Crop survey app-2024: ಈ ಸಮೀಕ್ಷೆಯನ್ನು ಮಾಡದಿದ್ದರೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ!

July 3, 2024 | Siddesh
Crop survey app-2024: ಈ ಸಮೀಕ್ಷೆಯನ್ನು ಮಾಡದಿದ್ದರೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ!
Share Now:

ರಾಜ್ಯ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆ ವಿವರವನ್ನು ಪಹಣಿಯಲ್ಲಿ ದಾಖಲಿಸಲು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್(Crop Survey mobile application) ಅನ್ನು ಬಿಡುಗಡೆ ಮಾಡಲಾಗಿದೆ

ಈ ಬೆಳೆ ಸಮೀಕ್ಷೆಯನ್ನು ಮಾಡದಿದ್ದರೆ ರೈತರಿಗೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ ಅದ್ದರಿಂದ ರೈತರು ಪ್ರತಿ ವರ್ಷ ಮುಂಗಾರು,ಹಿಂಗಾರು,ಬೇಸಿಗೆ ಹಂಗಾಮಿನಲ್ಲಿ ಈ ಸಮೀಕ್ಷೆಯ ಕುರಿತು ತಿಳಿದುಕೊಂಡು ತಪ್ಪದೇ ಸಮೀಕ್ಷೆಯನ್ನು ಮಾಡಬೇಕು. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತರೇ ಸ್ವತಃ ತಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು  ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ದಾಖಲಿಸಬಹುದು.

ಇದನ್ನೂ ಓದಿ: PNB Recruitment 2024 - ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 7ನೇ ತರಗತಿ ಪಾಸಾದವರಿಗೆ ಅವಕಾಶ!

Kharif crop survey app: ರೈತರೇ ತಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ವಿಧಾನ:

ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಕೃಷಿ ಇಲಾಖೆಯ ಅಧಿಕೃತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಯಾವೆಲ್ಲ ಹಂತಗಳನ್ನು ಅನುಸರಿಸಿ ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Step-1: crop survey app link ಇಲ್ಲಿ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ತೋರಿಸುವ ಬಟನ್ ಮೇಲೆ ಒತ್ತಿ ಬಳಿಕ ಕೊನೆಯಲ್ಲಿ "Agree" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ "E-KYC ಮೂಲಕ ಆಧಾರ್ ದೃಡೀಕರಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ "ಓಟಿಪಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

Step-2: ನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ಹಾಕಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ "ಸಕ್ರಿಯಗೊಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ "ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.

Step-3: ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ನಂತರ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ದಾಖಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಸ್ತುತ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.

ಇದನ್ನೂ ಓದಿ: Free beauty parlour training-30 ದಿನದ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ತರಬೇತಿಗೆ ಅರ್ಜಿ ಆಹ್ವಾನ!

Step-4: ಒಂದೊಮ್ಮೆ ನಿಮ್ಮ ಸರ್ವೆ ನಂಬರ್ ಗಳು ಕಾಣಿಸದೇ ಇದ್ದಲ್ಲಿ "ಸರ್ವೆ ನಂಬರ್ ಸೇರಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ಬಿಟ್ಟು ಹೋದ ಸರ್ವೆ ನಂಬರ್ ಅನ್ನು ಸೇರಿಸಬಹುದು.

Crop survey details upload- ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡುವ ವಿಧಾನ:

ಈ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದ ಬಳಿಕ ಕೊನೆಯಲ್ಲಿ "ಅಪ್ಲೋಡ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಈ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.

Crop survey-ಈ ಸಮೀಕ್ಷೆಯನ್ನು ಮಾಡದಿದ್ದರೆ ಬೆಳೆ ವಿಮೆ,ಪರಿಹಾರ ಇತರೆ ಸೌಲಭ್ಯಗಳು ಸಿಗುವುದಿಲ್ಲ!

ಬೆಳೆ ಸಮೀಕ್ಷೆ ಮೂಲಕ ದಾಖಲಿಸುವ ಬೆಳೆ ವಿವರವನ್ನು ಬಹುತೇಕ ಎಲ್ಲಾ ಸರಕಾರಿ ಯೋಜನೆಯಡಿ ಅರ್ಥಿಕ ಸಹಾಯಧನ ನೀಡಲು ಬಳಕೆ ಮಾಡಿಕೊಳ್ಳುವುದರಿಂದ ಉದಾಹರಣೆ ಹೇಳುವುದಾದರೆ ಬೆಳೆ ವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಸೇರಿದಂತೆ ತೋಟಗಾರಿಕೆ ಇಲಾಖೆ, ಕೃಷಿ, ರೇಷ್ಮೆ ಇಲಾಖೆಯ ಸಹಾಯಧನ ಯೋಜನೆಯಡಿ ಸೌಲಭ್ಯ ಪಡೆಯಲು ಈ ಸಮೀಕ್ಷೆಯನ್ನು ತಪ್ಪದೇ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
Share Now: