Copra msp price-ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟದ ಕುರಿತು ರೈತರಿಗೆ ತುರ್ತು ಪ್ರಕಟಣೆ!

2024 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ(Copra msp price) ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಕೃಷಿ ಮಾರಾಟ ಮಂಡಳಿ ವತಿಯಿಂದ ನೂತನ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

Copra msp price-ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟದ ಕುರಿತು ರೈತರಿಗೆ ತುರ್ತು ಪ್ರಕಟಣೆ!
Copra msp price

2024 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ(Copra msp price) ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಕೃಷಿ ಮಾರಾಟ ಮಂಡಳಿ ವತಿಯಿಂದ ನೂತನ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

2024 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಕೃಷಿ ಮಾರಾಟ ಮಂಡಳಿ ವತಿಯಿಂದ ತುಮಕೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವತಿಯಿಂದ ಹಾಸನ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನೋಂದಣಿ ಮಾಡಿದ ರೈತರು ಜೂನ್ 14 ರಂದು ಖರೀದಿ ಪ್ರಕ್ರಿಯೆ ಅಂತ್ಯಗೊಳ್ಳುವುದರಿಂದ.

ಇದನ್ನೂ ಓದಿ: Yashaswini Yojana-2024: ಯಶಸ್ವಿನಿ ಯೋಜನೆ ಕಾರ್ಡದಾರರಿಗೆ ಭರ್ಜರಿ ಸಿಹಿ ಸುದ್ದಿ! 

Copra msp price-ಜೂನ್ 14 ರೊಳಗಾಗಿ ಮಾರಾಟ ಮಾಡಲು ಸೂಚನೆ:

ಈಗಾಗಲೇ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿರುವ ರೈತರು ಉಂಡೆ ಕೊಬ್ಬರಿಯನ್ನು ಮಾರಾಟ ಮಾಡದೇ ಇದ್ದಲ್ಲಿ ಜೂನ್ 14 ರೊಳಗಾಗಿ ಸಂಬಂಧಪಟ್ಟ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ. ಯೋಜನೆಯ ಸದುಪಯೋಗ ಪಡೆದುಕೊಳ್ಳವಂತೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Copra msp rate-ಉಂಡೆ ಕೊಬ್ಬರಿ ಖರೀದಿ ಬೆಂಬಲ ಬೆಲೆ ವಿವರ:

ಕೇಂದ್ರ ಸರಕಾರ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿಯನ್ನು ಖರೀದಿ ಮಾಡಲು ರೂ 12,000 ನಿಗದಿಪಡಿಸಿದ್ದು ಇದಕ್ಕೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ರೂ 1,500 ಸೇರಿಸಿ ಒಟ್ಟು ಪ್ರತಿ ಕ್ವಿಂಟಾಲ್ ಗೆ ರೂ 13,500 ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!

ಬೆಂಬಲ ಬೆಲೆಯಲ್ಲಿ ನಿಗದಿಪಡಿಸಿದ ಜಿಲ್ಲಾವಾರು ಖರೀದಿ ಗುರಿ:

ತುಮಕೂರು- 3,50,000 (ಕ್ವಿಂಟಾಲ್ ನಲ್ಲಿ)
ದಕ್ಷಿಣಕನ್ನಡ- 1,000
ರಾಮನಗರ- 25,000
ಚಾಮರಾಜನಗರ- 1,500
ಚಿತ್ರದುರ್ಗ- 40,000
ಮಂಡ್ಯ- 40,000
ಮೈಸೂರು- 5,000
ಹಾಸನ- 1,75,000
ಚಿಕ್ಕಮಗಳೂರು- 55,000
ಒಟ್ಟು- 6,92,500(ಕ್ವಿಂಟಾಲ್ ನಲ್ಲಿ)

helpline numbers- ಸಹಾಯವಾಣಿ ಸಂಖ್ಯೆಗಳು:

ಖರೀದಿ ಪ್ರಕ್ರಿಯೆಗೆ ಕುರಿತು ಎಲ್ಲಾ ಬಗ್ಗೆಯ ಪ್ರಶ್ನೆಗಳಿಗೆ ಸಹಾಯವಾಣಿ ಸಂಖ್ಯೆಗಳು: 80 22253968 ಅಥವಾ ಉಚಿತ ದೂರವಾಣಿ ಸಂಖ್ಯೆ: 1800-425-1552 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ.

ಇದನ್ನೂ ಓದಿ: BNPM Job- ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ನಿಗಮದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ!

ರೈತರ ನೋಂದಣಿಗೆ 45 ದಿನ ಅವಕಾಶ ಮಾಡಿಕೊಡಲಾಗಿತ್ತು:

ಉಂಡೆ ಕೊಬ್ಬರಿ ಖರೀದಿ ಸಂಬಂಧ ರೈತರ ನೋಂದಣಿಯನ್ನು ದಿನಾಂಕ: 04.03.2024 ರಿಂದ ರಜಾ ದಿನಗಳು ಸೇರಿದಂತೆ 45 ದಿನಗಳವರೆಗೆ ಬೆಳಿಗ್ಗೆ 8.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯವರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಅಧಿಕೃತ ವೆಬ್ಸೈಟ್: Click here

ಇದನ್ನೂ ಓದಿ: Crop insurance guideline-2024ರ ಮುಂಗಾರು ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ!