Solar pumpset- ಶೇ 80 ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್‌ಸೆಟ್ ಯೋಜನೆ (ಕುಸುಮ್ - ಬಿ)ಯಡಿ(Solar pumpset subsidy yojana) ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

Solar pumpset- ಶೇ 80 ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Solar pumpset application-2024

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್‌ಸೆಟ್ ಯೋಜನೆ (ಕುಸುಮ್ - ಬಿ)ಯಡಿ(Solar pumpset subsidy yojana) ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಆಸಕ್ತಿಯಿರುವ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದ್ದು, ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು ಇತ್ಯಾದಿ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Anganwadi Recruitment 2024 : SSLC ಪಾಸಾದವರಿಗೆ ಅಂಗನವಾಡಿಯಲ್ಲಿ 513 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: Milk Incentive-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?

Solar pumpset subsidy scheme- 40,000 ಸೌರ ಕೃಷಿ ಪಂಪ್‌ಸೆಟ್ ಅಳವಡಿಸುವ ಗುರಿ:

ಸೋಲಾರ್ ಪಂಪ್‌ಸೆಟ್ ಯೋಜನೆ (ಕುಸುಮ್ - ಬಿ) ಅನುಸ್ಥಾನ ಇಲಾಖೆಯಿಂದ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ 40,000 ಸೌರ ಕೃಷಿ ಪಂಪ್‌ಸೆಟ್ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ ಸೋಲಾರ್ ಪಂಪ್ ಸೆಟ್ ಅವಶ್ಯಕತೆ ಇದ್ದವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Solar pumpset subsidy amount- ಎಷ್ಟು ಸಹಾಯಧನ ಪಡೆಯಬಹುದು:

3 ಹೆಚ್.ಪಿ.ಯಿಂದ 10 ಹೆಚ್.ಪಿ. ವರೆಗಿನ ಸಾಮರ್ಥ್ಯದ ತೆರೆದ / ಕೊರೆದ ಬಾವಿಗಳಿಗೆ ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸಹಾಯಧನ ದೊರೆಯುವುದು. ರೈತರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹಾಯಧನವನ್ನು ಶೇಕಡ 30 ರಿಂದ ಶೇಕಡ 50ಕ್ಕೆ ಹೆಚ್ಚಿಸಿದ್ದು. ಕೇಂದ್ರ ಸರ್ಕಾರದಿಂದ ಶೇಕಡ 30 ರಷ್ಟು ಸಹಾಯಧನ ದೊರೆಯಲಿದ್ದು ರೈತರು ಭರಿಸಬೇಕಾಗಿರುವುದು ಕೇವಲ ಶೇಕಡ 20 ರಷ್ಟು ಮಾತ್ರ.

ಇದನ್ನೂ ಓದಿ: Pension status check-ಮಾರ್ಚ-2024 ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಅಂದರೆ ಶೇ 80 ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಅನ್ನು ರೈತರು ಅಳವಡಿಸಿಕೊಳ್ಳಬಹುದು ಉದಾಹರಣೆಗೆ ಹೇಳುವುದಾದರೆ ಒಟ್ಟು ಸೋಲಾರ್ ಅಳವಡಿಸಿಕೊಳ್ಳಲು 1 ಲಕ್ಷ ಖರ್ಚು ಅಯಿತು ಎಂದರೆ ರೈತರು 20,000 ಪಾವತಿ ಮಾಡಬೇಕು ಉಳಿಕೆ ಹಣವನ್ನು ರಾಜ್ಯ ಮತ್ತು ಕೇಂದ್ರ ಸರಕಾರವು ಸಹಾಯಧನದ ರೂಪದಲ್ಲಿ ಪಾವತಿ ಮಾಡುತ್ತವೆ.

How  to apply for Solar pumpset- ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆಸಕ್ತ ಅರ್ಹ ರೈತರು ಈ ಯೋಜನೆಗೆ ಸಂಬಂಧಪಟ್ಟ ಅಧಿಕೃತ ಸೌರಮಿತ್ರ(souramitra.com) ವೆಬ್ಸೈಟ್ ಅನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ವಿವರ ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಸೌರಮಿತ್ರ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಒಂದು ನಿಯಮಗಳ ನೋಟಿಪಿಕೇಶನ್ ತೋರಿಸುತ್ತದೆ ಅದನ್ನು ಸಂಪೂರ್ಣವಾಗಿ ಓದಿಕೊಂಡು close ಬಟನ್ ಮೇಲೆ ಕ್ಲಿಕ್ ಮಾಡಬೇಕು.

 

Step-2: ತದನಂತರ "ನೀವು ಈಗಾಗಲೇ ಅಕ್ರಮ ಸಂಪಕ೯ದ ನೀರಾವರಿ ಪಂಪ್ ಸೆಟ್ ನ ಸಕ್ರಮಕ್ಕಾಗಿ ವಿಸಕಂಗೆ ಹಣ ಪಾವತಿಸಿದ ಗ್ರಾಹಕರೇ?" ಎಂದು ಪ್ರಶ್ನೆ ಕೇಳುತ್ತದೆ ಇದಕ್ಕೆ "ಇಲ್ಲ/No" ಎಂದು ಕ್ಲಿಕ್ ಮಾಡಿ ಅರ್ಜಿದಾರರ ಅಧಾರ್ ವಿವರ ಮತ್ತು ಜಮೀನಿನ ವಿವರ ಇತ್ಯಾದಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ "ಅರ್ಜಿಯನ್ನು ಸಲ್ಲಿಸಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: PDO job notification-2024: 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅಧಿಸೂಚನೆ ವಿವರ.

ರೈತರುಗಳಿಗೆ ಈ ಕೆಳಕಂಡ ಆದ್ಯತೆಗಳ ಮೇರೆಗೆ ಸೌರ ಕೃಷಿ ಪಂಪ್‌ ಸೆಟ್ ಗಳನ್ನು ಅಳವಡಿಸಲಾಗುತ್ತದೆ:

ಆದ್ಯತೆ – 1: ರೈತರು ಈಗಾಗಲೇ ಅನಧಿಕೃತ ಪಂಪ್‌ ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿಯಲ್ಲಿ ರೂ. 10,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಮೊದಲ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ಆದ್ಯತೆ – 2: ರೈತರು ಈಗಾಗಲೇ ಅನಧಿಕೃತ ಪಂಪ್‌ ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿಯಲ್ಲಿ ರೂ. 50/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಎರಡನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ಆದ್ಯತೆ – 3: ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರವಿದ್ದು ಮತ್ತು ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ಮೂರನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ಇದನ್ನೂ ಓದಿ: BBMP job notification- ಬಿ.ಬಿ.ಎಂ.ಪಿಯಿಂದ 11,307 "ಡಿ ಗ್ರೂಪ್ ಪೌರಕಾರ್ಮಿಕರ" ಭರ್ತಿಗೆ ಅರ್ಜಿ ಆಹ್ವಾನ!

ಆದ್ಯತೆ – 4: ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಒಳಗಿದ್ದು ಮತ್ತು ಹಾಗೂ ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ನಾಲ್ಕನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ವಿಶೇಷ ಸೂಚನೆ : ಕುಟುಂಬಕ್ಕೆ ಒಂದು ಸೌರ ಕೃಷಿ ಪಂಪ್‌ ಸೆಟ್‌ ಸೀಮಿತಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:

ಅರ್ಜಿ ಸಲ್ಲಿಸಲು ಲಿಂಕ್: Apply Now
ಸಹಾಯವಾಣಿ: 080-22202100
ಮೇಲ್ ವಿಳಾಸ: souramitragok@gmail.com