New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!

October 2, 2026 | Siddesh
New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!
Share Now:

ಭಾರತದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಆರ್ಥಿಕ ಹಾಗೂ ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬದಲಾಗುತ್ತಿರುತ್ತವೆ. ಅದರಂತೆಯೇ ಪ್ರಸ್ತುತ ನಿನ್ನೆ ಇಂದು ಹಾಗೂ ನಾಳೆ ಅಂದರೆ ದೇಶದಾದ್ಯಂತ ಅಕ್ಟೋಬರ್ 1 ರಿಂದ 3 ರ ವರೆಗೆ ಪ್ರಮುಖ ನಿಯಮಗಳನ್ನು ಜಾರಿಗೆ ತರಲಾಗಿದೆ.

ದಿನಗಳು ಬದಲಾದಂತೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಸರ್ಕಾರವು ಈ ನಿಯಮಗಳನ್ನು ಜಾರಿಗೆ ತಂದಿದ್ದು, ಭಾರತದಲ್ಲಿ ಪ್ರತೀ ತಿಂಗಳ ಮೊದಲ ದಿನದಂದು ಈ ಬದಲಾವಣೆಗಳು ಜಾರಿಯಲ್ಲಿರುತ್ತವೆ. ಪ್ರಸ್ತುತ ಅಕ್ಟೋಬರ್ 1 ರಿಂದ ದೇಶಾದ್ಯಂತ ಮೂರು ಅತ್ಯಂತ ಮಹತ್ವದ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

ಈ ನಿಯಮಗಳು ನಾಗರಿಕರ ಅಡುಗೆ ಮನೆಗೆ ಸಂಬಂಧಿಸಿದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಬ್ಯಾಂಕಿಂಗ್ ವಲಯದ ಹೂಡಿಕೆಯಾದ ಸ್ಥಿರ ಠೇವಣಿ (ಎಫ್‌ಡಿ) ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಗುರುತಿನ ದಾಖಲೆಯಾದ ಜನನ-ಮರಣ ಪ್ರಮಾಣಪತ್ರಗಳಿಗೆ ನೇರವಾಗಿ ಅನ್ವಯವಾಗುತ್ತವೆ.

1) ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ ಕಡ್ಡಾಯ (LPG Gas Cylinder e-KYC Mandatory)

ಅಡುಗೆ ಮನೆಗೆ ಸಂಬಂಧ ಪಟ್ಟಂತೆ ಸರ್ಕಾರವು ಒಂದು ದೊಡ್ಡ ನಿಯಮವನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ನ ಸಬ್ಸಿಡಿಯನ್ನು ಪಡೆಯಬೇಕಾದರೆ ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: MBBS Scholorship-ಕಾನ್ಸೆಂಟ್ರಿಕ್ಸ್ ವಿದ್ಯಾರ್ಥಿವೇತನದ ಅಡಿಯಲ್ಲಿ MBBS ವಿದ್ಯಾರ್ಥಿನಿಯರಿಗೆ 65,000 ವಿದ್ಯಾರ್ಥಿವೇತನ!

ಯಾರಿಗೆಲ್ಲ ಈ ನಿಯಮ ಅನ್ವಯಿಸುತ್ತದೆ?

ಇಂಡೇನ್, ಭಾರತ್ ಗ್ಯಾಸ್ ಅಥವಾ ಎಚ್‌ಪಿ ಗ್ಯಾಸ್ ಸಂಪರ್ಕ ಹೊಂದಿರುವ ಹಾಗೆಯೇ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಿರುವ ಎಲ್ಲಾ ಗ್ರಾಹಕರು ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಯಡಿ ಸಹಾಯಧನ ಪಡೆಯುವ ಫಲಾನುಭವಿಗಳಿಗೆ ಈ ನಿಯಮದ ಅನ್ವಯವಾಗುತ್ತದೆ.

ಈ ನಿಯಮವನ್ನು ಜಾರಿಗೆ ತರಲು ಪ್ರಮುಖ ಉದ್ದೇಶವೇನು?

ನಕಲಿ ಇರುವ ಗ್ಯಾಸ್ ಸಂಪರ್ಕಗಳನ್ನು ತಡೆಗಟ್ಟುವುದು, ಸಬ್ಸಿಡಿಯ ದುರುಪಯೋಗವನ್ನು ನಿಲ್ಲಿಸಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇ-ಕೆವೈಸಿ ಹೇಗೆ ಮಾಡಿಸಬೇಕು?

ಗ್ರಾಹಕರು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ನೇರವಾಗಿ ಭೇಟಿ ನೀಡಿ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಪಾಪೆ ಸ್ಕ್ಯಾನ್) ಮೂಲಕ ಇ-ಕೆವೈಸಿ ಮಾಡಿಸಬಹುದು.

ಇದನ್ನೂ ಓದಿ: Arivu Scheme 2026-ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ 5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ!

2) ಬ್ಯಾಂಕ್‌ಗಳಲ್ಲಿ ಎಫ್‌ಡಿ (FD) ಬಡ್ಡಿದರದಲ್ಲಿ ಏಕರೂಪತೆ ಮತ್ತು ಬಲ್ಕ್ ಡೆಪಾಸಿಟ್ ಹೊಸ ನಿಯಮ (Fixed Deposit New Rules)

ಹಣಕಾಸು ಮತ್ತು ಬ್ಯಾಂಕಿಂಗ್ ವಲಯದಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ಗೊಂದಲಗಳನ್ನು ಪೂರ್ಣಗೊಳಿಸಲು ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಯಾವುದೇ ಬ್ಯಾಂಕ ತನ್ನ ಎಲ್ಲಾ ಶಾಖೆಗಳಲ್ಲಿ ಒಂದೇ ರೀತಿಯ ಠೇವಣಿಗೆ ಸಮನಾದ ಎಫ್‌ಡಿ (FD) ಬಡ್ಡಿದರವನ್ನು ಕಡ್ಡಾಯವಾಗಿ ನೀಡಲೇಬೇಕು.

ಏಕರೂಪದ ಬಡ್ಡಿದರ:

ಈ ಮೊದಲು ಒಂದೇ ಬ್ಯಾಂಕಿನ ವಿಭಿನ್ನ ಶಾಖೆಗಳು ಅಥವಾ ಆನ್‌ಲೈನ್/ಆಫ್‌ಲೈನ್ ಮಾಧ್ಯಮಗಳಲ್ಲಿ ಸಣ್ ವ್ಯತ್ಯಾಸಗಳಿರುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ, ಗ್ರಾಹಕರು ಯಾವುದೇ ಬ್ಯಾಂಕ್ ಗೆ ಹೋದರೂ ಒಂದೇ ಅವಧಿಯ ಠೇವಣಿಗೆ ಒಂದೇ ಸಮನಾದ ಬಡ್ಡಿದರ ದೊರೆಯಲಿದೆ.

ಬಲ್ಕ್ ಡೆಪಾಸಿಟ್ (Bulk Deposit) ನಿಯಮ:

ಗ್ರಾಹಕರಿಗೆ ಬ್ಯಾಂಕುಗಳು ಒದಗಿಸುವ ಬಡ್ಡಿಯ ನಿಯಮಗಳನ್ನು ಮರುಪರಿಶೀಲಿಸಲಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ನಿರ್ದಿಷ್ಟತೆ ಸಿಗಲಿದ್ದು, ಬ್ಯಾಂಕುಗಳ ನಡುವಿನ ಅನಾರೋಗ್ಯಕರ ಪೈಪೋಟಿಗೆ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ: Aditya Birla Capital Scholarship-ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್‌ನ ವತಿಯಿಂದ 60,000 ವಿದ್ಯಾರ್ಥಿವೇತನ!

october new rules

ಇದನ್ನೂ ಓದಿ: Scholarship Amount-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇನ್ಫೋಸೆಪ್ಟ್ಸ್ ಇನ್ನೋವೇಟ್ ವತಿಯಿಂದ 50,000 ವಿದ್ಯಾರ್ಥಿವೇತನ!

3) ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿಗೆ ಕಠಿಣ ನಿಯಮಗಳು (Birth and Death Certificate Registration Rules)

ಸಾಮಾನ್ಯ ಜನರಲ್ಲಿ ಬದಲಾವಣೆ ಎಂದರೆ ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೋಂದಣಿ ಕಾಯ್ದೆ ತಿದ್ದುಪಡಿ, ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣಪತ್ರಗಳ ನೋಂದಣಿಗೆ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಏಕೈಕ ಅಧಿಕೃತ ದಾಖಲೆ (Single Document):

ಜನನ ಪ್ರಮಾಣ ಪತ್ರವನ್ನು ಕೇವಲ ಹುಟ್ಟಿದ ದಿನಾಂಕದ ಆಧಾರ ಮಾತ್ರವಲ್ಲದೆ, ಪ್ರಮುಖ ನಾಗರಿಕ ಸೇವೆಗಳಿಗೆ ಏಕೈಕ ಮುಖ್ಯ ದಾಖಲಾತಿಯಾಗಿ ಬಳಸಬಹುದು.

ಎಲ್ಲೆಲ್ಲಿ ಕಡ್ಡಾಯವಾಗಿರುತ್ತದೆ:

ಶಾಲೆಗಳ ಪ್ರವೇಶಾತಿ (School Admission), ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ (Voter ID), ಆಧಾರ್ ಕಾರ್ಡ್ ಮಾಡಿಸುವುದು, ಚಾಲನಾ ಪರವಾನಗಿ (Driving License), ಪಾಸ್‌ಪೋರ್ಟ್ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯ ಸಮಯದಲ್ಲಿ ಡಿಜಿಟಲ್ ಜನನ ಪ್ರಮಾಣಪತ್ರವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Raman Kant Munjal Scholarship-BBA, BFIA, B.Com,B.A. ವಿದ್ಯಾರ್ಥಿಗಳಿಗೆ 40,000 ವಿದ್ಯಾರ್ಥಿವೇತನ!

ತಕ್ಷಣವೇ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು?

  • ನಿಮ್ಮ ಗ್ಯಾಸ್ ಏಜೆನ್ಸಿಗೆ ನೇರವಾಗಿ ಭೇಟಿ ಮಾಡಿ ನಿಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣ ಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಬ್ಯಾಂಕುಗಳಲ್ಲಿ ಹೊಸದಾಗಿ ಸ್ಥಿರ ಠೇವಣಿ (FD) ಇಡುವ ಮುನ್ನ ಪ್ರಸ್ತುತ ಜಾರಿಯಲ್ಲಿರುವ ಪರಿಷ್ಕೃತ ಬಡ್ಡಿದರಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ.
  • ಮನೆಯಲ್ಲಿ ಇತ್ತೀಚಿಗೆ ಮಗು ಜನಿಸಿದ್ದರೆ ಅಥವಾ ಯಾರಾದರೂ ಮರಣ ಹೊಂದಿದ್ದರೆ, ಯಾವುದೇ ವಿಳಂಬ ಮಾಡದೇ ತಕ್ಷಣವೇ ಸ್ಥಳೀಯ ಸಂಸ್ಥೆಗಳಲ್ಲಿ (ಗ್ರಾಮ ಪಂಚಾಯತ್/ಪುರಸಭೆ/ಮಹಾನಗರ ಪಾಲಿಕೆ) ನೋಂದಣಿ ಮಾಡಿಸಿ ಅಧಿಕೃತ ಪ್ರಮಾಣಪತ್ರ ಪಡೆದುಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: