ES Course Recruitment 2024-PUC ಪಾಸಾದವರಿಗೆ ಭಾರತೀಯ ಸೇನೆಯಿಂದ ನೇಮಕಾತಿಗೆ ಅಹ್ವಾನ!

ಭಾರತೀಯ ಸೇನೆಯು 2025ರ ಸಾಲಿನ ಜನವರಿ ತಿಂಗಳಿನಿಂದ ಆರಂಭವಾಗುವ ಟೆಕ್ನಿಕಲ್ ಎಂಟ್ರಿ ಸ್ಕೀಮ್ (Technical Entry Scheme) ಕೋರ್ಸ ಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ES Course Recruitment 2024-PUC ಪಾಸಾದವರಿಗೆ ಭಾರತೀಯ ಸೇನೆಯಿಂದ ನೇಮಕಾತಿಗೆ ಅಹ್ವಾನ!
ES Course Recruitment 2024

ಭಾರತೀಯ ಸೇನೆಯು 2025ರ ಸಾಲಿನ ಜನವರಿ ತಿಂಗಳಿನಿಂದ ಆರಂಭವಾಗುವ ಟೆಕ್ನಿಕಲ್ ಎಂಟ್ರಿ ಸ್ಕೀಮ್ (Technical Entry Scheme) ಕೋರ್ಸ ಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್ ಅಡಿಯಲ್ಲಿ ಅಭ್ಯರ್ಥಿಗಳಿಗೆ ಐದು ವರ್ಷಗಳ ಬೇಸಿಕ್ ಮಿಲಿಟರಿ ಟ್ರೈನಿಂಗ್ (Military Training) ಮತ್ತು ಟೆಕ್ನಿಕಲ್ ಟ್ರೈನಿಂಗ್ (Technical Training) ನೀಡಿ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಭಾರತೀಯ ಸೇನೆಯ ಈ ಒಂದು ಉನ್ನತ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಜಿ ಸಲ್ಲಿಕೆ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

TES Course Recruitment 2024 - ಈ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಭಾರತೀಯ ಸೇನೆಯು ನಿಗದಿಪಡಿಸಲಾಗಿರುವ ಅರ್ಹತೆಗಳ ವಿವರ, ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕಗಳ ವಿವರ ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: KEA GTTC Recruitement-2024: KEA ಯಿಂದ ಹೊಸ ನೇಮಕಾತಿಗೆ ಅರ್ಜಿ ಅಹ್ವಾನ! ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ನೇಮಕಾತಿ. 

TES Course Details - ತರಬೇತಿಯ ವಿವರ : 

ಈ ತರಬೇತಿಯು 2025ರ ಜನವರಿ ತಿಂಗಳಿಂದ ಆರಂಭವಾಗಲಿದೆ. ಪರ್ಮನೆಂಟ್ ಕಮಿಷನ್ಡ್ ಅಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೇಸಿಕ್ ಮಿನಿಟರಿ ಟ್ರೈನಿಂಗ್ ಮತ್ತು ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುತ್ತದೆ. ಐದು ವರ್ಷದ ಅವಧಿಯಲ್ಲಿ, ಒಂದು ವರ್ಷ ಬೇಸಿಕ್ ಮಿಲಿಟರಿ ಟ್ರೈನಿಂಗ್ ಅನ್ನು ಗಯಾದ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ನೀಡಲಾಗುತ್ತದೆ ಹಾಗೂ ನಾಲ್ಕು ವರ್ಷಗಳ ಟೆಕ್ನಿಕಲ್ ಟ್ರೈನಿಂಗ್ ಅನ್ನು ಸಿಕಂದರಾಬಾದ್ ಮತ್ತು ಪುಣೆಯಲ್ಲಿ ನೀಡಲಾಗುತ್ತದೆ.

ಆಯ್ಕೆಯಾದವರಿಗೆ ಸಿಗುವ ಸೌಲಭ್ಯಗಳು : 

ಈ ಒಂದು ತರಬೇತಿಯ ಅವಧಿಯಲ್ಲಿ (Training Period) ಅಭ್ಯರ್ಥಿಗಳಿಗೆ ನಿಗದಿತ ಸ್ಟೈಫಂಡ್ ಕೂಡ ನೀಡಲಾಗುತ್ತದೆ. ತರಬೇತಿಯು ಮುಗಿದ ನಂತರ ಅಭ್ಯರ್ಥಿಗಳು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ರ‍್ಯಾಂಕ್‌ನಲ್ಲಿ (Lieutenant Rank)ಸೇವೆ ಮಾಡುವ ಅವಕಾಶವಿದೆ.

ಇದನ್ನೂ ಓದಿ: Bank balance check- ಬ್ಯಾಂಕ್ ಭೇಟಿ ಮಾಡದೆ ನಿಮ್ಮ ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? 

ಅರ್ಹತೆಗಳು : Eligibility Criteria - 

ಈ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಹಾಗೂ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ.60 ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಇದರೊಂದಿಗೆ ಅಭ್ಯರ್ಥಿಗಳು 2024ರ JEE Mains ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಹಾಜರಾಗಿರುವುದು ಕಡ್ಡಾಯವಾಗಿದೆ.

Age limit : ವಯೋಮಿತಿ ಮಾನದಂಡ

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 16 ವರ್ಷ 6 ತಿಂಗಳಿಗಿಂತ ಕಡಿಮೆ ಇರಬಾರದು ಮತ್ತು ಗರಿಷ್ಠ 19 ವರ್ಷ 6 ತಿಂಗಳಿಗಿಂತ ಮೇಲಿರಬಾರದು. 

ಇದನ್ನೂ ಓದಿ: Indian Post Bank Jobs-ಅಂಚೆ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಾಹಕ ಹುದ್ದೆಗಳ ನೇಮಕಾತಿ!

ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತದೆ?

TES Course Recruitment 2024- ಅಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಎಸ್ ಎಸ್ ಬಿ ಯು ಸಂದರ್ಶನ ನಡೆಸಿ ನಂತರ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಗಳ ಮುಖಾಂತರ ಅಭ್ಯರ್ಥಿಗಳನ್ನು ಈ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ - ಈ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಅರ್ಜಿ ಸಲ್ಲಿಕೆ ಉಚಿತವಾಗಿದೆ.

ಅರ್ಜಿ ಸಲ್ಲಿಸಲು ಮುಖ್ಯ ದಿನಾಂಕಗಳು : 

• ಅರ್ಜಿ ಸಲ್ಲಿಕೆಗೆ ಪ್ರಾರಂಭಿಕ ದಿನಾಂಕ - 13 ಮೇ 2024
• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ - 13 ಜೂನ್ 2024 

ಮುಖ್ಯ ಲಿಂಕ್ ಗಳು : 

• ಅಧಿಕೃತ ಜಾಲತಾಣ - Click here

• ಅಧಿಸೂಚನೆ - Download