ATM Card-ಎಟಿಎಂ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು!

March 23, 2026 | Siddesh
ATM Card-ಎಟಿಎಂ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು!
Share Now:

ನೀವು ಎಟಿಎಂನಿಂದ ನಿಯಮಿತವಾಗಿ ಹಣ ಪಡೆಯುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಪ್ರತಿ ವರ್ಷದಂತೆ ಈ ಬಾರಿಯೂ ಆರ್ಥಿಕ ವರ್ಷದ ಆರಂಭವಾದ ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ವಿವಿಧ ಬ್ಯಾಂಕುಗಳು ತಮ್ಮ ಎಟಿಎಂ ವಹಿವಾಟು ಮಿತಿ(New ATM rules from April 1) ಮತ್ತು ಶುಲ್ಕದ ನಿಯಮಗಳನ್ನು ಪರಿಷ್ಕರಿಸಿದ್ದು, ಸಾಮಾನ್ಯ ಗ್ರಾಹಕರ ಮೇಲೆ ಇದು ನೇರ ಪರಿಣಾಮ ಬೀರಲಿದೆ. ವಿಶೇಷವಾಗಿ ಯುಪಿಐ ಆಧಾರಿತ ನಗದು ಹಿಂತೆಗೆತ ಮತ್ತು ದೈನಂದಿನ ವಿತ್‌ಡ್ರಾಯಲ್ ಮಿತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ.

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ (HDFC) ಈಗ ಯುಪಿಐ ಆಧಾರಿತ 'ಕಾರ್ಡ್‌ಲೆಸ್' ನಗದು ವಿತ್‌ಡ್ರಾಯಲ್ ಅನ್ನು ಸಾಮಾನ್ಯ ಎಟಿಎಂ ವಹಿವಾಟಿನ ವ್ಯಾಪ್ತಿಗೆ ತಂದಿದೆ. ಇದರರ್ಥ, ನೀವು ಕಾರ್ಡ್(ATM Rules) ಬಳಸದೆಯೇ ಯುಪಿಐ ಮೂಲಕ ಹಣ ಪಡೆದರೂ ಅದನ್ನು ಒಂದು ಎಟಿಎಂ ವಹಿವಾಟು ಎಂದೇ ಪರಿಗಣಿಸಲಾಗುತ್ತದೆ. ನಿಗದಿತ ಉಚಿತ ಮಿತಿ ಮುಗಿದ ನಂತರ ನೀವು ಯುಪಿಐ ಮೂಲಕ ಹಣ ತೆಗೆದರೂ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಆಯ್ದ ಡೆಬಿಟ್ ಕಾರ್ಡ್‌ಗಳ ದೈನಂದಿನ ಮಿತಿಯನ್ನು ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಇದನ್ನೂ ಓದಿ: Ration Card-2026: ರೇಶನ್ ಕಾರ್ಡದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ!

ತಂತ್ರಜ್ಞಾನದ ಮುನ್ನಡೆಯ ಭಾಗವಾಗಿ ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇನ್ಮುಂದೆ ಜಿಯೋ ಗ್ರಾಹಕರು ಯಾವುದೇ ಎಟಿಎಂ(ATM Card) ಅಥವಾ ಡೆಬಿಟ್ ಕಾರ್ಡ್ ಇಲ್ಲದೆ, ಕೇವಲ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಪಡೆಯಬಹುದು. ಡಿಜಿಟಲ್ ಬ್ಯಾಂಕಿಂಗ್ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದ್ದರೂ, ಬ್ಯಾಂಕುಗಳ ಈ ಹೊಸ ನಿಯಮಗಳ ಬಗ್ಗೆ ಸರಿಯಾದ ಅರಿವಿಲ್ಲದಿದ್ದರೆ ಗ್ರಾಹಕರು ಅನಗತ್ಯವಾಗಿ ಶುಲ್ಕ ಪಾವತಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

ಬ್ಯಾಂಕ್‌ವಾರು ಬದಲಾವಣೆಗಳ ವಿವರ ಇಲ್ಲಿದೆ:

ಬ್ಯಾಂಕ್ ಹೆಸರುಪ್ರಮುಖ ಬದಲಾವಣೆಉಚಿತ ಮಿತಿ
ಎಚ್‌ಡಿಎಫ್‌ಸಿ ಬ್ಯಾಂಕ್ಯುಪಿಐ ವಿತ್‌ಡ್ರಾಯಲ್ ಕೂಡ ಎಟಿಎಂ ಟ್ರಾನ್ಸಾಕ್ಷನ್ ವ್ಯಾಪ್ತಿಗೆ ಸೇರ್ಪಡೆ.ಸ್ವಂತ ಬ್ಯಾಂಕ್: 5 ಬಾರಿ, ಇತರ ಬ್ಯಾಂಕ್: 3 ಬಾರಿ. ಉಚಿತ ಮಿತಿಯನ್ನು ಮೀರಿದ ಗ್ರಾಹಕರಿಗೆ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ
ಪಂಜಾಬ್ ನ್ಯಾಷನಲ್ ಬ್ಯಾಂಕ್ಗ್ರಾಹಕರು ತಮ್ಮ ಕಾರ್ಡ್‌ಗಳ ಪ್ರಕಾರಕ್ಕೆ ಅನುಗುಣವಾಗಿ ದಿನಕ್ಕೆ 50,000 ರೂ. ನಿಂದ 75,000 ರೂ. ವರೆಗೆ ಹಣ ಹಿಂಪಡೆಯಬಹುದು.ಏಪ್ರಿಲ್ 1 ರಿಂದ ಜಾರಿ.
ಜಿಯೋ ಪೇಮೆಂಟ್ಸ್ ಬ್ಯಾಂಕ್ಕಾರ್ಡ್ ಇಲ್ಲದೆ ಯುಪಿಐ ಮೂಲಕ ನಗದು ಪಡೆಯುವ ಹೊಸ ಸೌಲಭ್ಯ ಆರಂಭ.ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಲಭ್ಯ.

ಇದನ್ನೂ ಓದಿ: KSOU Admission-2026: ರಾಜ್ಯದ ಮುಕ್ತ ವಿವಿಯಿಂದ 2025-26ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ!

ATM Card

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

ATM Card Using Safety Tips-ಎಟಿಎಂ ಕಾರ್ಡ್ ಬಳಕೆದಾರರು ತಪ್ಪದೇ ಅನುಸರಿಸಬೇಕಾದ ಕ್ರಮಗಳು:

ಜೀವನದ ದೈನಂದಿನ ಖರ್ಚು-ವೆಚ್ಚವನ್ನು ಭರಿಸಲು ಬ್ಯಾಂಕಿನಲ್ಲಿರುವ ಹಣವನ್ನು ವಿತ್‌ಡ್ರಾ ಮಾಡಲು ATM ಕಾರ್ಡ್ ಅನ್ನು ಬಳಕೆ ಮಾಡುವ ಗ್ರಾಹಕರು ತಪ್ಪದೇ ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ ಅಭ್ಯಾಸವಾಗಿದೆ.

ಉಚಿತ ಮಿತಿಯ ಮೇಲೆ ನಿಗಾ ಇರಲಿ: ತಿಂಗಳಿಗೆ ಸಿಗುವ ಉಚಿತ ವಹಿವಾಟುಗಳ ಸಂಖ್ಯೆಯನ್ನು ನೆನಪಿನಲ್ಲಿಡಿ. ಅನಗತ್ಯವಾಗಿ ಸಣ್ಣ ಮೊತ್ತದ ಹಣಕ್ಕಾಗಿ ಪದೇ ಪದೇ ಎಟಿಎಂ ಬಳಸಬೇಡಿ.

ಯುಪಿಐ ಬಳಕೆಯಲ್ಲೂ ಎಚ್ಚರ: ಎಚ್‌ಡಿಎಫ್‌ಸಿ ಅಂತಹ ಬ್ಯಾಂಕುಗಳಲ್ಲಿ ಯುಪಿಐ ವಿತ್‌ಡ್ರಾಯಲ್ ಕೂಡ ಕೌಂಟ್ ಆಗುವುದರಿಂದ, ಹಣದ ತುರ್ತು ಇದ್ದಾಗ ಮಾತ್ರ ಈ ಆಯ್ಕೆ ಬಳಸಿ.

ಇದನ್ನೂ ಓದಿ: Gram Panchayat Property Tax-ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31 ಕೊನೆಯ ದಿನ!

ಪಿನ್ ಸುರಕ್ಷತೆ: ಎಟಿಎಂ ಕೇಂದ್ರಗಳಲ್ಲಿ ಹಣ ಪಡೆಯುವಾಗ ನಿಮ್ಮ ಪಿನ್ ಸಂಖ್ಯೆಯನ್ನು ಯಾರೂ ನೋಡದಂತೆ ಮರೆಮಾಚಿ (Mask your PIN).

ಅಪರಿಚಿತರ ಸಹಾಯ ಬೇಡ: ಎಟಿಎಂ ಒಳಗೆ ಹಣ ಪಡೆಯಲು ತೊಂದರೆಯಾದರೆ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿ, ಅಪರಿಚಿತರ ಸಹಾಯ ಪಡೆಯುವುದು ಅಪಾಯಕಾರಿ.

ಬ್ಯಾಂಕ್ ಸಂದೇಶ ಗಮನಿಸಿ: ನಿಮ್ಮ ಖಾತೆಯಿಂದ ಹಣ ಕಡಿತವಾದಾಗ ಬರುವ ಎಸ್‌ಎಂಎಸ್ ಅನ್ನು ತಕ್ಷಣ ಪರಿಶೀಲಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: