How to know Cow age-2023: ನಿಮ್ಮ ಮನೆಯ ಹಸುವಿಗೆ ಎಷ್ಟು ವಯಸ್ಸು ಅಗಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ!

ರೈತರು ಪಶುಗಳಲ್ಲಿ ಅವುಗಳ ಹಲ್ಲು ನೋಡಿ ವಯಸ್ಸು(Cow age) ಅನ್ನು ಹೇಗೆ ನಿರ್ಧಾರ ಮಾಡಬವುದು ಎಂದು ಡಾ: ಎನ್.ಬಿ.ಶ್ರೀಧರ , ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

How to know Cow age-2023: ನಿಮ್ಮ ಮನೆಯ ಹಸುವಿಗೆ ಎಷ್ಟು ವಯಸ್ಸು ಅಗಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ!
How To Know Cow Age

ರೈತರು ಪಶುಗಳಲ್ಲಿ ಅವುಗಳ ಹಲ್ಲು ನೋಡಿ ವಯಸ್ಸು(Cow age) ಅನ್ನು ಹೇಗೆ ನಿರ್ಧಾರ ಮಾಡಬವುದು ಎಂದು ಡಾ: ಎನ್.ಬಿ.ಶ್ರೀಧರ , ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಹಲ್ಲು ಎಲ್ಲ ಪ್ರಾಣಿಗಳ ಬಹು ಮುಖ್ಯ ಅಂಗದಲ್ಲಿ ಪ್ರಮುಖವಾದದ್ದು. ಮನುಷ್ಯರಲ್ಲಿ ಹಲ್ಲು ಒಂದು ಆಕರ್ಷಣೆ ಅದರಲ್ಲೂ ಬಳಿ ಹಲ್ಲುಗಳನ್ನು ತೋರಿಸುತ್ತಾ ನಗು ಬೀರಿದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಪಶು ಹಲ್ಲುಗಳಿಂದ  ಅವುಗಳ ವಯಸ್ಸು ಅನ್ನು ನಿರ್ಧರಿಸಲು ಸಾಧ್ಯ. 

ಹಲ್ಲು ಆಹಾರವನ್ನು ಅಗಿದು ನುಂಗಲು ಸಹಕಾರಿ, ಹುಲ್ಲನ್ನು ಬುಡದಿಂದ ಕತ್ತರಿಸಿ, ಮಣ್ಣಿನಿಂದ ಬೇರ್ಪಡಿಸಿ, ಉದರಕ್ಕೆ ಕಳಿಸಲು ಹಲ್ಲುಗಳು ಸಹಕಾರಿ, ಮೆಲುಕಾಡಿಸುವ ಪ್ರಾಣಿಗಳಾದ ಗೋವುಗಳಲ್ಲಿ ದವಡೆ ಹಲ್ಲು ಅತ್ಯಂತ ಮುಖ್ಯ. ಕೆಲವೊಮ್ಮೆ ಹಲ್ಲು ಸವಕಳಿ ಬಂದಾಗ ಮೆಲುಕಾಡಿಸುವ ಸಮಯದಲ್ಲಿ ತಿಂದ ಹುಲ್ಲನ್ನು ಸರಿಯಾಗಿ ಅಗಿಯಲಾಗದೆ ಸಿಂಬೆ ಸಿಂಬೆಯಾಗಿ ಉಗುಳುತ್ತವೆ. 

ರೈತರು ತಮ್ಮ ಮನೆಗೆ ಹಸುಗಳನ್ನು ತರುವುದಕ್ಕೆ ಮಾರುಕಟ್ಟೆಗೆ ವ್ಯಾಪರಕ್ಕೆ ಹೋದಗಾಗ ಮಧ್ಯವರ್ತಿಗಳು ಕೆಲವೊಮ್ಮೆ ಮಾರುಕಟ್ಟೆಗೆ ಹಸುಗಳ ಖರೀದಿ ಮಾಡುವಾಗ ಪಶುಗಳ ವಯಸ್ಸಿನ ಬಗ್ಗೆ ವ್ಯಾಪಾರಿಗಳು ಸುಳ್ಳು ಹೇಳಿ ಯಾಮಾರಿಸಿ ವಯಸ್ಸಾದ ಹಸುವನ್ನು ರೈತರಿಗೆ ಕೊಟ್ಟು ಬಿಡುತ್ತಾರೆ.

ಈ ಎಲ್ಲಾ ಕಾರಣದಿಂದ ರೈತರು ಹಲ್ಲು ನೋಡಿ ಹೇಗೆ ಪಶುಗಳ ವಯಸ್ಸನ್ನು ಕಂಡುಹಿಡಿದುಕೊಳ್ಳುವುದು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯವಶಕವಾಗಿದೆ. ಸಾಮಾನ್ಯ ಗೋಪಾಲಕರಿಗೆ ಅವರ ಮನೆಯಲ್ಲಿರುವ ಅಥವಾ ಖರೀದಿಸಲು ಹೊರಟಿರುವ ಹಸುವಿನ ವಯಸ್ಸನ್ನು ಸುಲಭವಾಗಿ ಪತ್ತೆ ಮಾಡುವುದು ತಿಳಿಯಬವುದು ಅದಕ್ಕೆ ಪಶುಗಳಲ್ಲಿ ಮೂರು ರೀತಿಯ ಹಲ್ಲುಗಳಿವೆ. ಮುಂಭಾಗದ ಕೋರೆ ಹಲ್ಲು ಅಥವಾ ಬಾಚಿ ಹಲ್ಲು ಮೇಲಿನ ಮತ್ತು ಕೆಳಗಿನ ದವಡೆಗಳಲ್ಲಿರುವ ಮೂಲದಂತ ಮತ್ತು ದಂತಗಳು, ಜಾನುವಾರುಗಳ ವಿಶೇಷವೆಂದರೆ ಮೇಲಿನ ದವಡೆಯ ಮುಂಭಾಗದಲ್ಲಿ ಇತರ ಪ್ರಾಣಿಗಳ ಹಾಗೆ ಹಲ್ಲಿರುವುದಿಲ್ಲ, ಬದಲಾಗಿ ಸೈಕಲ್ ಟಯರಿನಷ್ಟು ಗಟ್ಟಿಯಾಗಿರುವ ದಂತ ಅಥವಾ 'ಡೆಂಟಲ್ ಪ್ಯಾಡ್' ಇರುತ್ತದೆ. ಇದು ಆಹಾರವನ್ನು ಗಟ್ಟಿಯಾಗಿ ಹಿಡಿದು ಕತ್ತರಿಸಲು ಸಹಕಾರಿ.

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

How to know Cow age: ಪಶುಗಳ ಹಲ್ಲುಗಳಲ್ಲಿ 2 ವಿಧ ಒಂದು  ಹಾಲು ಹಲ್ಲು ಮತ್ತೊಂದು ಕಾಯಂ ಹಲ್ಲು: 

ಹುಟ್ಟಿದ ಕರುವಿಗೆ ಹಾಲು ಹಲ್ಲುಗಳಿರುತ್ತವೆ. ವಯಸ್ಸಾದಂತೆ ಇವು ಉದುರಿ ಹೋಗಿ ಕಾಯಂ ಹಲ್ಲುಗಳು ಇವುಗಳ ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಆಗತಾನೆ ಹುಟ್ಟಿದ ಕರುವಿನಲ್ಲಿ 20 ಹಾಲು ಹಲ್ಲುಗಳಿರುತ್ತವೆ. ವಯಸ್ಕ ಹಸುವಾಗುವಾದಾಗ ಇವೆಲ್ಲಾ ಉದುರಿಹೋಗಿ 32 ಕಾಯಂ ಹಲ್ಲುಗಳು ಬರುತ್ತವೆ. ಎಲ್ಲಾ 32 ಹಲ್ಲುಗಳೂ ಹುಟ್ಟಿದಾಗ ಪಶು ಬಾಯ್ತುಂಬಿದೆ ಎಂದು ಹಳ್ಳಿಯವರು ಹೇಳುತ್ತಾರೆ. 

ಈ ಹಾಲುಹಲುಗಳನ್ನು ಕಾಯಂ ಹಲ್ಲಿನಿಂದ ಗುರುತಿಸುವುದು ಸುಲಭ. ಹಾಲು ಹಲ್ಲುಗಳು ಚಿಕ್ಕವೂ, ತ್ರಿಕೋನಾಕಾರದಲ್ಲಿಯೂ ಮತ್ತು ತುಂಬಾ ಬಿಳಿಯದಾಗಿಯೂ ಇರುತ್ತವೆ. ಕಾಯಂ ಹಲ್ಲುಗಳು ಅಗಲವಾಗಿದ್ದು, ಪಾಚಿಗಟ್ಟಿದಂತೆ ಅಗಲ ಉಳಿಯಂತ ಇರುತ್ತವೆ. 

ಜಾನುವಾರುಗಳ ಕೆಳದವಡೆಯಲ್ಲಿ ಒಟ್ಟು 8 ಹಾಲು ಹಲ್ಲುಗಳಿರುತ್ತಿದ್ದು ಇದರ ಮೇಲೆ ಪಶುವಿನ ಅಂದಾಜು ವಯಸ್ಸು ನಿರ್ಧರಿಸಬಹುದು, ಈ ಹಲ್ಲುಗಳಲ್ಲಿ ಮಧ್ಯದಲ್ಲಿ ಎರಡು ದೊಡ್ಡ ಹಲ್ಲುಗಳು, ಇದರ ಪಕ್ಕದಲ್ಲಿ ಎರಡು ಉಳಿಯಂತ ಹಲ್ಲುಗಳು ಇವುಗಳ ಬದಿಯಲ್ಲಿ ತ್ರಿಕೋನಾಕಾರದ ಎರಡು ಹಲ್ಲುಗಳು ಮತ್ತು ಅತ್ಯಂತ ಕೊನೆಯಲ್ಲಿ ಎರಡು ಜೊತೆ ಹಲ್ಲುಗಳಿರುತ್ತವೆ. 

ಬಹುತೇಕ ವಯಸ್ಸನ್ನು ನಿರ್ಧರಿಸುವುದು ಈ ಮುಂಭಾಗದ ಕೋರೆ ಹಲ್ಲುಗಳನ್ನು ನೋಡಿಯೇ ಕರುವಿನ ಬಾಯಿಯ ಮುಂಭಾಗದಲ್ಲಿ ಕೇವಲ ಎರಡು ಹಾಲು ಹಲ್ಲುಗಳು ಮತ್ತು ಉಳಿದಂತೆ ಕರಗಸದಂತ ಹಲ್ಲುಗಳನ್ನು ಹೊಂದಿದ್ದರೆ ಅದು ಆಗ ತಾನೆ ಹುಟ್ಟಿದೆ ಎನ್ನಬಹುದು.

ಇದನ್ನೂ ಓದಿ: Gruhajoyti Yojana bill: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ ಪ್ರಾರಂಭ! ನಿಮಗೆ ಯಾವಾಗ ಬರಲಿದೆ ಶೂನ್ಯ ಬಿಲ್?

ವಯಸ್ಸಾಗುತ್ತ ಹೋದಂತೆ ಹಲ್ಲಿನ ಸವತ ಗಮನಿಸಿಯೂ ಪಶುವಿನ ವಯಸ್ಸನ್ನು ನಿರ್ಧರಿಸಬಹುದು. ಕೆಲವೊಮ್ಮೆ ಒಂದೆರಡು ಮುಂದಿನ ಬಾಚಿ ಹಲ್ಲು ಮುರಿಯಬಹುದು. ಆಗ ಇದಕ್ಕೆ ಸುಮಾರು 8-10 ವರ್ಷ ವಯಸ್ಸು ಎನ್ನಬಹುದು, ವಯಸ್ಸಾಗುತ್ತ ಪಶುಗಳಲ್ಲಿ ಹಲ್ಲಿನ ಆರಂಭಿಕ ಕಮಾನು ಆಕಾರ ಅಂತಿಮವಾಗಿ ಸವೆತದಿಂದ ಚಪ್ಪಟೆಯಾಗುತ್ತದೆ. 

ಹಲ್ಲುಗಳು ಸವೆಯುತ್ತಾ ಬಂದು ಒಸಡಿನ ಸಮಾನಾಂತರಕ್ಕೆ ಬಂದು ನಿಲ್ಲಬಹುದು, ಮುಂದಿನ ಬಾಚಿ ಹಲ್ಲಿನ ಬುಡವು ಸವೆದು ಸವೆದು ನಕ್ಷತ್ರದಂತಾದಾಗ ಈ ಹಸುವಿಗೆ 11-13 ವರ್ಷವೆನ್ನಬಹುದು. ಇದಾದ ಮೇಲೆ ಹಸುವಿನ ದವಡೆಯ ಹಲ್ಲುಗಳೂ ಉದುರಿ ಬೊಚ್ಚು ಬಾಯಿಯಾಗಿ, ಮುದಿಯಾಗಿ ಸ್ವಲ್ಪ ದಿನಗಳಲ್ಲೇ ಇಹಲೋಕ ತ್ಯಾಗ ಮಾಡುವ ಕಾಲ ಸನ್ನಿಹಿತವಾಗಿದೆ ಎಂದು.

ಹೊಸದಾಗಿ ಅಕಳುಗಳನ್ನು ಖರೀದಿ ಮಾಡಲು  ಮಾರುಕಟ್ಟೆಗೆ ಹೋಗುವವರು ಒಮ್ಮೆ ಈ ಹಲ್ಲು ನೋಡೀ ವಯಸ್ಸ್ನು ತಿಳಿಯುವ ವಿಧಾನದ ಕುರಿತು ಅರಿವುದು ಅತ್ಯಗತ್ಯ.