Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

ರಾಜ್ಯ ಸರಕಾರದಿಂದ ಸದ್ಯ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೀಕರ ಬರಗಾಲದ ಸೂಕ್ತ ನಿರ್ವಹಣೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 324 ಕೋಟಿ ರೂ ಬರ ಪರಿಹಾರವನ್ನು(Karnataka Drought Fund) ಬಿಡುಗಡೆ ಮಾಡಲಾಗಿದೆ.

Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?
Karnataka Drought Fund release

ರಾಜ್ಯ ಸರಕಾರದಿಂದ ಸದ್ಯ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೀಕರ ಬರಗಾಲದ ಸೂಕ್ತ ನಿರ್ವಹಣೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 324 ಕೋಟಿ ರೂ ಬರ ಪರಿಹಾರವನ್ನು(Karnataka Drought Fund) ಬಿಡುಗಡೆ ಮಾಡಲಾಗಿದೆ.

ಬರ ಪರಿಹಾರ ಒದಗಿರುವು ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿಧಿಯಿಂದ (SDRF) 324.00 ಕೋಟಿ ರೂ ಅನ್ನು ಎಲ್ಲಾ ಜಿಲ್ಲೆಗಳಿಗೆ  ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಆರ್ಥಿಕ ಇಲಾಖೆಯು ಆದೇಶವನ್ನು ಹೊರಡಿಸಲಾಗಿದ್ದು. ಸಾಮರ್ಥ್ಯ ವೃದ್ಧಿ, ಬರ ಪರಿಹಾರ ಮತ್ತು ರಕ್ಷಣೆ, ಪುನರ್ ನವೀಕರಣ ಅಡಿಗಳ ಟಿಪ್ಪಣಿ ಅಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

Drought relief fund-ಯಾವ ಜಿಲ್ಲೆಗೆ ಎಷ್ಟು ಹಣ?

ತುಮಕೂರು 1500 ಲಕ್ಷ

ಚಿತ್ರದುರ್ಗ 900 ಲಕ್ಷ

ದಾವಣಗೆರೆ 900 ಲಕ್ಷ

ಚಾಮರಾಜನಗರ 750 ಲಕ್ಷ

ಮೈಸೂರು 1350 ಲಕ್ಷ

ಹಾವೇರಿ 1200 ಲಕ್ಷ

ಧಾರವಾಡ 1200 ಲಕ್ಷ

ಶಿವಮೊಗ್ಗ 1050 ಲಕ್ಷ

ಬೆಂಗಳೂರು ನಗರ 750 ಲಕ್ಷ

ಬೆಂಗಳೂರು ಗ್ರಾಮಾಂತರ 600 ಲಕ್ಷ

ರಾಮನಗರ ‍750 ಲಕ್ಷ

ಕೋಲಾರ 900 ಲಕ್ಷ

ಚಿಕ್ಕಬಳ್ಳಾಪುರ 1200 ಲಕ್ಷ

ಹಾಸನ 1200 ಲಕ್ಷ

ಚಿಕ್ಕಮಗಳೂರು 1200 ಲಕ್ಷ

ಕೊಡಗು 750 ಲಕ್ಷ

ದಕ್ಷಿಣ ಕನ್ನಡ 300 ಲಕ್ಷ

ಉಡುಪಿ 450 ಲಕ್ಷ

ಉತ್ತರ ಕನ್ನಡ ‍1650 ಲಕ್ಷ

ಇದನ್ನೂ ಓದಿ: farm mechanization- ತೋಟಗಾರಿಕೆ ಇಲಾಖೆ ಈ ಯಂತ್ರ ಪಡೆಯಲು 60 % ಸಹಾಯಧನ ನೀಡಲು ಅರ್ಜಿ ಆಹ್ವಾನ!

ಯಾದಗಿರಿ 900 ಲಕ್ಷ

ವಿಜಯನಗರ 900 ಲಕ್ಷ

ಮಂಡ್ಯ ‍1050 ಲಕ್ಷ

ಬಳ್ಳಾರಿ 750 ಲಕ್ಷ

ಕೊಪ್ಪಳ ‍1050 ಲಕ್ಷ

ರಾಯಚೂರು ‍900 ಲಕ್ಷ

ಕಲಬುರ್ಗಿ 1650 ಲಕ್ಷ

ಬೀದರ್ 450 ಲಕ್ಷ

ಬೆಳಗಾವಿ 2250 ಲಕ್ಷ

ಬಾಗಲಕೋಟೆ ‍1350 ಲಕ್ಷ

ವಿಜಯಪುರ 1800 ಲಕ್ಷ

ಗದಗ 1050 ಲಕ್ಷ

ಈ ಬಾರಿಯ ಬರಕ್ಕೆ ರಾಜ್ಯದಲ್ಲಿ 39.74 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ!

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯ ಸರ್ಕಾರ ಒಟ್ಟು 216 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಮಾನ್ಸೂನ್ ಕೊರತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕ ನೀಡಿದ್ದು. ಒಟ್ಟು 39,74,741.34 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದೆ  ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Vehicle subsidy loan: ಈ ಯೋಜನೆಯಡಿ ನಾಲ್ಕು ಚಕ್ರದ ವಾಹನ ಖರೀದಿಗೆ ಸಿಗುತ್ತೆ 3 ಲಕ್ಷ ಸಹಾಯಧನ!

ಬೆಳೆವಾರು ನಷ್ಟದ ವಿವರ:

ಈ ಬಾರಿ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯ!

ಹೌದು ರೈತ ಮಿತ್ರರೇ ಈ ಭಾರಿ ನಿಮಗೆ ಬರದಿಂದ ಉಂಟಾದ ಬೆಳೆ ನಷ್ಟದ ಪರಿಹಾರ ವರ್ಗಾವಣೆ ಅಗಬೇಕಾದರೆ ನಿಮ್ಮ ಜಮೀನಿನ FID ನಂಬರ್ ಅಗಿರುವುದು ಕಡ್ಡಾಯವಾಗಿರುತ್ತದೆ ಜೊತೆಗೆ ನಿಮ್ಮ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗಿರುವುದು ಸಹ ಮುಖ್ಯವಾಗಿದೆ. 

FID ನಂಬರ್ ಪಡೆಯಲು ಮತ್ತು ಬಿಟ್ಟು ಹೋಗಿರುವ ಸರ್ವೆ ನಂಬರ್ ಅನ್ನು ಸೇರ್ಪಡೆ ಮಾಡಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

ಇದನ್ನೂ ಓದಿ: Gruhalakshmi application: ಗೃಹಲಕ್ಷ್ಮಿ ಅರ್ಜಿ ಈ ರೀತಿಯಾದಲ್ಲಿ ನಿಮಗೆ ಹಣ ಬರುವುದಿಲ್ಲ!

FID ನಂಬರ್ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: FID number

Bele parihara status check- ಬೆಳೆ ಮತ್ತು ಆಸ್ತಿ ನಷ್ಟದ ಪರಿಹಾರದ ಹಣ ಜಮಾ ಅಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿ ನೊಡುವ ವಿಧಾನ:

ಈ ಹಿಂದಿನ ವರ್ಷದಲ್ಲಿ ಅತೀಯಾದ ಮಳೆಯಿಂದ ಇತರ ಪ್ರಕೃತಿ ವಿಕೋಪನಿಂದ ನಿಮ್ಮ ಜಮೀನಿನ ಬೆಳೆ ಅಥವಾ ಮನೆ-ಆಸ್ತಿ ನಷ್ಟವಾಗಿ ನಿಮಗೆ ಕಂದಾಯ ಇಲಾಖೆಯಿಂದ ಪರಿಹಾರ ಒದಗಿಸಲು ಅರ್ಜಿ ಸ್ವೀಕರಿಸಿದಲ್ಲಿ ಅಂತಹ ಪ್ರಕರಣಗಳ ಪರಿಹಾರದ ಹಣ ಎಷ್ಟು? ಬಿಡುಗಡೆಯಾಗಿದೆ ಅರ್ಜಿ ಸ್ಥಿತಿಯನ್ನು ಕಂದಾಯ ಇಲಾಖೆಯ Parihara website ಭೇಟಿ ಮಾಡಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಬೆಳೆ ಮತ್ತು ಆಸ್ತಿ ಹಾನಿ ಪರಿಹಾರದ ಅರ್ಜಿ ಸ್ಥಿತಿ ಕುರಿತು ತಿಳಿಯಬವುದಾಗಿದೆ.

ಪರಿಹಾರ ತಂತ್ರಾಂಶದ ಮಾಹಿತಿ ಹೀಗಿದೆ:
 
ಈ ಲಿಂಕ್ https://parihara.karnataka.gov.in/Pariharahome/ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ, ಇಲ್ಲಿ parihara payment ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ ಹಿಂದಿನ 5 ವರ್ಷದಲ್ಲಿ ಎಷ್ಟು ಬೆಳೆ ಪರಿಹಾರ ಜಮಾ ಅಗಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬವುದು.

ಇದನ್ನೂ ಓದಿ: Ganga kalyana application last date-ಗಂಗಾ ಕಲ್ಯಾಣ,ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ 6 ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಗ್ರಾಮ ಮತ್ತು ತಾಲೂಕುವಾರು ಮಾಹಿತಿ ಲಭ್ಯ:

ಪರಿಹಾರ ತಂತ್ರಾಂಶದ ಮುಖಪುಟದಲ್ಲಿ ಕಾಣುವ ಈ Taluk Wise Payment Report, Village Wise Beneficiary Payment Report, Payment Details ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಗ್ರಾಮ ಮತ್ತು ತಾಲೂಕುವಾರು ಮತ್ತು ಫಲಾನುಭವಿ ವಿವರ ಸಹಿತ ಬೆಳೆ ಪರಿಹಾರ ಮಾಹಿತಿಯನ್ನು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನೋಡಬವುದು.