Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

April 16, 2025 | Siddesh
Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
Share Now:

ರೈತರು ತಮ್ಮ ಜಮೀನಿನ ಮೇಲೆ ಕೃಷಿ ಸಾಲವನ್ನು(Agriculture Loan) ಪಡೆಯಲು ಅಗತ್ಯವಾಗಿ ಹೊಂದಿರಬೇಕಾದ ದಾಖಲೆಯಲ್ಲಿ(FID Number) ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕವಾಗಿ ನೆರವು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು(Krishi Sala) ಪ್ರತಿ ವರ್ಷ ಅರ್ಹ ರೈತರಿಗೆ ವಿತರಣೆ ಮಾಡಲಾಗುತ್ತದೆ ಇದಕ್ಕಾಗಿ ರೈತರು ಕೆಲವು ಅಗತ್ಯ ದಾಖಲಾತಿಗಳನ್ನು ತಾವು ಸಾಲ ತೆಗೆದುಕೊಳ್ಳುವ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Agniveer recruitment-8ನೇ ತರಗತಿ ಪಾಸಾದವರಿಗೆ ಅಗ್ನಿವೀರ್ ನೇಮಕಾತಿಗಾಗಿ ಅರ್ಜಿ ಆಹ್ವಾನ!

ಕೃಷಿಕರು ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ಹಿಂದಿನ ವರ್ಷದ ಸಾಲವನ್ನು ಮರು ಪಾವತಿ ಮಾಡಿ ತದನಂತರ ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಮತ್ತೊಮ್ಮೆ ಹೊಸದಾಗಿ ಬೆಳೆ ಸಾಲ(Crop Loan) ಪಡೆಯಬಹುದಾಗಿದೆ ಇದಕ್ಕಾಗಿ ಎಲ್ಲ ರೈತರು FID ಸಂಖ್ಯೆಯನ್ನು ಮತ್ತು FID ಅಲ್ಲಿ ತಮ್ಮ ಜಮೀನಿನ ಎಲ್ಲ ಸರ್ವೆ ನಂಬರ್ ಅನ್ನು ಸೇರ್ಪಡೆ ಮಾಡಿಕೊಂಡಿರುವುದು ಕಡ್ಡಾಯವಾಗಿದೆ.

ಏನಿದು FID ನಂಬರ್? FID ನಂಬರ್ ನಲ್ಲಿ ಜಮೀನಿನ ಎಲ್ಲ ಸರ್ವೆ ನಂಬರ್ ಗಳನ್ನು ದಾಖಲಿಸುವುದು ಹೇಗೆ? ರೈತರು FID ಸಂಖ್ಯೆಯನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Scholarship-SSLC ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ 15,000/- ಪ್ರೋತ್ಸಾಹ ಧನ!

Crop Loan Application-ಬೆಳೆ ಸಾಲ ಪಡೆಯಲು FID ನಂಬರ್ ಕಡ್ಡಾಯ:

ರೈತರು ಬ್ಯಾಂಕ್ ಗಳಲ್ಲಿ ತಮ್ಮ ಜಮೀನಿನ ಮೇಲೆ ಬೆಳೆ ಸಾಲವನ್ನು ಪಡೆಯಲು ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ಜಮೀನಿನ ಸರ್ವೆ ನಂಬರ್ ವಿವರ ಮತ್ತು ರೈತರ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆ ವಿವರವನ್ನು ದಾಖಲಿಸಿ FID ನಂಬರ್ ಅನ್ನು ಪಡೆದುಕೊಳ್ಳುವುದು ಕಡ್ದಾಯವಾಗಿದೆ.

ಬಹುತೇಕ ಎಲ್ಲ ರೈತರ FID ನಂಬರ್ ಸೃಜನೆ, ಸರ್ವೆ ನಂಬರ್ ಸೇರ್ಪಡೆ ಮಾತ್ರ ಬಾಕಿ:

ಕೃಷಿ ಇಲಾಖೆಯಿಂದ ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿ ರೈತರ ನೋಂದಣಿಯನ್ನು ಮಾಡಿಕೊಳ್ಳುವ ಸಮಯದಲ್ಲಿ ಶೇ 85% ರೈತರ FID ಅನ್ನು ರಚನೆ ಮಾಡಲಾಗಿದ್ದು ಅದರೆ ಕೆಲವು ರೈತರ ಪ್ರೂಟ್ಸ್ ಐಡಿಯಲ್ಲಿ ಅವರು ಎಲ್ಲ ಸರ್ವೆ ನಂಬರ್ ಅನ್ನು ದಾಖಲಿಸಿರುವುದಿಲ್ಲ. ಅದಕ್ಕಾಗಿ ರೈತರು ತಮ್ಮ ಎಲ್ಲ ಜಮೀನಿನ ಸರ್ವೆ ನಂಬರ್ ಅನ್ನು ದಾಖಲಿಸಲು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ದಾಖಲಿಸಬಹುದು.

ಇದನ್ನೂ ಓದಿ: Car Subsidy Yojane-ಆಟೋ ಮತ್ತು ಕಾರು ಖರೀದಿಸಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Agriculture Loan

ಇದನ್ನೂ ಓದಿ: Car Subsidy Yojane-ಆಟೋ ಮತ್ತು ಕಾರು ಖರೀದಿಸಲು ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Agriculture Loan-ಕೃಷಿ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ:

ರೈತರು ವ್ಯವಸಾಯ ಸೇವ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಬೆಳೆ ಸಾಲವನ್ನು ಪಡೆಯಲು ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಎಲ್ಲ ಪಹಣಿಗಳನ್ನು ಮತ್ತು ವೈಯಕ್ತಿಕ ವಿವರವನ್ನು ಸಲ್ಲಿಸಿ FID ನಂಬರ್ ಅನ್ನು ಪಡೆದುಕೊಳ್ಳಬೇಕು.

ಒಂದೊಮ್ಮೆ FID ನಂಬರ್ ರಚನೆಯಾಗಿ ಕೆಲವೊಂದು ಸರ್ವೆ ನಂಬರ್ ಗಳು ಈ ಸಂಖ್ಯೆಯಲ್ಲಿ ದಾಖಲಾಗದೇ ಇದ್ದಲ್ಲಿ ಸಹ ಬೆಳೆ ಸಾಲ ಪಡೆಯಲು ತಾಂತ್ರಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಅದ್ದರಿಂದ ರೈತರು ತಮ್ಮ ಎಲ್ಲ ಸರ್ವೆ ನಂಬರ್ ಗಳನ್ನು FID ಅಲ್ಲಿ ಸೇರ್ಪಡೆ ಮಾಡಿಟ್ಟುಕೊಳ್ಳಬೇಕು.

ಇದನ್ನೂ ಓದಿ: Rain Forecast-ಕರ್ನಾಟಕ ಮಳೆ ಮುನ್ಸೂಚನೆ! ಜಿಲ್ಲಾವಾರು ತಾಪಮಾನ ಎಷ್ಟಿದೆ?

Required documents for FID Number- FID ನಂಬರ್ ಪಡೆಯಲು ಅಗತ್ಯ ದಾಖಲಾತಿಗಳು:

1) ಅರ್ಜಿದಾರ ರೈತರ ಆಧಾರ್ ಕಾರ್ಡ ಪ್ರತಿ/Aadhar Card
2) ಪೋಟೋ/Photo
3) ಎಲ್ಲ ಜಮೀನಿನ ಪಹಣಿ/RTC/ಊತಾರ್
4) ಪಾನ್ ಕಾರ್ಡ/Pan
5) ರೇಷನ್ ಕಾರ್ಡ್ ಪ್ರತಿ

ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಮಾಹಿತಿ ಸರಿಪಡಿಸಿಕೊಳ್ಳಬಹುದು:

ರೈತರು ಪ್ರೂಟ್ಸ್ ತಂತ್ರಾಂಶದಲ್ಲಿನ FID ಸಂಖ್ಯೆಯ ರಚನೆ ಮತ್ತು ಹೆಚ್ಚುವರಿ ಮತ್ತು ಬಿಟ್ಟು ಹೊಂದ ಜಮೀನಿನ ಸರ್ವೆ ನಂಬರ್ ಅನ್ನು ಸೇರ್ಪಡೆ ಮಾಡಿಕೊಳ್ಳಲು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲಾತಿಯ ಸಮೇತ ಭೇಟಿ ಮಾಡಿ ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

FID Status- ಈಗಾಗಲೇ FID ನಂಬರ್ ರಚನೆ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ಈಗಾಗಲೇ ತಮ್ಮ ಹೆಸರಿಗೆ FID ನಂಬರ್ ಅಗಿದಿಯೋ? ಇಲ್ಲವೋ? ಎಂದು ಕೃಷಿ ಇಲಾಖೆಯ ಅಧಿಕೃತ ಪ್ರೂಟ್ಸ್ ತಂತ್ರಾಂಶವನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದಾಗಿದೆ.

Step-1: ಮೊದಲಿಗೆ FID Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪ್ರೂಟ್ಸ್ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Crop Loan

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ FID ನಂಬರ್ ರಚನೆ ಅಗಿದ್ದರೆ ಇದರ ವಿವರ ಇಲ್ಲಿ ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: