RTC Adhar Link-ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಈಗಲೇ ಆನ್‌ಲೈನ್‌ನಲ್ಲಿ ಪರಿಶೀಲಿಸಿ!

July 20, 2025 | Siddesh
RTC Adhar Link-ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಈಗಲೇ ಆನ್‌ಲೈನ್‌ನಲ್ಲಿ ಪರಿಶೀಲಿಸಿ!
Share Now:

ಕಂದಾಯ ಇಲಾಖೆಯ(Revenue Department) ನೂತನ ಮಾರ್ಗಸೂಚಿಯ ಪ್ರಕಾರ ರೈತರು ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರಿನ ಪಹಣಿಗಳಿಗೆ(RTC Aadhar Link Status) ಆಧಾರ್ ಕಾರ್ಡ ಲಿಂಕ್ ಅನ್ನು ಕಡ್ಡಾಯ ಮಾಡಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಅಗಿದಿಯೋ?ಇಲ್ಲವೋ? ಎಂದು ಹೇಗೆ ಚೆಕ್ ಮಾಡಿಕೊಳ್ಳಬಹುದು ಎನ್ನುವುದರ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೃಷಿಕರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲು ಮತ್ತು ಮಾಲೀಕತ್ವದ ಬದಲಾವಣೆ ಮಾಹಿತಿಯನ್ನು ಕಾಲ ಕಾಲಕ್ಕೆ ನೇರವಾಗಿ ರೈತರ ಮೊಬೈಲ್ ನಂಬರ್ ಗಳಿಗೆ ಸಂದೇಶದ ಮೂಲಕ್ ರವಾನಿಸಲು ಜಮೀನಿನ ಎಲ್ಲಾ ಪಹಣಿ/ಊತಾರ್/RTC ಗಳಿಗೆ ಆಧಾರ್ ಕಾರ್ಡ ಲಿಂಕ್(RTC Aadhar Link Status Check) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಇಂದಿನ ಈ ಅಂಕಣದಲ್ಲಿ ರೈತರು ತಮ್ಮ ಜಮೀನಿನ ಪಹಣಿಗೆ(Pahani)ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ಮೊಬೈಲ್ ನಲ್ಲಿ ಹೇಗೆ ಖಚಿತಪಡಿಸಿಕೊಳ್ಳುವುದು ಎನ್ನುವ ವಿಧಾನದ ಮಾಹಿತಿಯ ಜೊತೆಗೆ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಆಧಾರ್ ಕಾರ್ಡ ಲಿಂಕ್ ಮಾಡುವುದರಿಂದ ಅಗುವ ಪ್ರಯೋಜನಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Aadhar Card And RTC Link-ಜಮೀನಿನ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಕಡ್ಡಾಯ:

ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಮಾಡುವುದನ್ನು ಕಂದಾಯ ಇಲಾಖೆಯಿಂದ ಕಡ್ಡಾಯಗೊಳಿಸಲಾಗಿದ್ದು ಈಗಾಗಲೇ ಹಳ್ಳಿ ಮಟ್ಟದಲ್ಲಿ ಇಲಾಖೆಯಿಂದ ಗ್ರಾಮ ಸಹಾಯಕ ನೆರವಿನಿಂದ ಶೇ 75% ಕ್ಕಿಂತ ಹೆಚ್ಚಿನ ಪಹಣಿಗಳಿಗೆ ಆಧಾರ್ ಕಾರ್ಡ ಲಿಂಕ್ ಅನ್ನು ಮಾಡಲಾಗಿದ್ದು ಇಲ್ಲಿಯವರೆಗೆ ಪಹಣಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡದವರು ಕೂಡಲೇ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಚಾವಡಿಯನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಆಧಾರ್ ಕಾರ್ಡ ಲಿಂಕ್ ಮಾಡಿಸಿ.

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

Required Documents For RTC Aadhar Link-ಪಹಣಿಗೆ ಆಧಾರ್ ಲಿಂಕ್ ಮಾಡಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ರೈತರು ಜಮೀನಿಗೆ ಆಧಾರ್ ಕಾರ್ಡ ಲಿಂಕ್ ಅನ್ನು ಮಾಡಿಕೊಳ್ಳಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ.

  • ನಿಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್
  • ಆಧಾರ್ ಕಾರ್ಡ ಪ್ರತಿ
  • ನಿಮ್ಮ ಆದಾರ್ ಕಾರ್ಡನಲ್ಲಿರುವ ಮೊಬೈಲ್ ಅನ್ನು ತೆಗೆದುಕೊಂಡು ಗ್ರಾಮ ಚಾವಡಿಯನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

Why Link Aadhaar Card with Land RTC-ಪಹಣಿಗೆ ಆಧಾರ್ ಕಾರ್ಡ ಲಿಂಕ್ ಏಕೆ ಮಾಡಬೇಕು?

ಕಂದಾಯ ಇಲಾಖೆಯಿಂದ ಪ್ರಸ್ತುತ ಜಾರಿಗೆ ತಂದಿರುವ ನಿಯಮದನ್ವಯ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಪಹಣಿಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ನಕಲಿ ಮಾಲೀಕರ ಹಾವಳಿಗೆ ಕಡಿವಾಣ ಹಾಕಲು ಮತ್ತು ರೈತರ ಜಮೀನಿನ ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿಡಲು ಈ ಕ್ರಮವನ್ನು ಜಾರಿಗೆ ತರಲಾಗಿದೆ.

ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಅನ್ನು ಮಾಡುವುದರಿಂದ ಮಾಲೀಕತ್ವ ಬದಲಾವಣೆಯ ಮಾಹಿತಿಯನ್ನು ಮೊಬೈಲ್ ನಲ್ಲಿ ಸಂದೇಶದ ಮೂಲಕ ಪಡೆಯಬಹುದು.

ಕಂದಾಯ ಇಲಾಖೆಯ ಮೂಲಕ ಯಾವುದೇ ಬಗ್ಗೆಯ ಆನ್ಲೈನ್ ಸೇವೆಯನ್ನು ರೈತರು ಪಡೆಯಲು ಆಧಾರ್ ಲಿಂಕ್ ಅನ್ನು ಮಾಡುವುದ ಕಡ್ಡಾಯವಾಗಿದೆ.

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

Why Farmers Should Link Aadhaar with Land Records-RTC/ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ?

ರೈತರು ತಮ್ಮ ಹಳ್ಳಿ ವ್ಯಾಪ್ತಿಯ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಹಣಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಿಕೊಳ್ಳುವುದರಿಂದ ಈ ಕೆಳಗಿನ ಪಟ್ಟಿಯಲ್ಲಿರುವ ಪ್ರಯೋಜನಗಳನ್ನು ಪಡೆಯಬಹುದು.

  • ಜಮೀನಿನ ಮಾಲೀಕತ್ವದ ಹೆಸರಿನಲ್ಲಿ ಯಾವುದೇ ಬಗ್ಗೆಯ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ ಅದರೆ ತಕ್ಷಣದಲ್ಲೇ ನಿಮ್ಮ ಮೊಬೈಲ್ ನಂಬರ್ ಗೆ ಅಲರ್ಟ್ ಮೇಸೆಜ್ ಅನ್ನು ಕಂದಾಯ ಇಲಾಖೆಯಿಂದ ರವಾನಿಸಲಾಗುತ್ತದೆ.
  • ಕಂದಾಯ ಇಲಾಖೆಯ ಎಲ್ಲಾ ಬಗ್ಗೆಯ ಆನ್ಲೈನ್ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಈ ಕ್ರಮ ನೆರವಾಗುತ್ತದೆ.
  • ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಡಿಜಿಟಲೀಕರಣಕ್ಕೆ ಈ ಕ್ರಮ ನೆರವಾಗಲಿದೆ.
  • ನಕಲಿ ದಾಖಲೆಗಳನ್ನು ಸಲ್ಲಿಸಿ ಜಮೀನಿನ ಮಾಲೀಕತ್ವದ ಬದಲಾವಣೆಗೆ ಪ್ರಯತ್ನಿಸುವವರಿಗೆ ಕಡಿವಾಣ ಹಾಕಬಹುದು.

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

How To Check RTC Aadhar Link Status-ನಿಮ್ಮ ಜಮೀನಿನ ಪಹಣಿಗೆ ಆಧಾರ್ ಅಗಿದಿಯೋ?ಇಲ್ಲವೋ? ಎಂದು ಈಗಲೇ ಚೆಕ್ ಮಾಡಿ:

ಈಗಾಗಲೇ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಮಾಡಿಸಿದವರು ಅಥವಾ ಮಾಡಿಸದೇ ಇರುವವರು ಒಮ್ಮೆ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕಂದಾಯ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಪಹಣಿಗೆ ಆಧಾರ್ ಕಾರ್ಡ ಲಿಂಕ್ ಅಗಿದಿಯೋ?ಇಲ್ಲವೋ? ಎಂದು ಒಂದೆರಡು ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಬಹುದು ಜೊತೆಗೆ ಯಾವುದೇ ಬಗ್ಗೆಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಈ ತಂತ್ರಾಂಶದ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ "RTC Aadhar Link Status" ಮಾಡಿ ಅಧಿಕೃತ ಕಂದಾಯ ಇಲಾಖೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.

RTC

Step-2: ಬಳಿಕ ಈ ಪೇಜ್ ನಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ OTP Login ಮತ್ತು Aadhar Login ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಯಾವೆಲ್ಲ ಸರ್ವೆ ನಂಬರಿನ ಪಹಣಿಗಳಿಗೆ ಆಧಾರ್ ಕಾರ್ಡ ಲಿಂಕ್ ಅಗಿದೆ ಎನ್ನುವ ಮಾಹಿತಿಯನ್ನು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.

RTC Aadhar Link

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: