HomeNew postsagriculture land documents- ನಿಮ್ಮ ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ಎಲ್ಲಿ ಪಡೆಯಬೇಕು? ಇಲ್ಲಿದೆ...

agriculture land documents- ನಿಮ್ಮ ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ಎಲ್ಲಿ ಪಡೆಯಬೇಕು? ಇಲ್ಲಿದೆ ಡೌನ್ಲೋಡ್ ಲಿಂಕ್

ಕೃಷಿ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ನಿಮ್ಮ ತಾಲ್ಲೂಕಿನ ಕಂದಾಯ ಇಲಾಖೆ(revenue department) ತಹಶೀಲ್ದಾರ್ ಕಚೇರಿಯ ಭೂಮಾಪನ ಇಲಾಖೆಯ ಮೂಲಕ ನಿರ್ವಹಿಸಲಾಗುತ್ತದೆ. ಯಾವೆಲ್ಲ ದಾಖಲೆಗಳು ಈ ಇಲಾಖೆಯ ಮುಖಾಂತರ ಪಡೆಯಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಭೂಮಾಪನ ಇಲಾಖೆಯಲ್ಲಿ ದೊರೆಯಬಹುದಾದ ಸೇವೆ ಮತ್ತು ದಾಖಲಾತಿಗಳನ್ನು ಪಡೆಯುವ ವಿಧಾನ ದಾಖಲಾತಿಗಳ ನಿರ್ವಹಣೆ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಭೂ ದಾಖಲೆಗಳಿಗೆ(agriculture land documents) ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಯಾವುವೆಂದರೆ ದರಖಾಸ್ತು, ಅಲಿನೇಷನ್, ಭೂಸ್ವಾಧೀನ ಮತ್ತು ಪೋಡಿ ದಾಖಲಾತಿಗಳನ್ನು ಭೂಮಾಪಕರುಗಳು ಅಳತೆ ಮಾಡಿದ ನಂತರ ತಯಾರಿಸಿ ತಹಶೀಲ್ದಾರ್ ರವರು ಧೃಡೀಕರಿಸಿದ ನಕ್ಷೆಗಳು.

ಹದ್ದುಬಸ್ತು ಪ್ರಕರಣಗಳಲ್ಲಿ ಭೂಮಾಪಕರುಗಳು ತಯಾರಿಸಿರುವ ನಕ್ಷೆಗಳ ಪ್ರತಿಗಳು. ಮೂಲಮರುಭೂಮಾಪನ ಮತ್ತು ಮೊದಲನೇ / ಎರಡನೇ ಮರುವರ್ಗೀಕರಣದ ದಾಖಲಾತಿಗಳ ಪ್ರತಿಗಳು. ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ಖರಾಬು ಉತಾರ್ ಪ್ರತಿಗಳು.

ಇದನ್ನೂ ಓದಿ: Agriculture loan: 2024-25 ನೇ ಸಾಲಿಗೆ ನಬಾರ್ಡನಿಂದ 3,97,036,05 ಕೋಟಿ ಕೃಷಿ ಪೂರಕ ಸಾಲ ವಿತರಣೆ ಗುರಿ!

ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಮತ್ತು ಇಲಾಖಾ ಅಧಿಕಾರಿಗಳು ಸಾರ್ವಜನಿಕರಿಗೆ  ನೀಡಿದ ತಿಳುವಳಿಕೆ ಪತ್ರಗಳ ಪ್ರತಿಗಳು.
ಮರುಭೂಮಾಪನ ಟಿಪ್ಪಣಿಯ ಪ್ರತಿಗಳು.

ಹದ್ದುಬಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಗಳು, ಬಾವಿ ಇತರೆ ಚಿಹ್ನೆಗಳನ್ನು ಮೂಡಿಸಿ ತಯಾರಿಸಿರುವ ನಕ್ಷೆಗಳ ಪ್ರತಿಗಳು (ನಿರ್ದಿಷ್ಟ ಕೋರಿಕೆ ಮೇರೆಗೆ).
ಮರುಭೂಮಾಪನ ನಕಾಶೆಯ ಮೂಲಪ್ರತಿ (ಕಚೇರಿಯ ದಾಸ್ತಾನಿನಲ್ಲಿ ಇದ್ದರೆ). ಹಿಸ್ಸಾ ಸರ್ವೆ ಮತ್ತು ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ದಾಖಲಿಸಲಾದ ಹೆಸರುಗಳೊಂದಿಗೆ ಹಿಸ್ಸಾ ಸರ್ವೆಯ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿ, ಹಿಸ್ಸಾ ಸರ್ವೆ / ಮ್ಯುಟೇಷನ್ ಪೋಡಿ ಅಳತೆ ಸಮಯದಲ್ಲಿ ಪಡೆಯಲಾದ ಹೆಸರುಗಳನ್ನೊಳಗೊಂಡಂತೆ (ನಮೂದಿಸಲಾಗಿರುವ ಹೆಸರುಗಳ ಬಗ್ಗೆ ಯಾವುದೇ ಜವಾಬ್ದಾರಿಯಲ್ಲ ಎಂಬ ಸೂಕ್ತ ಷರಾದೊಂದಿಗೆ) ಹಿಸ್ಸಾ ಸರ್ವೆ ದಾಖಲಾತಿಗಳಾದ:

  • ಟಿಪ್ಪಣಿ,
  • ಪಕ್ಕಾ ಮತ್ತು ಅಟ್ಲಾಸುಗಳು.
  • ದರಖಾಸ್ತು,
  • ಅಲಿನೇಷನ್,
  • ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿಗಳು.

ಇದನ್ನೂ ಓದಿ: Voter Id application-2024: ಹೊಸ ವೋಟರ್ ಐಡಿ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

ಭೂಮಾಪಕರು(land records) ಹೊರಡಿಸಲಾಗಿರುವ ಹದ್ದುಬಸ್ತು ಪ್ರಕರಣಗಳ ನಿರ್ಣಯಗಳು ತಹಶೀಲ್ದಾರ್ ಗಳು ಹೊರಡಿಸಿದ ಹದ್ದುಬಸ್ತು ಪ್ರಕರಣಗಳ ಮೇಲ್ಮನವಿ ನಿರ್ಣಯಗಳು.
ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ (ನಗರಮಾಪನ ಅಧಿಕಾರಿಗಳು / ನಗರಮಾಪನ ವಿಚಾರಣಾಧಿಕಾರಿಗಳು) ಕೈಗೊಂಡ ಮೇಲ್ಮನವಿ ತೀರ್ಪುಗಳು.

ನಗರಮಾಪನ ದಾಖಲಾತಿಗಳು :

1) ಪಿ ಆರ್ ಕಾರ್ಡಗಳು.
2) ಪಿ ಟಿ ಶೀಟು ನಕಲುಗಳು
3) ನಗರಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ.
4) ವಿಚಾರಣಾ ವಹಿಯ ನಕಲು.
5) ಸ್ಥಳೀಯ ಕ್ಷೇತ್ರದ ನಕಾಶೆ.
6) ಕ್ಷೇತ್ರ ಅಳತೆ ಪುಸ್ತಕ
7) ಭೂಮಾಪನ / ವಿಚಾರಣೆ ಸಮಯದಲ್ಲಿ ಪಡೆದ ಹೇಳಿಕೆಗಳು.
8) ನಗರಮಾಪನದ ವಿಚಾರಣಾಧಿಕಾರಿಗಳ ಆದೇಶದ ನಕಲು
9) ನಗರಮಾಪನದ ವಿಚಾರಣಾಧಿಕಾರಿಗಳ ತೀರ್ಪುಗಳು.

ಇದನ್ನೂ ಓದಿ: Gruhalakshmi yojana-2024: ಈ ಪಕ್ರಿಯೆ ಪಾಲಿಸಿದರೆ ಮಾತ್ರ ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಅಗಲಿದೆ!

ನಿಮ್ಮ ಜಮೀನಿಗೆ ಸಂಬಂಧಪಟ್ಟ ಸರ್ವೆ ದಾಖಲಾತಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

ರೈತರು ನಿಮ್ಮ ಜಮೀನಿಗೆ ಸಂಬಂಧಪಟ್ಟ ಸರ್ವೆ ದಾಖಲಾತಿಗಳನ್ನು Download Survey documents ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮ್ಯುಟೇಶನ್ (M R ) ಎಂದರೇನು ?

ಮ್ಯುಟೇಶನ್ ಪ್ರಾಪರ್ಟಿಗೆ ಸಂಬಂಧಿಸಿದಂತೆ ವರ್ಗಾವಣೆಯನ್ನು ಅಂದರೆ ಯಾರಿಂದ ಯಾರಿಗೆ ಪ್ರಾಪರ್ಟಿ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ವಿವರಿಸುವ ರೆವೆನ್ಯೂ ದಾಖಲೆಯಾಗಿರುತ್ತದೆ. ಇದು ಗಿಫ್ಟ್, ಸೇಲ್, ವಿಲ್ ಮತ್ತು ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ.

Most Popular

Latest Articles

Related Articles