HomeNew postsLand Survey- ನಿಮ್ಮ ಜಮೀನಿನ ಹದ್ದುಬಸ್ತು ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ?

Land Survey- ನಿಮ್ಮ ಜಮೀನಿನ ಹದ್ದುಬಸ್ತು ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ?

ನಿಮ್ಮ ಜಮೀನಿನ ಹದ್ದುಬಸ್ತು(Land Survey) ಮಾಡಿಸಿದಾಗ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದು ಹೇಗೆ? ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಹದ್ದುಬಸ್ತು ಮಾಡಿಸಿದಾಗ ನಮ್ಮ ಜಮೀನು ಪಕ್ಕದವರಿಗೆ ಒತ್ತುವರಿ ಅಗಿದ್ದು ಕಂಡುಬಂದಲ್ಲಿ, ಈ ಕುರಿತು ಸರ್ವೇಯರ್ ಸ್ಕೆಚ್ ಪ್ರತಿ ನೀಡಿದಾಗ ಅದು ಕಾನೂನು ಬದ್ದವಾದ ಅಳತೆಯಾಗಿದೆ ಎಂದು ಕರ್ನಾಟಕ ಲ್ಯಾಂಡ್ ರೆವೆನ್ಯೂ ರೂಲ್ಸ್ 1966 ನಲ್ಲಿ ತಿಳಿಸಲಾಗಿದೆ. ಅದರಿಂದ ಒಬ್ಬ ಸರ್ವೇಯರ್ ಹದ್ದುಬಸ್ತು ಸ್ಕೆಚ್ ಅನ್ನು ಕಾನೂನು ಬದ್ಧವಾಗಿ ನಿಮಗೆ ನೀಡುತ್ತಾನೆ. 

ಹದ್ದುಬಸ್ತು ಅಳತೆ ಮಾಡುವ ಸಂಬರ್ಭದಲ್ಲಿ ಅನೇಕ ಬಾರಿ ಅರ್ಜಿದಾರ ಅಕ್ಕ-ಪಕ್ಕದಲ್ಲಿ ಇರುವ ಜಮೀನುದಾರರಿಗೆ  ನೋಟಿಸು ಕೊಡುವುದಿಲ್ಲ. ಅವರಿಗೆ ನೋಟಿಸು ಕೊಡಲು ಕಾನೂನಾತ್ಮಕವಾಗಿ ಹಣ ಕಟ್ಟಬೇಕಾಗುತ್ತದೆ. ಆದರೆ ಅರ್ಜಿದಾರ ಕೊಟ್ಟ ನೋಟಿಸಿಗೆ ಅವರು ಉತ್ತರ ಕೊಡಬಹುದು ಅಥವಾ ಅಳತೆ ಮಾಡುವಾಗ ಸಹಕರಿಸದೇ ಇರಬಹುದು ಅಥವಾ ಅಳತೆ ಮಾಡಲು ಬರಬಹುದು ಎಂದು ಅವರು ಉತ್ತರ ಕೊಡಬಹುದು. ಆ ರೀತಿ ಪಕ್ಕದ ಜಮೀನಿನವರಿಗೆ ನೋಟಿಸು ಕೊಡದೇ ಜಮೀನು ಅಳತೆ ಮಾಡಿಸಬಾರದು. 

ಇದನ್ನೂ ಓದಿ: Panchayat raj job- 51 ಪಂಚಾಯತ್ ರಾಜ್ ಫೆಲೋಶಿಪ್ ಹುದ್ದೆಗೆ ಅರ್ಜಿ ಆಹ್ವಾನ! ತಿಂಗಳಿಗೆ 61,500/- ವೇತನ.

ಒಂದು ವೇಳೆ ಪಕ್ಕದ ಜಮೀನಿನವರು ನೋಟಿಸು ಪಡೆದುಕೊಂಡು ಬಾರದೇ ಇದ್ದರೆ ಅದು ಅವರ ತಪ್ಪಾಗುತ್ತದೆ. ಹದ್ದುಬಸ್ತು ಸರ್ವೆಯಲ್ಲಿ ಪಕ್ಕದ ಜಮೀನಿನಲ್ಲಿ ಸರ್ವೆ ಅಳತೆ ಮಾಡುವುದಿಲ್ಲ. ಯಾರು ಅರ್ಜಿ ಕೊಟ್ಟಿದ್ದಾರೆಯೋ ಅವರ ಹೆಸರಿನಲ್ಲಿ ಪಹಣಿ ಪತ್ರ ಇರಬೇಕು. ಜಮೀನಿನ ಖಾತೆ ಹೊಂದಿರಬೇಕು. ಅವರ ಜಮೀನಿನ ಗಡಿಯನ್ನು ಟಿಪ್ಪಣಿ ಪ್ರಕಾರದಲ್ಲಿ ಅಥವಾ ಬೇರೆ ವಿಧಾನದಲ್ಲಿ ಸರ್ವೆ ಮಾಡುತ್ತಾರೆ. ಒತ್ತುವರಿಯಾದ ಬಗ್ಗೆ ಸ್ಕೆಚ್ ಕೊಟ್ಟಾಗ ಒತ್ತುವರಿಯನ್ನು ಬಿಡಿಸಿಕೊಡುವ ಅಧಿಕಾರ ಸರ್ವೆಯರಿಗೆ ಇರುವುದಿಲ್ಲ. 

ಸರ್ವೇಯರ್ ಮಾಡಿದ ಸ್ಕೆಚ್ ಸರಿಯಿಲ್ಲ ಎಂದು ಅರ್ಜಿ ಕೊಟ್ಟವನಿಗೆ ಅನಿಸಿದರೆ ಎ.ಡಿ.ಎಲ್.ಆರ್.ಗೆ ಅಪೀಲ್ ಹೋಗಬಹುದು. ಎ.ಡಿ.ಎಲ್. ಆರ್. ದಿಂದ ಡಿ.ಡಿ.ಎಲ್.ಆರ್.ಗೂ ಕೂಡ ಅಪೀಲ್ ಹೋಗಬಹುದು. ಪಕ್ಕದ ಜಮೀನಿನವರು ಒತ್ತುವರಿ ಜಮೀನು ಬಿಟ್ಟು ಕೊಡಲು ಒಪ್ಪದೇ ಇದ್ದಲ್ಲಿ ಸಿವಿಲ್ ಕೋರ್ಟ್ ನಲ್ಲಿ ಇಂಜಕ್ಷನ್ ಅರ್ಜಿ ಸಲ್ಲಿಸಬೇಕು. ಕೋರ್ಟ್ ಮುಖಾಂತರ ಮತ್ತೊಮ್ಮೆ ಸರ್ವೆ ಮಾಡಿಸಬಹುದು. 

ಇದನ್ನೂ ಓದಿ: Parihara list-ಬೆಳೆ ಪರಿಹಾರದ ಹಣ ಜಮಾ ಅಗಿರುವ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!

ಆದರೆ ಕೋರ್ಟ್ ಕೇಸ್ ಗಳು ಸುಲಭದಲ್ಲಿ ಕಡಿಮೆ ಸಮಯದಲ್ಲಿ ಬಗೆಹರಿಸಲು ಸಾಧ್ಯವಿಲ್ಲದೇ ಇರುವುದರಿಂದ ಸಾದ್ಯವಾದಷ್ಟು ಅರ್ಜಿದಾರರು ಹಾಗೂ ಒತ್ತುವರಿದಾರರು ತಮ್ಮ ತಮ್ಮಲ್ಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು.

Land Map- ನಿಮ್ಮ ಜಮೀನಿನ ಮತ್ತು ಗ್ರಾಮದ ನಕ್ಷೆಯನ್ನು ಮೊಬೈಲ್ ನಲ್ಲೇ ಪಡೆಯಬವುದು!

ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ village Map ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿಬೇಕು. ತದನಂತರದಲ್ಲಿ ಇಲ್ಲಿ ನಿಮ್ಮ ಜಿಲ್ಲೆ-ತಾಲ್ಲುಕು-ಹೋಬಳಿ-ಗ್ರಾಮವನ್ನು ಅಯ್ಕೆ ಮಾಡಿಕೊಂಡು “Map Type” ಆಯ್ಕೆಯಲ್ಲಿ “Cadastral Map” ಎಂದು ಕ್ಲಿಕ್ ಮಾಡಿದಾಗ ನಿಮ್ಮ ಹಳ್ಳಿಯ ಗಣಕೀಕೃತ ನಕ್ಷೆ ಡೌನ್ಲೋಡ್ ಅಗುತ್ತದೆ ಇಲ್ಲಿ ನಿಮ್ಮ ಗ್ರಾಮ ಗಡಿ ರೇಖೆ, ಬಂಡಿ ದಾರಿ, ಕಾಲು ದಾರೆ, ಹಳ್ಳ, ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ, ಬಾವಿ, ಬದುಗಳು, ಹೀಗೆಯೆ ಹಲವು ಮಾಹಿತಿಯುಳ್ಳ ನಕ್ಷೆಯನ್ನು ಕೆಲವೆ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು.

ಇದನ್ನೂ ಓದಿ: Swavalambi Yojana application-ಸ್ವಾವಲಂಬಿ ಯೋಜನೆಯಡಿ 1.00 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗಳ ವಿವರ: 

ಕಂದಾಯ ಇಲಾಖೆಯ ಇ-ಸೇವೆಗಳ ಅಧಿಕೃತ ವೆಬ್ಸೈಟ್ ಲಿಂಕ್: Click here
ದೂರವಾಣಿ ಸಂಖ್ಯೆಗಳು: 080-22113255, 8277864065,8277864067, 8277864068

Most Popular

Latest Articles

- Advertisment -

Related Articles