Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!

April 24, 2025 | Siddesh
Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!
Share Now:

ತೋಟಗಾರಿಕೆ ಇಲಾಖೆಯಿಂದ(Horticulture Department) ಮನರೇಗಾ ಯೋಜನೆಯಡಿ ರೈತರು ವಿವಿಧ ಬೆಳೆಗಳ ಹೊಸ ತೋಟವನ್ನು ನಿರ್ಮಾಣ ಮಾಡಲು ಮತ್ತು ಈಗಾಗಲೇ ಬೆಳೆದಿರುವ ಬೆಳೆಯ ಪ್ರದೇಶವನ್ನು ವಿಸ್ತರಣೆ ಮಾಡಲು ಸಬ್ಸಿಡಿ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆರ್ಥಿಕವಾಗಿ ನೆರವು ನೀಡಲು ನರೇಗಾ ಯೋಜನೆಯಡಿ(Mgnrega)ಸಹಾಯಧನದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಬ್ಸಿಡಿಯನ್ನು ಒದಗಿಸಲು ಅರ್ಹ ರೈತರನ್ನು ಆಯ್ಕೆ ಮಾಡಲು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Ration Card-ಸರ್ಕಾರದಿಂದ ರೇಷನ್ ಕಾರ್ಡದಾರರಿಗೆ ಮತ್ತೊಂದು ಸಿಹಿ ಸುದ್ದಿ!

ಈ ಲೇಖನದಲ್ಲಿ ಯಾವೆಲ್ಲ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಬ್ಸಿಡಿಯನ್ನು ಇಲಾಖೆಯಿಂದ(Horticulture Department Subsidy) ನೀಡಲಾಗುತ್ತದೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಮಾನದಂಡಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Horticulture Crop Subsidy-ಯಾವೆಲ್ಲ ಬೆಳೆಯನ್ನು ಬೆಳೆಯಲು ಸಬ್ಸಿಡಿ ಪಡೆಯಬಹುದು?

ತೋಟಗಾರಿಕೆ ಇಲಾಖೆಯಿಂದ ರೈತರು ಮನರೇಗಾ ಯೋಜನೆಯಡಿ ಸಹಾಯಧನವನ್ನು ಪಡೆದುಕೊಂಡು ವೀಳ್ಯೆದೆಲೆ, ತೆಂಗು, ಮಾವು, ಅಡಿಕೆ, ಸಪೋಟ, ಸೀಬೆ, ಅಂಗಾಂಶ ಬಾಳೆ, ಪಪ್ಪಾಯ, ಕರಿಬೇವು, ಕಾಳುಮೆಣಸು, ಕೋಕೋ, ನೇರಳೆ, ಸೀತಾಫಲ,ಡ್ರಾಗನ್ ಪ್ರೂಟ್, ಮಲ್ಲಿಗೆ, ಗುಲಾಬಿ ಹೂವು ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳ ಪ್ರದೇಶವನ್ನು ವಿಸ್ತರಣೆ ಮಾಡಲು ಮತ್ತು ಹೊಸ ತೋಟವನ್ನು ಮಾಡಲು ಸಹಾಯಧನವನ್ನು ಪಡೆಯಲು ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Karnataka Male Mahiti-ರಾಜ್ಯದ ಮಳೆ ಮುನ್ಸೂಚನೆ!ಈ ದಿನದ ನಂತರ ಉತ್ತಮ ಮಳೆ ಸಾಧ್ಯತೆ!

How to apply-ರೈತರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಅಥವಾ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

gulabi krishi subsidy

ಇದನ್ನೂ ಓದಿ: Cyber Crime Portal-ಮೊಬೈಲ್ ಬಳಕೆದಾರರು ತಪ್ಪದೇ ಈ ಮಾಹಿತಿ ತಿಳಿಯಿರಿ!

Required Documents For Nrega Subsidy-ಅರ್ಜಿ ಸಲ್ಲಿಸಲು ದಾಖಲೆಗಳು:

1) ರೈತರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಪೋಟೋ
4) ಜಮೀನಿನ ಪಹಣಿ/RTC
5) ನರೇಗಾ ಜಾಬ್ ಕಾರ್ಡ
6) ಹಿಡುವಳಿ ಪ್ರಮಾಣ ಪತ್ರ
7) ರೇಷನ್ ಕಾರ್ಡ

Who Can Apply For This Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು:

  • ಅರ್ಜಿದಾರರ ಹೆಸರಿಗೆ ಕೃಷಿ ಜಮೀನು ಹೊಂದಿರಬೇಕು.
  • ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರು ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿದಾರ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರ ರೈತರು ನರೇಗಾ ಯೋಜನೆಯಡಿ ಜಾಬ್ ಕಾರ್ಡ ಅನ್ನು ಪಡೆದುಕೊಂಡಿರಬೇಕು.

ಇದನ್ನೂ ಓದಿ: Male Nakshatragalu-2025: ಈ ವರ್ಷದ ಮಳೆ ನಕ್ಷತ್ರಗಳು! ಇಲ್ಲಿದೆ ಸಂಪೂರ್ಣ ಮಾಹಿತಿ!

Narega Yojane

ಇದನ್ನೂ ಓದಿ: Anganavadi Recruitment-558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ!

Nrega Horticulture Crop wise Subsidy-ಬೆಳೆವಾರು ಸಹಾಯಧನದ ವಿವರ:

  • ಅಡಿಕೆ- 1,68,000/-
  • ತೆಂಗು- 66,000/-
  • ಗೇರು- 63,000/-
  • ಮಾವು/ಸಪೋಟ- 56,000/-
  • ಹುಣಸೆ- 1,18,000/-
  • ನೇರಳೆ- 54,000/-
  • ಸೀತಾಫಲ- 58,000/-
  • ಬಾರೆ- 48,000/-
  • ನುಗ್ಗೆ- 70,000/-
  • ನೆಲ್ಲಿ- 1,69,000/-
  • ಅಂಜೂರ- 88,000/-
  • ಹಲಸು- 54,000/-
  • ದ್ರಾಕ್ಷಿ- 4,72,000/-

ಇದನ್ನೂ ಓದಿ: Diploma Agriculture-ಒಂದು ವರ್ಷದ ಕೃಷಿ ಡಿಪ್ಲೊಮಾ ಮತ್ತು ಇತರೆ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ!

  • ವೀಳೆದೆಲೆ(ಅರ್ಧ ಎಕರೆಗೆ)- 28,000/-
  • ಕರೀಬೇವು(ಅರ್ಧ ಎಕರೆಗೆ)- 60,000/-
  • ಕಾಫಿ- 1,68,000/-
  • ಬೆಣ್ಣೆ ಹಣ್ಣು- 51,000/-
  • ರಾಮ್ಬೂತಾನ್- 52,000/-
  • ಅಪ್ಪೇಮಿಡಿ ಮಾವು- 94,000/-
  • ಜಾಯಿಕಾಯಿ-25,000/-
  • ಹಿಪ್ಪು ನೇರಳೆ ನರ್ಸರಿ ಅಭಿವೃದ್ದಿ-1,28,000/-
  • ದಾಳಿಂಬೆ- 69,000/-
  • ಸೀಬೆ- 1,31,000/-
  • ತಾಳೆ- 34,000/-
  • ಚಕ್ಕೆ ದಾಲ್ಚಿನ್ನಿ- 1,74,000/-
  • ಲವಂಗ- 50,000/-
  • ಕಾಳುಮೆಣಸು- 1,09,000/-
  • ನಿಂಬೆ/ಮೋಸಂಬಿ/ಕಿತ್ತಳೆ- 49,000/-
  • ಡ್ರಾಗನ್ ಪ್ರೋಟ್ಸ್-1,54,000/-
  • ಗುಲಾಬಿ ಕೃಷಿ

Nrega Job card-ಜಾಬ್ ಕಾರ್ಡ ಪಡೆಯುವುದು ಹೇಗೆ?

ರೈತರು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಚೇರಿಯನ್ನು ಆಧಾರ್ ಕಾರ್ಡ, ರೇಷನ್ ಕಾರ್ಡ, ಪೋಟೋ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಿ ನರೇಗಾ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು ಜಾಬ್ ಕಾರ್ಡ ಅನ್ನು ಪಡೆಯಬಹುದು.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

Nrega Helpline-ಸಹಾಯವಾಣಿ ಸಂಖ್ಯೆ: 1800 4258 666
Nrega Yojana Twitter Account-ಎಕ್ಸ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: