Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!

October 30, 2026 | Siddesh
Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!
Share Now:

2026-2027 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ದಿಗಾಗಿ ಕಲ್ಯಾಣ ಯೋಜನೆಯ ಅಡಿಯಲ್ಲಿ ಗಂಗಾ ಕಲ್ಯಾಣ ಇಲಾಖೆ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರು ಈ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರವು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯು ಒಂದಾಗಿದ್ದು, ಮಳೆಯನ್ನೇ ಅವಲಂಬಿಸಿರುವ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: PU Students Scholorship-SML ಮಹೀಂದ್ರಾ ವಿದ್ಯಾರ್ಥಿವೇತನದಡಿ ಪಿಯುಸಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ!

ರಾಜ್ಯದಲ್ಲಿ ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರು ನೀರಿನ ಕೊರತೆಯಿಂದ ಕೃಷಿ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ರೈತರಿಗೆ ತಮ್ಮ ಜಮೀನಿನಲ್ಲಿ ಕೊಳವೆಬಾವಿ (Borewell) ಕೊರೆಸಲು, ಪಂಪ್‌ಸೆಟ್ ಮತ್ತು ಮೋಟಾರ್ ಅಳವಡಿಸಲು ಹಾಗೂ ವಿದ್ಯುದ್ದೀಕರಣದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಆರ್ಥಿಕ ನೆರವು ನೀಡುತ್ತದೆ.

2026-27ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸಹಾಯಧನ ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಯನ್ನು ಸಲ್ಲಿಸುವ ಹಂತಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

ಗಂಗಾ ಕಲ್ಯಾಣ ಯೋಜನೆಯ ಪ್ರಮುಖ ಉದ್ದೇಶಗಳಾವುವು?

ನೀರಾವರಿ ಸೌಲಭ್ಯವಿಲ್ಲದ ರೈತರ ಕೃಷಿ ಜಮೀನುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು.

ಕೊಳವೆಬಾವಿ ಕೊರೆಸಲು ಆರ್ಥಿಕ ನೆರವು ಒದಗಿಸುವುದು.

ಪಂಪ್‌ಸೆಟ್, ಮೋಟಾರ್ ಮತ್ತು ವಿದ್ಯುದ್ದೀಕರಣ ವ್ಯವಸ್ಥೆ ಕಲ್ಪಿಸುವುದು.

ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು.

ರೈತರು ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಸ್ವಾವಲಂಬಿ ಕೃಷಿ ಮಾಡಲು ಪ್ರೋತ್ಸಾಹಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

2026-27ನೇ ಸಾಲಿನ ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 30 ನವೆಂಬರ್ 2026 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

ಯೋಜನೆಯಡಿ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ಅಭ್ಯರ್ಥಿಯು ಸಂಬಂಧಪಟ್ಟ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಅರ್ಹ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.

ಕೃಷಿ ಉದ್ದೇಶಕ್ಕಾಗಿ ಸ್ವಂತ ಜಮೀನು ಹೊಂದಿರಬೇಕು.

ಜಮೀನಿನಲ್ಲಿ ಈಗಾಗಲೇ ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದಿರುವುದು ಅಗತ್ಯ.

ಸಾಮಾನ್ಯವಾಗಿ 1 ಎಕರೆ 20 ಗುಂಟೆಯಿಂದ 5 ಎಕರೆವರೆಗೆ ಜಮೀನು ಹೊಂದಿರುವ ರೈತರಿಗೆ ಅವಕಾಶವಿದೆ. ಕೆಲವು ಜಿಲ್ಲೆಗಳಲ್ಲಿ ನಿಗದಿತ ಕನಿಷ್ಠ ವಿಸ್ತೀರ್ಣದಲ್ಲಿ ವಿನಾಯಿತಿ ಇರಬಹುದು.

ಅರ್ಜಿದಾರರು ಸಂಬಂಧಪಟ್ಟ ನಿಗಮದ ಆದಾಯ ಮಿತಿ ಹಾಗೂ ಇತರೆ ಷರತ್ತುಗಳನ್ನು ಪೂರೈಸಿರಬೇಕು.

ಇದನ್ನೂ ಓದಿ: Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು?

ಈ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸುವುದು, ಪಂಪ್‌ಸೆಟ್ ಅಳವಡಿಸುವುದು ಮತ್ತು ವಿದ್ಯುದ್ದೀಕರಣ ಸೇರಿದಂತೆ ನೀರಾವರಿ ವ್ಯವಸ್ಥೆ ಕಲ್ಪಿಸಲು ನಿಗದಿತ ಘಟಕ ವೆಚ್ಚದ ಆಧಾರದ ಮೇಲೆ ನೆರವು ನೀಡಲಾಗುತ್ತದೆ.

ಜಿಲ್ಲೆಗಳ ವಿವರಒಟ್ಟು ಘಟಕ ವೆಚ್ಚಸಹಾಯಧನಸಾಲ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು₹4,75,000

₹4,25,000₹50,000
ಉಳಿದ ಜಿಲ್ಲೆಗಳು
₹3,75,000

₹3,25,000₹50,000

ಈ ಮೊತ್ತವನ್ನು ನಗದು ರೂಪದಲ್ಲಿ ಫಲಾನುಭವಿಯ ಖಾತೆಗೆ ಸಂಪೂರ್ಣವಾಗಿ ನೀಡುವುದಿಲ್ಲ. ಕೊಳವೆಬಾವಿ, ಪಂಪ್‌ಸೆಟ್ ಹಾಗೂ ವಿದ್ಯುದ್ದೀಕರಣದಂತಹ ಅನುಮೋದಿತ ಕಾಮಗಾರಿಗಳಿಗೆ ಬಳಸಲಾಗುತ್ತದೆ.

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 1.5 ಲಕ್ಷ ಸಹಾಯಧನ!

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳಾವುವು?

  • ಅರ್ಜಿದಾರರ ಆಧಾರ್ ಕಾರ್ಡ್.
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  • ಜಾತಿ ಪ್ರಮಾಣಪತ್ರ.
  • ಆದಾಯ ಪ್ರಮಾಣಪತ್ರ.
  • ಜಮೀನಿನ ಪಹಣಿ (RTC).
  • ಭೂ ನಕ್ಷೆ ಅಥವಾ ಜಮೀನಿನ ಸಂಬಂಧಿತ ದಾಖಲೆ.
  • ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣಪತ್ರ.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ರೇಷನ್ ಕಾರ್ಡ್.
  • ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

ganga kalyana scheme

ಇದನ್ನೂ ಓದಿ: New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!

ಅರ್ಜಿ ಸಲ್ಲಿಸುವ ವಿಧಾನಗಳಾವುವು?

ಅರ್ಹ ಫಲಾನುಭವಿಗಳು ಎರಡು ಮಾರ್ಗಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುತ್ತದೆ.

ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಸೇವಾ ಸಿಂಧು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅಥವಾ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಅಧಿಕೃತ ವೆಬ್ಸೈಟ್ ಲಿಂಕ್: Read More
ಸೇವಾ ಸಿಂಧು ವೆಬ್‌ಸೈಟ್ ಲಿಂಕ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: