UPSC NDA/NA Recruitment-2024: ರಕ್ಷಣಾ ಪಡೆಗಳಲ್ಲಿ 2nd PUC ಪಾಸಾದವರಿಗೆ 404 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ!

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಈಗಷ್ಟೇ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಇಂಡಿಯನ್ ಆರ್ಮಿ, ನೌಕಾಪಡೆ ಹಾಗೂ ವಾಯುಪಡೆಗಳ ಕೋರ್ಸ್(UPSC NDA/NA Recruitment ) ನೀಡಲು 404 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

UPSC NDA/NA Recruitment-2024: ರಕ್ಷಣಾ ಪಡೆಗಳಲ್ಲಿ 2nd PUC ಪಾಸಾದವರಿಗೆ 404 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ!
UPSC NDA/NA Recruitment-2024

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಈಗಷ್ಟೇ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಇಂಡಿಯನ್ ಆರ್ಮಿ, ನೌಕಾಪಡೆ ಹಾಗೂ ವಾಯುಪಡೆಗಳ ಕೋರ್ಸ್(UPSC NDA/NA Recruitment ) ನೀಡಲು 404 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಆಯ್ಕೆಯಾದ ಅಭ್ಯರ್ಥಿಗಳಿಗೆ ರಕ್ಷಣಾ ಪಡೆಯಲ್ಲಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಮುಖಾಂತರ ಅರ್ಜಿ ಸಲ್ಲಿಸಲು ಜೂನ್ 4 ಕೊನೆಯ ದಿನಾಂಕ ವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸಿ, ಮುಖಾಂತರ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು. ಆನ್ಲೈನ್ ಪರೀಕ್ಷೆಯು ರಾಜ್ಯದ ಮೈಸೂರು ಧಾರವಾಡ ಬೆಂಗಳೂರುನ ಕೇಂದ್ರಗಳಲ್ಲಿಯೂ ಇರಲಿದೆ.

ಇದನ್ನೂ ಓದಿ: Land survey chian- ನಿಮ್ಮ ಜಮೀನಿನ ಸರ್ವೆ ಮಾಡಲು ಬಳಕೆ ಮಾಡುವ ಚೈನಿನ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?

UPSC NDA/NA Recruitment 2024 - ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿ ಸೇರಿ 404 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಸ್ಥಾನಗಳ ವಿಂಗಡಣೆ ಈ ಕೆಳಗಿನಂತಿದೆ:

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ (NDA)ಒಟ್ಟು 370 ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ರಕ್ಷಣಾ ಪಡೆಗಳಲ್ಲಿ ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ.
• ಭೂಸೇನೆಯಲ್ಲಿ - 208 ಸ್ಥಾನಗಳು
• ನೌಕಾಪಡೆಯಲ್ಲಿ - 42 ಸ್ಥಾನಗಳು
• ವಾಯುಪಡೆಯಲ್ಲಿ - 120 ಸ್ಥಾನಗಳು 
ಹಾಗೂ ನೇವಲ್ ಅಕಾಡೆಮಿಗೆ 34 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Educational Qualification-ಅರ್ಹತೆಗಳೇನಿರಬೇಕು? 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳಲ್ಲಿ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅವಿವಾಹಿತ (Unmarried) ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ದ್ವಿತೀಯ ಪಿಯುಸಿ ಪಾಸಾದವರನ್ನು ಹೊರತುಪಡಿಸಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಇದನ್ನೂ ಓದಿ: Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!         

Age limit-ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 2006 ಜನವರಿ 2 ರಿಂದ 2009 ಜನವರಿ 1ರ ಅವಧಿಯಲ್ಲಿ ಜನಿಸಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಒಂದು ನೇಮಕಾತಿಯಲ್ಲಿ ವಯೋಮಿತಿಯಲ್ಲಿ ಯಾವುದೇ ರೀತಿಯ ವಯೋಮಿತಿ ಸಡಲಿಕೆ ಅನ್ವಯವಾಗುವುದಿಲ್ಲ.

ವಿಶೇಷತೆಗಳು: ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾದಲ್ಲಿ ಕೆಲಸದೊಂದಿಗೆ ಬಿ. ಎಸ್ಸಿ, ಬಿ. ಟೆಕ್ ಪದವಿಗಳನ್ನು ಕೂಡ ಮಾಡುವ ಅವಕಾಶವಿರುತ್ತದೆ. 2022ರ ಸುಪ್ರೀಂ ಕೋರ್ಟ್ ಆದೇಶ ಅನ್ವಯ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯೊಂದಿಗೆ ₹56,100 ಸ್ಟೈಪೆಂಡ್ ಕೂಡ ನೀಡಲಾಗುತ್ತದೆ. 

Application fees-ಅರ್ಜಿ ಶುಲ್ಕ: 

SC, ST, ಮಹಿಳಾ ಅಭ್ಯರ್ಥಿಗಳು ಮತ್ತು ಸೇನೆಯ ಅಧಿಕಾರಿಗಳ ಪುತ್ರರಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 100ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 4, 2024. ಅರ್ಜಿ ತಿದ್ದುಪಡಿಗೆ ಜೂನ್ 5 ರಿಂದ 11 ನೇ ತಾರೀಖಿನವರೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Monsoon update 2024-ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ! ಇಲ್ಲಿದೆ ಮುಂಗಾರು ಪ್ರವೇಶ ದಿನಾಂಕ!

Important dates-ಅರ್ಜಿ ಸಲ್ಲಿಸಲು ಅವಶ್ಯಕ ಲಿಂಕ್ ಗಳು : 

• ಅರ್ಜಿ ಸಲ್ಲಿಸುವ ಲಿಂಕ್ : Click here
• ಸಹಾಯವಾಣಿ : 011-23385271
• ಅಧಿಸೂಚನೆ : Download Now