Bele Parihara-2025-ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್!

August 29, 2025 | Siddesh
Bele Parihara-2025-ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್!
Share Now:

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅತ್ಯಧಿಕ ಮಳೆಯಿಂದ(Bele hani Parihara) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಮತ್ತು ಮನೆ ಹಾನಿ ಅಗಿರುವ ಅರ್ಹ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆಯ ಸಭೆಯಲ್ಲಿ ಅಧಿಕಾರಿಗಳಿಗೆ ಪರಿಹಾರ ಬಿಡುಗಡೆ ಕುರಿತು ಸೂಚನೆಯನ್ನು ನೀಡಿದ್ದು ಇದರ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗುವ ಬೆಳೆ ಮತ್ತು ಮನೆ ಹಾನಿಗೆ(Bele Parihara Amount) ರಾಜ್ಯ ಕಂದಾಯ ಇಲಾಖೆಯಿಂದ NDRF ಮಾರ್ಗಸೂಚಿಯನ್ವಯ ಅರ್ಹ ಅರ್ಜಿದಾರರಿಂದ ಅರ್ಜಿಯನ್ನು ಸಂಗ್ರಹಣೆ ಮಾಡಿ ಪರಿಹಾರ ತಂತ್ರಾಂಶದಲ್ಲಿ ಹೆಸರನ್ನು ನೋಂದಣಿ ಮಾಡಿ ಹಾನಿಗೆ ಪರಿಹಾರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಇದೆ ಮಾದರಿಯಲ್ಲಿ ಈ ಬಾರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಿಂದ ಮನೆ ಮತ್ತು ರೈತರ ಬೆಳೆ ನಷ್ಟವಾಗಿದ್ದು ಪರಿಹಾರವನ್ನು ವಿತರಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಈ ದಾಖಲೆ ಕಡ್ಡಾಯ!

ಮಂಗಳವಾರ ಹಾಸನ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ(Kandaya Ilake) ಸಚಿವ ಕೃಷ್ಣ ಬೈರೇಗೌಡ(Krishna Byregowda) ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರೀಶಿಲನಾ ಸಭೆಯ ಬಳಿಕ ವಿಡಿಯೋ ಕಾನ್ಫರೆನ್ಸ್(VC) ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರ ಸಭೆಯಯಲ್ಲಿ ಬೆಳೆ ಹಾನಿ ಪರಿಹಾರ(Bele Hani) ಹಣ ಬಿಡುಗಡೆ ಕುರಿತು ಇಲಾಖೆಯ ಅಧಿಕಾರಿಗಳಿಗೆ ಸಚಿವರ ಸೂಕ್ತ ನಿರ್ದೇಶನವನ್ನು ನೀಡಿದರು.

Parihara Amount Details-ಚಿತ್ರದುರ್ಗ ಮತ್ತು ಬೀದರ್ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೆಚ್ಚು ಮಳೆ:

2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಚಿತ್ರದುರ್ಗ ಮತ್ತು ಬೀದರ್ ಹೊರತುಪಡಿಸಿ ಬಾಕಿ ಉಳಿದ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಂದಿರುತ್ತದೆ.

ಜೊತೆಗೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದು, ಅಧಿಕ ಮಳೆಯಿಂದ ಕೆಲವು ಜಿಲ್ಲೆಗಳಲ್ಲಿ ರೈತರ ಬೆಳೆ ಮತ್ತು ನಾಗರಿಕರ ಮನೆಗಳು ಹಾನಿಯಾಗಿರುವುದು ದಾಖಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Drone Pilot Training-ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!

Bele Parihara Samikshe-ಇಲಾಖೆಯಿಂದ ಜಂಟಿ ಸಮೀಕ್ಷೆ:

ಅತೀಯಾದ ಮಳೆಯಿಂದ ಹಾನಿಯಾಗಿರುವ ರೈತ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಈಗಾಗಲೇ ಸಮೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾಹಿತಿಯನ್ನು ಸಚಿವರಿಗೆ ತಿಳಿಸಿದ್ದಾರೆ ಶೀಘ್ರದಲ್ಲೇ ಹಾನಿಯಾದ ಬೆಳೆ ವಿಸ್ತೀರ್ಣದ ಒಟ್ಟಾರೆ ಅಂಕಿ-ಅಂಶದ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ಮನೆ ಹಾನಿಯದ ಸಾರ್ವಜನಿಕರ ಅಧಿಕೃತ ಮಾಹಿತಿಯನ್ನು ಸಂಗ್ರಹಿಸಿ ಜೊತೆಗೆ ಸ್ಥಳ ಭೇಟಿ ಮಾಡಿ ಸಮೀಕ್ಷೆಯನ್ನು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: Vamshavruksha Certificate-ವಂಶವೃಕ್ಷ ದೃಢೀಕರಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

Bele Parihara

ಇದನ್ನೂ ಓದಿ: Scholarship Application-TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!

Crop Loss Amount-ಶೀಘ್ರದಲ್ಲಿ ಪರಿಹಾರ ಬಿಡುಗಡೆ ಕ್ರಮ:

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ವಿವಿಧ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ವಿವರವನ್ನು ಮತ್ತು ರೈತರ ಅರ್ಜಿಗಳನ್ನು ಕೂಡಲೇ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಸೂಚಿಸಿದ್ದು ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಲು ಸೂಕ್ತ ನಿರ್ದೇಶನ ನೀಡಿದರು.

Bele Parihara Application-ಬೆಳೆ ಹಾನಿಯಾದ ರೈತರು ಕೂಡಲೇ ಅರ್ಜಿ ಸಲ್ಲಿಸಿ:

ಅತೀಯಾದ ಮಳೆಯಿಂದ ಬೆಳೆ ಹಾನಿ ಅಗಿರುವ ರೈತರು ಕೂಡಲೇ ನಿಮ್ಮ ಹೋಳಿಯ ರೈತ ಸಂಪರ್ಕ ಕೇಂದ್ರ ಅಥವಾ ನಿಮ್ಮ ಹಳ್ಳಿಯ ಗ್ರಾಮ ಚಾವಡಿ(ಕಂದಾಯ ಇಲಾಖೆ)ಕಚೇರಿಯನ್ನು ನೇರವಾಗಿ ಅಗತ್ಯ ದಾಖಲಾತಿಗಳಾದೆ ಆಧಾರ್ ಕಾರ್ಡ,ಹಾನಿಯಾದ ಜಮೀನಿನ ಪಹಣ,ಬ್ಯಾಂಕ್ ಪಾಸ್ ಬುಕ್ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Cotton MSP Price-ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ!

Crop Loss Parihara Website-ಬೆಳೆ ಹಾನಿ ಪರಿಹಾರ ವಿತರಣೆಗೆ ಡಿಜಿಟಲ್ ತಂತ್ರಾಂಶ:

ಒಮ್ಮೆ ಬೆಳೆ ಹಾನಿಯಾದ ರೈತರು ಅಗತ್ಯ ದಾಖಲೆಗಳ ಸಮೇತ ಇಲಾಖೆಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಈ ವಿವರವನ್ನು "Parihara" ತಂತ್ರಾಂಶದಲ್ಲಿ ಕಂದಾಯ ಇಲಾಖೆಯ ನಿಮ್ಮ ಹಳ್ಳಿಯ ಗ್ರಾಮ ಆಡಳಿತಾಧಿಕಾರಿಗಳು ಆನ್ಲೈನ್ ನಲ್ಲಿ ನಿಮ್ಮ ವಿವರವನ್ನು ತಂತ್ರಾಂಶದಲ್ಲಿ ದಾಖಲಿಸುತ್ತಾರೆ ಬಳಿಕ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಅದ ತಕ್ಷಣ ನೆರವಾಗಿ ಅರ್ಹ ಫಲಾನುಭವಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

Bele Parihara Status Check-ಪರಿಹಾರದ ಹಣ ಬಿಡುಗಡೆ ಅಗಿರುವುದನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ:

ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ ರೈತರು ಪರಿಹಾರದ ಹಣ ಬಂದಿರುವುದನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಎರಡು ವಿಧಾನವನ್ನು ಅನುಸರಿಸಿ ಜಮಾ ವಿವರವನ್ನು ತಿಳಿಯಬಹುದು.

ಇದನ್ನೂ ಓದಿ: Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!

ವಿಧಾನ-1: Parihara ತಂತ್ರಾಂಶ ಭೇಟಿ ಮಾಡಿ:

Step-1: ರೈತರು ಮೊದಲಿಗೆ "Bele Parihara Status Check" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪರಿಹಾರ ತಂತ್ರಾಂಶವನ್ನು ಪ್ರವೇಶ ಮಾಡಿ.

parihara

Step-2: ನಂತರ ಇಲ್ಲಿ "ಆಧಾರ್ ಸಂಖ್ಯೆ/Aadhar Number" ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು "Calamity Type-Flood" ಮತ್ತು "Year" ಅನ್ನು ಆಯ್ಕೆ ಮಾಡಿ.

Step-3: ನಂತರ ಕೆಳಗೆ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "ವಿವರಗಳನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಬೆಳೆ ಹಾನಿ ಪರಿಹಾರದ ಅರ್ಜಿಯ ಸ್ಥಿತಿ ಜೊತೆಗೆ ಪರಿಹಾರದ ಹಣ ಬಿಡುಗಡೆ ವಿವರ ಕಾಣಿಸುತ್ತದೆ.

ವಿಧಾನ-1: DBT Karnataka ಆಪ್ಲಿಕೇಶನ್ ಮೂಲಕ:

ರೈತರು "DBT Karnataka App" ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಈ ಅಪ್ಲಿಕೇಶನ್ ಗೆ ಲಾಗಿನ್ ಅಗಬೇಕು ಬಳಿಕ ಇಲ್ಲಿ "ಬೆಳೆ ನಷ್ಟ ಪರಿಹಾರ" ಬಟನ್ ಮೇಲೆ ಕ್ಲಿಕ್ ಮಾಡಿ ಬೆಳೆ ಪರಿಹಾರ ಜಮಾ ವಿವರವನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: