Post office bank- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ!

September 6, 2024 | Siddesh

ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಕೆಲವು ತಾಂತ್ರಿಕ ದೋಷಗಳಿಂದ ಹಣ(IPPB account) ಸಂದಾಯವಾಗುವುದನ್ನು ತಪ್ಪಿಸಿಕೊಳ್ಳಲು ಈ ಅಂಕಣದಲ್ಲಿ ತಿಳಿಸಿರುವ ಬ್ಯಾಂಕ್ ಖಾತೆಯನ್ನು ತೆರೆದು ಸುಲಭವಾಗಿ ಹಣ ಪಡೆಯಬಹುದು.

ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಅರ್ಥಿಕ ನೆರವನ್ನು ನೀಡಲು ನೇರ ನಗದು ವರ್ಗಾವಣೆ(DBT) ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಅಂದರೆ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ವಿವಿಧ ಯೋಜನೆಯ ಸಹಾಯಧನವನ್ನು ಹಾಕಲಾಗುತ್ತದೆ.

ನೇರ ನಗದು ವರ್ಗಾವಣೆ ಮಾಡಲು ಅರ್ಹ ಫಲಾನುಭವಿಗಳ ಕೆಲವು ದಾಖಲೆಗಳು ಸರಿಯಾಗಿರಬೇಕಾಗುತ್ತದೆ ಇದಕ್ಕಾಗಿ ಅಂಚೆ ಇಲಾಖೆಯಿಂದ ವಿನೂತನ ಮತ್ತು ಜನ ಸ್ನೇಹಿ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದೆ.

ಇದನ್ನೂ ಓದಿ: Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ!

IPPB account in post office- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ:

ನಾಗರಿಕರಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಾಯಧನ ಆಧಾರಿತ ಎಲ್ಲಾ ಯೋಜನೆಯ ಅರ್ಥಿಕ ನೆರವನ್ನು ಸುಲಭವಾಗಿ ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೇ ಪಡೆಯಲು ನಿಮ್ಮ ಸಮೀಪದ ಪೋಸ್ಟ್ ಆಫೀಸ್ ನಲ್ಲಿ "ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB account )" ಅನ್ನು ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಜಮಾ ಅಗುತ್ತದೆ.

"ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್"(Bank account)  ವಿಶೇಷತೆಗಳು: 

1) ಇತರೆ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಅಪೀಸ್ ನಲ್ಲಿ ಈ ಖಾತೆಯನ್ನು ತೆರೆಯುವುದರಿಂದ ಆಧಾರ್ ಲಿಂಕ್(NPCI mapping) ಇಲ್ಲದೇ ಹಣ ಜಮಾ ಅಗುವ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆದುಕೊಳ್ಳಬಹುದು.

2) ಸಾರ್ವಜನಿಕರು ನಿಮ್ಮ ಮನೆ ಬಾಗಿಲಿಗೆ ಬರುವ ಪೋಸ್ಟ್ ಮ್ಯಾನ್ ಮುಖಾಂತರ ಉಚಿತ IPPB ಸೇವೆಗಳನ್ನು ಪಡೆಯಬಹುದು ಉದಾಹರಣೆಗೆ: Adhar seeding, POSB link, mobile number change ect..)

3) ಭಾರತದಾದ್ಯಂತ ಯಾವುದೇ ಅಂಚೆ ಕಚೇರಿಯಲ್ಲಿ ಬ್ಯಾಂಕಿಗ್ ಸೇವೆಯನ್ನು ಪಡೆಯಬಹುದು.

4) ಹಣದ ಮಿತಿ ಮತ್ತು ಶುಲ್ಕವಿಲ್ಲದೆ ನಗದು ಜಮಾ ಮತ್ತು ನಗದು ಹಿಂಪಡೆಯುವಿಕೆಯನ್ನು ಸಹ ಮಾಡಬಹುದಾಗಿದೆ.

ಇದನ್ನೂ ಓದಿ: Tailoring training-2024: ಟೈಲರಿಂಗ್ ಉದ್ಯಮ ಸ್ಥಾಪನೆ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ!

5) IPPB Mobile banking ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇಲೆಕ್ಟ್ರಿಸಿಟಿ, ಎಲ್.ಪಿ.ಜಿ, ಮೊಬೈಲ್ ರಿಚಾರ್ಜ್ ಸೇರಿದಂತೆ ಇತಾದಿ ಆನ್ಲೈನ್ ಪಾವತಿಗಳನ್ನು ಮಾಡಬಹುದು.

6) ಅತೀ ಕಡಿಮೆ ಪ್ರಿಮೀಯಂ ಪಾವತಿ ಮಾಡಿ 10 ಅಥವಾ15 ಲಕ್ಷದ ಕುಟುಂಬದ ವಾರ್ಷಿಕ ವಿಮೆಯ ಸೌಲಭ್ಯವನ್ನು ಪಡೆಯಬಹುದು.

7) ಇತರೆ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಅಪೀಸ್ ನಲ್ಲಿ ಜನ ದಟ್ಟಣೆ ಕಡಿಮೆ ಇರುವುದರಿಂದ ತ್ವರಿತವಾಗಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: Grama panchayath helpline- ಗ್ರಾಮ ಪಂಚಾಯತಿಯ ಎಲ್ಲಾ ಸೌಲಭ್ಯದ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ!

IPPB ಅಕೌಂಟ್ ಅನ್ನು ಎಲ್ಲಿ ತೆರೆಯಬೇಕು?

ನಾಗರಿಕರು IPPB ಅಕೌಂಟ್ ಅನ್ನು ತೆರೆಯಲು ನಿಮ್ಮ ಸಮೀಪದ ಪೋಸ್ಟ್ ಅಪೀಸ್ ಅನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಖಾತೆಯನ್ನು ತೆರೆಯಬೇಕು.

ಇದನ್ನೂ ಓದಿ: ಪಂಜಾಬ್ & ಸಿಂಧ್ ಬ್ಯಾಂಕ್ ನಲ್ಲಿ ವಿವಿಧ 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ! Punjab & Sind Bank Recruitment 2024

Required documents for IPPB account opeing- ಅಕೌಂಟ್ ತೆರೆಯಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/aadhar card
2) ಅರ್ಜಿದಾರರ ಪೋಟೋ/photo
3) ರೇಷನ್ ಕಾರ್ಡ ಪ್ರತಿ/ration card
4) ಪಾನ್ ಕಾರ್ಡ ಪ್ರತಿ/pan card
5) ಅರ್ಜಿ ನಮೂನೆ/application form

Post office ಅಧಿಕೃತ ವೆಬ್ಸೈಟ್: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: