Gram Panchayat Property Tax-ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31 ಕೊನೆಯ ದಿನ!

March 20, 2026 | Siddesh
Gram Panchayat Property Tax-ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31 ಕೊನೆಯ ದಿನ!
Share Now:

ಕರ್ನಾಟಕದ ಗ್ರಾಮೀಣ ಭಾಗದ ಜನತೆಗೆ ಪಂಚಾಯತ್ ರಾಜ್ ಇಲಾಖೆಯು ಮಹತ್ವದ ಸೂಚನೆಯೊಂದನ್ನು ನೀಡಿದೆ. 2025-26ನೇ ಸಾಲಿನ ಮನೆ, ಕಟ್ಟಡ, ನಿವೇಶನ ಹಾಗೂ ನೀರಿನ ತೆರಿಗೆಯನ್ನು(Aasti Terige Online Payment) ಪಾವತಿಸಲು ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ಸಾರ್ವಜನಿಕರು ದಂಡವನ್ನು ತೆರಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2025ರ ಅನ್ವಯ, ಪ್ರತಿ ಹಣಕಾಸು ವರ್ಷದ ತೆರಿಗೆಯನ್ನು(Grama Panchayat) ಸಕಾಲದಲ್ಲಿ ಪಾವತಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾರ್ಚ್ 31ರ ಗಡುವು ಮೀರಿದಲ್ಲಿ, ಬಾಕಿ ಇರುವ ಒಟ್ಟು ಮೊತ್ತದ ಮೇಲೆ ಶೇಕಡಾ 5% ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಆರ್ಥಿಕ ನಷ್ಟವನ್ನು ತಪ್ಪಿಸಲು ನಾಗರಿಕರು ತಕ್ಷಣವೇ ತೆರಿಗೆ ಪಾವತಿಸುವಂತೆ ಕೋರಲಾಗಿದೆ.

ಇದನ್ನೂ ಓದಿ: Arecanut News-ಅಡಿಕೆ ಕಳಂಕ ಮುಕ್ತಕ್ಕೆ ಸರ್ಕಾರದ ಹೆಜ್ಜೆ: ಸಂಶೋಧನಾ ವರದಿ ಬಳಿಕ ಅಂತಿಮ ತೀರ್ಮಾನ!

ಗ್ರಾಮ ಪಂಚಾಯತಿಗಳಿಗೆ ಆಸ್ತಿ ತೆರಿಗೆ(Bapuji Seva Kendra) ಪಾವತಿಸುವುದು ಕೇವಲ ಒಂದು ಶಾಸನಬದ್ಧ ಕರ್ತವ್ಯ ಮಾತ್ರವಲ್ಲ, ಇದು ಹಳ್ಳಿಯ ಅಭಿವೃದ್ಧಿಗೆ ಪೂರಕವಾಗಿದೆ. ಸಂಗ್ರಹವಾದ ತೆರಿಗೆ ಹಣವನ್ನು ಗ್ರಾಮದ ರಸ್ತೆ, ಕುಡಿಯುವ ನೀರು, ಬೀದಿ ದೀಪ ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಸಲಾಗುತ್ತದೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ನಾಗರಿಕರು ಪಂಚಾಯತ್ ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ, ಮನೆಯಲ್ಲೇ ಕುಳಿತು ಸುರಕ್ಷಿತವಾಗಿ ಆನ್ ಲೈನ್ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

How to pay Property Tax online-UPI ಆಪ್ ಮೂಲಕ ಆಸ್ತಿ ತೆರಿಗೆ ಪಾವತಿಸುವುದು ಹೇಗೆ?

ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿರುವ ಜನಪ್ರಿಯ UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸುಲಭವಾಗಿ ತೆರಿಗೆ ಪಾವತಿಸಬಹುದು ಇದಕ್ಕಾಗಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ:

ಹಂತ-1: ಸಾರ್ವನಿಕರು ಮೊದಲಿಗೆ ತಮ್ಮ ಮೊಬೈಲ್ ನಲ್ಲಿರುವ PhonePe, Google Pay, BHIM ಅಥವಾ Paytm ಆಪ್ ಅನ್ನು ತೆರೆಯಿರಿ.

ಹಂತ-2: ಇದಾದ ಬಳಿಕ Payments ವಿಭಾಗದಲ್ಲಿ BSK (Bapuji Seva Kendra) ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಇಲ್ಲಿ ಪ್ರಸ್ತುತ ಬ್ಯಾಲೆನ್ಸ್ ಇರುವ ತೆರಿಗೆ ಹಣ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: e-Swathu Karnataka-ಕೃಷಿ ಭೂಮಿಯಲ್ಲಿರುವ ಮನೆಗಳಿಗೂ ಅಧಿಕೃತ ಇ-ಸ್ವತ್ತು ನೀಡಲು ಸರ್ಕಾರ ಹಸಿರು ನಿಶಾನೆ!

ಹಂತ-3: ಬಳಿಕ ತೆರಿಗೆ ಪಾವತಿಗೆ ಅನುಮೋದನೆಯನ್ನು ನೀಡಲು ಪಾಸ್ವರ್ಡ್ ಅನ್ನು ನಮೂದಿಸಿ ತೆರಿಗೆ ಪಾವತಿಸಿ.

ಹಂತ-4: ಪಾವತಿ ಯಶಸ್ವಿಯಾದ ನಂತರ ಅಧಿಕೃತ ರಸೀದಿಯನ್ನು https://bsk.karnataka.gov.in ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.

ಆಸ್ತಿ ತೆರಿಗೆ ಪಾವತಿಗಾಗಿ ಗ್ರಾಮ ಪಂಚಾಯತಿಗೆ ಅಲೆಯುವ ಅವಶ್ಯಕತೆಯಿಲ್ಲ, ಡಿಜಿಟಲ್ ವಿಧಾನಗಳನ್ನು ಬಳಸಿ ಸಮಯ ಉಳಿಸಿ ಮತ್ತು ದಂಡದಿಂದ ತಪ್ಪಿಸಿಕೊಳ್ಳಿ.

ಇದನ್ನೂ ಓದಿ: Free Fast-Food Training-ಉಚಿತ ಫಾಸ್ಟ್ ಫುಡ್‌ ತಯಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

Gram Panchayat Property Tax Online

Why is it Important to Pay Property Tax-ಆಸ್ತಿ ತೆರಿಗೆ ಪಾವತಿ ಏಕೆ ಮುಖ್ಯ?

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸುವುದು ಕೇವಲ ಕಾನೂನುಬದ್ಧ ನಿಯಮವಲ್ಲ, ಅದು ಹಳ್ಳಿಯ ಸರ್ವಾಂಗೀಣ ಅಭಿವೃದ್ಧಿಯ ಮೂಲಾಧಾರವಾಗಿದೆ. ಇದರ ಪ್ರಮುಖ ಉದ್ದೇಶಗಳು ಇಲ್ಲಿವೆ:

ಮೂಲಭೂತ ಸೌಕರ್ಯಗಳ ಅಭಿವೃದ್ಧಿ: ನಿಮ್ಮ ಗ್ರಾಮದ ರಸ್ತೆಗಳ ದುರಸ್ತಿ, ಚರಂಡಿ ವ್ಯವಸ್ಥೆ, ಮತ್ತು ಬೀದಿ ದೀಪಗಳ ನಿರ್ವಹಣೆಗೆ ಪಂಚಾಯತ್ ಮುಖ್ಯವಾಗಿ ಈ ತೆರಿಗೆ ಹಣವನ್ನೇ ಬಳಸುತ್ತದೆ.

ಕುಡಿಯುವ ನೀರಿನ ಪೂರೈಕೆ: ಹಳ್ಳಿಯ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲು, ಪಂಪ್‌ಸೆಟ್‌ಗಳ ನಿರ್ವಹಣೆ ಮತ್ತು ನೀರಿನ ಟ್ಯಾಂಕ್‌ಗಳ ಸ್ವಚ್ಛತೆಗೆ ಈ ಹಣ ಅತ್ಯಗತ್ಯ.

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

ಸ್ವಚ್ಛತೆ ಮತ್ತು ನೈರ್ಮಲ್ಯ: ಗ್ರಾಮದಲ್ಲಿ ಕಸ ವಿಲೇವಾರಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತೆರಿಗೆ ಹಣ ಸಹಾಯ ಮಾಡುತ್ತದೆ.

ಸರ್ಕಾರಿ ಸೌಲಭ್ಯಗಳ ಸದ್ಬಳಕೆ: ಗ್ರಾಮ ಪಂಚಾಯತ್ ತನ್ನ ಸ್ವಂತ ಸಂಪನ್ಮೂಲವನ್ನು (ತೆರಿಗೆ) ಸರಿಯಾಗಿ ಕ್ರೋಢೀಕರಿಸಿದಾಗ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನ ಪಡೆಯಲು ಸಾಧ್ಯವಾಗುತ್ತದೆ.

ಆಸ್ತಿಯ ಕಾನೂನುಬದ್ಧ ದಾಖಲೆ: ನೀವು ನಿಯಮಿತವಾಗಿ ತೆರಿಗೆ ಪಾವತಿಸಿ ಪಡೆಯುವ 'ತೆರಿಗೆ ರಸೀದಿ' ನಿಮ್ಮ ಆಸ್ತಿಯ ಮಾಲೀಕತ್ವಕ್ಕೆ ಒಂದು ಪ್ರಬಲ ದಾಖಲೆಯಾಗಿರುತ್ತದೆ. ಇದು ಬ್ಯಾಂಕ್ ಸಾಲ ಪಡೆಯಲು ಅಥವಾ ಆಸ್ತಿ ಮಾರಾಟದ ಸಮಯದಲ್ಲಿ ಅತ್ಯಂತ ಮುಖ್ಯವಾದ ದಾಖಲೆಯಾಗಿದೆ.

ಇದನ್ನೂ ಓದಿ: Podi Nakshe-ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ! ಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್!

ದಂಡದಿಂದ ಮುಕ್ತಿ: ಸಕಾಲದಲ್ಲಿ ತೆರಿಗೆ ಪಾವತಿಸುವುದರಿಂದ ಶೇಕಡಾ 5% ರಷ್ಟು ಹೆಚ್ಚುವರಿ ದಂಡವನ್ನು ತಪ್ಪಿಸಬಹುದು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಗುರುತಿಸಿಕೊಳ್ಳಬಹುದು.

ಸರಳವಾಗಿ ಹೇಳುವುದಾದರೆ, ನೀವು ನೀಡುವ ತೆರಿಗೆ ಹಣವು ಪರೋಕ್ಷವಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದ ಉತ್ತಮ ಜೀವನಶೈಲಿಗೆ ಬಳಕೆಯಾಗುತ್ತದೆ.

Property Tax Pay Benefits-ಆಸ್ತಿ ತೆರಿಗೆ ಪಾವತಿ ಪ್ರಯೋಜನಗಳು:

ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವುದರಿಂದ ಕೇವಲ ದಂಡದಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲದೆ, ವೈಯಕ್ತಿಕವಾಗಿ ಮತ್ತು ಗ್ರಾಮದ ದೃಷ್ಟಿಯಿಂದ ಹಲವಾರು ಪ್ರಯೋಜನಗಳಿವೆ. ಅವುಗಳನ್ನು ಪಟ್ಟಿ ಈ ಕೆಳಗಿನಂತಿವೆ:

1) ಆಸ್ತಿಯ ಕಾನೂನುಬದ್ಧ ದಾಖಲೆ (Legal Document)

ನೀವು ಪಾವತಿಸುವ ತೆರಿಗೆಯ ರಸೀದಿಯು ನಿಮ್ಮ ಆಸ್ತಿಯ ಮಾಲೀಕತ್ವಕ್ಕೆ ಒಂದು ಪ್ರಬಲ ಪುರಾವೆಯಾಗಿದೆ. ಆಸ್ತಿ ವರ್ಗಾವಣೆ, ಉತ್ತರಾಧಿಕಾರ ಅಥವಾ ಪಹಣಿ (RTC) ತಿದ್ದುಪಡಿಗಳ ಸಮಯದಲ್ಲಿ ಈ ರಸೀದಿಗಳು ಅತ್ಯಗತ್ಯ.

2) ಬ್ಯಾಂಕ್ ಸಾಲ ಸೌಲಭ್ಯ (Bank Loans)

ಮನೆ ಕಟ್ಟಲು ಅಥವಾ ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹೋದಾಗ, ಕಳೆದ ಮೂರು ವರ್ಷಗಳ ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳನ್ನು (Tax Paid Receipts) ಕಡ್ಡಾಯವಾಗಿ ಕೇಳಲಾಗುತ್ತದೆ.

ಇದನ್ನೂ ಓದಿ: Akka Cafe Subsidy-ಅಕ್ಕ ಕೆಫೆ ಆರಂಭಿಸಲು 15 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಸುವುದು ಹೇಗೆ?

3) ಗ್ರಾಮದ ಸರ್ವಾಂಗೀಣ ಅಭಿವೃದ್ಧಿ (Village Development)

ಗ್ರಾಮ ಪಂಚಾಯತಿಗೆ ಸಂಗ್ರಹವಾಗುವ ತೆರಿಗೆ ಹಣವೇ ಹಳ್ಳಿಯ ಅಭಿವೃದ್ಧಿಗೆ ಮುಖ್ಯ ಇಂಧನ.

ರಸ್ತೆ ಮತ್ತು ಚರಂಡಿ: ಗ್ರಾಮದ ಒಳ ರಸ್ತೆಗಳ ನಿರ್ವಹಣೆ ಮತ್ತು ಚರಂಡಿ ಸ್ವಚ್ಛತೆಗೆ ಈ ಹಣ ಬಳಕೆಯಾಗುತ್ತದೆ.

ಬೀದಿ ದೀಪ: ರಾತ್ರಿಯ ವೇಳೆ ಹಳ್ಳಿಯ ರಸ್ತೆಗಳು ಬೆಳಗಲು ಬೇಕಾದ ವಿದ್ಯುತ್ ಬಿಲ್ ಮತ್ತು ಬಲ್ಬ್‌ಗಳ ನಿರ್ವಹಣೆಗೆ ಇದು ಸಹಕಾರಿ.

ಕುಡಿಯುವ ನೀರು: ಪ್ರತಿ ಮನೆಗೆ ನೀರು ಪೂರೈಸುವ ಪಂಪ್‌ಸೆಟ್‌ಗಳ ದುರಸ್ತಿ ಮತ್ತು ನಿರ್ವಹಣೆಗೆ ಈ ಹಣವೇ ಆಧಾರ.

4) ಸರ್ಕಾರದ ಯೋಜನೆಗಳ ಲಾಭ (Government Schemes)

ಯಾವ ಗ್ರಾಮ ಪಂಚಾಯತಿಗಳು ಹೆಚ್ಚು ತೆರಿಗೆ ಸಂಗ್ರಹ ಮಾಡುತ್ತವೆಯೋ, ಅಂತಹ ಪಂಚಾಯತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನವನ್ನು (Grants) ಬಿಡುಗಡೆ ಮಾಡುತ್ತವೆ. ಇದರಿಂದ ನಿಮ್ಮ ಗ್ರಾಮಕ್ಕೆ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ.

5) ಹೆಚ್ಚುವರಿ ದಂಡದಿಂದ ಮುಕ್ತಿ (Save Money)

ಮಾರ್ಚ್ 31ರ ಒಳಗಾಗಿ ತೆರಿಗೆ ಪಾವತಿಸಿದರೆ, ಅನ್ವಯವಾಗುವ 5% ರಷ್ಟು ದಂಡದ ಮೊತ್ತವನ್ನು ಉಳಿಸಬಹುದು. ಇದು ನಿಮ್ಮ ಹಣಕಾಸಿನ ಶಿಸ್ತನ್ನು ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: