HSRP Number plate-ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ!

ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್(HSRP Number plate) ಹಾಕಿಸಲು ಇದು ಕೊನೆಯ ಅವಕಾಶವಾಗಿದ್ದು ಈ ದಿನಾಂಕದ ಒಳಗಾಗಿ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಹಾಕಿಸದೇ ಇದ್ದಲಿ ಭಾರೀ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯಿಂದ ನೂತನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

HSRP Number plate-ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ!
HSRP Number plate-2024

ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್(HSRP Number plate) ಹಾಕಿಸಲು ಇದು ಕೊನೆಯ ಅವಕಾಶವಾಗಿದ್ದು ಈ ದಿನಾಂಕದ ಒಳಗಾಗಿ ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಹಾಕಿಸದೇ ಇದ್ದಲಿ ಭಾರೀ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯಿಂದ ನೂತನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಮ್ಮ ರಾಜ್ಯದಲ್ಲಿ 01 ಎಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ ಅಂದರೆ ದ್ವಿಚಕ್ರ, ತ್ರಿಚಕ್ರ, ವಾಣಿಜ್ಯ ವಾಹನ, ಟ್ರಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು-HSRP Number plate ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ:  

ಪ್ರಸ್ತುತ ಸಾರಿಗೆ ಇಲಾಖೆಯ ನೂತನ ಪ್ರಕಟಣೆಯನ್ವಯ ಈ ರೀತಿಯ ನಂಬರ್ ಪ್ಲೀಟ್ ಅನ್ನು ಆನ್ಲೈನ್ ನಲ್ಲಿ ಬುಕ್ ಮಾಡಿ ತಮ್ಮ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲು ಸಾರ್ವಜನಿಕರಿಗೆ 12 ಜೂನ್ 2024 ಕೊನೆಯ ದಿನಾಂಕವಾಗಿದೆ.

HSRP ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಳ್ಳುವುದು ಹೇಗೆ?

ಮೊದಲಿಗೆ ಈ ಕೆಳಗೆ ನೀಡಿವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ನಲ್ಲಿ ನಂಬರ್ ಪ್ಲೇಟ್ ಅನ್ನು ಬುಕ್ ಮಾಡಬೇಕು ನಂತರ ನಂಬರ್ ಪ್ಲೇಟ್ ಬಂದ ಬಳಿಕ ಅಧಿಕೃತ ಶೋ ರೂಮ್ ಭೇಟಿ ಮಾಡಿ ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಳ್ಳಬೇಕು.

ಆನ್ಲೈನ್ ಮೂಲಕ ನಂಬರ್ ಪ್ಲೇಟ್ ಬುಕ್ ಮಾಡುವುದು ಹೇಗೆ?

Step-1: ಮೊದಲಿಗೆ ಈ HSRP number plate booking ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ನಂತರ ಇಲ್ಲಿ ಮುಖಪುಟದಲ್ಲಿ ತೋರಿಸುವ "HSRP ಬುಕಿಂಗ್" ಮೇಲೆ ಕ್ಲಿಕ್ ಮಾಡಿ ಬುಕಿಂಗ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ನಂತರ ನಿಮ್ಮ ಹೆಸರು, ಮೇಲ್, ರಾಜ್ಯ, ವಾಹನ ನೋಂದಣಿ ಸಂಖ್ಯೆ, ಮೊಬೈಲ್ ನಂಬರ್, ಜಿಲ್ಲೆ ಅನ್ನು ಆಯ್ಕೆ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: HSRP ನಂಬರ್ ಪ್ಲೇಟ್ ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ ನಂಬರ್ ಪ್ಲೇಟ್ ಅಳವಡಿಕೆಗೆ ಶುಲ್ಕ ಪಾವತಿ ಮಾಡಬೇಕು.

Step-4: ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ/ ರವಾನಿಸಲಾಗುತ್ತದೆ ಅದನು ಹಾಕಬೇಕು.

ನಂಬರ್ ಪ್ಲೇಟ್ ಅವಳಡಿಕೆ ನಿಗದಿಪಡಿಸಿದ ದಿನಾಂಕದಂದು ಆಯ್ಕೆ ಮಾಡಿದ ಡೀಲರ್ ಶಾಪ್ ಅನ್ನು ಭೇಟಿ ಮಾಡಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು.

ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 45 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, 1.55 ಕೋಟಿ ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ.

1.55 ಕೋಟಿ ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ:

ಪ್ರಸ್ತುತ ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 45 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, 1.55 ಕೋಟಿ ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ ಎಂದು ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಿಲಾಗಿದೆ.