Land Purchase Loan-ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಖರೀದಿಗೆ ಸಾಲ ಸೌಲಭ್ಯ!

June 22, 2025 | Siddesh
Land Purchase Loan-ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಖರೀದಿಗೆ ಸಾಲ ಸೌಲಭ್ಯ!
Share Now:

ಕರ್ನಾಟಕ್ ಬ್ಯಾಂಕ್ ನಿಂದ ಕೃಷಿ ಭೂಮಿಯನ್ನು(Karnataka Bank Loan) ಖರೀದಿ ಮಾಡಲು ಯೋಜನೆಯನ್ನು ಹಾಕಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಕೃಷಿ ಸಾಲವನ್ನು ಒದಗಿಸಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಬ್ಯಾಂಕ್ ನಿಂದ KBL ಕೃಷಿ ಭೂಮಿ ಯೋಜನೆಯಡಿ(Agriculture Loan) ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ,ಸಂಸ್ಥೆ,ಕಂಪನಿ ಮತ್ತು ಅವಿಭಕ್ತ ಕುಟುಂಬದವರು ಕೃಷಿ ಭೂಮಿಯನ್ನು ಖರೀದಿ ಮಾಡಲು ತ್ವರಿತವಾಗಿ ಸಾಲವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Free Hostel Application-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಇನ್ನು 4 ದಿನ ಮಾತ್ರ ಬಾಕಿ!

ಈ ಯೋಜನೆಯಡಿ ಸಾಲವನ್ನು(Agriculture Loan) ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Karnataka Bank Loan-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ಇತರೆ ಬ್ಯಾಂಕ್ ನಲ್ಲಿ ಸಾಲ ಪಾವತಿಯು ಬಾಕಿ ಇರಬಾರದು ಇದ್ದಲ್ಲಿ ಅದನ್ನು ಮರು ಪಾವತಿ ಮಾಡಲು ಸಿದ್ದವಿರಬೇಕು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರಿಗೆ 18 ವರ್ಷ ಭರ್ತಿಯಾಗಿರಬೇಕು.

ಸಾಲವನ್ನು ಪಡೆಯಲು ಬ್ಯಾಂಕ್ ನಿಯಮಗಳು:

ಖರೀದಿಸಲು ಉದ್ದೇಶಿಸಲಾದ ಕೃಷಿ ಭೂಮಿಯನ್ನು ಕಡ್ಡಾಯವಾಗಿ ಅಡಮಾನ ಇರಿಸಬೇಕಾಗುತ್ತದೆ.

ಸಾಲವನ್ನು ಪಡೆಯಲು ಶ್ಯೂರಿಟಿಯನ್ನು ಒದಗಿಸುವುದ ಕಡ್ಡಾಯವಾಗಿದೆ.

ಇದನ್ನೂ ಓದಿ: Gruhalakshmi Yojane-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Loan Replacement Method-ಸಾಲ ಮರುಪಾವತಿಗೆ ಕಂತಿಗಳನ್ನು ಪಾವತಿಸಲು ಅವಕಾಶಗಳು ಹೀಗಿವೆ:

ತ್ರೈಮಾಸಿಕ: ಒಮ್ಮೆ ಸಾಲವನ್ನು ಪಡೆದ ಬಳಿಕ ಕಂತುಗಳನ್ನು ಬ್ಯಾಂಕ್ ಗೆ ಕಟ್ಟಲು ಗ್ರಾಹಕರು 3 ತಿಂಗಳಿಗೆ ಒಮ್ಮೆ ಪಾವತಿಸಲು ಅವಕಾಶವಿರುತ್ತದೆ.

ಅರ್ಧ ವಾರ್ಷಿಕ: ಈ ಆಯ್ಕೆಯನ್ನು ಮಾಡಿಕೊಳ್ಳುದರ ಮೂಲಕ ಸಾಲವನ್ನು ಪಡೆದ ಬಳಿಕ ಕಂತುಗಳನ್ನು ಬ್ಯಾಂಕ್ ಗೆ ಕಟ್ಟಲು ಗ್ರಾಹಕರು 6 ತಿಂಗಳಿಗೆ ಒಮ್ಮೆ ಪಾವತಿಸಲು ಅವಕಾಶವಿರುತ್ತದೆ.

ವಾರ್ಷಿಕ: ಸಾಲವನ್ನು ಪಡೆದ ಬಳಿಕ ಕಂತುಗಳನ್ನು ಬ್ಯಾಂಕ್ ಗೆ ಕಟ್ಟಲು ಗ್ರಾಹಕರು 12 ತಿಂಗಳಿಗೊಮ್ಮೆ ಪಾವತಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Health insurance-ಸುವರ್ಣ ಆರೋಗ್ಯ ಯೋಜನೆಯಡಿ ₹ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ!

karnataka bank

Loan Limit-ಸಾಲದ ಮಿತಿ:

  • ಕನಿಷ್ಠ ಮಿತಿ- ರೂ 50,000/-
  • ಗರಿಷ್ಠ ಮಿತಿ- ರೂ 750/-ಲಕ್ಷ

Apply Method-ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಬ್ಯಾಂಕ್ ನಿಂದು ಕೃಷಿ ಭೂಮಿಯನ್ನು ಖರೀದಿ ಮಾಡಲು ಸಾಲವನ್ನು ಪಡೆಯಲು ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Garden fair in bangalore-ಸಸ್ಯ ಸಂತೆಯಲ್ಲಿ ಮಾರಾಟ ಮಳಿಗೆ ನೋಂದಣಿಗೆ ಅರ್ಜಿ ಅಹ್ವಾನ!

Online Loan Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಗ್ರಾಹಕರು ಕರ್ನಾಟಕ ಬ್ಯಾಂಕಿನ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ಕರ್ನಾಟಕ ಬ್ಯಾಂಕಿನ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ "ಸಾಲಗಳು" ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಅವಶ್ಯವಿರುವ ಸಾಲದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಈ ಪೇಜ್ ನಲ್ಲಿ "ಈಗಲೇ ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಹೆಸರು, ಮೇಲ್ ಐಡಿ,ಮೊಬೈಲ್ ನಂಬರ್,ಸಾಲದ ವಿಧಾನವನ್ನು ಆಯ್ಕೆ ಮಾಡಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bisi uta yojana-ಬಿಸಿಯೂಟದ ಅಡುಗೆಯವರಿಗೆ ವೇತನ ಹೆಚ್ಚಳ ಮಾಡಿದ ಸರ್ಕಾರ!

Karnataka Bank Loan Features-ಕರ್ನಾಟಕ ಬ್ಯಾಂಕ್ ಸಾಲದ ವಿಶೇಷತೆಗಳು:

ಸರಳ ಪ್ರಕ್ರಿಯೆ.
ತ್ವರಿತ ಮಂಜೂರಾತಿ .
OD ಸೌಲಭ್ಯದೊಂದಿಗೆ ಅಲ್ಪಾವಧಿ ಹಣದ ಅಗತ್ಯತೆಗಳನ್ನು ಪೂರೈಕೆ.
ಅವಧಿ ಸಾಲದೊಂದಿಗೆ ದೀರ್ಘ ಸಮಯದ ಹಣದ ಅಗತ್ಯತೆಗಳನ್ನು ಪೂರೈಕೆ.

Documents-ಲೋನ್ ಪಡೆಯಲು ದಾಖಲಾತಿಗಳು:

ಗ್ರಾಹಕರು ಕರ್ನಾಟಕ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ಅರ್ಜಿದಾರರ ಆಧಾರ್/Aadhar.
  • ಬ್ಯಾಂಕ್ ಪಾಸ್ ಬುಕ್/Bank Pass Book.
  • ಪೋಟೊ/Photo.
  • ಪಾನ್ ಕಾರ್ಡ/Pan Card.
  • ಆದಾಯ ತೆರಿಗೆ ಪಾವತಿ(ಲಭ್ಯವಿದ್ದಲ್ಲಿ)/IT.
  • ಜಮೀನಿನ ಅಧಿಕೃತ ದಾಖಲೆಗಳು/Land Documents.

For More Information-ಹೆಚ್ಚಿನ ಮಾಹಿತಿಗಾಗಿ:

Karnataka Bank Website-ಅಧಿಕೃತ ಜಾಲತಾಣ-Click Here

Karnataka Bank Helpline-ಟೋಲ್ ಪ್ರೀ ನಂಬರ್ ಗಳು- 1800 425 1444 ಮತ್ತು 1800 572 8031

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: