KSFES Recruitment 2024-ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 975 ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ!

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಒಟ್ಟು ವಿವಿಧ 975 ಹುದ್ದೆಗಳ ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

KSFES Recruitment 2024-ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 975 ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ!
KSFES Recruitment-2024

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಒಟ್ಟು ವಿವಿಧ 975 ಹುದ್ದೆಗಳ ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

Karnataka State Fire and Emergency Services - ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ 975 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದರ ಸಂಬಂಧ ಈ ಇಲಾಕೆಯ ಮಹಾ ನಿರ್ದೇಶಕರು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ನೇಮಕಾತಿ ಮಂಜೂರು ಮಾಡುವ ಸಂಬಂಧ ಸುತ್ತೋಲೆಯನ್ನು ಕಳಿಸಿದ್ದು, ಶೀಘ್ರದಲ್ಲಿಯೇ ಈ ನೇಮಕಾತಿ ಆರಂಭವಾಗಲಿದೆ. 

ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಯೋನಿವೃತ್ತಿ, ಮರಣ ಹೊಂದಿರುವ ಮತ್ತು 2020ನೇ ಸಾಲಿನ ನೇಮಕಾತಿಯಲ್ಲಿ ನೇಮಕಾತಿ ಹೊಂದದೇ ಉಳಿದ ರಿಕ್ತಸ್ಥಾನಗಳು ಹಾಗೂ ಇನ್ನಿತರೆ ಕಾರಣದಿಂದ ಖಾಲಿಯಾದ ಹುದ್ದೆಗಳು ಮತ್ತು ಹೊಸದಾಗಿ ಪ್ರಾರಂಭಗೊಂಡ ಅಗ್ನಿಶಾಮಕ ಠಾಣೆಗಳಿಗೆ ಸೃಜಿಸಲಾದ ಹುದ್ದೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯವರ ಕೊರತೆ ಉಂಟಾಗಿರುತ್ತವೆ. ಪ್ರಸ್ತುತ ಇಲಾಖೆಯಲ್ಲಿ 2024ರ ಮಾರ್ಚ ತಿಂಗಳ ಅಂತ್ಯಕ್ಕೆ ವಿವಿಧ ವೃಂದದ ಒಟ್ಟು 975 ನೇರ ನೇಮಕಾತಿ ಹುದ್ದೆಗಳು ಖಾಲಿ ಇದ್ದು, ಈ ಖಾಲಿ ಹುದ್ದೆಗಳನ್ನು ಭರ್ತಿಮಾಡುವುದು ಅತ್ಯವಶ್ಯಕವಾಗಿರುತ್ತದೆ.

ಇದನ್ನೂ ಓದಿ: Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!         

ಖಾಲಿ ಹುದ್ದೆಗಳ ವಿವರ - KSFES Recruitment 2024

• ನೇಮಕಾತಿ ಇಲಾಖೆ : ಕರ್ನಾಟಕ ಅಗ್ನಿಶಾಮಕ & ತುರ್ತುಸೇವೆಗಳ ಇಲಾಖೆ 
• ನೇಮಕಾತಿ ಹುದ್ದೆಗಳ ಸಂಖ್ಯೆ : 975
• ಉದ್ಯೋಗ ಸ್ಥಳ : ಕರ್ನಾಟಕ

ನೇಮಕಾತಿ ಹುದ್ದೆಗಳ ವಿವರ : 

• ಅಗ್ನಿಶಾಮಕ ಠಾಣಾಧಿಕಾರಿ - 64 ಹುದ್ದೆಗಳು
• ಚಾಲಕ ತಂತ್ರಜ್ಞ - 27 ಹುದ್ದೆಗಳು
• ಅಗ್ನಿಶಾಮಕ ಚಾಲಕ - 153 ಹುದ್ದೆಗಳು
• ಅಗ್ನಿಶಾಮಕ - 731 ಹುದ್ದೆಗಳು 
 
ಮೇಲ್ಕಂಡ ನೇಮಕಾತಿಗೆ ಸಂಬಂಧಿಸಿದಂತೆ, ಸರ್ಕಾರದ ಅಧಿಸೂಚನೆಯಲ್ಲಿ ಅಧಿಸೂಚಿಸಿರುವಂತೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಕೆಳ ಹಂತದ ನೇರ ನೇಮಕಾತಿ ದ ಮೇಲ್ದರ್ಜೆ ಹುದ್ದೆಗಳಿಗೆ ನೀಡಲಾದ ಪದೋನ್ನತಿ, ವಯೋನಿವೃತ್ತಿ ಮತ್ತು ವಿವಿಧ ಕಾರಣಗಳಿಂದ ಸ್ವಯಂ ಗೂ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದ್ದರಿಂದ, ನೇರ ನೇಮಕಾತಿ ಹುದ್ದೆಗಳು ಖಾಲಿಯಿರುತ್ತವೆ. ರಾಜ್ಯದಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳ ಪ್ರಾರಂಭಿಸಲಾಗಿದ್ದು, ಈ ಠಾಣೆಗಳಿಗೆ ಸೃಜಿಸಲಾದ ಹುದ್ದೆಗಳು ಖಾಲಿಯಿದ್ದು, ಈ ಖಾಲಿಯಿರುವ ಹುದ್ದೆಗಳಿಂದಾಗಿ ಅಗ್ನಿಶಮನ ಹಾಗೂ ರಕ್ಷಣಾ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Monsoon update 2024-ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ! ಇಲ್ಲಿದೆ ಮುಂಗಾರು ಪ್ರವೇಶ ದಿನಾಂಕ!

ಆದ್ದರಿಂದ ಇಲಾಖೆಯಲ್ಲಿ ಖಾಲಿಯಿರುವ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳ ಕೊರತೆಯನ್ನು ಒಟ್ಟಾರೆಯಾಗಿ ಸರಿದೂಗಿಸಲು ನೇರ ನೇಮಕಾತಿ ಮಾಡಿಕೊಳ್ಳುವುದು ಬಹಳ ಅವಶ್ಯಕವಾಗಿದ್ದು, ಅದರಂತೆ ಇಲಾಖೆಗೆ ಮಂಜೂರಾಗಿರುವ, ಭರ್ತಿಯಾಗಿರುವ ಮತ್ತು ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳ ವಿವರ ಕೆಳಕಂಡಂತಿದೆ.

ಈ ನೇಮಕಾತಿಯು ಶೀಘ್ರದಲ್ಲಿ ಆರಂಭವಾಗಲಿದ್ದು, ನೇಮಕಾತಿಗೆ ಸಂಬಂಧಿಸಿದಂತಹ ಮುಂದಿನ ದಿನಗಳ ಅಪ್ಡೇಟ್ಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ.