- Advertisment -
HomeNew postsBank loan scheme-2024: ಈ ಯೋಜನೆಯಡಿ ಬ್ಯಾಂಕ್ ಗೆ ಯಾವುದೇ ಗ್ಯಾರಂಟಿ ನೀಡದೆ ಶೇ 5...

Bank loan scheme-2024: ಈ ಯೋಜನೆಯಡಿ ಬ್ಯಾಂಕ್ ಗೆ ಯಾವುದೇ ಗ್ಯಾರಂಟಿ ನೀಡದೆ ಶೇ 5 ಬಡ್ಡಿದರದಲ್ಲಿ 2 ಲಕ್ಷ ಸಾಲ ಪಡೆಯಬವುದು.

Last updated on September 28th, 2024 at 07:57 am

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸವಿರುವ ಬಹುತೇಕ ಕುಟುಂಬಗಳಲ್ಲಿ ಟೈಲರಿಂಗ್ ಮಶಿನ್ ಹೊಂದಿರುವ ಮತ್ತು ಈ ಕೆಲಸವನ್ನು ಕಲಿತುಕೊಂಡಿರುವ ಮಹಿಳೆಯರು ಮನೆಯಲ್ಲಿ ಇದೇ ಇರುತ್ತಾರೆ.

ಇಂತಹ ವೃತ್ತಿಯಲ್ಲಿ ಮತ್ತು ಇತರೆ 18 ಕ್ಕೂ ಹೆಚ್ಚಿನ ವೃತ್ತಿಯಲ್ಲಿ ತೊಡಗಿಕೊಂಡಿರುವ ನಾಗರಿಕರಿಗೆ ಅರ್ಥಿಕವಾಗಿ ನೆರವಾಗಲು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ(Vishwakarma yojana-2024) ಶೇ 5 ಬಡ್ಡಿದರದಲ್ಲಿ 2 ಲಕ್ಷದವರೆಗೆ ಸಾಲ ಪಡೆಯಬವುದು.

ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಸಾಲ ಮಂಜೂರಿ ವಿಧಾನ ಹೇಗಿರುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಆಸಕ್ತಿ ಹೊಂದಿರುವವರು ತಮ್ಮ ಮನೆಯಲ್ಲಿ ಟೈಲರಿಂಗ್ ಮಾಡುತ್ತಿರುವ ಮಹಿಳೆಯರ ಹೆಸರಿನಲ್ಲಿ ಮೊದಲಿಗೆ ನಿಮ್ಮ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಸ್ವ-ಉದ್ಯೋಗ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಬೇಕು ಈ ಪತ್ರದಲ್ಲಿ ಮಹಿಳೆ ಹೆಸರು, ವಿಳಾಸ, ಸ್ವ-ಉದ್ಯೋಗ ಮಾಡುತ್ತಿರುವ ಬಗ್ಗೆ ಉಲ್ಲೇಖಿಸಿ ಕೊನೆಯಲ್ಲಿ ಪಂಚಾಯತ್ ಅಧಿಕಾರಿಯ ಸಹಿ ಹಾಕಿಸಿಕೊಳ್ಳಬೇಕು.

ಇದರ ಜೊತೆಗೆ ಅರ್ಜಿದಾರ ಮಹಿಳೆಯ ಪೋಟೋ, ಅಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬೇಕು.

ಇದನ್ನೂ ಓದಿ: Pension amount-ಮಾಸಿಕ ಪಿಂಚಣಿ ಪಾವತಿ ವಿಧಾನದಲ್ಲಿ ಬದಲಾವಣೆ! ಈ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ ಈ ತಿಂಗಳ ಪಿಂಚಣಿ ಹಣ!

Bank loan application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Bank loan scheme-2024: ಈ ಯೋಜನೆಯಡಿ ಎಷ್ಟು ಸಾಲ ಪಡೆಯಬವುದು? ಬಡ್ಡಿದರ ಎಷ್ಟು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ(Vishwakarma yojana-2024) ಶೇ 5 ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಈ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಮೊದಲ ಬಾರಿಗೆ ರೂ 1 ಲಕ್ಷ ಸಾಲ ನೀಡಲಾಗುತ್ತದೆ ಮರು ಪಾವತಿಗೆ 18 ತಿಂಗಳು ಅವಧಿ ಕೊಡಲಾಗಿದ್ದು ಮೊದಲ ಬಾರಿ ನೀಡಿದ ಸಾಲವನ್ನು ನೀವು ಮರು ಪಾವತಿ ಮಾಡಿದ ಬಳಿಕ ಎರಡನೇ ಹಂತದಲ್ಲಿ ರೂ 2 ಲಕ್ಷ ಒದಗಿಸಲಾಗುತ್ತದೆ ಮರು ಪಾವತಿ ಅವಧಿ 30 ತಿಂಗಳು ಇರುತ್ತದೆ.

ಈ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಫಲಾನುಭವಿಗಳು ಬ್ಯಾಂಕ್ ಮೂಲಕ ಪಡೆಯುವ ಸಾಲಕ್ಕೆ ಕೇಂದ್ರ ಸರಕಾರವೇ ಗ್ಯಾರಂಟಿಯಾಗಿದ್ದು ಅರ್ಜಿದಾರರು ಗ್ಯಾರಂಟಿ ಒದಗಿಸುವ ಅಗತ್ಯತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Yuva nidhi amount-ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

ಇದನ್ನೂ ಓದಿ: Parihara list-2024: ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಚೆಕ್ ಮಾಡಿ.

ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿದಾರರು ಆನ್ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದ ಬಳಿಕ ಆನ್ಲೈನ್ ಮೂಲಕವೇ ಅರ್ಜಿ ಪರೀಶಿಲನೆಕೊಂಡ ನೀವು ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್ ಸಂಖ್ಯೆಗೆ ನಿಮ್ಮ ಅರ್ಜಿ ಯಶಸ್ವಿಯಾಗಿ ಪರೀಶಿಲನೆಕೊಂಡಿದೆ ನಿಮಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಮಂಜೂರಿಯಾಗಿರುತ್ತದೆ ಎಂದು ಸಂದೇಶ ಬರುತ್ತದೆ ಈ ರೀತಿ ಸಂದೇಶ ಬಂದ ಬಳಿಕ ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಸಾಲ ಪಡೆಯಲು ಇರುವ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಾಲ ಪಡೆಯಬವುದು.

ಇದನ್ನೂ ಓದಿ: free skill training- ಉಚಿತ ಬ್ಯೂಟೀಷಿಯನ್, ಜಿಮ್ ಟ್ರೈನರ್, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವುದರ ಜೊತೆಗೆ ತರಬೇತಿ ಮತ್ತು ಮಾರುಕಟ್ಟೆಗೂ  ಅವಕಾಶವಿರುತ್ತದೆ:

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವುದರ ಜೊತೆಗೆ ಸ್ವ-ಉದ್ಯೋಗವನ್ನು ಇನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ತರಬೇತಿ ಮತ್ತು ಮಾರುಕಟ್ಟೆಗೂ  ಸಹಾಯ ಮಾಡಲಾಗುತ್ತದೆ.

ಪ್ರಮುಖ ಲಿಂಕ್ ಗಳು:

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(Vishwakarma yojana) ಅಧಿಕೃತ ವೆಬ್ಸೈಟ್: Click here
ಸಹಾಯವಾಣಿ: 8904754707
 

- Advertisment -
LATEST ARTICLES

Related Articles

- Advertisment -

Most Popular

- Advertisment -