Parihara grants- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!
ಸರಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು(Parihara amount) ಜಿಲ್ಲಾ ಮಟ್ಟಕ್ಕೆ ವರ್ಗಾವಣೆ ಮಾಡಲಾಗಿದ್ದು ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಸರಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು(Parihara amount) ಜಿಲ್ಲಾ ಮಟ್ಟಕ್ಕೆ ವರ್ಗಾವಣೆ ಮಾಡಲಾಗಿದ್ದು ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಮುಂಗಾರು ಕೊರತೆಯಿಂದ ರಾಜ್ಯದಲ್ಲಿ ಈ ಬಾರಿ ಉಂಟಾಗಿರು ತೀರ್ವ ಮಳೆ ಕೊರತೆಯ ಪರಿಣಾಮ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು ರೈತರು ಜಮೀನಿಗೆ ಹಾಕಿರುವ ಬಂಡವಾಳವು ಸಹ ಮರಳಿ ಬಾರದೇ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ ರೈತರಿಗೆ ಅರ್ಥಿಕವಾಗಿ ಬೆಂಬಲ ನೀಡಿ ರೈತರಿಗೆ ಸಹಾಯ ಮಾಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಮುಖ್ಯ ಕರ್ತವ್ಯ ಅದರೆ ಕೇಂದ್ರದಿಂದ ಇನ್ನು ಸಹ NDRF ಮಾರ್ಗಸೂಚಿ ಪ್ರಕಾರ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಹಣ ಜಮಾ ಅಗಿರುವುದಿಲ್ಲ.
ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!
ಇದನ್ನು ಹೊರತುಪಡಿಸಿ ರಾಜ್ಯ ಸರಕಾರವು ಮೊದಲ ಕಂತಿನಲ್ಲಿ ರೂ 2,000 ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಜಿಲ್ಲಾ ಹಂತದಿಂದ ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪ್ರೂಟ್ಸ್ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ವರ್ಗಾವಣೆ ಮಾಡಲಾಗುತ್ತಿದೆ.
District wise parihara amount details- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ:
ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ತಲಾ ರೂ 2,000 ಸಾವಿರ ವರ್ಗಾವಣೆ ಮಾಡಲು ಎಲ್ಲಾ ಜಿಲ್ಲೆಗಳಿಗೆ ಸೇರಿ ಒಟ್ಟು ರೂ 105 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು.
ದಾವಣಗೆರೆ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಾಗಲೇ ರೈತರ ಖಾತೆಗೆ ಮೊದಲ ಕಂತಿನ ರೂ 2,000 ವರ್ಗಾವಣೆ ಮಾಡಲಾಗಿದೆ ಇದರ ವಿವರ ಹೀಗಿದೆ:
1) ದಾವಣಗೆರೆ-14.21 ಕೋಟಿ ಒಟ್ಟು 74,188 ರೈತರು
2) ಮಂಡ್ಯ- 28.89 ಕೋಟಿ ಒಟ್ಟು 140,000 ರೈತರು
3) ಹಾಸನ- 34.36 ಕೋಟಿ ಒಟ್ಟು 1,89,379 ರೈತರು
4) ಚಿಕ್ಕಬಳ್ಳಾಪುರ- 14 ಕೋಟಿ ಒಟ್ಟು 73,100 ರೈತರು
ಇದನ್ನೂ ಓದಿ: Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!
ಉಳಿದ ಜಿಲ್ಲೆಗಳಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಪರಿಹಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಬರಪೀಡಿತ ಎಲ್ಲಾ ತಾಲ್ಲೂಕಿನ ರೈತರಿಗೆ ರೂ 2,000 ಹಣ ತಮ್ಮ ಖಾತೆಗೆ ಜಮಾ ಅಗಲಿದೆ.
ಬರ ಪರಿಹಾರ ಅನುದಾನ ಬಿಡುಗಡೆಯ ಅಧಿಕೃತ ಆದೇಶದ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now
ಬರ ಪರಿಹಾರ ಅರ್ಹರ ಪಟ್ಟಿ:
ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲೀಕರಿಸಿರುವ ರೈತರ ಮಾಹಿತಿಯ ಪ್ರಕಾರ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಜಮಾ ಅಗಲಿದ್ದು ಈ ಪರಿಹಾರದ ಹಣವನ್ನು ಪಡೆಯಲು ಅರ್ಹರಿರುವ ಪಟ್ಟಿಯನ್ನು ಅಧಿಕೃರ ಪ್ರೂಟ್ಸ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು ಈ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ: click here