Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsBele vime details- ನಿಮಗೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ ಎಷ್ಟು...

Bele vime details- ನಿಮಗೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ ಎಷ್ಟು ಬಿಡುಗಡೆಯಾಗಿದೆ ಎಂದು ತಿಳಿಯುವುದು ಹೇಗೆ?

ರೈತರು ಹಿಂದಿನ ವರ್ಷಗಳ ಬೆಳೆ ವಿಮೆ ಅರ್ಜಿ ಅಂದರೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ(Last year crop insurance status) ಎಷ್ಟು ಬಿಡುಗಡೆಯಾಗಿದೆ ಮತ್ತು ಅರ್ಜಿ ಸ್ಥಿತಿ ವಿವರದ ಮಾಹಿತಿಯನ್ನು ತಿಳಿಯುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. 

ರೈತರ ಬೆಳೆ ನಷ್ಟವಾದ ಸಮಯದಲ್ಲಿ ಅರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಹಾಗೂ ಖಾಸಗಿ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮಾ ಸೌಲಭ್ಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಫಸಲ್ ಭಿಮಾ ಬೆಳೆ ವಿಮಾ(Bele vime) ಯೋಜನೆಯು ಪ್ರಸ್ತುತ ಜಾರಿಯಲ್ಲಿದ್ದು ಈ ಲೇಖನದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ರೈತರು 2017 ರಿಂದ 2024 ರವರೆಗೆ ನೀವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿಯ ಪರಿಹಾರದ ವಿವರ ಮತ್ತು ಅರ್ಜಿ ಸ್ಥಿತಿ ವಿವರದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Last year crop insurance status- ನಿಮಗೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ ಎಷ್ಟು ಬಿಡುಗಡೆಯಾಗಿದೆ ಎಂದು ತಿಳಿಯುವುದು ಹೇಗೆ?

ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಅರ್ಜಿ ವಿವರ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶಿಸಬೇಕು. ಬಳಿಕ ಇಲ್ಲಿ ವರ್ಷದ ಆಯ್ಕೆ ಕಾಲಂನ ಮೇಲೆ ಕ್ಲಿಕ್ ಮಾಡಿದಾಗ “2016-17 ರಿಂದ 2023-24” ರ ವರೆಗೆ ಎಲ್ಲಾ ವರ್ಷಗಳ ಆಯ್ಕೆ ವಿವರ ತೋರಿಸುತ್ತದೆ. ನಿಮಗೆ ಯಾವ ವರ್ಷದ ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಬೇಕೆಂದು ಅಂದುಕೊಂಡಿದಿರೋ ಆ ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ “ಋತು ಆಯ್ಕೆ” ಯಲ್ಲಿ ಮುಂಗಾರು/Kharif,ಹಿಂಗಾರು/rabi,ಬೇಸಿಗೆ/summer ಆಯ್ಕೆ ಮಾಡಿ “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Step-2: ನಂತರ ಈ ಪುಟದ ಕೆಳಗೆ ತೋರಿಸುವ “Farmers” ಕಾಲಂ ನಲ್ಲಿ  “Check Status” ಎನ್ನುವ ಆಯ್ಕೆಯ ಮೇಲೆ  ಕ್ಲಿಕ್ ಮಾಡಬೇಕು ಬಳಿಕ “check status by type” ಆಯ್ಕೆಯಲ್ಲಿ “Aadhar number” ಅನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಕಾಲಂ ನಲ್ಲಿ ಅರ್ಜಿದಾರರ ರೈತರ ಆಧಾರ್ ಕಾರ್ಡ ನಂಬರ್ ಅನ್ನು(Aadhar card no) ಮತ್ತು ಕ್ಯಾಪ್ಚ್ ಕೋಡ್(Captcha code) ಅನ್ನು ನಮೂದಿಸಿ ಪಕ್ಕದಲ್ಲಿ ಕಾಣುವ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.
 
ಆ ವರ್ಷ ನಿವೇನಾದರು ಬೆಳೆ ವಿಮೆ ಕಟ್ಟಿದರೆ “Search” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಡೆ ಆ ವರ್ಷದ ಬೆಳೆ ವಿಮೆ ಅರ್ಜಿ ಸಂಖ್ಯೆ ಇತ್ಯಾದಿ ವಿವರ ತೋರಿಸುತ್ತದೆ ಒಂದೊಮ್ಮೆ ಅರ್ಜಿ ಸಲ್ಲಿಸಿದೇ ಇದ್ದಲ್ಲಿ “No data found” ಎಂದು ಸೂಚನೆ ತೋರಿಸುತ್ತದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

Step-3: “Search” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಡೆ ಆ ವರ್ಷದ ಬೆಳೆ ವಿಮೆ ಅರ್ಜಿ ಸಂಖ್ಯೆ ಇತ್ಯಾದಿ ವಿವರ ತೋರಿಸಿದ ನಂತರ ಈ ಪೇಜ್ ನ ಕೊನೆಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಿದರೆ “UTR details” ಕಾಲಂ ನಲ್ಲಿ ನಿಮಗೆ ಆ ವರ್ಷ ಬೆಳೆ ವಿಮೆ ಹಣ ಜಮಾ ಅಗಿದ್ದರೆ UTR ನಂಬರ್ ಮತ್ತು ಎಷ್ಟು ಹಣ ಜಮಾ ಅಗಿದಿದೆ? ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ? ಜಮಾ ದಿನಾಂಕದ ವಿವರ ತೋರಿಸುತ್ತದೆ.

ಗಮನಿಸಿ: ಒಂದು ವೇಳೆ ಹಣ ಜಮಾ ಅಗದಿದ್ದರೆ “UTR details” ಕಾಲಂ ಕೆಳಗೆ ಯಾವುದೇ ವಿವರ ತೋರಿಸುವುದಿಲ್ಲ.

Bele vime website link- ಬೆಳೆ ವಿಮೆ ಯೋಜನೆಯ ಅಧಿಕೃತ ವೆಬ್ಸೈಟ್: Click here
ಬೆಳೆ ವಿಮೆ ಕುರಿತು ಉಪಯುಕ್ತ ಮಾಹಿತಿಯ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ: Read Now

Most Popular

Latest Articles

Related Articles