Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

Anna Bhagya Yojana amount transfer Checking Website link: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿಯಲು  ಆಹಾರ‍, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಬಿಡುಗಡೆ ಮಾಡಿರುತ್ತದೆ.

Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ(karnataka government new schemes)  ಬಂದ ನಂತರ ಉಚಿತವಾಗಿ 5 ಕೆಜಿ ಅಕ್ಕಿ ಬದಲು 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಲಾಗಿತ್ತು ಅದರೆ ಅಷ್ಟು ಪ್ರಮಾಣದ ಅಕ್ಕಿ ಲಭ್ಯವಾಗದ ಕಾರಣ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುವವರೆಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲಾಗುವುದು ಎಂದು ಆದೇಶ ಹೊರಡಿಸಿಲಾಗಿತ್ತು ಇದರಂತೆ ಫಲಾನುಭವಿಗಳಿಗೆ ಹಣವನ್ನು ವರ್ಗಾವಣೆ ಮಾಡವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ .

ಫಲಾನುಭವಿಗಳಿಗೆ ನೇರ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಸೋಮವಾರ ಚಾಲನೆ ನೀಡಿದ್ದಾರೆ. ನಾಗರಿಕರು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿಯಲು  ಆಹಾರ‍, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಧಿಕೃತ ವೆಬ್‌ಸೈಟ್‌ ಬಿಡುಗಡೆ ಮಾಡಿರುತ್ತದೆ.

Anna Bhagya Yojana amount transfer Checking Website: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿಯಲು  ಆಹಾರ‍, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಬಿಡುಗಡೆ ಮಾಡಿರುತ್ತದೆ.

Ration card DBT amount: ಹಣ ವರ್ಗಾವಣೆ ಸ್ಥಿತಿಯನ್ನು ತಿಳಿಯುವ ವಿಧಾನ: ಒಂದೇ ಕ್ಲಿಕ್ ನಲ್ಲಿ ಎಲ್ಲಾ ಮಾಹಿತಿ ಲಭ್ಯ.

https://ahara.kar.nic.in/status1/status_of_dbt.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ‍, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು, ನಂತರ ವರ್ಷ "2023" ಮತ್ತು ತಿಂಗಳು "July" ಎಂದು ಆಯ್ಕೆ ಆಗಿಯೇ ಇರುತ್ತದೆ ಇದರ ಕೆಳಗಿನ ಕಾಲಂ ನಲ್ಲಿ ನಿಮ್ಮ ರೇಶನ್ ಕಾರ್ಡ ನಂಬರ್(Ration card number-RC)ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಎಲ್ಲಾ ಮಾಹಿತಿ ತೋರಿಸುತ್ತದೆ.

ನಿಮ್ಮ ರ‍ೇಶನ್ ಕಾರ್ಡ ನಂಬರ್ ಹಾಕಿದ "GO" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಕುಟುಂಬದ ಮುಖ್ಯಸ್ಥರ ಹೆಸರು, ಕಾರ್ಡ ಒಟ್ಟು ಸದಸ್ಯರ ಸಂಖ್ಯೆ, ಒಟ್ಟು ಎಷ್ಟು ಕೆಜಿ? ಅಕ್ಕಿ ವಿತರಣೆಗೆ ಅರ್ಹರು, ಒಟ್ಟು ಸಂದಾಯ ಮಾಡಬೇಕಾದ ಹಣದ ವಿವರ ನಗದು ಪಾವತಿಗೆ ಅರ್ಹವಾಗಿದಲ್ಲಿ "ನಿಮ್ಮ ಕಾರ್ಡ್ (.....ಇಷ್ಟು ಜನ ಸಸದ್ಯಸರನ್ನು ಹೊಂದಿದ್ದು X 34 ರೂ.ರಂತೆ ನಗದು ಪಾವತಿಗೆ ಮಾತ್ರ ಅರ್ಹವಾಗಿದೆ ಮತ್ತು ಪಾವತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ" ಎಂದು ಗೋಚರಿಸುತ್ತದೆ.

ಉದಾಹರಣೆಗೆ ನಿಮ್ಮ ರೇಶನ್ ಕಾರ್ಡನಲ್ಲಿ(Ration card) 4 ಜನ ಸದಸ್ಯರಿದಲ್ಲಿ ಪ್ರತಿ ಒಬ್ಬರಿಗೆ 5 ಕೆಜಿ ಅಕ್ಕಿ ಬದಲು 170 ರೂ, ರಂತೆ 680 ರೂ ವರ್ಗಾವಣೆ ಅಗುತ್ತದೆ.

ಇದನ್ನೂ ಓದಿ: Annabhagya Yojane: ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆಗೆ ಮಾರ್ಗಸೂಚಿ ಬಿಡುಗಡೆ.

ಈ ಯೋಜನೆಗೆ ಪ್ರತೇಕವಾಗಿ ಅರ್ಜಿ ಸಲ್ಲಿಸಬೇಕಿಲ್ಲ:

ರಾಜ್ಯ ಸರ್ಕಾರದ ವತಿಯಿಂದ 5 ಕೆ.ಜಿ ಆಹಾರ ಧಾನ್ಯಕ್ಕೆ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ ಗೆ 34 ರೂನಂತೆ ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ DBT (ನೇರ ನಗದು ವರ್ಗಾವಣೆ) ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ. ಈ ಸಂಬಂಧ ಯಾವುದೇ ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್‌ನಲ್ಲಿ ಆರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. 

ಅಂತೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದು ಸದರಿ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್‌ ಖಾತೆಗೆ ಜೋಡಣೆಯಾಗಿದ್ದಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ನಗದು ವರ್ಗಾವಣೆಯಾಗುತ್ತದೆ. ಈ ಸಂಬಂಧ ಚಾಲ್ತಿಯಿಲ್ಲದ ಖಾತೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಪಡಿತರ ಚೀಟಿಗಳ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಲಾಗಿರುತ್ತದೆ. ಸದರಿ ಪಟ್ಟಿಯಲ್ಲಿನ ಫಲಾನುಭವಿಗಳು ಮಾತ್ರ ಪರಿಶೀಲಿಸಿಕೊಂಡು ಆಧಾರ್ ಲಿಂಕ್ ಮಾಡಲು ಕ್ರಮವಹಿಸುವುದು. 

ಇದನ್ನು ಹೊರತುಪಡಿಸಿ ಯಾವುದೇ ಸೈಬರ್ ಸೆಂಟರ್, ಗ್ರಾಮ ಒನ್, ಕರ್ನಾಟಕ ಒನ್‌, ಸಿಎಸ್‌ಸಿ(gram one/CSC center/karnataka one) ಸೆಂಟರ್‌ಗಳನ್ನೊಳಗೊಂಡಂತೆ ಇತರೆ ಯಾವುದೇ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಪರಿಶೀಲಿಸುವ ಅಥವಾ ಜೋಡಣೆ ಮಾಡುವ ಅವಕಾಶ ಇರುವುದಿಲ್ಲ. ಈ ಸಂಬಂಧ ಯಾವುದೇ ಶುಲ್ಕ ಪಾವತಿಸುವಂತಿಲ್ಲ, ಯಾರಾದರೂ ಈ ಸರ್ಕಾರಿ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಹಣ ಸುಲಿಗೆ ಮಾಡುತ್ತಿರುವುದು ಕಂಡುಬಂದಲ್ಲಿ ತಾಲ್ಲೂಕು ಕಛೇರಿಯ ಆಹಾರ ಶಾಖೆಗೆ ದೂರು ಸಲ್ಲಿಸುವುದು ಮತ್ತು ಈ ಯೋಜನೆಯ ಬಗ್ಗೆ, ಇತರೆ ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ತಾಲ್ಲೂಕು ಕಛೇರಿಯ ಆಹಾರ ಶಾಖೆಯನ್ನು ಸಂಪರ್ಕಿಸುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ನಿಮ್ಮ ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವುದು ಹೇಗೆ? ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ.