PMKSY-OI Yojana: ಶೇ.50ರ ಸಹಾಯಧನದಲ್ಲಿ ಡೀಸೆಲ್ ಮತ್ತು ವಿದ್ಯುತ್ ಚಾಲಿತ ನೀರೆತ್ತುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!
2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು(PMKSY-OI) ಎಂಬ ಯೋಜನೆಯಡಿ ರೈತರ ಜಮೀನಿನಲ್ಲಿ ನೂತವಾಗಿ ಕೈಗೊಳ್ಳುವ ಈ ಕೆಳಕಂಡ ಕಾಮಗಾರಿಗಳಿಗೆ ಅಥವಾ ಘಟಕಗಳಿಗೆ ಕೃಷಿ ಇಲಾಖೆವತಿಯಿಂದ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು(PMKSY-OI) ಎಂಬ ಯೋಜನೆಯಡಿ ರೈತರ ಜಮೀನಿನಲ್ಲಿ ನೂತವಾಗಿ ಕೈಗೊಳ್ಳುವ ಈ ಕೆಳಕಂಡ ಕಾಮಗಾರಿಗಳಿಗೆ ಅಥವಾ ಘಟಕಗಳಿಗೆ ಕೃಷಿ ಇಲಾಖೆವತಿಯಿಂದ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿ ಸಮೇತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಕೆಳಗೆ ನಮೂದಿಸಿರುವ ಘಟಕಗಳನ್ನು ಅನುಷ್ಥಾನ ಮಾಡಲು ಅರ್ಥಿಕ ಸಹಾಯಧನವನ್ನು ಪಡೆಯಬವುದು.
PMKSY-OI Yojana- ಯಾವೆಲ್ಲ ಘಟಕಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ:
1. ಕೃಷಿ ಹೊಂಡ – ಶೇ.50ರ ಸಹಾಯಧನ ರೂ.30000 ಮೀರದಂತೆ
2. ಕೊಳವೆ ಬಾವಿ- ಶೇ.50ರ ಸಹಾಯಧನ ರೂ.25000 ಮೀರದಂತೆ
3. ಸಣ್ಣ ಬಾವಿಗಳ ಪುನಶ್ಚೇತನ/ಸಣ್ಣ ಹೊಂಡಗಳ ಪುನಶ್ಚೇತನ- ಶೇ.50ರ ಸಹಾಯಧನ ರೂ.15000 ಮೀರದಂತೆ
4. ಪೈಪುಗಳು- ಶೇ.50ರ ಸಹಾಯಧನ ರೂ.10000 ಮೀರದಂತೆ
5. ಡೀಸೆಲ್/ಸೌರ ಚಾಲಿತ ನೀರೆತ್ತುವ ಯಂತ್ರ - . ಡೀಸೆಲ್ ಮತ್ತು ವಿದ್ಯುತ್ ಚಾಲಿತ ನೀರೆತ್ತುವ ಯಂತ್ರಗಳಿಗೆ ಶೇ.50ರ ಸಹಾಯಧನ ರೂ.15000 ಮೀರದಂತೆ ಹಾಗೂ ಸೌರ ಚಾಲಿತ ನೀರೆತ್ತುವ ಯಂತ್ರಕ್ಕೆ ರೂ.50000 ಮೀರದಂತೆ.
ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.
PMKSY scheme- ರೈತರು ಸಲ್ಲಿಸಬೇಕಾದ ದಾಖಾಲಾತಿಗಳು:
1. ಅರ್ಜಿ ನಮೂನೆ (1)
2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ (1)
3. ಆಧಾರ್ ಜೆರಾಕ್ಸ್ (1)
4. ಹಣ ಸಂಧಾಯ ರಶೀದಿ
5. RTC ಜೆರಾಕ್ಸ್ (1)
ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂರ್ಪಕ ಕೇಂದ್ರಕ್ಕೆ ಭೇಟಿ ಮಾಡವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೃಷಿ ಇಲಾಖೆಯ ಎಲ್ಲಾ ಯೋಜನೆಗಳ ಮಾಹಿತಿಗಾಗಿ:
ಕೃಷಿ ಇಲಾಖೆ ವೆಬ್ಸೈಟ್ ಲಿಂಕ್: Click here
ಇದನ್ನೂ ಓದಿ: PM kisan e-KYC status : ಪಿ ಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ತಿಳಿಯುವುದು ಹೇಗೆ?
karnataka Agriculture department helpline- ರೈತ ಕರೆ ಕೇಂದ್ರ ಸಹಾಯವಾಣಿ ಸಂಖ್ಯೆ: "1800 425 3553"
ಈ ಮೊದಲು ಕೃಷಿ ಇಲಾಖೆಯಿಂದ ಪ್ರತಿ ಒಂದು ವಿಭಾಗಕ್ಕೆ ಒಂದೊಂದು ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪನೆ ಮಾಡಲಾಗಿತ್ತು ಇದರಿಂದ ರೈತರಿಗೆ ಒಂದೇ ವೇದಿಕೆಯಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿರಲ್ಲಿಲ್ಲ ಈ ಸಮಸ್ಯೆಯನ್ನು ಬಗ್ಗೆಯರಿಸಲು ಕಳೆದ ಎರಡು ತಿಂಗಳಿನಿಂದ ಇಲಾಖೆವತಿಯಿಂದ ಏಕೀಕೃತ ಸಹಾಯವಾಣಿಯನ್ನು ಸ್ಥಾಪನೆ ಮಾಡಿದ್ದು ಈ ರೈತ ಕರೆ ಕೇಂದ್ರ ಸಹಾಯವಾಣಿ ಸಂಖ್ಯೆಗೆ: "1800 425 3553" ರೈತರು ಕರೆ ಮಾಡಿ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬವುದಾಗಿದೆ.
ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?