Fast food business- ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ(Fast food business)ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Fast food business- ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!
Fast food business

ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ(Fast food business)ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳಿಗೆ ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ(Free Fast food business training) ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು. ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ತರಬೇತಿ ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳು ತರಬೇತಿ ಪ್ರಾರಂಭವಾಗುವ ಮೊದಲು ಈ ಲೇಖನದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಈ ತರಬೇತಿಯಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: SSC Jobs Notification-2024: SSC 933 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಣೆ

How can Apply- ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ವಯೋಮಾನದವರು.
ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.
ಅಭ್ಯರ್ಥಿಯು ಗ್ರಾಮೀಣ ಭಾಗದರಾಗಿದ್ದು ಬಿಪಿಎಲ್ ಕಾರ್ಡ ಹೊಂದಿರುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Training date and time- ತರಬೇತಿ ನಡೆಯುವ ಅವಧಿ ಮತ್ತು ದಿನಾಂಕ:

ಈ ತರಬೇತಿಯು ದಿನಾಂಕ 04 ಏಪ್ರಿಲ್ 2024 ರಿಂದ ಪ್ರಾರಂಭವಾಗಿ 13 ಏಪ್ರಿಲ್ 2024 ರವರೆಗೆ ನಡೆಯಲಿದ್ದು, ಒಟ್ಟು 10 ದಿನದ ತರಬೇತಿ ಇದಾಗಿರುತ್ತದೆ.

ಇದನ್ನೂ ಓದಿ: KPSC WR Dept. Jobs Notification- ಜಲಸಂಪನ್ಮೂಲ ಇಲಾಖೆ ನೇಮಕಾತಿ 313 ಹುದ್ದೆಗಳಿಗೆ ಅರ್ಜಿ ಆಹ್ವಾನ!

Free Fast food business training- ತರಬೇತಿಯಲ್ಲಿ ಏನೆಲ್ಲ ಕಳುಹಿಸಲಾಗುತ್ತದೆ?

ಪಾನಿಪುರಿ ತಯಾರಿಕೆ
ಮಸಾಲಪುರಿ, 
ಗೋಬಿ ಮಂಚೂರಿ, 
ಸಮೋಸ, ಕಚೋರಿ, ನೂಡಲ್ಸ್ ಕೇಕ್, ಪಪ್ಸ್ ಹಾಗೂ ಸಿಹಿ ತಿಂಡಿಗಳನ್ನು ತಯಾರಿಕೆ ಕುರಿತು ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಕಳುಹಿಸಲಾಗುತ್ತದೆ.

Application process- ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪಾರ್ಮ್ ಭರ್ತಿ ಮಾಡಿ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Loan interest- ರೈತರು ಸಾಲದ ಮೇಲಿನ ಬಡ್ಡಿ ಮನ್ನಾದ ಪ್ರಯೋಜನ ಪಡೆಯಲು 31 ಮಾರ್ಚ ಒಳಗಾಗಿ ತಪ್ಪದೇ ಈ ಕೆಲಸ ಮಾಡಿ!

Required Documents for this training- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಅರ್ಜಿದಾರ ಅಭ್ಯರ್ಥಿಯ ನಾಲ್ಕು(4) ಪಾಸ್  ಪೋರ್ಟ್ ಸೈಜ್ ಫೋಟೋ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ರೇಶನ್ ಕಾರ್ಡ
4) ಆಧಾರ್ ಕಾರ್ಡ
5) ಪಾನ್ ಕಾರ್ಡ 

Training center address- ತರಬೇತಿ ನಡೆಯುವ ಕೇಂದ್ರದ ವಿಳಾಸ :

ಉಚಿತ 10 ದಿನದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಜಿ ಸಲ್ಲಿಸಿ ಈ ಕೇಂದ್ರಕ್ಕೆ ನೇರವಾಗಿ ಭೇಟಿ ಮಾಡಬೇಕು.

ಇದನ್ನೂ ಓದಿ: Free computer training- 45 ದಿನದ ಉಚಿತ ಕಂಪ್ಯೂಟರ್ ಡಿ.ಟಿ.ಪಿ ಕಲಿಕೆ ತರಬೇತಿಗೆ ಅರ್ಜಿ ಆಹ್ವಾನ!

ಸಂಪೂರ್ಣ ಉಚಿತ:

ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಸಹಿತ ಉಳಿದುಕೊಳ್ಳಲು ವಸತಿ ವ್ಯವಸ್ಥೆಯು ಸಹ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಮಾಹಿತಿ ಪಡೆಯಲು ಈ 9449860007, 9538281989, 9916783825, 8880444612 ಮೊಬೈಲ್ ಸಂಖ್ಯೆಗೆ ಅಸಕ್ತ ಅಭ್ಯರ್ಥಿಗಳು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್: Apply Now