀದಿಸುವ ಆಸ್ತಿಯ ಅಸಲಿಯತ್ತನ್ನು ಆನ್‌ಲೈನ್‌ನಲ್ಲಿಯೇ ಖಚಿತಪಡಿಸಿಕೊಳ್ಳುವುದು.
ಶುಲ್ಕದ ಕ್ಯಾಲ್ಕುಲೇಟರ್ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಮುಂಚಿತವಾಗಿ ಲೆಕ್ಕ ಹಾಕುವ ಸೌಲಭ್ಯ.
ವಿವಾಹ ನೋಂದಣಿವಿವಾಹ ನೋಂದಣಿಗೆ ಆನ್‌ಲೈನ್‌ನಲ್ಲಿ ಸಮಯ ನಿಗದಿಪಡಿಸುವುದು.
ಆಸ್ತಿ ಮೌಲ್ಯಮಾಪನಪ್ರದೇಶವಾರು ಆಸ್ತಿ ಮೌಲ್ಯವನ್ನು ತಿಳಿಯುವುದು.

ಇದನ್ನೂ ಓದಿ: SSLC ಮತ್ತು PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಪ್ರಕಟಣೆ!

Online Property Registration Method-ಅರ್ಜಿ ಸಲ್ಲಿಕೆ ಮತ್ತು ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ?

Step-1: ಸಾರ್ವಜನಿಕರು ಪ್ರಥಮ ಹಂತದಲ್ಲಿ ಈ Online Property Registration ಲಿಂಕ್ ಮೇಲೆ ಕ್ಲಿಕ್ ಮಾಡಿ 'ಕಾವೇರಿ 2.0' ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 'ಸಿಟಿಜನ್ ಲಾಗಿನ್' ಮೂಲಕ ನೋಂದಾಯಿಸಿಕೊಳ್ಳಿ.

ಇದನ್ನೂ ಓದಿ: Free Drone Training-ಗ್ರಾಮೀಣ ಯುವಕರಿಗೊಂದು ಉತ್ತಮ ಅವಕಾಶ! ಉಚಿತ ಡ್ರೋನ್ ತರಬೇತಿಗೆ ಅರ್ಜಿ!

Online Property Registration

Step-2: ಬಳಿಕ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ನಮೂದಿಸಿ ಲಾಗಿನ್ ಅಗಿ ಅಧಿಕೃತ ಅರ್ಜಿಯನ್ನು ಒಪನ್ ಮಾಡಿಕೊಂಡು ಆಸ್ತಿಯ ವಿವರ, ಖರೀದಿದಾರರು, ಮಾರಾಟಗಾರರು ಮತ್ತು ಸಾಕ್ಷಿಗಳ ಮಾಹಿತಿಯನ್ನು ದಾಖಲಿಸಿ.

Step-3: ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಿ.

Step-4: ನೀವು ಸಲ್ಲಿಸಿದ ಮಾಹಿತಿಯನ್ನು ಸಬ್‌ರಿಜಿಸ್ಟ್ರಾರ್ ಆನ್‌ಲೈನ್‌ನಲ್ಲೇ ಪರಿಶೀಲಿಸಿ ಅನುಮೋದನೆ ನೀಡುತ್ತಾರೆ.

Step-5: ನಿಗದಿತ ಮುದ್ರಾಂಕ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಪಾವತಿಸಿ.

Step-6: ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಹಿ ಬಳಸಿ ಸಹಿ ಪ್ರಕ್ರಿಯೆ ಮುಗಿಸಿ.

Step-7: ಇದಾದ ನಂತರ ನಿಗದಿಪಡಿಸಿದ ಸಮಯಕ್ಕೆ ನಿಮ್ಮ ತಾಲ್ಲೂಕಿನ ಉಪನೋಂದಣಾಧಿಕಾರಿಗಳ ಕಚೇರಿಗೆ ನೇರವಾಗಿ ಭೇಟಿ ಮಾಡಿ ಹೋಗಿ ಕೇವಲ ಫೋಟೋ ಮತ್ತು ಬೆರಳಚ್ಚು (Biometric) ನೀಡಿದರೆ ನಿಮ್ಮ ಆಸ್ತಿ ನೋಂದಣಿ ಅಗುತ್ತದೆ.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

Online Property Registration Benefits-ಸಾರ್ವಜನಿಕರಿಗೆ ಆಗುವ ಲಾಭಗಳೇನು?

ಭ್ರಷ್ಟಾಚಾರಕ್ಕೆ ಮುಕ್ತಿ: ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದ ಕಾರಣ ವಂಚನೆಗೆ ಅವಕಾಶವಿಲ್ಲ.

ಸುರಕ್ಷತೆ: ನಿಮ್ಮ ದಾಖಲೆಗಳು ಡಿಜಿಟಲ್ ರೂಪದಲ್ಲಿ ಡಿಜಿ ಲಾಕರ್‌ನಲ್ಲಿ (DigiLocker) ಸುರಕ್ಷಿತವಾಗಿರುತ್ತವೆ.

ವಿಶಿಷ್ಟ ಸಂಖ್ಯೆ: ಪ್ರತಿ ನೋಂದಣಿಗೂ ವಿಶಿಷ್ಟ ದಾಖಲೆ ಸಂಖ್ಯೆ ಇರುವುದರಿಂದ ಯಾವಾಗ ಬೇಕಿದ್ದರೂ ದಾಖಲೆ ಡೌನ್‌ಲೋಡ್ ಮಾಡಬಹುದು.

Helpline-ಆಸ್ತಿ ನೋಂದಣಿ ಅಥವಾ ತಾಂತ್ರಿಕ ತೊಂದರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 080 68265316 ಗೆ ಕರೆ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: