Veterinary Diploma-ಪಶುಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ! ತಿಂಗಳಿಗೆ ರೂ 1,000 ಶಿಷ್ಯವೇತನ!

June 1, 2026 | Siddesh
Veterinary Diploma-ಪಶುಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ! ತಿಂಗಳಿಗೆ ರೂ 1,000 ಶಿಷ್ಯವೇತನ!
Share Now:

ಬೀದರ್: ಗ್ರಾಮೀಣ ಭಾಗದ ಯುವಜನತೆಗೆ ಸ್ವಯಂ ಉದ್ಯೋಗ ಹಾಗೂ ಪಶುಸಂಗೋಪನಾ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಕಂಡುಕೊಳ್ಳಲು ಸುವರ್ಣಾವಕಾಶ ಒದಗಿಬಂದಿದೆ. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು (KVAFSU) 2026-2027ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಅವಧಿಯ "ಡಿಪ್ಲೋಮಾ ಪಶುಸಂಗೋಪನೆ/Veterinary Diploma" ಕೋರ್ಸ್ ಪ್ರವೇಶಾತಿಗಾಗಿ ಅಧಿಕೃತವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಇಂದಿನಿಂದಲೇ (ಜೂನ್ 1, 2026) ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದು ಈ ಪ್ರವೇಶಾತಿಯ ಪ್ರಮುಖ ವಿಶೇಷತೆಯಾಗಿದೆ.

ಈ ಕೋರ್ಸ್‌ಗೆ ಸೇರಬಯಸುವ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 45ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು(Veterinary diploma admission 2026) ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಕನಿಷ್ಠ ಶೇಕಡಾ 40ರಷ್ಟು ಅಂಕಗಳ ನಿಯಮವನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ (30.06.2026) 20 ವರ್ಷಗಳ ವಯೋಮಿತಿಯನ್ನು(Veterinary diploma colleges in karnataka) ಮೀರಿರಬಾರದು. ಗಮನಾರ್ಹ ಅಂಶವೆಂದರೆ, ಈ ಡಿಪ್ಲೋಮಾ ತರಗತಿಗಳನ್ನು ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿಯೇ ನಡೆಸಲಾಗುತ್ತದೆಯಲ್ಲದೆ, ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಮಾಸಿಕ ರೂ. 1,000/- ಗಳ ಶಿಷ್ಯವೇತನವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: Pump Set Repair Training-30 ದಿನದ ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ ತರಬೇತಿಗೆ ಅರ್ಜಿ!

ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳವರು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ಜೂನ್ 30, 2026 ರ ರಾತ್ರಿ 11:59 ರೊಳಗೆ ಆನ್‌ಲೈನ್(Veterinary diploma online application) ಮೂಲಕವೇ ಅರ್ಜಿ ಮತ್ತು ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 700/- ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ. 350/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮೂಲ ದಾಖಲಾತಿಗಳ ಪರಿಶೀಲನೆಯು ಜುಲೈ 13 ರಿಂದ ಜುಲೈ 15 ರವರೆಗೆ ಬೀದರ್, ಬೆಂಗಳೂರು, ಗದಗ್, ಶಿವಮೊಗ್ಗ ಮತ್ತು ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ನಡೆಯಲಿದ್ದು, ಆಗಸ್ಟ್ 17, 2026 ರಿಂದ ನೂತನ ಶೈಕ್ಷಣಿಕ ವರ್ಷ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಕುಲಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Important Dates-ಪ್ರಮುಖ ಪ್ರವೇಶಾತಿ ವೇಳಾಪಟ್ಟಿ (2026-27):

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 01.06.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2026 (ರಾತ್ರಿ 11:59 ರವರೆಗೆ)
  • ಮೂಲ ದಾಖಲಾತಿಗಳ ಪರಿಶೀಲನೆ: 13.07.2026 ರಿಂದ 15.07.2026 (SSLC ಅಂಕಗಳ ಆಧಾರದ ಮೇಲೆ)
  • ಅರ್ಹ/ಅನರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 25.07.2026
  • ಪ್ರಥಮ ಸುತ್ತಿನ ಸೀಟು ಹಂಚಿಕೆ: 03.08.2026
  • ನೂತನ ಶೈಕ್ಷಣಿಕ ವರ್ಷದ ಆರಂಭ: 17.08.2026

ಇದನ್ನೂ ಓದಿ: Tissue Culture Banana-ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ 'ಅಂಗಾಂಶ ಕೃಷಿ' ಬಾಳೆ ಸಸಿ ವಿತರಣೆ!

Monthly Stipend Amount-ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ 1,000 ಶಿಷ್ಯವೇತನ:

ಪಶುಸಂಗೋಪನೆ ಡಿಪ್ಲೋಮಾ ವ್ಯಾಸಂಗ ಮಾಡಲು ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಾನುಸಾರ 2 ವರ್ಷದ ವರೆಗೆ ಪ್ರತಿ ತಿಂಗಳು ರೂ. 1,000/- ಗಳ ಶಿಷ್ಯವೇತನವನ್ನು ಸಹ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಪ್ರವೇಶಾತಿ ವೇಳಾಪಟ್ಟಿ (2026-27):

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 01.06.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2026 (ರಾತ್ರಿ 11:59 ರವರೆಗೆ)
  • ಮೂಲ ದಾಖಲಾತಿಗಳ ಪರಿಶೀಲನೆ: 13.07.2026 ರಿಂದ 15.07.2026 (SSLC ಅಂಕಗಳ ಆಧಾರದ ಮೇಲೆ)
  • ಅರ್ಹ/ಅನರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 25.07.2026
  • ಪ್ರಥಮ ಸುತ್ತಿನ ಸೀಟು ಹಂಚಿಕೆ: 03.08.2026
  • ನೂತನ ಶೈಕ್ಷಣಿಕ ವರ್ಷದ ಆರಂಭ: 17.08.2026

ಇದನ್ನೂ ಓದಿ: Student Bus Pass-ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Online Application Website Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ವಿದ್ಯಾರ್ಥಿಗಳು ಪಶುಸಂಗೋಪನೆ ಡಿಪ್ಲೋಮಾ ಪ್ರವೇಶ ಪಡೆಯಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ವಿವಿಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಈ "Veterinary Diploma Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.

Step-2: ಬಳಿಕ ಈ ಪೇಜ್ ನಲ್ಲಿ Apply Application ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ಕೊನೆಯಲ್ಲಿ ಅವಶ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

ವಿಶೇಷ ಸೂಚನೆ:- 01 ಜೂನ್ 2026 ರ ಸಂಜೆ ಒಳಗಾಗಿ ಆನ್ಲೈನ್ ಅರ್ಜಿ ಸಲ್ಲಿಕೆ ಅಪ್ಷನ್ ಒಪನ್ ಅಗುತ್ತದೆ ಪ್ರಸ್ತುತ ಇನ್ನು ಅರ್ಜಿ ಸಲ್ಲಿಸಲು ಲಿಂಕ್ ಕೊಟ್ಟಿರುವುದಿಲ್ಲ.

ಇದನ್ನೂ ಓದಿ: Free Fast Food Training-ಸ್ವಂತ ಫಾಸ್ಟ್ ಫುಡ್ ಬಿಸಿನೆಸ್ ಮಾಡುವ ಕನಸೇ? ಇಲ್ಲಿದೆ ಉಚಿತ ತರಬೇತಿಯ ಸುವರ್ಣಾವಕಾಶ!

ಅರ್ಜಿ ಸಲ್ಲಿಸಲು ಉಪಯುಕ್ತ ಲಿಂಕ್ ಗಳು:

ವಿವರಅಧಿಕೃತ ಜಾಲತಾಣದ ಲಿಂಕ್ (Link)
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್Apply Now
ಸಮಗ್ರ ಮಾಹಿತಿಯುಳ್ಳ ವಿವರವಾದ ಕೈಪಿಡಿ Download Now
ಅಧಿಕೃತ ಪ್ರವೇಶಾತಿ ಅಧಿಸೂಚನೆ (Notification)Download Now
ವಿಶ್ವವಿದ್ಯಾಲಯದ ಮುಖ್ಯ ಜಾಲತಾಣ (University Website)www.kvafsu.edu.in

ಇದನ್ನೂ ಓದಿ: Free Photography Training-ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯಿಂದ ಉಚಿತ ಫೋಟೋಗ್ರಫಿ ತರಬೇತಿ! ಜೂನ್ 3 ರೊಳಗೆ ಅರ್ಜಿ ಸಲ್ಲಿಸಿ!

Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ.
  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ವಿದ್ಯಾರ್ಥಿಯ ಪೋಟೋ
  • 1 ರಿಂದ 10ನೇ ತರಗತಿಯ "ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ" (BEO ಸಹಿ ಇರಬೇಕು).
  • ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಕಲ್ಯಾಣ-ಕರ್ನಾಟಕ (371-ಜೆ) ಮೀಸಲಾತಿ ಪ್ರಮಾಣ ಪತ್ರ (ಅನ್ವಯಿಸುವವರಿಗೆ).
  • ರೈತರು/ಕೃಷಿ ಕಾರ್ಮಿಕರ ಮಕ್ಕಳ ಕೋಟಾ (50% ಸೀಟುಗಳು) ಬಯಸುವವರು ಕಂದಾಯ ಇಲಾಖೆಯ RD ಸಂಖ್ಯೆ ಹಾಗೂ QR ಕೋಡ್ ಇರುವ ಪ್ರಮಾಣಪತ್ರ ಸಲ್ಲಿಸಬೇಕು.

Office Contact Details-ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಪರ್ಕ ಸಂಖ್ಯೆಗಳು: 08482-245241/245360 ಮೊಬೈಲ್ ಸಂಖ್ಯೆ- 9449661149

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: