BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!

October 25, 2025 | Siddesh
BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!
Share Now:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಈಗಾಗಲೇ ರಾಜ್ಯದ್ಯಂತ ಅನರ್ಹ ಬಿಪಿಎಲ್ ಕಾರ್ಡಗಳನ್ನು(Karnataka BPL Card) ಅನರ್ಹಗೊಳಿಸಲಾಗುತ್ತಿದ್ದು ಬಿಪಿಎಲ್ ಕಾರ್ಡ ಅನ್ನು ಪಡೆಯಲು ಅರ್ಹತೆಯನ್ನು ಹೊಂದಿರುವವರು ಮರು ಅರ್ಜಿ ಸಲ್ಲಿಸಲಿ ಪುನಃ ಬಿಪಿಎಲ್ ಕಾರ್ಡ್ ಅನ್ನು ಪಡೆಯಲು ನೂತನ ಪ್ರಕಟಣೆಯನ್ನು ಹೊರಡಿಸಿದೆ.

ಆಹಾರ ಇಲಾಖೆಯ ಅಧಿಕಾರಿಗಳು ಅನರ್ಹ ಪಡಿತರ ಚೀಟಿಗಳನ್ನು(Karnataka BPL Card News) ರದ್ದುಪಡಿಸುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಪ್ರಸ್ತಾವನೆಗೆ ಅಧಿಕೃತವಾಗಿ ಅನುಮೋದನೆಯನ್ನು ನೀಡಿದ್ದು ರಾಜ್ಯದಲ್ಲಿ ಹಾಲಿ ಚಾಲ್ತಿಯಲ್ಲಿರುವ ರೇಶನ್ ಕಾರ್ಡದಾರರ ಪೈಕಿ ವಿವಿಧ ಕಾರಣಗಳಿಂದ 7,76,206 ಪಡಿತರ ಚೀಟಿಗಳು ಅನರ್ಹ ಎಂದು ಕೇಂದ್ರ ಸರಕಾರವು ಗುರುತಿಸಿದ್ದು ರಾಜ್ಯ ಸರಕಾರದ ಕುಟುಂಬ ತಂತ್ರಾಂಶದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ.

ಇದನ್ನೂ ಓದಿ: Dairy Shed Subsidy-ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೂ 57,000/- ಸಹಾಯಧನ!

ಈಗಾಗಲೇ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಅನರ್ಹವಾಗಿರುವ ಬಿಪಿಎಲ್ ಕಾರ್ಡಗಳನ್ನು(BPL Card) ರದ್ದು ಮಾಡಲಾಗಿದ್ದು ಇಂಹತ ಕಾರ್ಡಗಳನ್ನು ಎಪಿಎಲ್ ಕಾರ್ಡಗಳಾಗಿ ಪರಿವರ್ತನೆ ಮಾಡಲಾಗಿದ್ದು ಬಿಪಿಎಲ್ ಕಾರ್ಡ ಗಳನ್ನು ಪುನಃ ಮರುಪರಿಶೀಲನೆ ಮಾಡಿ ಮರಳಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ನೂತನ ಮಾರ್ಗಸೂಚಿಯನ್ನು ಇಲಾಖೆಯಿಂದ ಪ್ರಕಟಿಸಲಾಗಿದೆ.

BPL Card Eligibility Timeline-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು:

ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡ(Ration Card)ಅನ್ನು ಪಡೆಯಲು ಅರ್ಹರಿಲ್ಲದ ಫಲಾನುಭವಿಗಳ ಕಾರ್ಡಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡಗಳಾಗಿ ಪರಿವರ್ತನೆಗೊಳಿಸಲಾಗುತ್ತಿದ್ದು ಬಿಪಿಎಲ್ ಕಾರ್ಡ ರದ್ದಾದ ನೋಟಿಸ್ ಗ್ರಾಹಕರಿಗೆ ತಲುಪಿದ 45 ದಿನದ ಒಳಗಾಗಿ ಸೂಕ್ತ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ಆಹಾರ ಇಲಾಕೆಯ ಕಚೇರಿಯನ್ನು(Food Officer)ಭೇಟಿ ಮಾಡಿ ಬಿಪಿಎಲ್ ಕಾರ್ಡ ರದ್ದುಗೊಳಿಸಿರುವುದನ್ನು ಮರು ಪರಿಶೀಲನೆ ಮಾಡಲು ಅರ್ಜಿಯನ್ನು ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: E-Swathu-ಗ್ರಾಮೀಣ ಜನರಿಗೆ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ ಕೇವಲ 15 ದಿನದಲ್ಲಿ ಸಿಗಲಿದೆ ಇ-ಸ್ವತ್ತು!

BPL Card Objection Application-ಆಕ್ಷೇಪಣೆ ಸಲ್ಲಿಕೆಯಾಗದೇ ಇದ್ದಲ್ಲಿ ಎಪಿಎಲ್ ಕಾರ್ಡ ಪರಿವರ್ತನೆ:

ಆಹಾರ ಇಲಾಖೆಯಿಂದ(Ahara Ilake)ಬಿಪಿಎಲ್ ಕಾರ್ಡ ರದ್ದುಪಡಿಸಿರುವುದರ ಕುರಿತು ಅನರ್ಹ ಗ್ರಾಹಕರಿಗೆ ನೋಟಿಸ್ ನೀಡಿ 45 ದಿನ ಪೂರ್ಣಗೊಂಡರು ಯಾವುದೇ ಬಗ್ಗೆಯ ಆಕ್ಷೇಪಣೆ ಅರ್ಜಿ ಗ್ರಾಹಕರಿಂದ ಸಲ್ಲಿಕೆಯಾಗದೇ ಇದ್ದಲ್ಲಿ ಇಂತಹ ಕಾರ್ಡಗಳನ್ನು ಎಪಿಎಲ್ ಕಾರ್ಡ ಅಗಿ ಪರಿವರ್ತನೆ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.

Karnataka BPL Card Ineligible Candidates-ರಾಜ್ಯದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವ ಅನರ್ಹ ಬಿಪಿಎಲ್ ಕಾರ್ಡ ಅಂಕಿ-ಅಂಶ:

  • ಒಟ್ಟು ರದ್ದುಗೊಳಿಸಿರುವ ಕಾರ್ಡಗಳು-10,076
  • ಅಮಾನತು ಮಾಡಿರುವ ಕಾರ್ಡಗಳು-5,526
  • ಎಪಿಎಲ್ ಗೆ ಬದಲಾಯಿಸಿರುವ ಕಾರ್ಡಗಳು- 1,85,156

ಇದನ್ನೂ ಓದಿ: Taxi Subsidy Scheme-ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶೇ 50% ಸಹಾಯಧನದಲ್ಲಿ ಟ್ಯಾಕ್ಸಿ ಖರೀದಿಸಲು ಅರ್ಜಿ ಆಹ್ವಾನ!

BPL Card Eligibility Timeline

ಇದನ್ನೂ ಓದಿ: Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

New BPL Card Rules-ಹೊಸ ಬಿಪಿಎಲ್ ಕಾರ್ಡ ವಿತರಣೆಗೆ ಕೆಲವು ಷರತ್ತುಗಳ ಪ್ರಕಾರ ವಿತರಣೆಗೆ ಸೂಚನೆ:

ರಾಜ್ಯದಲ್ಲಿ 2023 ರಿಂದ ಇಲ್ಲಿಯವರೆಗೆ ಯಾವುದೇ ಹೊಸ ಬಿಪಿಎಲ್ ಕಾರ್ಡ ಅನ್ನು ವಿತರಣೆ ಮಾಡಿರುವುದಿಲ್ಲ ಈಗ ಅನರ್ಹ ಬಿಪಿಎಲ್ ಕಾರ್ಡ ಅನ್ನು ರದ್ದುಪಡಿಸುತ್ತಿರುವ ಹಿನ್ನಲೆಯಲ್ಲಿ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಆಹಾರ ಇಲಾಖೆಯ ಅಧಿಕಾರಿಗಳು ಅವಕಾಶವನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇದರ ಪ್ರಕಾರ ಆರ್ಥಿಕ ಇಲಾಖೆಯ ಕೆಲವು ಷರತ್ತುಗಳ ಅನ್ವಯ ಬಿಪಿಎಲ್ ಕಾರ್ಡ ವಿತರಣೆ ಮಾಡಲು ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದೆ.

BPL Card New Application-ಆರ್ಥಿಕ ಇಲಾಖೆಯು ಹೊಸ ಬಿಪಿಎಲ್ ಕಾರ್ಡ ವಿತರಣೆ ಹಾಕಿರುವ ಷರತ್ತುಗಳೇನು?

ಆಹಾರ ಇಲಾಖೆಯ ಅಧಿಕಾರಿಗಳು ಅರ್ಹ ಅರ್ಜಿದಾರರಿಗೆ ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ ಅನ್ನು ವಿತರಣೆ ಮಾಡುವ ಸಂಬಂಧ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿದ್ದು ಇದಕ್ಕಾಗಿ ಆರ್ಥಿಕ ಇಲಾಕೆಯು ಹಾಕಿರುವ ಷರತ್ತುಗಳ ಪಟ್ಟಿ ಹೀಗಿದೆ:

ಹೊಸದಾಗಿ ಬಿಪಿಎಲ್ ರೇಶನ್ ಕಾರ್ಡಗಳನ್ನು ಪಡೆಯಲು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ರೇಶನ್ ಕಾರ್ಡ ಅನ್ನು ವಿತರಣೆ ಮಾಡುವವರೆಗೆ ಹೊಸ ಬಿಪಿಎಲ್ ಕಾರ್ಡಗಾಗಿ ಅರ್ಜಿ ಆಹ್ವಾನಿಸಬಾರದು.

ಇದನ್ನೂ ಓದಿ: B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

ಆರ್ಥಿಕ ನಿರ್ಬಧದ ಹಿನ್ನಲೆಯಲ್ಲಿ ಪ್ರಸ್ತುತ APL ರೇಶನ್ ಕಾರ್ಡ ಪಡೆಯಲು ಹೊಸ ಅರ್ಜಿ ಆಹ್ವಾನಿಸಬಾರದು ಜೊತೆಗೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನೂ ಸಹ ವಿಲೇವಾರಿ ಮಾಡಬಾರದು ಎಂದು ಆರ್ಥಿಕ ಇಲಾಕೆ ನಿರ್ಬಧ ವಿಧಿಸಿದೆ.

ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ ಬಳಿಕವೇ ಇಲಾಖೆಯ ಮಾರ್ಗಸೂಚಿ ಪ್ರಕಾರ ಅರ್ಹರಿರುವ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ ಅನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕಳೆದ 6 ತಿಂಗಳಿಂದ ಆಹಾರ ಧಾನ್ಯಗಳನ್ನು ಪಡೆಯದೇ ಇರುವ ಬಿಪಿಎಲ್ ಕಾರ್ಡಗಳನ್ನು ಅಮಾನತುಗೊಳಿಸುವ ಪ್ರಕ್ರಿಯೆ ಮತ್ತು 2.26 ಲಕ್ಷ ಬಿಪಿಎಲ್ ಕಾರ್ಡ ಅರ್ಜಿದಾರರ ವಿಲೇವಾರಿಯು ಏಕಕಾಲದಲ್ಲಿ ಮಾಡಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪಡಿತರ ಚೀಟಿ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: