PM kisan amount: ಪಿ. ಎಮ್ ಕಿಸಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ ವರ್ಗಾವಣೆ!

Pmkisan status check: ಇಂದು ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ 15 ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

PM kisan amount: ಪಿ. ಎಮ್ ಕಿಸಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ ವರ್ಗಾವಣೆ!
Pmkisan status check 2023

ಇಂದು ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ 15 ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಹಣ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲು ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಜಾರ್ಗಂಡ್ ರಾಜ್ಯದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ದೇಶದ 8 ಕೋಟಿ ಅರ್ಹ ಪಿ ಎಂ ಕಿಸಾನ್ ಫಲಾನುಭವಿ ರೈತರ ಖಾತೆಗೆ ಏಕ ಕಾಲಕ್ಕೆ DBT ಮೂಲಕ 15 ನೇ ಕಂತಿನ ತಲಾ ರೂ 2,000 ಗಳನ್ನು ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: Caste income certificate: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

PM kisan 15th installment amount- 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ!

ಒಟ್ಟು ಎಲ್ಲಾ ರೈತರ ಖಾತೆಗೆ 15 ನೇ ಕಂತಿನ ಹಣವನ್ನು ವರ್ಗಾಹಿಸಲು ಕೇಂದ್ರ ಸರಕಾರವು 18,000 ಸಾವಿರ ಕೋಟಿ ವೆಚ್ಚ ಭರಿಸಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಯೋಜನೆಯ ವಿಭಾಗವು ಮಾಹಿತಿ ಹಂಚಿಕೊಂಡಿದೆ.

Pmkisan status check-ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬವುದು.

Step-1: pmkisan status check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ  ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ> pmkisan r "Search By" ಆಯ್ಕೆ ಅರ್ಜಿದಾರರ ಮೊಬೈಲ್/ಆಧಾರ್ ಸಂಖ್ಯೆ ಎರಡರಲ್ಲಿ ಒಂದನ್ನು ಸೆಲೆಕ್ಟ್ ಮಾಡಿಕೊಂಡು ನಂತರ ಅರ್ಜಿದಾರರ ಮೊಬೈಲ್/ಆಧಾರ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚರ್ ಕೋಡ್ ಹಾಕಿ "Get mobile" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

Step-2: ಹೀಗೆ ಮಾಡಿದ ಬಳಿಕ ನಿಮ್ಮ ಮೊಬೈಲ್ ಗೆ 6 ಅಂಕಿಯ OTP ಬರುತ್ತದೆ ಅದನ್ನು ನಮೂದಿಸಿ "Get details" ಬಟನ್ ಮೇಲೆ ಮಾಡಿದರೆ ರಿಜಿಸ್ಟ್ರೇಷನ್ ನಂಬರ್ ಮತ್ತು ಫಲಾನುಭವಿಯ ಹೆಸರು ತೋರಿಸುತ್ತದೆ. ಈ  ರಿಜಿಸ್ಟ್ರೇಷನ್ ನಂಬರ್ ಅನ್ನು ಒಂದು ಕಡೆ ಬರೆದುಕೊಳ್ಳಬೇಕು.

Step-3: ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ pmkisan status "Enter Registration No" ಆಯ್ಕೆಯಲ್ಲಿ ಫಲಾನುಭವಿಯ ರಿಜಿಸ್ಟ್ರೇಷನ್ ನಂಬರ್  ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ನಮೂದಿಸಿ Get data ಬಟನ್ ಮೇಲೆ ಕ್ಲಿಕ್ ಮಾಡಿದರೆ ಪಿ ಎಂ ಕಿಸಾನ್ ಫಲಾನುಭವಿಯ ಸಂಪೂರ್ಣ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Invalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

Step-4: ಈ ಪುಟದ ಕೊನೆಯಲ್ಲಿ ಕಾಣುವ "Latest Installments details" ವಿಭಾಗದಲ್ಲಿ ಕಾಣುವ ಕಂತುಗಳ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬವುದು "FTP processed: Yes" ಎಂದು ತೋರಿಸಿದರೆ ನಿಮಗೆ  ಹಣ ಬಂದಿದೆ ಎಂದು "FTP processed: NO" ಎಂದು ತೋರಿಸಿದರೆ ನಿಮಗೆ  ಹಣ ಬಂದಿಲ್ಲ ಎಂದು.

ಗಮನಿಸಿ: ನಿಮಗೆ ಕೊನೆಯದಾಗಿ ಯಾವ ಕಂತಿನಲ್ಲಿ ಹಣ ಬಂದಿದಿಯೋ ಅದರ ನಂತರದ ಕಂತನ್ನು ಆಯ್ಕೆ ಮಾಡಿ ಉದಾಹರಣೆಗೆ ನಿಮಗೆ ಕಳೆದ ಜುಲೈ ನಲ್ಲಿ 11 ಕಂತಿನ ಹಣ ಬಂದಿದ್ದರೆ 12 ಕಂತನ್ನು ಆಯ್ಕೆ ಮಾಡಿಕೊಳ್ಳಿ.