Ration card list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

October 29, 2024 | Siddesh
Ration card list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
Share Now:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿಯನ್ನು(Ration card list) ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ರೇಶನ್ ಕಾರ್ಡ ಹೊಂದಿರುವವರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು.

ಪ್ರತಿ ತಿಂಗಳು ಆಹಾರ ಇಲಾಖೆಯಿಂದ ಮಾರ್ಗಸೂಚಿಯನ್ವಯ ನಿಯಮ ಮೀರಿದ ಅನರ್ಹ ಗ್ರಾಹಕರ ಪಡಿತರ ಚೀಟಿಗಳನ್ನು ರದ್ದಪಡಿಸಲಾಗುತ್ತದೆ ಇದರ ಜೊತೆಗೆ ಅರ್ಹರಿರುವ ಪಟ್ಟಿಯನ್ನು(Ration card eligible list) ಸಹ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: Jaminige dhari-ಜಮೀನಿಗೆ ಹೋಗಲು ಅಕ್ಕ-ಪಕ್ಕದವರು ದಾರಿ ಬಿಡುತ್ತಿಲ್ಲವೇ? ಬಂತು ನೋಡಿ ಹೊಸ ನಿಯಮ!

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಈ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಹಳ್ಳಿಯ ಪಟ್ಟಿಯನ್ನು ತೆರೆದು ಈ ಅರ್ಹರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಬಹುದು.

Ration card eligible list-2024: ಹಳ್ಳಿವಾರು ಅರ್ಹ ರೇಶನ್ ಕಾರ್ಡದಾರರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ:

ಆಂಡ್ರಾಯ್ಡ್ /ಸ್ಕ್ರಿನ್ ಟಚ್ ಮೊಬೈಲ್ ಬಳಕೆ ಮಾಡುವವರು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮನೆಯಲ್ಲೇ ಇದ್ದು ಕೆಲವೇ ನಿಮಿಷಗಳಲ್ಲಿ ನಿಮ್ಮ ಹಳ್ಳಿಯ ಅರ್ಹ ರೇಶನ್ ಕಾರ್ಡ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Bank Loan-ಬ್ಯಾಂಕ್ ನಿಂದ ಸಾಲ ಪಡೆಯುವಾಗ ಈ ತಪ್ಪು ಮಾಡದಿರಿ!

Ration card

Step-1: ಪ್ರಥಮದಲ್ಲಿ Ration card eligible list ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ಇ-ಪಡಿತರ ಚೀಟಿ/e-Ration card" ಬಟನ್ ಮೇಲೆ ಕ್ಲಿಕ್ ಮಾಡಿ "ಹಳ್ಳಿ ಪಟ್ಟಿ/Show Village list" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಹಳ್ಳಿ ಪಟ್ಟಿ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಹೊಸ ಪೇಜ್ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/District, ತಾಲ್ಲೂಕು/Taluk, ಗ್ರಾಮ ಪಂಚಾಯತಿ/Gram panchayat, ಹಳ್ಳಿ/Village ಹೆಸರನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele parihara news- 56 ಸಾವಿರ ಹೆಕ್ಟೇರ್ ಬೆಳೆ ಹಾನಿ ಈ ಪಟ್ಟಿಯಲ್ಲಿರುವವರಿಗೆ 15 ದಿನದಲ್ಲಿ ಬೆಳೆ ಹಾನಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ

Ration card eligible list

Step-4: "GO" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗೆ ನಿಮ್ಮ ಹಳ್ಳಿಯ ಅರ್ಹ ರೇಶನ್ ಕಾರ್ಡದಾರರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ಎಲ್ಲಾ ಪೇಜ್ ನಲ್ಲಿರುವ ಹೆಸರುಗಳನ್ನು ನೋಡಲು ಪಟ್ಟಿಯ ಕೊನೆಯಲ್ಲಿ ಕಾಣುವ ಪೇಜ್ ನಂಬರ್ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಇದನ್ನೂ ಓದಿ: Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!

Ahara elake website- ಈ ವೆಬ್ಸೈಟ್ ನಲ್ಲಿ ಇನ್ನು ಹಲವು ಮಾಹಿತಿಗಳು ಲಭ್ಯ:

ಆಹಾರ ಇಲಾಖೆ ಈ ವೆಬ್ಸೈಟ್ ನಲ್ಲಿ ಈ ಮೇಲೆ ತಿಳಿಸಿರುವ ಮಾಹಿತಿ ಜೊತೆಗೆ ಪ್ರಸ್ತುತ ನಿಮ್ಮ ಬಳಿಯಿರುವ ರೇಶನ್ ಕಾರ್ಡಿನ ಇ-ಕೆವೈಸಿ ಸ್ಥಿತಿ, ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಬದಲು ಹಣದ ನೇರ ನಗದು ವರ್ಗಾವಣೆಯ(DBT Status) ವಿವರವನ್ನು, ರದ್ದಾದ ರೇಶನ್ ಕಾರ್ಡ ಪಟ್ಟಿ, ಹೊಸ ಪಡಿತರ ಚೀಟಿಯ ಸ್ಥಿತಿ, ಹಾಲಿ ಪಡಿತರ ಚೀಟಿ ಸ್ಥಿತಿಯನ್ನು ಸಹ ನೋಡಬಹುದಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: