Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!

April 18, 2026 | Siddesh
Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ಸಾರ್ವಜನಿಕರಿಗೆ ಜಿಲ್ಲಾಡಳಿತವು ಮಹತ್ವದ ಸೂಚನೆಯೊಂದನ್ನು ನೀಡಿದೆ. 5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್ಡೇಟ್ (Mandatory Aadhar Card Biometric Update) ಮಾಡಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ. ಮಕ್ಕಳ ಶಾಲಾ ದಾಖಲಾತಿ, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಪ್ರಕ್ರಿಯೆ ಅತ್ಯಂತ ಅವಶ್ಯಕವಾಗಿದೆ.

ಆಧಾರ್ ಕಾರ್ಡ್‌ನಲ್ಲಿ ಮಕ್ಕಳ ಬೆರಳಚ್ಚು ಹಾಗೂ ಕಣ್ಣಿನ ಪಾಪೆಯ ಗುರುತುಗಳನ್ನು (ಬಯೋಮೆಟ್ರಿಕ್) ಕಾಲಕಾಲಕ್ಕೆ ನವೀಕರಿಸುವುದು ತಾಂತ್ರಿಕವಾಗಿ ಅನಿವಾರ್ಯವಾಗಿದೆ. ಮಕ್ಕಳು ಬೆಳೆದಂತೆ ಅವರ ದೈಹಿಕ ಲಕ್ಷಣಗಳಲ್ಲಿ ಬದಲಾವಣೆಯಾಗುವುದರಿಂದ, ಆಧಾರ್ ದೃಢೀಕರಣ ವಿಫಲವಾಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ನಿಗದಿತ ಸಮಯದೊಳಗೆ ಈ ಪ್ರಕ್ರಿಯೆಯನ್ನು(Aadhar Card Biometric) ಪೂರ್ಣಗೊಳಿಸುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಲು ಅನುಕೂಲವಾಗಲಿದೆ.

ಇದನ್ನೂ ಓದಿ: Free Computer Courses-38 ದಿನದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

ಕೊಪ್ಪಳ ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ(Aadhar Card) ಈ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಸದವಕಾಶವನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ. ಜಿಲ್ಲಾಡಳಿತವು ಪ್ರಚಾರ ಬ್ಯಾನರ್ ಹಾಗೂ ಧ್ವನಿ ಮಾದರಿಗಳ ಮೂಲಕವೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಪ್ರತಿಯೊಬ್ಬ ಪೋಷಕರು ಜವಾಬ್ದಾರಿಯಿಂದ ತಮ್ಮ ಮಕ್ಕಳ ಆಧಾರ್ ನವೀಕರಣ ಮಾಡಿಸಿ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ತಲುಪಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Why Aadhar Card Biometric Update-ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಅಪ್ಡೇಟ್ ಏಕೆ ಮಾಡಿಸಬೇಕು?

ಮಕ್ಕಳು ಬೆಳೆದಂತೆ ಅವರ ಬಯೋಮೆಟ್ರಿಕ್ (ಬೆರಳಚ್ಚು ಮತ್ತು ಮುಖದ ಗುರುತು) ಬದಲಾಗುತ್ತದೆ. ಆದ್ದರಿಂದ ಆಧಾರ್ ದೃಢೀಕರಣಕ್ಕಾಗಿ ಇದನ್ನು ನವೀಕರಿಸುವುದು ಕಡ್ಡಾಯ. ಇದರಿಂದ ಶಾಲಾ ದಾಖಲಾತಿ, ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರದ ವಿದ್ಯಾರ್ಥಿ ವೇತನ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ. ಮತ್ತು ಈ ಸರ್ಕಾರಿ ಸೇವೆಗಳನ್ನು ಪಡೆಯಲು.

ಇದನ್ನೂ ಓದಿ: PM-Kisan Application-ಪಿಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸಲು ಅವಕಾಶ! ಇಂದೇ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರದ ನಿಯಮದಂತೆ 5 ರಿಂದ 17 ವರ್ಷ ವಯೋಮಿತಿಯೊಳಗಿನ ಮಕ್ಕಳು ತಮ್ಮ ಆಧಾರ್ ಕಾರ್ಡ್‌ನಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿರುವುದರಿಂದ ನಾಗರಿಕರು ಕೂಡಲೇ ಆಧಾರ್ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನವೀಕರಣ ಮಾಡಿಕೊಳ್ಳಲು ಸೂಚನೆ ನೀಡಿದೆ. ­-ಅಪರ ಜಿಲ್ಲಾಧಿಕಾರಿಗಳು,ಕೊಪ್ಪಳ ಜಿಲ್ಲೆ

Aadhar Biometric Update Application-ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರಾಜ್ಯದ ಎಲ್ಲಾ ಅಧಿಕೃತ ಆಧಾರ್ ಕೇಂದ್ರಗಳಲ್ಲಿ (Aadhaar Centers) ಭೇಟಿ ನೀಡಿ ಈ ನವೀಕರಣವನ್ನು ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: 2nd Puc Exam-2: ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಧಿಕೃತ ದಿನಾಂಕ ಪ್ರಕಟ!

Aadhar Biometric Update order

ಇದನ್ನೂ ಓದಿ: BPL Card-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕಾರ್ಯ ಚುರುಕು! ಇಲ್ಲಿದೆ ರದ್ದಾದ ಕಾರ್ಡ ಪಟ್ಟಿ!

Required Documents For Aadhar Biometric Update-ಅವಶ್ಯಕ ದಾಖಲೆಗಳು ಯಾವುವು?

ಮಕ್ಕಳ ಹಾಲಿ ಇರುವ ಆಧಾರ್ ಕಾರ್ಡ್.

ಸಂಬಂಧಿಸಿದ ಪೂರಕ ದಾಖಲೆಗಳು (ಜನನ ಪ್ರಮಾಣ ಪತ್ರ ಅಥವಾ ಶಾಲಾ ದಾಖಲೆಗಳು).

ಇದನ್ನೂ ಓದಿ: Bapuji Seva Kendra-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂತನ ವ್ಯವಸ್ಥೆ ಜಾರಿ!

For Aadhar Biometric Update Fee-ಈ ದಿನಾಂಕದ ವರೆಗೆ ಸಂಪೂರ್ಣ ಉಚಿತ:

ದಿನಾಂಕ 30/09/2026 ರವರೆಗೆ ಈ ಬಯೋಮೆಟ್ರಿಕ್ ಅಪ್ಡೇಟ್ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಸಾರ್ವಜನಿಕರು ಯಾವುದೇ ಬಗ್ಗೆ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: