Poutry farm: ನೀವು ಕೋಳಿ ಫಾರ್ಮ್ ಆರಂಭಿಸಬೇಕೆ? ಇದಕ್ಕೆ ಯಾವೆಲ್ಲ ಅನುಮತಿ ಪಡೆಯಬೇಕು ಇಲ್ಲಿದೆ ಸಂಪೂರ್ಣ ವಿವರ.

ಕೋಳಿ ಸಾಕಾಣಿಕೆಗೆ(poultry farm) ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲ ಅನುಮತಿ ಪಡೆಯಬೇಕು? ಪಡೆಯುವ ವಿಧಾನ ಇತ್ಯಾದಿ ಮಾಹಿತಿಯನ್ನು ವಿವರಿಸಿದ್ದೇವೆ, ಇದರ ಜೊತೆ ಕೋಳಿ ಸಾಕಾಣಿಕೆ ಆರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದ ವಿವರ ಮತ್ತು ಸಬ್ಸಿಡಿ ಯೋಜನೆಗಳ (Poutry farm loan)ಮಾಹಿತಿಯನ್ನು ತಿಳಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದಲ್ಲಿ ಏಕಾತ್ಮಕ ಆದಾಯ ಮೂಲವನ್ನು ನಂಬಿಕೊಳ್ಳದೇ ಕೃಷಿ ಜೊತೆಯಲ್ಲಿ ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆ, ಮೀನುಗಾರಿಕೆ ಹೀಗೆ ಉಪವೃತಿಗಳನ್ನು ಸಹ ಅಳವಡಿಕೆ ಮಾಡಿಕೊಂಡಲ್ಲಿ ರೈತರು ಸುಸ್ಥಿರ ಆದಾಯವನ್ನು ಪಡೆಯಲು ಸಾಧ್ಯ.

ಇಂದು ನಾವು ಈ ಕೆಳಗೆ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆಗೆ(poultry farm) ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲ ಅನುಮತಿ ಪಡೆಯಬೇಕು? ಪಡೆಯುವ ವಿಧಾನ ಇತ್ಯಾದಿ ಮಾಹಿತಿಯನ್ನು ವಿವರಿಸಿದ್ದೇವೆ, ಇದರ ಜೊತೆ ಕೋಳಿ ಸಾಕಾಣಿಕೆ ಆರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದ ವಿವರ ಮತ್ತು ಸಬ್ಸಿಡಿ ಯೋಜನೆಗಳ ಮಾಹಿತಿಯನ್ನು ತಿಳಿಸಲಾಗಿದೆ.

ಪ್ರಶ್ನೆ-1: ಗ್ರಾಮಾಂತರ ಪ್ರದೇಶದಲ್ಲಿ ಕೋಳಿ ಫಾರಂ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯಿಂದ ಕಟ್ಟಡ ಪರವಾನಿಗೆ ನೀಡಲು ಜಮೀನಿನ ಭೂಪರಿವರ್ತನೆ ಅವಶ್ಯಕತೆ ಇದೆಯೇ?

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಪ್ರಕರಣ 2(ಎ)(ಡಿ) ಮತ್ತು ಪ್ರಕರಣ 81 ರಡಿ ಕೋಳಿ ಫಾರಂಗಳು (ಕೋಳಿ ಸಾಕಾಣಿಕೆ) ಕೃಷಿ ಕಸುಬಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶದ ವ್ಯಾಪ್ತಿಗೆ ಒಳಪಡುವ ಕೋಳಿ ಫಾರಂ ಕಟ್ಟಡವನ್ನು ನಿರ್ಮಿಸಲು ಭೂ ಪರಿವರ್ತನೆ ಅಗತ್ಯವಿರುವುದಿಲ್ಲ.

ಪ್ರಶ್ನೆ-2: ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಾದ ಇನ್ನಿತರ ದಾಖಲಾತಿಗಳು ಯಾವುವು?

ಕಟ್ಟಡ ಪರವಾನಿಗೆ ಪಡೆಯಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್.ಓ.ಸಿ, ತಹಶೀಲ್ದಾರ
ರವರಿಂದ ನಿರಾಕ್ಷೇಪಣಾ ಪತ್ರ ಮತ್ತು ಪಹಣಿ ನೀಡಬೇಕಾಗಿರುತ್ತದೆ.

ಪ್ರಶ್ನೆ-3: ಕೋಳಿ ಫಾರಂಗೆ ಸಂಬಂಧಪಟ್ಟಂತೆ ಉದ್ಯಮ ಪರವಾನಿಗೆ ನೀಡುವ ಪ್ರಾಧಿಕಾರ ಯಾವುವು?

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64 ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ವಿಧವಾದ ಕಟ್ಟಡವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅನುಮತಿಯನ್ನು ಪಡೆಯಬೇಕಾಗಿರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಸಂಗೋಪನೆ ಇಲಾಖೆಯ ವಿಧಿಸುವ ಷರತ್ತುಗಳನ್ನು ಪಾಲಿಸುವ ನಿಬಂಧನೆಗೊಳಪಟ್ಟು ಗ್ರಾಮ ಪಂಚಾಯತಿಯ ಪರವಾನಿಗೆ ನೀಡಲು ಸಕ್ಷಮ ಪ್ರಾಧಿಕಾರವಾಗಿರುತ್ತದೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯಡಿ ಹಣ ವರ್ಗಾವಣೆಗೆ ದಿನಾಂಕ ಬದಲಾವಣೆ ಸಾಧ್ಯತೆ | Gruhalakshmi amount release date

ಪ್ರಶ್ನೆ-4: ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹಾಗೂ ಗ್ರಾಮ ಪಂಚಾಯತಿಗೆ ಒದಗಿಸಬೇಕಾದ ದಾಖಲೆಗಳು ಯಾವುವು?

ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಹಶೀಲ್ದಾರ ರವರಿಂದ ನಿರಾಕ್ಷೇಪಣಾ ಪತ್ರ, ಪಹಣಿ, ಕಟ್ಟಡ ಅನುಮತಿ ಪತ್ರ ಮತ್ತು ಕಂದಾಯ ರಶೀದಿ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

National Livestock Mission- ಕೋಳಿ ಸಾಕಾಣಿಕೆಗೆ ಆರಂಭಿಸಲು ಸಬ್ಸಿಡಿ ಯೋಜನೆ(Poutry farm loan schemes):

ಯೋಜನೆ ವರದಿ ತಯಾರಿಕೆ ಆಧಾರದ ಮೇಲೆ ಕೋಳಿ ಸಾಕಾಣಿಕೆಗೆ ಸಾಲ ಮತ್ತು ಸಹಾಯಧನವನ್ನು ಪಡೆಯಬವುದು ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಪಶು ಪಾಸ್ಪಿಟಲ್ ನ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ.

ಕೋಳಿ ಸಾಕಾಣಿಕೆ ಮಾಡಲು ಆಸಕ್ತಿಯಿರುವ ಯುವಕ-ಯುವತಿಯರು AgriClinic or Agri Business(ACABC) ಯೋಜನೆಯಡಿ 2 ತಿಂಗಳ ತರಬೇತಿ ಪಡೆದು ಶೇ 35 ಕ್ಕಿಂತ ಹೆಚ್ಚಿನ ಸಹಾಯಧನದಲ್ಲಿ ಬ್ಯಾಂಕ್ ಸಾಲ ಸಹಿತ ಕೋಳಿ ಸಾಕಾಣಿಕೆಯನ್ನು ಮಾಡಬವುದು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಭೇಟಿ ಮಾಡಿ: https://www.agriclinics.net/

ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಕುರಿತು ತರಬೇತಿ ನೀಡುವ ಕೇಂದ್ರಗಳ ವಿವರ: 

ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ವಿಜಯಪುರ.
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ರಾಯಚೂರು.
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಕೋಲಾರ.                                                                                                                                                                                                                                                    ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ದಕ್ಷಿಣ ಕನ್ನಡ.
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಉತ್ತರ ಕನ್ನಡ.

ಕೋಳಿ ಸಾಕಾಣಿಕೆ ಪಠ್ಯಕ್ರಮ ತಿಳಿಯಲು ಇಲ್ಲಿ ಕ್ಲಿಕ್
https://www.ahvs.kar.nic.in/pdfs/notifications/Training_Mod_POULTRYFARMING.pdf

ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277100200

ಇದನ್ನೂ ಓದಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ 20 ರೂ ಕಟ್ಟಿದರೆ 2 ಲಕ್ಷ ವಿಮಾ ಸೌಲಭ್ಯ | PMSBY Insurance Scheme