KRCL Recruitment 2024 - ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ!

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಹೊಸ ನೇಮಕಾತಿಗೆ(KRCL Recruitment ) ಐಟಿಐ, ಡಿಪ್ಲೋಮೋ ಮುಗಿಸಿದ ಅರ್ಹ ಅಭ್ಯರ್ಥಿಗಳಿಗೆ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯ ವಿವರವನ್ನು ಇಲ್ಲಿ ನೀಡಲಾಗಿದೆ.

KRCL Recruitment 2024 - ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ!
KRCL Recruitment-2024

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಹೊಸ ನೇಮಕಾತಿಗೆ(KRCL Recruitment ) ಐಟಿಐ, ಡಿಪ್ಲೋಮೋ ಮುಗಿಸಿದ ಅರ್ಹ ಅಭ್ಯರ್ಥಿಗಳಿಗೆ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯ ವಿವರವನ್ನು ಇಲ್ಲಿ ನೀಡಲಾಗಿದೆ.

KRCL Recruitment 2024 - ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕಿರಿಯ ತಾಂತ್ರಿಕ ಸಹಾಯಕ ಹುದ್ದೆಗಳು ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಿರುವ ವಿಳಾಸಕ್ಕೆ ಅಂಚೆ ಮುಖಾಂತರ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಹೆಚ್ಚಿನ ಮಾಹಿತಿಯಾದ ಶೈಕ್ಷಣಿಕ ಅರ್ಹತೆ, ವಯೋಮಿತಿ ಅರ್ಹತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ ವಿವರವನ್ನು ಅಧಿಸೂಚನೆಯಲ್ಲಿರುವಂತೆ ತಿಳಿಸಲಾಗಿದೆ. 

ಇದನ್ನೂ ಓದಿ: District Court Jobs 2024- SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ!

KRCL New Vacancy's Notification (Konkan Railway Corporation Limited) - ನೇಮಕಾತಿ ವಿವರ : 

• ನೇಮಕಾತಿ ಇಲಾಖೆ - ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ 
• ನೇಮಕಾತಿ ಹುದ್ದೆಗಳು - 42 ಹುದ್ದೆಗಳು 
• ಆಯ್ಕೆ ಪ್ರಕ್ರಿಯೆ - ನೇರ ಸಂದರ್ಶನ ಮುಖಾಂತರ

Vacancy Details-ಹುದ್ದೆಗಳ ಮಾಹಿತಿ : 

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 42 ಹುದ್ದೆಗಳ ವಿವರ.
• Sr. Technical Assistant / Electrical - 03 
• Jr. Technical Assistant / Electrical - 15 
• Jr. Technical Assistant / Civil - 04
• Design Assistant / Electrical - 02
• Technical Assistant Electrical - 15
• AEE / Contract - 03 

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!


ಶೈಕ್ಷಣಿಕ ಅರ್ಹತೆಗಳು / Educational Eligibility : 

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಷಯದಲ್ಲಿ ಐಟಿಐ / ಡಿಪ್ಲೋಮಾ / ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ವಯೋಮಿತಿ ಅರ್ಹತೆ - ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿದ್ದು ಗರಿಷ್ಠ 45 ವರ್ಷದ ಒಳಗಿರಬೇಕು.

ಮಾಸಿಕ ಸಂಬಳ / Monthly Salary : ಅಂತಿಮವಾಗಿ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ₹25,500/- ರಿಂದ ₹56,100/- ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ಮಾಹಿತಿ - KRCL Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವಂತಹ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲಾತಿಗಳನ್ನು ಲಗತ್ತಿಸಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಅಂಚೆ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸಬೇಕು ಮತ್ತು ಅರ್ಜಿ ನಮೂನೆಯ ಒಂದು ಸೆಟ್ ಕಾಪಿಯನ್ನು ನೇರ ಸಂದರ್ಶನದ ಸಮಯದಂದು ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ವಿಳಾಸ / Address : 

Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai. 

ನೇರ ಸಂದರ್ಶನ ನಡೆಯುವ ದಿನಾಂಕ : ಹುದ್ದೆಗಳ ಅನುಸಾರ ಬೇರೆ ಬೇರೆ ದಿನಾಂಕದಂದು ನೇರ ಸಂದರ್ಶನ ನಿಗದಿಪಡಿಸಲಾಗಿದ್ದು ಇದು 05 ನೇ ಜೂನ್ 2024ರಿಂದ 21ನೇ ಜೂನ್ 2024ರವರೆಗೆ ನಡೆಯಲಿದೆ. ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿಕೊಳ್ಳಿ.

ಅವಶ್ಯಕ ಲಿಂಕ್ ಗಳು : 

ಅಧಿಕೃತ ಪೋರ್ಟಲ್ : konkanrailway.com

• ಅಧಿಸೂಚನೆ : Download Now

ಇದನ್ನೂ ಓದಿ: Village administrative officer-1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!