PM Kisan 24th Installment-ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ ಚೆಕ್ ಮಾಡಿ!

October 31, 2026 | Siddesh
PM Kisan 24th Installment-ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ! ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ ಚೆಕ್ ಮಾಡಿ!
Share Now:

ಎಲ್ಲಾ ರೈತ ವರ್ಗದವರಿಗೆ ಸಂತಸದ ಸುದ್ದಿ, ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯೂ ಒಂದಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಖರ್ಚುಗಳನ್ನು ನಿಭಾಯಿಸಲು ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕ ₹6,000 ಆರ್ಥಿಕ ನೆರವು ನೀಡಲಾಗುತ್ತದೆ.

ಇದೇ ಅಕ್ಟೋಬರ್ 30 2026 ರಂದು 9.34 ಕೋಟಿ ರೈತರ ಖಾತೆಗೆ ನೇರವಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24 ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದ್ದು, ಈ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಲು ಈ ಲೇಖನದಲ್ಲಿ ತಿಳಿಸಿರುವ ಹಂತಗಳ ಸಹಾಯದಿಂದ ತಿಳಿಯಬಹುದು.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ₹4.75 ಲಕ್ಷದವರೆಗೆ ನೆರವು!

ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan 21th Instalment) ನೇ ಕಂತಿನ ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ರೈತರು ತಮ್ಮ ಮೊಬೈಲ್ ಮೂಲಕವೇ ಹೇಗೆ ಚೆಕ್ ಮಾಡುವುದು? ಹಾಗೂ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PM Kisan 24th Instalment Date-30 ಅಕ್ಟೋಬರ್ 2026 ರಂದು ರೈತರ ಖಾತೆಗೆ 24 ನೇ ಕಂತಿನ ಹಣ ಬಿಡುಗಡೆ:

ದೇಶದ ಒಟ್ಟೂ 9.34 ಕೋಟಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮೂಲಕ ಪಿಎಂ ಕಿಸಾನ್ ಯೋಜನೆಯ 24 ನೇ ಕಂತಿನ ರೂ ಆರ್ಥಿಕ ನೆರವನ್ನು 30 ಅಕ್ಟೋಬರ್ 2026 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶದ ಎಲ್ಲಾ ರೈತರ ಖಾತೆಗೆ ಹಣ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: PU Students Scholorship-SML ಮಹೀಂದ್ರಾ ವಿದ್ಯಾರ್ಥಿವೇತನದಡಿ ಪಿಯುಸಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ!

PM Kisan Beneficiary List-2026: 24 ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ:

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 24 ನೇ ಕಂತಿನ ಆರ್ಥಿಕ ನೆರವನ್ನು ಪಡೆಯಲು ರೈತರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು ರೈತರು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಅರ್ಹ ರೈತರು ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ "PM Kisan Farmer List 2026" ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಈ ಪುಟದಲ್ಲಿ ಬಲ ಭಾಗದಲ್ಲಿ ಕಾಣಿಸುವ "Beneficiary List" ಬಟನ್ ಮೇಲೆ ಕ್ಲಿಕ್ ಮಾಡಿ ರಾಜ್ಯ ನಿಮ್ಮ ಜಿಲ್ಲೆ,ತಾಲ್ಲೂಕು,ಹಳ್ಳಿ ಅನ್ನು ಆಯ್ಕೆ ಮಾಡಿಕೊಂಡು ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ 24 ನೇ ಕಂತಿನ ಕಿಸಾನ್ ಸಮ್ಮಾನ್ ರೂ 2,000/- ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತ ಪಟ್ಟಿ ಕಾಣಿಸುತ್ತದೆ.

Step-3: ರೈತರು ಒಮ್ಮೆ ಈ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಪರೀಶಿಲಿಸಿ ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

PM Kisan Beneficiary List

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

PM Kisan 24th Instalment-24 ನೇ ಕಂತಿನ ಹಣ ಪಡೆಯಲು ತಪ್ಪದೇ ಅನುಸರಿಸಬೇಕಾದ ಕ್ರಮಗಳು:

  1. ಆಧಾರ್ OTP ಪ್ರಕ್ರಿಯೆ: ಪಿಎಂ ಕಿಸಾನ್ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ e-KYC ಆಯ್ಕೆಯ ಮೂಲಕ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
  2. ಬಯೋಮೆಟ್ರಿಕ್ ಮೂಲಕ: ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಅನುಮೋದಿತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಆಧಾರಿತ ಬೆರಳಚ್ಚು ಪರಿಶೀಲನೆಯ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
  3. ಮುಖ ಗುರುತಿಸುವಿಕೆ ಮೂಲಕ: PM-KISAN ಮೊಬೈಲ್ ಆಪ್ ಮತ್ತು ಅಗತ್ಯವಿರುವ Aadhaar Face RD ಆಪ್ ಬಳಸಿ ಮುಖ ಗುರುತಿಸುವಿಕೆ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸಬಹುದು.

ಇ-ಕೆವೈಸಿ ಪೂರ್ಣಗೊಳಿಸಿದ ನಂತರ ಅದರ ಸ್ಥಿತಿಯನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳಿ.

ಇದನ್ನೂ ಓದಿ: Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

For More Information-ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್: Click Here
ಪಿಎಂ ಕಿಸಾನ್ ಸಹಾಯವಾಣಿ: 155261, 011-24300606
ಪಿಎಂ ಕಿಸಾನ್ ಮೊಬೈಲ್ ಆಪ್: PM Kisan Mobile App (Google Play Store/Apple App Store)

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: