Bembala Bele-ಬೆಂಬಲ ಬೆಲೆ ಯೋಜನೆಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ!

January 15, 2026 | Siddesh
Bembala Bele-ಬೆಂಬಲ ಬೆಲೆ ಯೋಜನೆಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ!
Share Now:

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಒದಗಿಸಲು ಬೆಂಬಲ ಬೆಲೆ ಯೋಜನೆ(MSP Scheme) ಅಡಿಯಲ್ಲಿ ವಿವಿಧ ಕೃಷಿ ಉತ್ಪನ್ನಗಳನ್ನು ಈಗಾಗಲೇ ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತಿದ್ದು ರೈತರ ಬೇಡಿಕೆಯನ್ವಯ ಕೆಲವು ಉತ್ಪನ್ನಗಳ ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಶಿವಾನಂದ ಪಾಟೀಲ್ ಕೃಷಿ ಮಾರುಕಟ್ಟೆ ಸಚಿವರು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಹೊರಗಿನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಲಭ್ಯವಾಗದ ಸಮಯದಲ್ಲಿ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು(Bembala Bele Yojane) ಒದಗಿಸಿ ರೈತರಿಂದ ನೇರವಾಗಿ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೆ ಉತ್ಪನ್ನವನ್ನು ಖರೀದಿ ಮಾಡಿ ರೈತರ ಬ್ಯಾಂಕ್ ಖಾತೆಗೆ ನಿಗದಿತ ಅವಧಿಯಲ್ಲಿ ಉತ್ಪನ್ನದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Drone Pilot Training-ಇಲ್ಲಿದೆ ಡ್ರೋನ್ ಪೈಲಟ್ ಆಗುವ ಸುವರ್ಣಾವಕಾಶ! ಇಂದೇ ಅರ್ಜಿ ಸಲ್ಲಿಸಿ!

ಇಂದಿನ ಲೇಖನದಲ್ಲಿ ರಾಜ್ಯ ಸರಕಾರದಿಂದ ಯಾವೆಲ್ಲ ಬೆಳೆಗಳ ಬೆಂಬಲ ಬೆಲೆ ಖರೀದಿ(Bembala Bele Kharidi Kendra) ಅವಧಿಯನ್ನು ವಿಸ್ತರಣೆ ಮಾಡಲಾಗಿದೆ? ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಎಲ್ಲಿ ನೋಂದಣಿ ಮಾಡಿಕೊಂಡಿರಬೇಕು? ಇದಕ್ಕಾಗಿ ಅವಶ್ಯವಿರುವ ಅಗತ್ಯ ದಾಖಲಾತಿಗಳೇನು? ಸರಕಾರದಿಂದ ಉತ್ಪನ್ನದ ಹಣವನ್ನು ಹೇಗೆ ವರ್ಗಾವಣೆ ಮಾಡಲಾಗುತ್ತದೆ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bembala Bele Kharidi Avadhi-ಯಾವೆಲ್ಲ ಬೆಳೆಗಳ ಬೆಂಬಲ ಬೆಲೆ ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ?

ಬೆಂಬಲ ಬೆಲೆ ಯೋಜನೆಯಲ್ಲಿ ಶೇಂಗಾ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ಖರೀದಿ ಅವಧಿ ವಿಸ್ತರಣೆ ಮಾಡಲಾಗಿದೆ. ಶೇಂಗಾ ಮತ್ತು ಸೋಯಾಬೀನ್‌ ಖರೀದಿ ಅವಧಿಯನ್ನು ಜನವರಿ 26ರ ವರೆಗೆ, ಹೆಸರುಕಾಳು, ಉದ್ದಿನಕಾಳು ಹಾಗೂ ಸೂರ್ಯಕಾಂತಿ ಖರೀದಿ ಅವಧಿಯನ್ನು ಜನವರಿ 22ರ ವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: KSRTC Ticket Booking-ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯುವುದು ಇನ್ನು ಭಾರೀ ಸುಲಭ!

mekkejola Bembala Bele

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಆರ್ಥಿಕ ನೆರವು ಏರಿಕೆ ನಿರೀಕ್ಷೆ!

Mekkejola Bembala Bele-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಆರಂಭ:

ದಾವಣಗೆರೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಗೆ ರೂ 2,400/- ರಂತೆ ರೈತರಿಂದ ನೇರವಾಗಿ ಖರೀದಿ ಮಾಡುವ ಪ್ರಕ್ರಿಯೆಗೆ ಜಾರಿಯಲ್ಲಿದ್ದು ಮೆಕ್ಕೆಜೋಳ ಬೆಳೆದಿರುವ ರೈತರು ಕೂಡಲೇ ನಿಮ್ಮ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ/APMC ಕಚೇರಿಯನ್ನು ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಂಡು ನಿಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.

Farmer MSP registration-ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಎಲ್ಲಿ ನೋಂದಣಿ ಮಾಡಿಕೊಂಡಿರಬೇಕು?

ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ,ಮೆಕ್ಕೆಜೋಳ ಸೇರಿದಂತೆ ವಿವರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ನಿಮ್ಮ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಖರೀದಿ ಕೇಂದ್ರದ ಮಾಹಿತಿಯನ್ನು ಪಡೆದು ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಖರೀದಿ ಸಮಯದಲ್ಲಿ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬೇಕು.

ಇದನ್ನೂ ಓದಿ: Azeem Premji Scholarship-ಅಜೀಂ ಪ್ರೇಮ್‌ಜಿ ವತಿಯಿಂದ 30,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Documents For MSP Scheme Registration-ನೋಂದಣಿಗೆ ಅವಶ್ಯವಿರುವ ದಾಖಲೆಗಳು:

ರೈತರು ಬೆಂಬಲ ಬೆಲೆಯಲ್ಲಿ ಯಾವುದೇ ಉತ್ಪನ್ನವನ್ನು ಮಾರಾಟ ಮಾಡಲು ಅತೀ ಮುಖ್ಯವಾಗಿ ನಿಮ್ಮ ಜಮೀನಿನ ಪಹಣಿಯಲ್ಲಿ ಬೆಳೆ ಸಮೀಕ್ಷೆ ಮೂಲಕ ದಾಖಲಾಗಿರುವ ಬೆಳೆ ಮಾಹಿತಿಯು ರಾಗಿ ಇದ್ದರೆ ನೀವು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಬಹುದು ಇದೆ ಮಾದರಿಯಲ್ಲಿ ಮೆಕ್ಕೆಜೋಳ ನಮೂದಿಸಿದ್ದರೆ ನೀವು ಮೆಕ್ಕೆಜೋಳವನ್ನು ಮಾರಾಟ ಮಾಡಲು ಅವಕಾಶವಿರುತ್ತದೆ, ಅವಶ್ಯಕ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ.

  • ರೈತರ ಆಧಾರ್ ಕಾರ್ಡ ಪ್ರತಿ/Aadhar.
  • ಬ್ಯಾಂಕ್ ಪಾಸ್ ಬುಕ್/Bank Pass Book.
  • ರೈತರು ಖುದ್ದು ನೋಂದಣಿ ಕೇಂದ್ರದಲ್ಲಿ ಹಾಜರಿದ್ದು ಬೆರಳಚ್ಚು ನೀಡಬೇಕು.
  • ಜಮೀನಿನ ಪಹಣಿ/RTC.

ಇದನ್ನೂ ಓದಿ: Poultry Shed Subsidy-ಕೋಳಿ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ₹60,000 ಸಹಾಯಧನ!

MSP DBT Amount-ಸರಕಾರದಿಂದ ಉತ್ಪನ್ನದ ಹಣವನ್ನು ಹೇಗೆ ವರ್ಗಾವಣೆ ಮಾಡಲಾಗುತ್ತದೆ?

ಒಮ್ಮೆ ರೈತರು ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನವನ್ನು ಸರಕಾರಕ್ಕೆ ಮಾರಾಟ ಮಾಡಿದ ಬಳಿಕ ನೋಂದಣಿ ಸಮಯದಲ್ಲಿ/FID ಅನ್ನು ದಾಖಲಾಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ 2-3 ವಾರದ ಒಳಗಾಗಿ ರೈತರ ಬ್ಯಾಂಕ್ ಖಾತೆಗೆ ಉತ್ಪನ್ನ ಹಣ ವರ್ಗಾವನೆ ಮಾಡಲಾಗುತ್ತದೆ.

Ragi Kharidi Kendra-ರಾಗಿ ಖರೀದಿ ಕೇಂದ್ರಕ್ಕೆ ರೈತರ ಆಗ್ರಹ:

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನು ನೇರವಾಗಿ ರೈತರಿಂದ ಖರೀದಿ ಮಾಡಲು ಈಗಾಗಲೇ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿಯನ್ನು ಮಾಡಿಕೊಳ್ಳಲಾಗಿದ್ದು ಅದರೆ ಸರಕಾರದ ಪ್ರಕಟಣೆಯನ್ವಯ ಜನವರಿ 01 ರಿಂದ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗಿತ್ತು ಅದರೆ ಇನ್ನು ಸಹ ಖರೀದಿ ಪ್ರಕ್ರಿಯೆಯನ್ನು ಆರಂಭಿಸದೇ ಇರುವ ಹಿನ್ನಲೆಯಲ್ಲಿ ರೈತರು ಕೂಡಲೇ ರಾಗಿ ಖರೀದಿಯನ್ನು ಪ್ರಾರಂಭಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: